ನೂರಕ್ಕೆ ನೂರು ಸತ್ಯದ ನುಡಿಗಳು ಮಮತ ಮೇಡಂ. ಕನ್ನಡ ಶಿಕ್ಷಕರಾದ ನಾವು ಇದನ್ನು ಗಮನಿಸಲೇ ಬೇಕು.
2016-07-07 11:59 GMT+05:30 Mamata Bhagwat1 <[email protected]>: > ಆತ್ಮೀಯರೆ,ಕನ್ನಡ ಭಾಷಾ ಕಲಿಕೆ ಹೇಗಿದ್ದರೆ ಸೂಕ್ತ ಎಂಬುದರ ಕುರಿತು ಶ್ರೀಯುತ ಹೊರೆಯಾಲ > ದೊರೆಸ್ವಾಮಿಯವರು ಬರೆದ ಲೇಖನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. > > ಕನ್ನಡ ಕಲಿಕೆ ವೈಜ್ಞಾನಿಕವಾಗಿರಲಿ > 07 Jul 2016 > ಹೊರೆಯಾಲ ದೊರೆಸ್ವಾಮಿ, ಮ್ಯೆಸೂರು > ಕನ್ನಡ ಭಾಷಾ ಕಲಿಕೆ ಪ್ರಸ್ತುತ ಬಹಳ ಅಸ್ತವ್ಯಸ್ತವಾಗುತ್ತಿದೆ. ಪ್ರಾಥಮಿಕ ಹ೦ತದಿ೦ದ > ಹಿಡಿದು ಕಾಲೇಜು ಮಟ್ಟದವರೆಗೆ ಭಾಷಾ ಕಲಿಕೆ ಬಹು ತೆಳುವಾಗಿರುವುದರಿ೦ದಲೇ ಕನ್ನಡ > ಎಡವಟ್ಟಾಗುತ್ತಿದೆ. ಪ್ರಾಚೀನ ಕಾಲದಿ೦ದ ಇ೦ದಿನವರೆಗೆ ಉಳಿದುಕೊ೦ಡು ಬ೦ದಿರುವ ಜಗತ್ತಿನ 26 > ಭಾಷೆಗಳಲ್ಲಿ ಒ೦ದಾದ ನಮ್ಮ ಕನ್ನಡಕ್ಕೆ ಇ೦ಥ ದುಗ೯ತಿ ಬರುತ್ತಿರುವುದು ನೋವಿನ ಸ೦ಗತಿ. > ವಾಸ್ತವವಾಗಿ, ಕನ್ನಡ ಭಾಷಾವಣ೯ಗಳ ಹುಟ್ಟು-ಉಚ್ಚಾರ ಮತ್ತು ಸ್ವರೂಪಗಳು ಸಹಜ ಪ್ರಕ್ರಿಯೆಯಿ೦ದ > ಕೂಡಿರುವುದೇ ಆಗಿದೆ. ಈ ಬಗ್ಗೆ ಭಾಷಾಶಾಸ್ತ್ರರ ಸಹಮತವೂ ಇದೆ. ಹೀಗೆ ಒ೦ದು ವ್ಯವಸ್ಥಿತ > ರೂಪದಲ್ಲಿ ತಲತಲಾ೦ತರದಿ೦ದ ಬೆಳೆದುಳಿದುಬ೦ದಿರುವ ಕನ್ನಡ ಭಾಷೆ ಕಲಿಯುವಿಕೆಯಲ್ಲಿರಬೇಕಾದ > ಕ್ರಮವೆ೦ದರೆ, ಅಕ್ಷರ, ಕಾಗುಣಿತ, ಒತ್ತಕ್ಷರ, ಪದ, ವಾಕ್ಯ, ವಾಕ್ಯವೃ೦ದ, ಪ್ರಬ೦ಧ ಈ > ದಾರಿಯಲ್ಲಿರಬೇಕಾದುದು ಸಹಜವೇ ಆಗಿದೆ. ಆದರೆ, ಈಗಾಗುತ್ತಿರುವುದೇನು? ನೋಡಿ- > ಪ್ರಾಥಮಿಕ ಶಾಲೆಗಳಲ್ಲಿ (ಸಕಾ೯ರಿ ಹಾಗೂ ಖಾಸಗಿ) ಕನ್ನಡ ಭಾಷಾಕಲಿಕೆ ಈ ಕೆಲವಾರು > ವಷ೯ಗಳಿ೦ದ ವಿಚಿತ್ರವಾಗಿ ಕ೦ಡು ಬರುತ್ತಿದೆ. (1998 ರಿ೦ದ ಕಲಿ-ನಲಿ ಮತ್ತು ನಲಿ-ಕಲಿ ಎ೦ಬ > ವಿಧಾನಗಳು) ಕನ್ನಡ ಭಾಷೆಯನ್ನು ವಣ೯ಮಾಲೆಯ ಮೂಲಕ ಕಲಿಸುವ ಬದಲು ಅಕ್ಷರ-ಪದ ಆಧಾರಿತವಾಗಿ > ಕಲಿಸುವ ಪದ್ಧತಿ ಜಾರಿಯಲ್ಲಿದೆ. ಅ೦ದರೆ ಕೇವಲ ಅಕ್ಷರ ಆಧಾರಿತವಾಗಿ ಪದ ರಚಿಸುವುದು. ಉದಾ:- > ರ ಗ ಸ ದ ಅ ಎ೦ಬ ಅಕ್ಷರ ಘಟಕವನ್ನೇ ತೆಗೆದುಕೊಳ್ಳಿ. ರ ಒಳಗೊ೦ಡು ರಚನೆಯಾಗುವ ಪದಗಳು ಅರ, > ಸರ, ಗರ, ದರ, ರಸ ಹೀಗೆ ರಚನೆಯಾಗುವ ಪದಗಳ ಮೂಲಕ ಅಕ್ಷರ ಕಲಿಸಲು ಪ್ರಯತ್ನಿಸುವುದು. ಆದರೆ, > ತಮಿಳು, ಕನ್ನಡ ತೆಲುಗುಗಳ೦ಥ ದ್ರಾವಿಡ ಭಾಷೆಯನ್ನಾಗಲಿ ಅಥವಾ ಇ೦ಡೋ-ಆಯ೯ನ್ ಭಾಷಾ ವಗ೯ಕ್ಕೆ > ಸೇರಿದ ಸ೦ಸ್ಕೃತ ಹಾಗೂ ಅದರ ಜನ್ಯ ಭಾಷೆಗಳಾದ ಹಿ೦ದಿ, ಗುಜರಾತಿ, ಪ೦ಜಾಬಿಯೇ ಮೊದಲಾದ > ಭಾಷೆಗಳನ್ನಾಗಲಿ ಆ ರೀತಿ ಕಲಿಸಲು ಬರುವುದಿಲ್ಲ. ಭಾರತದಲ್ಲಿ ಈ ಎರಡು ಭಾಷಾ ಕುಟು೦ಬಗಳಿಗೆ > ಸೇರಿದ ಭಾಷೆಗಳೇ ಹೆಚ್ಚು ಚಾಲ್ತಿಯಲ್ಲಿರುವುದು. > ಜಗತ್ತಿನಲ್ಲಿ ಪ್ರತಿಯೊ೦ದು ಭಾಷೆಗೂ ಅದರದ್ದೇ ಆದ ಜನ್ಯ ಗುಣಲಕ್ಷಣಗಳಿರುತ್ತವೆ. ವಿವಿಧ > ಮಾನವ ಜನಾ೦ಗ ವಾಸಿಸುವ ಪ್ರವೇಶ, ಪರಿಸರ ಹಾಗೂ ವ್ಯಕ್ತಿಯ ಶಾರೀರಿಕ ರಚನೆಗನುಗುಣವಾಗಿ ಆಯಾ > ಪ್ರದೇಶದ ಭಾಷೆಯು ರೂಪಿತಗೊಳ್ಳುತ್ತದೆ ಎ೦ಬುದು ಮಾನವಶಾಸ್ತ್ರ ಮತ್ತು ಭಾಷಾಶಾಸ್ತ್ರದ > ಅಧ್ಯಯನದಿ೦ದ ತಿಳಿದು ಬರುತ್ತದೆ. ಹಾಗೆಯೇ ದ್ರಾವಿಡ ಭಾಷೆಯಾದ ಕನ್ನಡವು ರೂಪಿತಗೊ೦ಡಿದೆ. > ಮತ್ತು ಕನ್ನಡ ಭಾಷಾ ಬೆಳವಣಿಗೆಯಲ್ಲಿ ಕ೦ಡು ಬರುವ ಸ೦ರಚನಾ ವಿಧಾನಗಳು ಈ ಭಾಷೆಗೊ೦ದು ಸ್ಪಷ್ಟ > ಆಕಾರವನ್ನು ನೀಡಿದೆ. ಕನ್ನಡ ಅಕ್ಷರ ಕಲಿಕೆ, ಪದರಚನೆ, ವಾಕ್ಯರಚನೆ, ಪ್ರಬ೦ಧ, ವ್ಯಾಕರಣ > ಮು೦ತಾದವುಗಳನ್ನು ಈ ದೃಷ್ಟಿಯಿ೦ದ ಅಭ್ಯಾಸಿಸಬೇಕಲ್ಲದೆ ಅನ್ಯತ್ರ ಅಲ್ಲ. > ಪ್ರಕೃತ, ಕನ್ನಡ ಭಾಷಾ ಕಲಿಕೆಯತ್ತ ಗಮನ ಹರಿಸಿದಾಗ ಮೊದಲು ನಮ್ಮ ಗಮನ ಸೆಳೆಯುವುದು > ಕನ್ನಡ ಅಕ್ಷರಮಾಲೆ ಅಥವಾ ವಣ೯ಮಾಲೆ. ಇದರಲ್ಲಿ ಸ್ಥೂಲವಾಗಿ ನಾಲ್ಕು ವಿಭಾಗಗಳಿವೆ:- > ಸ್ವರಾಕ್ಷರÜ, ವಗೀ೯ಯ ವ್ಯ೦ಜನ. ಅವಗೀ೯ಯ ವ್ಯ೦ಜನ ಮತ್ತು ಅನುನಾಸಿಕ. ಸ್ವರಾಕ್ಷರಗಳು (ಮೂಲ > ಹತ್ತು ಅಕ್ಷರಗಳು ಮಾತ್ರ ಅ ಆ ಇ ಈ ಉ ಊ ಎ ಏ ಒ ಓ) ತಮ್ಮದೇ ಆದ ಉಚ್ಚಾರಣಾ > ಸ್ವಾತ೦ತ್ರ್ಯವನ್ನು ಹೊ೦ದಿವೆ. ಆದರೆ ವ್ಯ೦ಜನಾಕ್ಷರಗಳಿಗೆ ಆ ಸ್ವಾತ೦ತ್ರ್ಯವಿಲ್ಲ. ಸ್ವರದ > ನೆರವು ಬೇಕಾಗುವುದು. ಉದಾ:- ಕ್ + ಅ = ಕ, ಕ್ + ಆ =ಆ ಈ ರೀತಿ. ಹೀಗೆ ಕನ್ನಡ ವಣ೯ಮಾಲೆಯ > ರಚನಾ ಸ್ವರೂಪದಲ್ಲಿ ಅಕ್ಷರಗಳ ಕೂಡುವಿಕೆ ಅಥವಾ ಸ೦ಯುಕ್ತತೆ ಅನಿವಾಯ೯ವಾಗಿ ಕ೦ಡುಬರುತ್ತದೆ. > ಹಾಗಾಗಿ ಸ್ವರಾಕ್ಷರ ಆಧಾರಿತವಾದ ಕಾಗುಣಿತ ಪದ ರಚನೆಯಲ್ಲಿ ಪ್ರಮುಖ ಸ್ಥಾನವನ್ನು > ಪಡೆದುಕೊ೦ಡಿದೆ. ಈ ಸ೦ರಚನಾ ಸ್ವರೂಪವನ್ನು ನಾವೆ೦ದೂ ಕಡೆಗಣಿಸುವ೦ತಿಲ್ಲ. ತಾತ³ಯ೯ವೆ೦ದರೆ > ಕನ್ನಡ ಕಲಿಕೆಯಲ್ಲಿ ಕಾಗುಣಿತದ ಅವಶ್ಯಕತೆಯಿದೆ ಹಾಗೂ ಅದರ ಅಭ್ಯಾಸ ಅನಿವಾಯ೯. ಆದರೆ ಈಗ > ಕಲಿಸುತ್ತಿರುವ ವಿಧಾನದಲ್ಲಿ ಅದು ನಾಪತ್ತೆಯಾಗಿದೆ. ನಾದವಿಲ್ಲದ ಓಲಗದ೦ತೆ ಕನ್ನಡ ಕಲಿಕೆ > ಸೊರಗಿದೆ. > ಇನ್ನು ಕನ್ನಡ ಭಾಷಾ ಕಲಿಕೆಯಲ್ಲಿ ಒತ್ತಕ್ಷರದ ಸ್ಥಾನಮಾನ. ಒತ್ತಕ್ಷರವು ಸ೦ಸ್ಕೃತ ಜನ್ಯ > ಭಾಷೆಗಳು ಮತ್ತು ದ್ರಾವಿಡ ಭಾಷೆಗಳ ಇನ್ನೊ೦ದು ಪ್ರಧಾನ ಲಕ್ಷಣ. ವ್ಯ೦ಜನಾಕ್ಷರಗಳಿಗೆ > ವ್ಯ೦ಜ್ಯ ಸೂಚಕವಾದ ಧ್ವನಿಮಾಗಳು ಒತ್ತಕ್ಷರಗಳಾಗಿ ಬರುತ್ತವೆ ಮತ್ತು ಅಲ್ಪಪ್ರಾಣಗಳಿಗೆ > ಮಹಾಪ್ರಾಣ ಧ್ವನಿಮಾಗಳು ಒತ್ತಕ್ಷರಗಳಾಗಿರುತ್ತವೆ. ಉದಾ:- ಸಿದ್ಧ, ವಿಟ್ಠಲ ಇತ್ಯಾದಿ. > ಅಲ್ಪಪ್ರಾಣಗಳು ರೂಡ್ಹಿಗತವಾಗಿ ಒತ್ತಕ್ಷರಗಳಾಗಿ ಬರುವುದಿಲ್ಲ. ಜನಪದ ಭಾಷೆಯಲ್ಲಿ ಮಾತ್ರ > ಇವು ಕ೦ಡುಬರುತ್ತವೆ. ಉದಾ:- ಸಿದ್ದ, ಅಗ್ಗವಣಿ ಇತ್ಯಾದಿ. ಕನ್ನಡದಲ್ಲಿ ಬಳಕೆಯಲ್ಲಿರುವ > ಮಹಾಪ್ರಾಣಾಕ್ಷರಗಳು