🌹😃ನನ್ನ-ಶಾಲೆ🏡👯 ಬನ್ನಿ ಬನ್ನಿ ಗೆಳೆಯರೆ ಶಾಲೆಗೆ ಹೋಗುವ ಚಿನ್ನದಂಥ ಅಕ್ಷರ ಕಲಿತು ಜಾಣರಾಗುವ /ಪ/
ಊರಹೊರಗೆ ಬಯಲಿನಲ್ಲಿ ಇರುವ ಸುಂದರ ಶಾಲೆಯು ಕಲಿಯಿರೆಂದು ಬಾಲರ ಕರೆವ ಚಾರು ಮಂದಿರ ರೂಪವು/1/ ಹಸಿರು ಚೆಲ್ಲಿ ನಿಂತ ಗಿಡದ ಉಸಿರು ಪರಿಸರ ಪಾಠವು ಬಿಸಿಯೂಟಕೆ ನಾವೇ ಬೆಳೆದ ಕಾಯಿಪಲ್ಲೆ ತೋಟವು / 2/ ಉಚಿತವಾದ ಪುಸ್ತಕ ವಸ್ತ್ರ ಖಚಿತ ಮೊದಲ ದಿನದಲೆ ಶುಚಿಯೂಟ ಹಾಲು ಗುಳಿಗೆ ಕಸುವು ಪಡೆದು ಬೆಳೆಯಲು /3/ ಶೌಚ ಅಡುಗೆಕೋಣೆ ನೀರು ನಿರ್ಮಲ ಸೊಗಸಿನಾಗರ ಸುಣ್ಣ-ಬಣ್ಣ ಬಳಿದ ಶಾಲೆ ವಧುವಿನಂತೆ ಸಿಂಗರ /4/ ಒಂದೇ ಬನದ ಹೂಗಳೆಂಬ ಚಂದ ನೀತಿ ತಿಳಿಯುವಾ ಹೊಂದಿಕೊಂಡು ಬಾಳಿರೆಂಬ ಸಂದೇಶ ಪ್ರೀತಿ ಸಾರುವ /5 / ಮುದ್ದುಮಾಡಿ ವಿದ್ಯೆಕಲಿಸೊ ಸಿದ್ಧಿಪಡೆದ ಗುರುಗಳು ತಿದ್ದಿ ಬುದ್ಧಿ ಹೇಳುತಲಿ ಶುದ್ಧ ಪಥವ ತೋರುವರು /6/ ದೇಶ ಸೇವೆಗಾಗಿ ದೇಹ ಮೀಸಲೆಂದು ಅರಿತೆವು ಸಲಹಿದಂತ ತಂದೆ-ತಾಯಿಗೆ ಸುಖ,ಕೀರ್ತಿ ತರುವೆವು /7/ ಹೊಸತುಹೊಸತುಕಲಿಯಬೇಕು ಹಸನು ಬಾಳು ನಡೆಸಲು ದುಡಿದುದುಡಿದು ಸವೆಯಬೇಕು ದೇಶವನು ಮುನ್ನಡೆಸಲು/ 8/ ಊರಜನರು ಕೊಡುಗೆ ನೀಡೆ ಶಾಲೆಯ ಹೆಸರು ಬಿತ್ತರ ನಮ್ಮ ಆಟ-ಪಾಠ ನೋಡಿ ನಗುವ ಬಾನ ಚಂದಿರ /9/ ರಚನೆ# ಚಂದ್ರೇಗೌಡ ನಾರಮ್ನಳ್ಳಿ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAE6PbrnCiDXReJptxU1JZ83Y4i1Cuv3P7jD%3Dcv2WhJjN%2B6VUzw%40mail.gmail.com. For more options, visit https://groups.google.com/d/optout.
