ನಿಜಕ್ಕೂ ಒಂದೊಂದು ಕವಿಗಳ ಪರಿಚಯವೂ ಹೊಸ ಹೊಸ ಅನುಭವ ಹಾಗು ಜ್ಞಾನವನ್ನು ಹೆಚ್ಚಿಸುತ್ತಿವೆ.
ಮಮತಾ ನಿಮಗೆ ತುಂಬ ತುಂಬ ಧನ್ಯವಾದಗಳು.

ಶ್ರೀಮಾಲಾ ಭಟ್.
ಸ.ಉ.ಪ್ರೌ.ಶಾ.ಟ್ಯಾಂಕ್ ಗಾರ್ಡನ್.
On 20 Jan 2016 08:41, "Mamata Bhagwat1" <[email protected]> wrote:

> ಆತ್ಮೀಯರೆ,
> ಸು.ರಂ.ಎಕ್ಕುಂಡಿಯವರ ಜನ್ಮದಿಂದ ಅಂಗವಾಗಿ ಕನ್ನಡ ಸಂಪದ ತಾಣ Facebook ನಲ್ಲಿ ಹಂಚಿದ
> ಮಾಹಿತಿಯನ್ನು ಕಳಿಸುತ್ತಿದ್ದೇನೆ.
>
> ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರು ರಾಣೆಬೆನ್ನೂರಿನಲ್ಲಿ 1923ರ ಜನವರಿ 20ರಂದು
> ಜನಿಸಿದರು.  ‘ಕೆಂಡದ ಮೇಲೆ ನಡೆದವರಿಗೆ ಮಾತ್ರ ಕೆಂಡದ ಅನುಭವವನ್ನು ಬಣ್ಣಿಸಲು ಸಾಧ್ಯ’
> ಎಂಬುದು ಎಕ್ಕುಂಡಿಯವರ ನಿಲುವು.  ಎಕ್ಕುಂಡಿಯವರು ತಾವು ಶಿಕ್ಷಕರಾಗುವವರೆಗೆ ನಡೆದು ಬಂದ
> ಕೆಂಡದ ಮೇಲಿನ ನಡಿಗೆಯೇ ಇವರ ಕಾವ್ಯವನ್ನು ನಿರ್ದೇಶಿಸಿದೆ.
>
> ಮನೆ ಸಾಗಿಸಲು ಪುಟ್ಟ ಎಕ್ಕುಂಡಿ ಬದುಕಿನ ಭಾರವನ್ನು ಹೊರಬೇಕಾಯಿತು.  ಈ ಭಾರವಾದ ಬದುಕಿನ
> ಮಧ್ಯೆಯೂ ಎಕ್ಕುಂಡಿ ಓದಿನತ್ತ ಆಕರ್ಷಿತರಾದರು.  ಸವಣೂರಿನಲ್ಲಿ ಶ್ರೀ ಸತ್ಯಭೋಧ ಸೇವಾಸಂಘ
> ನಡೆಸುತ್ತಿದ್ದ ವಾಚನಾಲಯದ ಪುಸ್ತಕವನ್ನು ಸದಸ್ಯರ ಮನೆಗೆ ಮುಟ್ಟಿಸುವ ಕೆಲಸ ಹೊತ್ತರು.
> ಪ್ರತಿಫಲವಾಗಿ ವಾಚನಾಲಯದ ಪುಸ್ತಕಗಳನ್ನು ಪುಕ್ಕಟೆ ಓದುವ ಅವಕಾಶ ಸಿಕ್ಕಿತು.  ಎಕ್ಕುಂಡಿ
> ಸಾಹಿತ್ಯಲೋಕಕ್ಕೆ ಕಾಲಿರಿಸಿದ್ದು ಹೀಗೆ.
