ಸಿರಿನುಡಿಯಿಂದ............
🌸🌸🌸🌸🌸🌸🌸🌸
ಸಿದ್ಧಾರ್ಥ ಬುದ್ಧನಾದ

ಕಪಿಲವಸ್ತುವೆಂಬ ನಗರ. ಅಲ್ಲಿ ಶುದ್ಧೋದನನೆಂಬ ಅರಸು. ಮಾಯಾದೇವಿ ಅವನ ರಾಣಿ. ಇವರಿಗೆ 
ತೇಜಸ್ವಿಯಾದ ಮಗನೊಬ್ಬನು ಹುಟ್ಟಿದ. ಅವನಿಗೆ ಸಿದಾರ್ಥ ಎಂದು ನಾಮಕರಣ ಮಾಡಿದರು.

ಮಗುವಿನ ಜಾತಕವನ್ನು ಬರೆದ ರಾಜಜ್ಯೋತಿಷಿಗಳು, ``ಈ ಬಾಲಕ ಅತ್ಯಂತ ಶ್ರೆಷ್ಠನಾದ ಮಹಾರಾಜನಾಗ್ತಾನೆ 
ಇಲ್ಲವೇ ಜಗತ್ತನ್ನು ಉಳಿಸುವ ಸನ್ಯಾಸಿಯಾಗ್ತಾನೆ" ಎಂದು ಭವಿಷ್ಯ ನುಡಿದರು.

ಇದರಿಂದ ಶುದ್ಧೋದನನಿಗೆ ಚಿಂತೆಯಾಯಿತು. ರಾಜಕುಮಾರ ಸಿದ್ಧಾರ್ಥನ ಕಣ್ಣಿಗೆ ಜಗತ್ತಿನ ಯಾವುದೇ 
ಕಷ್ಟವಾಗಲೀ ದುಃಖವಾಗಲೀ ಬೀಳಬಾರದೆಂದು ಆಜ್ಞಾಪಿಸಿದ.

ರಾಜಕುಮಾರ ಬೆಳೆದು ದೊಡ್ಡವನಾದ. ಸಕಲ ವಿದ್ಯಾಪಾರಂಗತನಾದ. ಯಶೋಧರೆಯೆಂಬ ರಾಜಪುತ್ರಿಯೊಂದಿಗೆ ಅವನ 
ಮದುವೆಯೂ ಆಯಿತು. ಒಮ್ಮೆ ರಾಜಧಾನಿಯನ್ನು ನೋಡಿ ಬರಬೇಕೆಂದು ಅವನು ರಥದಲ್ಲಿ ಕುಳಿತು ಹೊರಟ.

ದಾರಿಯಲ್ಲಿ ಮುದುಕನೊಬ್ಬ ಭಿಕ್ಷೆ ಬೇಡುತ್ತಾ ಕುಳಿತಿದ್ದ. ಅವನ ವಿಕಾರವಾದ ಮುಖವನ್ನು ನೋಡಿ 
ರಾಜಕುಮಾರ ಸಿದ್ಧಾರ್ಥನಿಗೆ ಆಶ್ಚರ್ಯವೂ ದುಃಖವೂ ಉಂಟಾದುವು. ರಥದ ಸಾರಥಿಯಾದ ಚೆನ್ನನನ್ನು ನೋಡಿ 
ಸಿದ್ದಾರ್ಥ ಕೇಳಿದ:

``ಚೆನ್ನ, ಆ ಮನುಷ್ಯನಿಗೇನಾಗಿದೆ?"

``ಅವನು ಮುದುಕನಾಗಿದ್ದಾನೆ ಅಷ್ಟೆ, ರಾಜಕುಮಾರ."

``ಅದ್ಯಾಕೆ ಅವನು ಮುದುಕನಾಗಿದ್ದಾನೆ ಚೆನ್ನ?"

``ರಾಜಕುಮಾರ, ವರ್ಷ ಕಳೆದಹಾಗೆ ಎಲ್ಲರೂ ಸಹ ಮುದುಕರಾಗ್ತಾರೆ."

``ಹಾಗಾದರೆ ಸುಂದರಿ ಯಶೋಧರೆಯೂ ಮುದುಕಿ ಆಗುವಳೆ?"

