🌹😃ನನ್ನ-ಶಾಲೆ🏡👯📝 ಊರಹೊರಗೆ ಬಯಲಿನಲ್ಲಿ ಇರುವ ಸುಂದರ ಶಾಲೆಯು ಕಲಿಯಲೆಂದು ಬಾಲರಕರೆವ ಚಾರು ಮಂದಿರ ರೂಪವು/೧
ಹಸಿರಚೆಲ್ಲಿ ನಿಂತ ಗಿಡದಿ ಪರಿಸರದ ಪಾಠವು ಬಿಸಿಯೂಟಕೆ ನಾವೇ ಬೆಳೆದ ಕಾಯಿಪಲ್ಲ್ಯೆ ತೋಟವು/೨ ನಗುತನಗುತ ದಿನವು ನಾವು ಶಾಲೆಯೆಡೆಗೆ ಬರುವೆವು ಎಲ್ಲ ವಿಷಯ ಕಲಿಯುತಲಿ ಮೇಲು-ಕೀಳು ತೊರೆವೆವು/೩ ಮುದ್ದುಮಾಡಿ ವಿದ್ಯೆಹೇಳೊ ಸಿದ್ಧಿಪಡೆದ ಗುರುಗಳು ತಿದ್ದಿ ಬುದ್ದಿ ಹೇಳುತಲಿ ಶುದ್ಧ ಪಥಕೆ ತರುವರು /೪ ಉಚಿತವಾಗಿ ಪುಸ್ತಕ ವಸ್ತ್ರ ಖಚಿತ ಮೊದಲ ದಿನದಲೇ ಶುಚಿಯೂಟ ಹಾಲು ಗುಳಿಗೆ ಕಸುವು ಪಡೆದುಬೆಳೆಯಲು/೫ ದೇಶಸೇವೆಗಾಗಿ ದೇಹ ಮೀಸಲೆಂದು ತಿಳಿವೆವು ಸಲಹಿದಂತ ತಂದೆ-ತಾಯಿಗೆ ಸುಖ,ಕೀರ್ತಿ ತರುವೆವು /೬ ಹೊಸತುಹೊಸತುಕಲಿಯಬೇಕು ಹಸನು ಬಾಳು ನಡೆಸಲು ದುಡಿದುದುಡಿದು ಸವೆಯಬೇಕು ದೇಶವನು ಮುನ್ನೆಡೆಸಲು/೭ ##ರಚನೆ# ಚಂದ್ರೇಗೌಡ ನಾರಮ್ನಳ್ಳಿ, 8277322344 MDChandregowda AM Ghs Kenkere Arsikere Tq Hassan Dt p 573119. M 8722199344 -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAE6PbrnSX1wmzRjwa0jGa6iLf49LsnH5YcgYA7zLttos1Ahx3A%40mail.gmail.com. For more options, visit https://groups.google.com/d/optout.