>
> ‘ಐದನೆಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಗಾಳಿ ಬೆಳಕು ಯಾವುದೂ ಸುಳಿಯದಿದ್ದ
> ಗುಹೆಯಂಥ ಮನೆಯಲ್ಲಿ ಊಟ, ಉಡುಗೆ, ಬಟ್ಟೆಬರೆ ಎಲ್ಲವೂ ಅಷ್ಟಕ್ಕಷ್ಟೇ ಇದ್ದವು, ಹಬ್ಬದ
> ದಿನಗಳಿಗೂ ಉಳಿದ ದಿನಗಳಿಗೂ ವೆತ್ಯಾಸವಿರದಿದ್ದ, ಶಾಲೆಯ ಫೀ ಕೊಡಲು ಅಸಾಧ್ಯವಾಗಿದ್ದ, ಯಾವ
> ವರ್ಷವೂ ಕಣ್ಣೀರು ಹಾಕದೆ ಪರೀಕ್ಷೆಗೆ ಕೂಡುವ ಅವಕಾಶ ಸಿಗದಿದ್ದ’ ರೀತಿಯಲ್ಲಿ ಬೆಳೆದರು
> ಎಕ್ಕುಂಡಿ.
>
> ಹೈಸ್ಕೂಲಿನಲ್ಲಿ ಸಾಹಿತ್ಯದ ಗೀಳಿಗೆ ತಕ್ಕ ವಾತಾವರಣ ದೊರಕಿತು.  ‘ಉನ್ನತಿ’ ಕೈಬರಹ
> ಪತ್ರಿಕೆ ಸಂಪಾದಿಸಿದ್ದೇ ಅಲ್ಲದೆ ಸಾಹಿತ್ಯಕ ಹರಟೆಗೆ ಜೊತೆಗಾರರು ಸಿಕ್ಕರು.  ಪಾಠ
> ಮಾಡುತ್ತಿದ್ದ ಮಾಸ್ತರುಗಳು ಬಿಎಂಶ್ರೀ, ಟೆನಿಸನ್, ವರ್ಡ್ಸ್ ವರ್ತರನ್ನೂ ಪರಿಚಯಿಸಿದರು.
> ಎಕ್ಕುಂಡಿ ತಮ್ಮ ಹದಿನೈದನೇ ವಯಸ್ಸಿನಲ್ಲಿ ತಮ್ಮ ಶಾಲಾ ದಿನಗಳಲ್ಲಿಯೇ ಬರಹ ಆರಂಭಿಸಿದರು.
> ಜಗದೀಶಚಂದ್ರ ಬೋಸರ ಸಾವು ಎಕ್ಕುಂಡಿಯವರಲ್ಲಿ ಕವಿತೆಯಾಗಿ ಅರಳಿತ್ತು.  ‘ಒಬ್ಬ ವಿಜ್ಞಾನಿಯ
> ಸಾವು ಒಬ್ಬ ಕವಿಯ ಹುಟ್ಟಿಗೆ ಕಾರಣವಾದದ್ದು ವಿಚಿತ್ರ ಸಂಗತಿ’ ಎನ್ನುತ್ತಿದ್ದರು
> ಎಕ್ಕುಂಡಿ.   ‘ನಾಡಹಬ್ಬ’ ಎಕ್ಕುಂಡಿಯವರೊಳಗಿದ್ದ ಕವಿಯನ್ನು ಹೊರಗೆ ತರಲು ಮತ್ತಷ್ಟು
> ನೆರವಾಯಿತು.  ನಾಡಹಬ್ಬಕ್ಕಾಗಿ ಹುಬ್ಬಳ್ಳಿಗೆ ಬಂದ ವಿ.ಕೃ. ಗೋಕಾಕ, ಬೇಂದ್ರೆ,
> ಬೆಟಗೇರಿಕೃಷ್ಣಶರ್ಮ, ಶಂ. ಬಾ.  ಜೋಶಿ, ಶ್ರೀರಂಗರು ಸಾಹಿತ್ಯದ ಆಸಕ್ತಿ ಬೆಳಯಲು ಕಾರಣರಾದರು.