``ಹೌದು, ಮುಪ್ಪು ಮತ್ತು ಸಾವಿನಿಂದ ಯಾರಿಗೆ ಬಿಡುಗಡೆಯಿದೆ ಸಿದ್ಧಾರ್ಥ?"

ಸಿದ್ಧಾರ್ಥನಿಗೆ ದೊಡ್ಡ ಆಘಾತವಾಯಿತು. ಮುಪ್ಪು ಮತ್ತು ಸಾವುಗಳನ್ನು ತಾನು ಜಯಿಸಬೇಕು ಎಂದು 
ಅನಿಸಿತು. ಅರಮನೆಯ ಭೋಗಭಾಗ್ಯಗಳೆಲ್ಲಾ ಅವನಿಗೆ ತೃಣಮಾತ್ರವಾಗಿ ಕಂಡುವು.

ಒಂದು ದಿನ ರಾತ್ರಿ ಹೆಂಡತಿ ಯಶೋಧರೆ ಮತ್ತು ಹಸುಗೂಸು ಮಲಗಿ ನಿದ್ರಿಸುತ್ತಿದ್ದಾಗ 
ರಾಜವೇಷವನ್ನೆಲ್ಲಾ ಕಳಚಿಟ್ಟುಕೊಂಡು ಸಿದ್ಧಾರ್ಥ ಅರಮನೆಯಿಂದ ಹೊರಗೆ ಬಂದ. ತನ್ನ ಪ್ರಿಯ ಸೇವಕ 
ಚೆನ್ನನನ್ನು ಕರೆದು, ``ಚೆನ್ನ ನನ್ನ ಕಂಟಕ ಎಂಬ ಕುದುರೆಯನ್ನು ತಾ" ಎಂದು ನುಡಿದ.

ಚೆನ್ನ ಎಷ್ಟು ಬಗೆಯಾಗಿ ಬೇಡಿಕೊಂಡರೂ ಸಿದ್ಧಾರ್ಥ ತನ್ನ ನಿಶ್ಚಯವನ್ನು ಬದಲಾಯಿಸಲಿಲ್ಲ. ಚೆನ್ನನೂ 
ಸಿದ್ಧಾರ್ಥನೂ ಊರ ಹೊರಗೆ ಬಂದಾಗ ರಾಜಕುಮಾರ ತನ್ನ ವೇಷಭೂಷಣಗಳನ್ನೆಲ್ಲಾ ಚೆನ್ನನ ಕೈಗಿತ್ತು 
``ಇನ್ನು ಹಿಂತಿರುಗು ಚೆನ್ನ"ಎಂದ.

ಚೆನ್ನ ಸಿದ್ಧಾರ್ಥನ ಕಾಲಿಗೆ ನಮಸ್ಕರಿಸಿದ. ಊರಿಗೆ ಹಿಂತಿರುಗಿ ನಡೆದುದನ್ನೆಲ್ಲಾ ರಾಜನಿಗೆ ವರದಿ 
ಮಾಡಿದ.

ಕಪಿಲವಸ್ತುವಿನಿಂದ ಹೊರಟ ಸಿದ್ಧಾರ್ಥ ಬಹುದೂರ ನಡೆದು ಗಯೆಯನ್ನು ತಲುಪಿದ. ಇಲ್ಲಿ ಬೋಧಿವೃಕ್ಷದ 
ಕೆಳಗೆ ಕುಳಿತು ಕಠಿಣ ತಪಸ್ಸು ಮಾಡಿದ. ಅವನ ಇಷ್ಟಾರ್ಥ ನೆರವೇರಿತು. ಸಿದ್ಧಾರ್ಥ ಬುದ್ಧನಾಗಿ 
ಜಗತ್ತಿನ ಜನರಿಗೆಲ್ಲಾ ಶಾಂತಿ ಅಹಿಂಸೆಗಳನ್ನು ಬೋಧಿಸಿದ.

🌷🌷🌷🌷🌷🌷🌷🌷

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/1d1e9b34-2b27-4cac-a10f-c14c765a647b%40googlegroups.com.
For more options, visit https://groups.google.com/d/optout.

Reply via email to