ಪ್ರೀತಿಯ ಶಿಕ್ಷಕರೇ,
ವಿಷಯ ಶಿಕ್ಷಕರ ವೇದಿಕೆಯು ನಮ್ಮ ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ಮತ್ತು ತರಗತಿ
ಬೋಧನೆಗೆ ಸಹಕಾರಿಯಾಗುವಂತಹ ಸಂಪನ್ಮೂಲಗಳನ್ನು ಪರಸ್ಪರರಲ್ಲಿ ಹಂಚಿಕೊಳ್ಳಲು ಸಹಕಾರಿಯಾಗಿದೆ.
ಶೈಕ್ಷಣಿಕ ಸಂಪನ್ಮೂಲಗಳು ಮುಕ್ತವಾಗಿ ಎಲ್ಲರಿಗೂ ಹಂಚಿಕೆಯಾಗವಂತೆ ಹಾಗು ವಿಷಯ ಶಿಕ್ಷಕರು
ಪರಸ್ಪರ ಚರ್ಚಿಸಲು ಈ ವೇದಿಕೆ ಪರಿಣಾಮಕಾರಿಯಾಗುವಂತೆ ಮಾಡಲು ಕೆಲವು ಸಲಹೆಗಳು :
೧.ಈ ಗುಂಪು ರಚನೆಯಾಗಿರುವುದು ಕೇವಲ ಶೈಕ್ಷಣಿಕ ಸಂಪನ್ಮೂಲ ಹಂಚಿಕೆಯ ಉದ್ದೇಶಗಳಿಗಾಗಿ
ಮಾತ್ರ, ವೈಯುಕ್ತಿಕ ಅಂಶಗಳನ್ನು ಹಾಗು ಶೈಕ್ಷಣಿಕವಲ್ಲದ ವಿಚಾರಗಳನ್ನು ಈ ವೇದಿಕೆಯಲ್ಲಿ
ಹಂಚಿಕೊಳ್ಳುವುದು ವೇದಿಕೆಯಲ್ಲಿನ ಶಿಕ್ಷಕರಿಗೆ ಕಿರಿಕಿರಿಯನ್ನುಂಟು ಮಾಡಬಹುದು.
ದಯವಿಟ್ಟು ಕೇವಲ ಶೈಕ್ಷಣಿಕ ವಿಚಾರಗಳನ್ನು ಮಾತ್ರ ಹಂಚಿಕೊಳ್ಳುವುದು. ವಸ್ತುನಿಷ್ಟವಾದ
ಮತ್ತು ಚರ್ಚೆಗೆ ಅವಕಾಶನೀಡುವಂತಹ ವಿಚಾರಗಳ ಹಂಚಿಕೆ ಇರಲಿ. ರಾಜಕೀಯ ಪ್ರೇರಿತ, ಏಕಮುಖ
ನಿರ್ಧಾರಿತ ವಿಚಾರಗಳು ಈ ವೇದಿಕೆ ಸೂಕ್ತವಾಗಿರುವುದಿಲ್ಲ.
೨.ಯಾವುದೇ ಇಮೇಲ್ ಗೆ ರಿಪ್ಲೈ ಮಾಡುವಾಗ ಆ ಇಮೇಲ್‌ನ "ಸಬ್ಜೆಕ್ಟ್"ನ್ನು ಗಮನಿಸಿ, ಒಂದು
"ಸಬ್ಜೆಕ್ಟ್" ಬಗೆಗೆ ಚರ್ಚೆ ನಡೆಯುವಾಗ ಮದ್ಯೆದಲ್ಲಿ ಇನ್ಯಾವುದೋ ವಿಷಯವನ್ನು ಅದೇ
"ಸಬ್ಜೆಕ್ಟ್" ಅಡಿಯಲ್ಲಿ ರಿಪ್ಲೈ ಮಾಡಬೇಡಿ. ನೀವು ಹೇಳಬೇಕಿರುವ ವಿಷಯವನ್ನು
ಪ್ರತ್ಯೇಕವಾದ ಇಮೇಲ್ ಮೂಲಕ ಅದಕ್ಕೆ ಸೂಕ್ತವಾದ "ಸಬ್ಜೆಕ್ಟ್" ನೊಂದಿಗೆ ನಮೂದಿಸಿ.ಅದೇ
ರೀತಿ ಅಟ್ಯಾಚ್‌ಮೆಂಟ್ ಅಥವಾ ಪೋಟೋಗಳನ್ನು ಕಳುಹಿಸುವಾಗ ದಯವಿಟ್ಟು ಗಮನವಹಿಸಿ ಅದಕ್ಕೆ
ಸೂಕ್ತವಾಗುವ "ಸಬ್ಜೆಕ್ಟ್" ಹಾಗು ಅದರ ಬಗೆಗಿನ ಮಾಹಿತಿಯನ್ನು ನಮೂದಿಸಿ.