>
> ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಪೇಜಾವರ
> ಸದಾಶಿವರಾಯರು  ನಿಧನರಾದರು.  ಅವರ ‘ವರುಣನಿಗೆ ಆಹ್ವಾನ’ದಿಂದ ಪ್ರಭಾವಿತಗೊಂಡಿದ್ದ
> ಎಕ್ಕುಂಡಿ, ಗಂಗಾಧರ ಚಿತ್ತಾಲ, ವರದರಾಜ ಹುಯಿಲಗೋಳ, ರಾಯ ಧಾರವಾಡಕರ, ವಿ.ಜಿ. ಭಟ್
> ಇವರೊಂದಿಗೆ ‘ವರುಣ ಕುಂಜ’ ಬರಹಗಾರರ ಬಳಗವನ್ನು ಆರಂಭಿಸಿದರು.  ಕಾಲೇಜಿನ ಈ ಬಳಗ ಪ್ರತಿವಾರ
> ಕಾವ್ಯ, ಕಥೆ, ಪ್ರಬಂಧ, ವಿಮರ್ಶೆ ಬರೆದು ಚರ್ಚೆ ನಡೆಸುತ್ತಿತ್ತು.  ವಿ.ಕೃ. ಗೋಕಾಕ್,
> ರಂ.ಶ್ರೀ. ಮುಗುಳಿಯವರ ಮಾರ್ಗದರ್ಶನ ಈ ಕುಂಜಕ್ಕೆ ಲಭಿಸಿ ಎಕ್ಕುಂಡಿಯವರ ‘ಮಾತು ಮಥಿಸಿ’ ಕವನ
> ಸಂಗ್ರಹಕ್ಕೆ ದಾರಿಮಾಡಿಕೊಟ್ಟಿತು.  ವಿಲಿಂಗ್ಡನ್ ನಲ್ಲಿ ಓದುವಾಗಲೇ ಎಕ್ಕುಂಡಿಯವರ ಮೊದಲ
> ಕವನ ಸಂಕಲನ ‘ಸಂತಾನ’ವನ್ನು ರಂ.ಶ್ರೀ. ಮುಗುಳಿ ಪ್ರಕಟಿಸಿದರು.
>
> ಎಕ್ಕುಂಡಿಯವರ ನಂತರದ ಪಯಣ ಬಂಕಿಕೊಡ್ಲಕ್ಕೆ.  ಅಲ್ಲಿಯೇ ಶಿಕ್ಷಕರಾದರು.  ಬಂಕಿಕೊಡ್ಲ
> ಎಕ್ಕುಂಡಿಯವರ ಎದೆಯೊಳಕ್ಕಿಳಿಯಿತು.  ಸಮುದ್ರ ತೀರದ ಈ ಊರಿನಲ್ಲಿ ಮೂರು ದಶಕಕ್ಕೂ ಹೆಚ್ಚು
> ಕಾಲ ಇದ್ದ ಎಕ್ಕುಂಡಿಯವರ ಕವನಗಳಲ್ಲಿ ಅಲ್ಲಿನ ನಿಸರ್ಗ ಹೆಣೆದುಕೊಂಡಿದೆ.  ಹಾದಿಯ
> ಮಧ್ಯದಲ್ಲಿ ಕೇಳಿ ಬರುವ ಕೋಗಿಲೆಯ ಧ್ವನಿ, ಗದ್ದೆಗಳ ಮಧ್ಯದಿಂದ ಧುತ್ತೆಂದು ಹಾರುವ
> ಬೆಳ್ಳಕ್ಕಿಗಳು, ಭೋರ್ಗರೆವ ಉಪ್ಪುಕಡಲು, ಚಾಮರ ಬೀಸಿ ಹಾಡುವ ತೆಂಗಿನ ಮರಗಳ ಸಾಲು ಸಾಲು,
> ಕೋಪಿಸಿ ಮೈಮೇಲೆ ದಿನಗಟ್ಟಲೇ ಸುರಿದು ಹಾವಳಿ ಎಬ್ಬಿಸುವಷ್ಟು ಮಳೆರಾಯ ಇವೆಲ್ಲಾ
