ಕಾದಿರುವಳು ಶಬರಿ ರಾಮ ಬರುವನೆಂದು ತನ್ನ ಪೂಜೆಗೊಳುವನೆಂದು ವನವನವ ಸುತ್ತಿ ಸುಳಿದು ತರುತರುವನಲೆದು ತಿರಿದು | ಬಿರಿವೂಗಳಾಯ್ದು ತಂದು ತನಿವಣ್ಗಳಾಯ್ದು ತಂದು ಕೊಳದಲ್ಲಿ ಮುಳುಗಿ ಮಿಂದು ಬಿಳಿ ನಾರು ಮುಡಿಯನುಟ್ಟು | ತಲೆವಾಗಿಲಿಂಗೆ ಬಂದು ಹೊಸತಿಲಲಿ ಕಾದು ನಿಂದು ಎಳಗಾಳಿ ತೀಡುತಿರಲು ಕಿವಿಯೆತ್ತಿ ಆಲಿಸುವಳು | ಎಲೆಯಲುಗೆ ಗಾಳಿಯಲ್ಲಿ ನಡೆ ಸಪ್ಪುಳೆಂದು ಬಗೆದು ದೂರಕ್ಕೆ ನೋಳ್ಪೆನೆಂದು ಮರವೇರಿ ದಿಟ್ಟಿಸುವಳು | ಗಿರಿ ಮೇಲಕೈದಿ ಕೈಯ ಮರೆ ಮಾಡಿ ನೋಡುತಿಹಳು ಬಾ ರಾಮ, ರಾಮ ಎಂದು ಬರುತಿಹನು ಇಹನು ಎಂದು | ಹಗಲಿರುಳು ತವಕಿಸಿಹಳು ಕಳೆದಿಹವು ವರುಷ ಹಲವು ಶಬರಿವೊಲು ಜನವು ದಿನವೂ ಯುಗಯುಗವು ಕರೆಯುತಿಹುದು| ಕರೆ ಇಳೆಗಳೇಳಲರಸಿ ತವಕದಲಿ ತಪಿಸುತಿಹುದು ಭರವಸೆಗಳಳಿಯವಾಗಿ ಮನವೆಲ್ಲ ಬಯಕೆಯಾಗಿ | ಹಗಲೆಲ್ಲ ಕಾದು ಕೂಗಿ ಇರುಳೆಲ್ಲ ಜಾಗರಾಗಿ ಬಂದಾನೊ ಬಾರನೋ ಓ ಕಂಡಾನೊ ಕಾಣನೋ ಓ | ಎಂದೆಂದು ಜಪಿಸಿ ತಪಿಸಿ ಶಂಕಾತುರಂಗಳೂರಿ ಬಾ ರಾಮ, ಬಾರ, ಬಾರಾ ಬಡವರನು ಕಾಯು ಬಾರಾ| ಕಂಗಾಣದಿವರ ಪ್ರೇಮ ನುಡಿಸೋತ ಮೂಕ ಪ್ರೇಮ ಕಾದಿರುವುದು ಜನವು ರಾಮ ಬರುವನೆಂದು ತಮ್ಮ ಪೂಜೆಗೊಳುವನೆಂದು
-- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAK6udVyq4vU%2Be-K8EwSE94rm9nJf%3DcOH6nfdsvZj1gnFe0m1Yw%40mail.gmail.com. For more options, visit https://groups.google.com/d/optout.
