😀🚴🏿 ತುಡಿತ 🖥✈

  ತುಂಬಿಲ್ಲ ಕಂದನಿಗೆ ವರ್ಷ ಮೂರು ?
  ನಡೆಸಿಹಳು ಅಮ್ಮ ಕಾರುಬಾರು !
  ಹಿಡಿದಿಹಳು ಶಾಲೆಗಳ ಉದ್ದನೆ ಲಿಸ್ಟು !!
  ಹುಡುಕುತಿಹಳು ಅದರೊಳಗೊಂದು ಬೆಸ್ಟು!? //೧//

   ಬಲಿತಿಲ್ಲ ಮೆದುಳು, ಬೆಳೆದಿಲ್ಲ ಬೆರಳು
   ತಹತಹಿಸುತಿಹಳು ಶಾಲೆಗೆ ಕಳುಹಿಸಲು! !
   ಆಟ ಬೇಡ,ನಿದ್ರೆ ಸಾಕು ಎನ್ನುತಿರುವಳು
   ಅಮೂಲ್ಯ ಬಾಲ್ಯವನು ಕಬಳಿಸಿಬಿಡುವರು !? //೨//

    ಹತ್ತಿರದಲ್ಲಿಹುದು ಒಳ್ಳೆ ಸರ್ಕಾರಿ ಶಾಲೆ
    ಗೊತ್ತಿಹುದು ಬಡವರಿಗೆಂದೇ ಮೀಸಲು
    ಅವರು ಹೇಳುವರು ತುಂಬಲಿ ಆರು !
    ಅವಸರವೇ? ಉಳ್ಳವರಿಗೆ ಅಲ್ಲ ರೂಲು //೩//

     ಬೇಕು ಇವರಿಗೆ ಸೆಂಟ್ರಲ್  ಸಿಲೆಬಸ್  📚
     ದಿನವೂ ಕರೆದೊಯ್ಯಲೊಂದು ಬಸ್ಸು 🚌
      ಸಾವಿರಗಳಾಗಲಿ ಟ್ಯೂಷನ್ ಫೀಸು !
      ಕನ್ನಡ ಕಲಿಸಲೇಬಾರದು ಮಿಸ್ಸು  !?//೪//

         ಅಪ್ಪನದು ಒಂದೇ  ಬಯಕೆ✈
         ಏರಬೇಕು ಎತ್ತರ! ಎತ್ತರ! !   💵
         ಅಮ್ಮನದು ನಿತ್ಯ ಕನವರಿಕೆ
         ಗಳಿಸಬೇಕು ಅಪಾರ! ಅಪಾರ! ! //೫//

          ಹೆತ್ತವರಿಗೇಕೆ ಅರಿವಾಗದು ?
          ಮುದ್ದು ಮಗುವಿನ ಗೋಳು !
          ಮಕ್ಕಳೇನು ಆಟದ ಗೊಂಬೆಗಳೆ ?🍭
          ಕೀಲಿಕೊಟ್ಟು ಇಚ್ಛೆಗೆ ಕುಣಿಸಲು !! //೬//


   ©® ಚಂದ್ರೇಗೌಡನಾರಮ್ನಳ್ಳಿ 8722199344

ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119.
ಮೊ 8722199344

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAE6Pbr%3Dh6Y3H7rZkaqV1hrdNDgv7Wg5w%2BnQwuWpFH1bBCU2vJA%40mail.gmail.com.
For more options, visit https://groups.google.com/d/optout.

Reply via email to