> ಎಕ್ಕುಂಡಿಯವರ ಕವನಗಳಲ್ಲಿ ಕುಸುರಿಗೆಲಸ ನಡೆಸಿವೆ.  ಆದರೆ ನಿಸರ್ಗದಲ್ಲಿ ತೊಯ್ದ
> ಎಕ್ಕುಂಡಿಯವರಿಗೆ ಅಷ್ಟೇ ವರ್ಷ ಆ ಕಡಲತಡಿಯ ತೆಂಗಿನ ಗರಿಕೆಯ ಗುಡಿಸಲುಗಳಿಂದ
> ನಿಟ್ಟುಸಿರುಗಳು ಸಹಾ ಕೇಳಿಸಿವೆ.  ಕಡಲ ತೀರದಲ್ಲಿ ಬೆಂಕಿ ಹಚ್ಚಿ ಗುಮಟೆ ನುಡಿಸುತ್ತಾ ಹಾಡು
> ಹೇಳುತ್ತಾ ಇದ್ದವರ ಹಿಂದೆ ಎಷ್ಟು ನಿಟ್ಟುಸಿರು ಇದೆಯೆಂಬುದು ಎಕ್ಕುಂಡಿಯವರಿಗೆ
> ಗೊತ್ತಿರುವುದರಿಂದಲೇ ನಿಸರ್ಗವನ್ನು ಹಿಂದೆ ತಳ್ಳಿ ಅವರ ಕಾವ್ಯದಲ್ಲಿ ಜನಸಾಮಾನ್ಯರು
> ಇಣುಕುತ್ತಾರೆ.
>
> ‘ಎಕ್ಕುಂಡಿ ಅವರ ಕಾವ್ಯದ ಕೇಂದ್ರ ಮನುಷ್ಯನೇ ಆಗಿರುವುದಕ್ಕೂ, ಅವರ ಪ್ರಧಾನ ಕಾವ್ಯಪ್ರಕಾರ
> ಕಥನಕವನವೇ ಆಗಿರುವುದಕ್ಕೂ ಕಾರಣಗಳು ಸ್ಪಷ್ಟವಾಗಿಯೇ ಇವೆ.  ‘ಬೆಳ್ಳಕ್ಕಿಗಳು’ ಸಂಕಲನದ
> ಕೆಲವು ರಚನೆಗಳು ಕೊಂಚ ಭಿನ್ನವಾದರೂ ಒಟ್ಟಾರೆ ಎಕ್ಕುಂಡಿ ಕಾವ್ಯಪ್ರಪಂಚ ಕಥನಕವನಗಳಿಂದಲೇ
> ಸಮೃದ್ಧವಾಗಿವೆ.  ‘ಕೊರಗು’ ಎಂಬ  ಕವನದಲ್ಲಿ ಏನಿಲ್ಲ ಎಂದು ಹೇಳುವಾಗ, ‘ಬುತ್ತಿ’ ಕವನದಲ್ಲಿ
> ಏನಾಗಬೇಕು ಎಂದು ಒತ್ತಿ ಹೇಳುವಾಗ, ‘ಬೆಳ್ಳಕ್ಕಿಗಳು’ ಕವನದಲ್ಲಿ ಭರವಸೆಯ ಹಾಡನ್ನು
> ಹಾಡುವಾಗ, ‘ಶರಣು’ ಕವನದಲ್ಲಿ ತನ್ಮಯತೆಯಿಂದ ಪ್ರಾರ್ಥಿಸುವಾಗ ಕೂಡ ಮನುಷ್ಯಾವಸ್ಥೆಯ
> ನೆಲೆಗಳಿಂದ ಎಕ್ಕುಂಡಿ ಕವನಗಳು ಬಿಡುಗಡೆ ಹೊಂದಿವೆ ಅನ್ನಿಸುವುದಿಲ್ಲ.  ಪ್ರಕೃತಿಯನ್ನು
> ಕುರಿತು ಹಾಡುವಾಗಲೂ ಕವಿ, ಮನುಷ್ಯ ಸಮಾಜವು ಪ್ರಕೃತಿಯಿಂದ ಪಡೆಯಬಹುದಾದ ಜೀವನೋತ್ಸಾಹದ
> ಕಡೆಗೆ ಒಂದು ಕಣ್ಣಿಟ್ಟಿರುವುದು ಕಾಣುತ್ತದೆ’  (-ಟಿ. ಪಿ. ಅಶೋಕ)
>
