ಮಕ್ಕಳಲ್ಲಿ 'ಸರ್ವಾಂಗೀಣ/ಸರ್ವತೋಮುಖ ಅಭಿವೃದ್ಧಿ/ವಿಕಾಸವೆಂದರೆ..

ಮಕ್ಕಳಲ್ಲಿ ಪಂಚಮುಖಿ ಬೆಳವಣಿಯಾಗಬೇಕು.

೧. ಶಾರೀರಿಕವಾಗಿ
೨. ಬೌದ್ಧಿಕವಾಗಿ
೩. ಭಾವನಾತ್ಮಕವಾಗಿ
೪. ಸಾಮಾಜಿಕವಾಗಿ
೫. ನೈತಿಕವಾಗಿ

೧. ಶಾರೀರಿಕ

ಒಳ್ಳೆಯ ಆಹಾರ, ವ್ಯಾಯಾಮ ಮತ್ತು ಆರೋಗ್ಯಕರ ಪರಿಸರ ಶಾರೀರಿಕ ಬೆಳವಣಿಗೆಗೆ ಬುನಾದಿ.
ಮಧ್ಯಾಹ್ನದ ಬಿಸಿಯೂಟ ಯೋಜನೆ,
ಯೋಗ ಮತ್ತು ಕ್ರೀಡೆ,
ಸ್ವಚ್ಚತಾ ಕೆಲಸಗಳು & ಉತ್ತಮ ಭೌತಿಕ ಸಂಪನ್ಮೂಲಗಳು ಶಾರೀರಿಕ ಬೆಳವಣಿಗೆಗೆ ನಮ್ಮ
ಶಾಲೆಯಲ್ಲಿರುವ ಅವಕಾಶಗಳು.

೨. ಬೌದ್ಧಿಕತೆ

ಗರಿಷ್ಠ ಪ್ರಚೋದನೆ ಮತ್ತು ಶಿಕ್ಷಣ ಬೌದ್ಧಿಕ ಬೆಳವಣಿಗೆಗೆ ಸಹಕಾರಿ.
ಮಕ್ಮಳು ಕಲಿಯುತ್ತಿಲ್ಲವೆಂದಾದಲ್ಲಿ ನಾವು ಮಕ್ಕಳನ್ನು ಕಲಿಕೆಯೆಡೆಗೆ ಪ್ರೇರೆಪಿಸುವಲ್ಲಿ
ಯಶಸ್ವಿಯಾಗಿಲ್ಲವೆಂದೇ ಅರ್ಥ.

ಕೆಳಗಿನ ಶಾಲೆಗಳಿಂದ ಮಕ್ಕಳು ಏನೂ ಕಲಿಯದೇ ಬರುತ್ತಾರೆ ಎಂಬ ಕಾರಣ ತೀರಾ ಹಳತಾದುದು. ಈಗ ಅದು
ನೆಪವಷ್ಟೇ.
ಪರಿಹಾರ ಬೋಧನೆ ಎಂಬ ಚಿಕಿತ್ಸಕ ಶೈಕ್ಷಣಿಕ ಉಪಕಾರ್ಯಕ್ರಮದ ಬಗ್ಗೆ ಹೆಚ್ಚಿನವರಲ್ಲಿ
ನಕಾರಾತ್ಮಕ ಭಾವನೆಯೇ  ಮೈದಳೆದಿರುವಾಗ ಮಕ್ಕಳನ್ನು ಬೌದ್ಧಿಕವಾಗಿ ಸಶಕ್ತಗೊಳಿಸುವುದು ಹೇಗೆ ?

೩. ಭಾವನಾತ್ಮಕತೆ.

ಪ್ರೀತಿ, ಆಸರೆ, ಸುರಕ್ಷಿತ ಭಾವನೆ, ಹಿತಕಾರಿಯಾದ ಜನ, ಆತ್ಮೀಯತೆ ಮತ್ತು ಆಪ್ತತೆಯ ವಾತಾವರಣ
ಮಗುವಿನ ಭಾವನಾತ್ಮಕ ಬೆಳವಣಿಗೆಗೆ ಸಹಕಾರಿ.