ಇಲ್ಲದಿದ್ದಲ್ಲಿ ನಿಮ್ಮ ಇಮೇಲ್ ತುಂಬಾ ಉಪಯುಕ್ತವಾದ ಸಂಪನ್ಮೂಲ ಹೊಂದಿದ್ದರೂ ಸಹ
ಗುಂಪಿನಲ್ಲಿ ಕಡೆಗಣನೆಗೆ ಒಳಪಡಬಹುದು.
೩.ಪದೇ ಪದೇ ವಿವಿಧ ವಾಟ್ಸಪ್/ಟೆಲಿಗ್ರಾಮ್/ಹೈಕ್ ಗುಂಪಿಗೆ ಸೇರಿಸುವ ಕೋರಿಕೆಗಳನ್ನು
ಈ ವೇದಿಕೆಯಲ್ಲಿ ಹಂಚಿಕೊಳ್ಳಬೇಡಿ. ಆಯಾ ಗುಂಪಿನ ಅಡ್ಮಿನ್‌ಗಳಿಗೆ ಮಾತ್ರವೇ ಕೋರಿಕೆ
ಕಳುಹಿಸಿ. ಅದೇ ರೀತಿ ಎಸ್.ಟಿ.ಎಫ್ ಗುಂಪಿಗೆ ಸೇರಿಸಲು ಸಹ ಈ ವೇದಿಕೆಯಲ್ಲಿ
ಕೋರಿಕೆಗಳನ್ನು ಕಳುಹಿಸಬೇಡಿ. ಬದಲಿಗೆ ಈ ಕೆಳಗಿನ ಅರ್ಜಿಯನ್ನು ತುಂಬಿಸಿ ಸಲ್ಲಿಸಿ. ಅರ್ಜಿಗಾಗಿ ಈ ಲಿಂಕ್ ನೋಡಿ-
https://docs.google.com/forms/d/1Iv5fotalJsERorsuN5v5yHGuKrmpFXStxBwQSYXNbzI/viewform
೪.ಎಸ್.ಟಿ.ಎಫ್ ನಲ್ಲಿ ಅನುಸರಿಸುತ್ತಿರುವ ಕೆಲವು ಇಮೇಲ್ ಮಾರ್ಗಸೂಚಿಗಳನ್ನು ತಿಳಿಯಲು ಈ ಕೆಳಗಿನ
ಲಿಂಕ್ ಕ್ಲಿಕ್ಕಿಸಿ.
http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
ಧನ್ಯವಾದಗಳು
--
*ವೆಂಕಟೇಶ್ Venkatesh वेंकटॆश *|
Programme Associate | <http://www.ITforChange.net/>IT for Change
<http://www.itforchange.net/>
(/In special consultative status with the United Nations ECOSOC)
//91-80-26654134 | 9945147359
Blog: http://geluvejeevana.blogspot.in//
ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ
ಪಡೆಯೋಣ...
“Let children be children,” “The work of a child is to play,” and
“Children learn best through play.”///////
--
EnglishSTF Link: https://groups.google.com/forum/#!forum/englishstf
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "EnglishSTF" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/englishstf.
To view this discussion on the web, visit
https://groups.google.com/d/msgid/englishstf/333eee94-d36a-c585-1afe-d2f60c4bd04d%40gmail.com.
For more options, visit https://groups.google.com/d/optout.