> ಪುತಿನ ಅವರು ಬಣ್ಣಿಸಿದಂತೆ ಎಕ್ಕುಂಡಿ ‘ಸಹಜ ಕವಿ’ಯಾದ ಕಾರಣದಿಂದಲೇ ಇವರ ಕಾವ್ಯದಲ್ಲಿ
> ಜನಸಾಮಾನ್ಯರು  ಮೂಡಿ ಬಂದರು.  ‘ನಂ,4, ಅಂತರ್ಸನ್ ಬೀದಿಯಲ್ಲಿ’, ಮನೆಯ ತೊಟ್ಟಿಲು,
> ಹಾಸಿಗೆ, ದುಪ್ಪಟ್ಟಿ, ಲಾಲಿಯ ಹಾಡುಗಳು, ಹರಾಜನ್ನು ನೋಡುತ್ತಾ ನಿಂತ ಕಾರ್ಲ್ ಮಾರ್ಕ್ಸ್,
> ಬಿಕ್ಕುತ್ತಿರುವ ಹೆಂಡತಿ ಹೆಲೆನ್, ಬಂಡವಾಳ ಬರೆಯುವುದರಲ್ಲಿ ನಿರತನಾಗಿರುವ ಶ್ರಮಜೀವಿ,
> ಬಂಧುವಿನ ಮನೆಗೆ ಬೆಳಕಾದ ಎಂಗೆಲ್ಸ್, ಹೆರಿಗೆ ಆಸ್ಪತ್ರೆಯ ಪೌಡರ್, ಪಿಯರ್ಸ್ ಪರಿಮಳದ
> ಹೊದಿಕೆಯಿಂದ ದೂರವಾಗಿ ಎರಡು ಲಾರಿಗಳ ಕೆಳಗೆ ಕಟ್ಟಿರುವ ಸೀರೆ ತುಂಡನ್ನು ಅಪ್ಪಿ ಮಲಗಿರುವ
> ಚಿನ್ನಮ್ಮನ ಕಂದ, ಎಸೆದ ಬ್ರೆಡ್ಡಿನ ತುಂಡು ಆಯಲು ತೊಟ್ಟಿಯೊಳಗೆ ಇಳಿಯುವ ದುಡಿವ ಕಸುವಿರುವ
> ಹಸಿದ ಕೈಗಳು, ಉಳ್ಳವರ ಎದೆಯಿಂದ ಬಂದಂಥ ಬೆಣಚು ಕಲ್ಲುಗಳ ಮೇಲೆ ಕಾಲಿಟ್ಟು ಗಾಯಗೊಂಡ
> ಕೂಲಿಕಾರರು, ಕೆಲಸವೇ ಶಿವಧ್ಯಾನವಾದ ದಾಸಿಮಯ್ಯ, ಹಾಲೆಂದೇ ಹಿಟ್ಟು ನೀರು ಕುಡಿದ
> ಅಶ್ವತ್ಥಾಮ, ಶ್ರೀಧರನಾಮದ ಖಜಾನೆ ತೆರೆಯುವ ಬೀಗದಕೈ ಹಿಡಿದು ಹಣದ ಖಜಾನೆಯಿಂದ ಹೊರಬಿದ್ದ
> ಪುರಂದರದಾಸ, ವಿಷದ ಬಟ್ಟಲಿಗೆ ಬಲಿಯಾದ ಸಾಕ್ರೆಟಿಸ್, ಎರಡು ದಂತಗಳ ಬೆಸೆದು
> ದೂರವಿದ್ದವರನ್ನು ಹತ್ತಿರ ತಂದ ಮಧ್ವಮುನಿ, ಏಸುಕ್ರಿಸ್ತ, ಜಬಾಲ, ರಂತಿದೇವ, ಪ್ರವಾದಿ,
> ಕಳ್ಳ ಡಕಾಯಿತ, ಅಂತೆಯೇ ಬಕುಲದ ಹೂಗಳನ್ನು ನೋಡಿ ಒಂದೆರೆಕ್ಷಣ ನೋವೆಲ್ಲವನ್ನೂ ಮರೆತ ಜೋಡಿ –
> ಎಕ್ಕುಂಡಿಯವರ ಕವನಗಳ ಕ್ಯಾನ್ವಾಸ್ನಲ್ಲಿ ಜನರೊಂದಿಗೆ ಸಂಪಾದಿಸುವವರು ಅದೆಷ್ಟು ಜನ!