ಸಾಧ್ಯವಾದಷ್ಟು ಮಟ್ಟಿಗೆ ಶಾಲೆಯಲ್ಲಿರುವ ಎಲ್ಲಾ ಮಕ್ಕಳ ಹೆಸರಾದರೂ ತಿಳಿದಿರಬೇಕು, ಮಕ್ಕಳ
ಕುಶಲಕ್ಷೇಮ ವಿಚಾರಿಸಿಕೊಳ್ಳಬೇಕು, ಆಗಾಗ್ಗೆ ವೈಯಕ್ತಿಕವಾಗಿ ಮಾತನಾಡಿಸಬೇಕು
ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದ, ಭಾಗವಹಿಸಲು ಹಿಂಜರಿಯುವ
ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಬೇಕು.
ಮಕ್ಕಳ ಇಷ್ಟ-ಕಷ್ಟಗಳ ಬಗೆಗಿನ ಅರಿವು ಬೆಳೆಸಿಕೊಳ್ಳಬೇಕು.

೪. ಸಾಮಾಜಿಕತೆ

ಸೌಹಾರ್ದ ಸಂಬಂಧ, ಮಾದರಿ ಪಾತ್ರಗಳು, ಒಳ್ಳೆಯ ತರಬೇತಿ, ಶ್ರೇಷ್ಠ ನಡವಳಿಕೆಗಳ ಪ್ರದರ್ಶನ
ಮಕ್ಕಳ ಸಮಾಜಿಕ ಬೆಳವಣಿಗೆಗೆ ಕಾರಣವಾಗಬಲ್ಲದು.

ವಿವಿಧ ಸಮಾಜಿಕ ಹಿನ್ನಲೆಯುಳ್ಳ ಮಕ್ಕಳ ಮನೆಗಳ ಪರಸ್ಪರ ಭೇಟಿ ಇದಕ್ಕೆ ಪೂರಕವಾಗಬಲ್ಲದು.
ವಿವಿಧ ಸಮುದಾಯಗಳ ವಿಭಿನ್ನ ಆಚರಣೆಗಳ ಪರಿಚಯ ಮತ್ತು ಅವುಗಳಲ್ಲಿ ಭಾಗವಹಿಸುವುದು ಸಹ ಸಮಾಜಿಕ
ಬೆಳವಣಿಗೆಗೆ ಪ್ರೇರಕವಾಗಬಲ್ಲದು.

೫. ನೈತಿಕತೆ

ಸರಿ-ತಪ್ಪುಗಳ ಸರಿಯಾದ ವ್ಯಾಖ್ಯಾನ,
ನ್ಯಾಯ, ಧರ್ಮಗಳ ಬಗ್ಗೆ ಅರಿವು,
ಸ್ವಹಿತಕ್ಕಿಷ್ಟು-ಪರಹಿತಕ್ಕಿಷ್ಟು ಪ್ರಾಮುಖ್ಯತೆ ಬಗೆಗಿನ ತಿಳಿವು ನೈತಿಕ ವಿಕಾಸಕ್ಕೆ
ನೆರವಾಗಬಲ್ಲದು.

ಉತ್ತಮ ಚಿತ್ರಗಳನ್ನು ವೀಕ್ಷಣೆ ಮಾಡಲು ವ್ಯವಸ್ಥೆ ಮಾಡುವುದು,
ಕಥೆಗಳನ್ನು ಹೇಳುವುದು ಮತ್ತು ಹೇಳಿಸುವುದು,
ತಪ್ಪಿತಸ್ಥ ಮಕ್ಕಳನ್ನು ತಿದ್ದುವ ರೀತಿ ನೈತಿಕತೆ ಬೆಳೆಸುವಲ್ಲಿ ಪ್ರಮುಖವಾಗುತ್ತವೆ.
.........................................................
ಈ ಮೇಲಿನ ಐದು ಅಂಶಗಳ ಬೆಳವಣಿಗೆ ಮತ್ತು ವಿಕಾಸಕ್ಕೆ ಶಾಲೆಯಲ್ಲಿ ಇರುವ ವಿನೂತನ
ಆಯಾಮಗಳನ್ನು, ಅವಕಾಶಗಳನ್ನು ಸ್ನೇಹಿತರು, ಹಿರಿಯರು ಪರಿಚಯ ಮಾಡಿಕೊಡಿ.

'ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ನಿರ್ಮಾಣವಾಗುತ್ತದೆ.'

ಸದೃಢವಾದ
ಶಾರೀರಿಕತೆ, ಬೌದ್ಧಿಕತೆ, ಭಾವನಾತ್ಮಕತೆ, ಸಮಾಜಿಕತೆ ಮತ್ತು ನೈತಿಕತೆ

ನಿರ್ಮಿಸುವಲ್ಲಿ ನೀವುಗಳು ನಿಮ್ಮ ಶಾಲೆಯಲ್ಲಿ ಜಾರಿಗೊಳಿಸಿರುವ, ಜಾರಿಗೊಳಿಸಬೇಕೆಂದಿರುವ
ವಿನೂತನ ಕ್ರಮಗಳ ಬಗ್ಗೆ ತಮ್ಮ ಅನುಭವ ಮತ್ತು ಸಲಹೆಗಳನ್ನು ಹಂಚಿಕೊಳ್ಳಿರಿ.
-----------------------------------------------------

ಇತ್ತೀಚಿನ ದಿನಗಳಲ್ಲಿ ನಾವುಗಳು, ಪಾಲಕ-ಪೋಷಕರು ಬೌದ್ಧಿಕ ಬೆಳವಣಿಗೆಗೆ ಮಾತ್ರ ಹೆಚ್ಚಿನ
ಒತ್ತಾಸೆ ನೀಡುತ್ತಿದ್ದೆವೆ.
ಮಕ್ಕಳು ಪರೀಕ್ಷೆಯಲ್ಲಿ ಗಳಿಸುವ ಫಲಿತಾಂಶ, ಅಂಕಗಳ ಮೇಲೆಯೇ ನಮಗೆ ಹೆಚ್ಚಿನ ಗಮನ.
ಉದಾಹರಣೆಗೆ: ಇತ್ತೀಚೆಗೆ ಕ್ರೀಡೆ, ಪ್ರತಿಭಾಕಾರಂಜಿ ಕಾರ್ಯಕ್ರಮಗಳು ಮುಗಿದವು.
ಹೆಚ್ಚು-ಕಡಿಮೆ ಆ ಕ್ಷಣದಲ್ಲಿ ಎಲ್ಲರೂ ಆಸಕ್ತಿಯಿಂದ ಭಾಗವಹಿಸಿದ್ದೆವೆ.
ಆ ಎಲ್ಲಾ ಸ್ಪರ್ಧೆಗಳು, ಕಾರ್ಯಕ್ರಮಗಳು ಮುಗಿದ ಮೇಲೆ
'ಈ ಹಾಳಾದ್ದೂ sports, ಪ್ರತಿಭಾ ಕಾರಂಜಿಯಿಂದ syllabus cover ಆಗಲೇ ಇಲ್ಲ, ಮುಗೀಲೆ
ಇಲ್ಲ'
ಎಂದೂ ಗೊಣಗಿದ್ದೇವೆ.

ನಮ್ಮ ಹೆಚ್ಚಿನ ಶಿಕ್ಷಕರ ಬಾಯಿಂದ ಬರುವುದು
'ಡಿಸೆಂಬರ್ ಹೊತ್ತಿಗೆ Syllabus Cover ಮಾಡಬೇಕು, ಮುಗಿಸಬೇಕು' ಅಂತಾ.
Actually Syllabus has to be open in front of students and not be covered.