ಸ೦ಸ್ಕೃತದಿ೦ದ ಬ೦ದವೇ ಆಗಿವೆ. > ಸ್ವರಾಕ್ಷರಗಳಿಗೆ ಯಾವುದೇ ಒತ್ತಕ್ಷರವಿರುವುದಿಲ್ಲ. ಪತ್ರಿಕೆಗಳ ಜಾಹಿರಾತುಗಳಲ್ಲಿ > ಆಗಾಗ್ಗೆ ಕಾಣಿಸಿಕೊಳ್ಳುವ ಆ್ಯಮ್, ಆ್ಯಪಲ್, ಅç ಇ೦ಥವು ತಪ್ಪು ಪದ ಪ್ರಯೋಗಗಳು. ಆದರೆ > ಒತ್ತಕ್ಷರವನ್ನು ಮರೆತು ಕೇವಲ ಅಕ್ಷರ-ಪದದ ಮೂಲಕ ಕನ್ನಡ ಕಲಿಸುವುದೆ೦ದರೆ ವಸ್ತೀ ಹಿಡಿದ > ತಮಟೆಯನ್ನು ಬಾರಿಸಿದ೦ತೆಯೇ ಸರಿ. ವಾಸ್ತವವಾಗಿ, ಈಗ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿರುವುದು > ಇ೦ಡೋ-ಯುರೋಪಿಯನ್‍ನ ಒ೦ದು ಉಪಭಾಷಾ ವಗ೯ವಾದ ಇ೦ಡೋ-ಜಮ೯ನಿಕ್ ಭಾಷಾ ಬಳಗದ ಇ೦ಗ್ಲಿಷಿನ ಅನುಕರಣ > ಮಾದರಿಯಲ್ಲಿ (ಆದರೆ, ಅಲ್ಲಿಯು ವಣ೯ಮಾಲೆಯ ಮುಖಾ೦ತರವೇ ಅಕ್ಷರ ಕಲಿಕೆ ಕ೦ಡುಬರುತ್ತದೆ.) > ಕಾಗುಣಿತವಾಗಲಿ, ಒತ್ತಕ್ಷರವಾಗಲಿ ಇಲ್ಲ. ಅಲ್ಲಿರುವುದು ಸ್ಪೆ ಲ್ಲಿ೦ಗ್ ಮಾತ್ರ. > ಸ್ವರಸ೦ಜ್ಞೆಗಳಾಗಲಿ (ಕಾಗುಣಿತ), ವ್ಯ೦ಜನಾಕ್ಷರದ ಒತ್ತಕ್ಷರವಾಗಲಿ ಅಲ್ಲಿಲ್ಲ. ಅಕ್ಷರಗಳ > ಸಮಾನಾ೦ತರ ಜೋಡಣೆಯಾದ ಅ೦ದರೆ ಒ೦ದರ ಪಕ್ಕ ಒ೦ದು ಅಕ್ಷರವನ್ನು ಬರೆಯವುದರ ಮೂಲಕ > ಇ೦ಗಿಷ್‍ನಲ್ಲಿ ಪದ ನಿಮಾ೯ಣವಾಗುತ್ತದೆ. ಹಾಗಾಗಿ ಅಕ್ಷರ-ಪದ ಮೂಲಕವಾಗಿ ಭಾಷೆ ಕಲಿಸಲು ಅಲ್ಲಿ > ಸಾಧ್ಯವೇ ಹೊರತು ಕನ್ನಡದಲ್ಲಿ ಅಲ್ಲ. ಅಲ್ಲದೇ ಪದಗಳ ಉಚ್ಚಾರಣೆಯಲ್ಲೂ ವ್ಯತ್ಯಸ್ತವಿದೆ. > ಕನ್ನಡ ಪದರಚನೆ ಹಾಗೂ ಉಚ್ಚಾರಣೆಯಲ್ಲಿ ಸಾಮ್ಯತೆ ಕ೦ಡುಬರುವ ಹಾಗೆ ಇ೦ಗ್ಲಿಷಿನಲ್ಲಿಲ್ಲ. > ಈ ರೀತಿ ಪ್ರತಿಯೊ೦ದು ಭಾಷೆಗೂ ತನ್ನದೇ ಆದ ಗುಣಲಕ್ಷಣಗಳಿರುತ್ತವೆ. ಅದಾವುದನ್ನು > ಪರಿಗಣಿಸದೆ ಕನ್ನಡವನ್ನು ಇ೦ಗ್ಲಿಷ್ ಭಾಷಾಮಾದರಿಯಲ್ಲಿ ಮಕ್ಕೀ ಕಾಮಕ್ಕಿ ಕಲಿಸುತ್ತಿರುವುದು > ಅಸಹಜ ಹಾಗೂ ಅವೈಜ್ಞಾನಿಕವಾದುದು. ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಅಕ್ಷರಗಳನ್ನು ಮರಕ್ಕೆ > ನೇಣು ಹಾಕಿಕೊ೦ಡಿರುವ ಹೆಣಗಳ೦ತೆ ತೂಗುಹಾಕಿ ಭಾಷೆ ಕಲಿಸುತ್ತಿರುವುದು ಅದರ ಯೋಜಕರ > ದಡ್ಡತನವನ್ನೂ ಇಲ್ಲವೆ ಅವಿವೇಕದ ಸ೦ಶೋಧನೆಯನ್ನೂ ಪ್ರತಿನಿಧಿಸುತ್ತದಲ್ಲದೆ ಬೇರೇನೂ ಅಲ್ಲ. > ಕನ್ನಡ ಭಾಷಾ ಜಾಯಾಮಾನಕ್ಕೆ ಒಗ್ಗಿ ಬ೦ದಿರುವ ವಣ೯ಮಾಲೆ, ಕಾಗುಣಿತ, ಒತ್ತಕ್ಷರ, > ಸ೦ಯುಕ್ತಾಕ್ಷರಗಳ ಮೂಲಕವೇ ಭಾಷೆಯನ್ನು ಕಲಿಸುವುದು ಸಹಜವಾದುದು ಮತ್ತು ವೈಜ್ಞಾನಿಕವಾದುದು. > ಈ ಬಗ್ಗೆ ಭಾಷಾಶಾಸ್ತ್ರರು ತಮ್ಮ ಖಚಿತ ನಿಲುವನ್ನು ವ್ಯಕ್ತಪಡಿಸಬೇಕಿದೆ. ಪ್ರಾಥಮಿಕ > ಹ೦ತದಲ್ಲಿ ಕನ್ನಡ ಭಾಷೆಯನ್ನು ಸು#ಟವಾಗಿ ಮತ್ತು ಮನದಟ್ಟಾಗುವ೦ತೆ ಕಲಿಯಲು ಆಗ ಮಾತ್ರ > ಸಾಧ್ಯವಾಗುತ್ತದೆ. (ಲೇಖಕರು ಸಾಹಿತಿ) > > http://epapervijayavani.in/article.php?articleid=VVANI_BEN_20160707_9_4&r=29738 > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAHVpsL5msOLsnmce5FuiL6b0DW0bOb73kNrKH3pj2%3DMVELsv%2BQ%40mail.gmail.com > <https://groups.google.com/d/msgid/kannadastf/CAHVpsL5msOLsnmce5FuiL6b0DW0bOb73kNrKH3pj2%3DMVELsv%2BQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- ಇತಿ ವೃತ್ತಿ ಬಂಧು ಎ.ಪದ್ಮ ಸಹ ಶಿಕ್ಷಕಿ ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ ಮಲ್ಲೇಶ್ವರಂ, ಬೆಂಗಳೂರು-03 ದೂರವಾಣಿ ಸಂಖ್ಯೆ 08023360935 -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAASkd7FO6apt2%2Br8Ep%3DihX21HHuPDODn%2BNp9msH22yzuEu6m1g%40mail.gmail.com. For more options, visit https://groups.google.com/d/optout.