>
> ಎಕ್ಕುಂಡಿಯವರೇ ಬಣ್ಣಿಸುವ ಹಾಗೆ – ಅವರ ಕಾವ್ಯ –  ‘ಶಬರಿ, ಸುಧಾಮ, ಗಜೇಂದ್ರ, ಕುಬ್ಜೆ
> ಮತ್ತು ಪುರಂದರದಾಸರ ಭಕ್ತಿ ಮತ್ತು ಪ್ರೇಮಗಳನ್ನು ಕುರಿತು ಬಣ್ಣಿಸುತ್ತದೆ.   ಏಸು,
> ಪ್ರವಾದಿ ಹಾಗೂ ದೇವರ ದಾಸೀಮಯ್ಯರಂಥ ಆತ್ಮದ ಒಕ್ಕಲಿಗರನ್ನು ಬಣ್ಣಿಸುತ್ತದೆ’.
>
> ‘ಇಷ್ಟಕ್ಕೇ ನಿಲ್ಲದೆ ಹಸಿದವರನ್ನೂ ಬಡತನವನ್ನೂ ಕುರಿತು ಹೇಳಿದ ಕಾರ್ಲ್ ಮಾರ್ಕ್ಸ್ ಮತ್ತು
> ಶ್ರಮಜೀವಿಗಳ ಮನ ಕರಗಿಸುವ ಕಥೆಗಳಲ್ಲಿ ಶೋಷಿತರ ಹಾಗೂ ನಿರ್ಗತಿಕರ ಪರವಾಗಿ ಅದು
> ಕ್ಷೋಭೆಗೊಂಡು ಧ್ವನಿಯೆತ್ತಿದೆ.  ನನ್ನ ಕಾವ್ಯವು ಉಳುವ ಕೈಗಳನ್ನೂ, ಪ್ರಾರ್ಥಿಸುವ
> ಕೈಗಳನ್ನೂ ಕುರಿತು ಹಾಡುತ್ತದೆ ಎನ್ನುತ್ತಾರೆ ಎಕ್ಕುಂಡಿ.  ಮಾರ್ಕ್ಸ್ ಮತ್ತು ಮಧ್ವ
> ಬದುಕಿನಿಂದ ಆಯ್ದು ಕಟ್ಟಿದ ಕವಿತೆಗಳು ಎಕ್ಕುಂಡಿಯವರ ಕಾವ್ಯದ ಎರಡು ದಂಡೆಗಳಂತೆ ಹಾಗೂ ಅವರೆ
> ಕವಿತೆಯಲ್ಲಿ ಹೇಳುವಂತೆ-
>
> ದೂರವಿದ್ದವರನ್ನು ಹತ್ತಿರಕ್ಕೆ ತರಬೇ
> ಕು, ಹರಿವ ಹೊಳೆಗೂ ಉಂಟು ಎರಡು
> ತೋಳು, ನೆಲವನ್ನಪ್ಪಿದ ಎರಡು ದಂಡೆ
> ಗಳ ಬಾಂಧವ್ಯ ಬೆಸೆಯ ಬೇಕಲ್ಲವೇ?