ನಾವು ಬೌದ್ಧಿಕತೆ ಕುರಿತಂತೆ ಈ ರೀತಿಯಲ್ಲಿ ಅವೈಜ್ಞಾನಿಕವಾಗಿ ಹೆಚ್ಚಿನ ಆಕ್ರಮಣಶೀಲ
ಒತ್ತಾಸೆ ನೀಡುತ್ತಿರುವುದರಿಂದ ಸಾಕಷ್ಟು ಮಕ್ಕಳು ನಕಾರಾತ್ಮಕ ಭಾವನೆಗಳಿಂದ ಬಳಲುವರು.
ಇತರರೊಡನೇ ಹೊಂದಿಕೊಳ್ಳುವದೇ, ಹಂಚಿಕೊಳ್ಳದೇ ಸ್ವಾರ್ಥಿಗಳಾಗುತ್ತಿದ್ದಾರೆ.

ಗುರಿ ಮುಖ್ಯವೇ ಹೊರತು ಮಾರ್ಗ ಮುಖ್ಯವಲ್ಲ ಎಂಬ ಧೋರಣೆ ಬೆಳೆಸಿಕೊಳ್ಳುತ್ತಿದ್ದಾರೆ.
SSLC ಪರೀಕ್ಷಾ ರೀತಿ-ನೀತಿಗಿಂತ ಬೇರೆ ಉದಾಹರಣೆ ಬೇಕಿಲ್ಲ.
ಎಳವೆಯಲ್ಲಿ ಕಂಡ ರುಚಿ‌‌ಗಾಗಿ ಜೀವನದ ಉದ್ದಕ್ಕೂ ಹಂಬಲಿಸುತ್ತಾರೆ.

ಹೀಗೆ ಮುಂದುವರೆದಲ್ಲಿ
ಮಕ್ಕಳಲ್ಲಿ/ಹದಿಹರೆಯದವರಲ್ಲಿ ಆನೇಕಾನೇಕ ನಡವಳಿಕೆ ದೋಷಗಳು ಕಂಡು ಬರುತ್ತವೆ, ಅವರಲ್ಲಿ
ಕೀಳರಿಮೆ, ಆಕ್ರಮಣಶೀಲತೆ, ಆತ್ಮಹತ್ಯೆಯಂತಹ  ದುರಾಲೋಚನೆಗಳು, ಸಮಾಜ ವಿರೋಧಿ ಭಾವನೆಗಳು
ಕಂಡುಬರುತ್ತಿವೆ.

ಈ ಹಿನ್ನಲೆಯಲ್ಲಿ ಪೋಷಕರಾಗಿ, ಶಿಕ್ಷಕರಾಗಿ, ಅದರಲ್ಲೂ ಒಂದು ಶಾಲೆಯ ಮುಖ್ಯಸ್ಥರಾಗಿ
ಪ್ರಸ್ತುತ ಸನ್ನಿವೇಶದಲ್ಲಿ‌ ನಮ್ಮ ಜವಬ್ದಾರಿ ಮತ್ತು ಹೊಣೆಗಾರಿಕೆಗಳು ಹೆಚ್ಚಿನದಾಗಿವೆ.
ನಾವು ಮಕ್ಕಳ ಮನೋವಿಜ್ಞಾನದ ಕುರಿತು ಹೆಚ್ಚಿನ ಜ್ಞಾರ್ನಾಜನೆ ಮಾಡಬೇಕಾಗಿದೆ.

- ಗಿರೀಶ ಟಿ. ಪಿ.
ಸ.ಪ್ರೌ.ಶಾಲೆ, ಹಾದೀಕೆರೆ, ತರೀಕೆರೆ ತಾ.

-- 
EnglishSTF Link: https://groups.google.com/forum/#!forum/englishstf

--

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"EnglishSTF" group.
To unsubscribe from this group and stop receiving emails from it, send an email 
to englishstf+unsubscr...@googlegroups.com.
To post to this group, send an email to englishstf@googlegroups.com.
Visit this group at https://groups.google.com/group/englishstf.
To view this discussion on the web, visit 
https://groups.google.com/d/msgid/englishstf/CAAcTnOVs-f0NA-%3Dv2r%3DfBv7vjVSz9cFNngdSZtDNPLyX4Q4B6A%40mail.gmail.com.
For more options, visit https://groups.google.com/d/optout.

Reply via email to