> ನಮ್ಮ ಬಾಳು-
>
> ಎಂಬಂತೆ ಎಕ್ಕುಂಡಿಯವರ ಕಾವ್ಯ ಈ ಎರಡೂ ದಂಡೆಗಳನ್ನು ಬೆಸೆದಿದೆ.  ಅವರು ಹೇಳುವ ಮಹತ್ವದ
> ಮಾತು “ಅನುಯಾಯಿಗಳನ್ನು ನೋಡಿ ನಾವು ಮತದ ಬಗ್ಗೆ ನಿರ್ಣಯ ನೀಡಬಾರದು.  ಮತವನ್ನು ನೋಡಿ
> ಅನುಯಾಯಿಗಳನ್ನು ನಿರ್ಧರಿಸಬೇಕು.  ಮನಸ್ಸನ್ನು ವಿಶಾಲಗೊಳಿಸುವ ಎಲ್ಲವನ್ನೂ ಸ್ವೀಕರಿಸಬೇಕು,
> ಸಂಕುಚಿತಗೊಳಿಸುವುದನ್ನು ಬಿಟ್ಟುಬಿಡಬೇಕು.”
>
> ಎಕ್ಕುಂಡಿ ಹೇಳುವ ಕಥೆಗಳು ಕಾವ್ಯೋದ್ದೇಶಕ್ಕೆ ಬದ್ಧವಾಗುವಂತೆ ಕವಿಯ ದರ್ಶನಕ್ಕೂ
> ಅರ್ಥಪೂರ್ಣವಾಗಿ ದುಡಿಯುತ್ತದೆ.  ಎಕ್ಕುಂಡಿ ಮೂಲತಃ ಕವಿ, ಕತೆಗಾರರಲ್ಲ.  ಆದ್ದರಿಂದಲೇ ಇವು
> ಪದ್ಯರೂಪದಲ್ಲಿ ಹೇಳಿರುವ ಕತೆಗಳಲ್ಲ, ಕಥನಕವನಗಳು.  ಇಂದೊಂದು ನಿರಂತರ ಕಥನ.
>
> ಸು.ರಂ. ಎಕ್ಕುಂಡಿ ಅವರಿಗೆ 1970ರಲ್ಲಿ ಸೋವಿಯತ್ ಲ್ಯಾಂಡ್ ಪ್ರಶಸ್ತಿ, 1982 ಕರ್ನಾಟಕ
> ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1992ರಲ್ಲಿ ‘ಬಕುಳದ ಹೂಗಳು’ ಕೃತಿಗೆ ಕೇಂದ್ರ ಸಾಹಿತ್ಯ
> ಅಕಾಡೆಮಿ ಪ್ರಶಸ್ತಿಗಳು ಲಭಿಸಿದ್ದವು.  1984ರಲ್ಲಿ ರೋಮ್ ವಿಶ್ವವಿದ್ಯಾಲಯದ ಸಂದರ್ಶಕ
> ಪ್ರಾಧ್ಯಾಪಕರಾಗಿದ್ದರು.  ಸು.ರಂ. ಎಕ್ಕುಂಡಿಯವರು 20 ಆಗಸ್ಟ್ 1995ರಲ್ಲಿ ನಿಧನರಾದರು.
>
> ಈ ಅಪೂರ್ವ ಕವಿ ಚೇತನಕ್ಕೆ ನಮ್ಮ ನೆನಪಿನ ನಮನ.
>
> (ಆಧಾರ: ಜಿ. ಎನ್. ಮೋಹನ್ ಅವರು ಬರೆದಿರುವ ಸು.ರಂ. ಎಕ್ಕುಂಡಿಯವರನ್ನು ಕುರಿತ ಬರಹವನ್ನು
> ಈ ಲೇಖನ ಆಧರಿಸಿದೆ)
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAHVpsL7y%2Bg_5JhNxtxBD%2BuU%2BifA1ECseJcMjXmgNcCWXwezTHA%40mail.gmail.com
> <https://groups.google.com/d/msgid/kannadastf/CAHVpsL7y%2Bg_5JhNxtxBD%2BuU%2BifA1ECseJcMjXmgNcCWXwezTHA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAMrL9ndPu9YZbUremaBokEPY6P_1CSCwtjgSDUwyoJUigyCWiQ%40mail.gmail.com.
For more options, visit https://groups.google.com/d/optout.

Reply via email to