ಕೋಗಿಲೆ

ಕೋಗಿಲೆ  ಕೋಗಿಲೆ
ಜಾಣ ಪುಟ್ಟ ಕೋಗಿಲೆ
ಮಧುರ ಕಂಠ ಹೇಗೆ ಬಂತು ?
ನನಗೂ ಗುಟ್ಟು ಹೇಳೆಲೆ !! //೧//

ಹಾರುತಲಿ ನಲಿಯುತಿರುವೆ
ಮರಕೂ  ಮರಕೂ ಜಿಗಿಯುತಾ
ಎಳೆಯ ಮಾವಿನ ಚಿಗುರು ಹೀರಿ
ಸರಿಗಮಪದನಿ ಉಲಿಯುವೆ //೨//

ಕುಹೂ ಕುಹೂ ಎನುವೆಯೋ
ಚಿಕ್ಕವ್ವಾ ಎಂದು ಕರೆವೆಯೋ
ಪಂಚಮದಾ ಇನಿದು ದನಿಗೆ
ಮೂಕವಾಯ್ತು ಲೋಕವು //೩//

ಋತುಗಳ ರಾಜ ಬರುವನು
ತೊಡಿಸಿ ಮರಕ್ಕೆ ಚಿಗುರನು
ಚೈತ್ರಬಂದ ಹಿಗ್ಗಿನಿಂದ
ಬಿಡುವೆ ಮೌನ,ಹಾಡುವೆ //೪//

ಕಾಗೆಯಿರದ ಸಮಯದಿ
ಮೊಟ್ಟೆಯಿಟ್ಟು ಓಡಲು
ಬಲಿತ ಮರಿಯ ಅಟ್ಟಲು
ಪರಪುಟ್ಟನಂತೆ ಬಾಳುವೆ //೫//

ಹಾಡಿ ಹಾಡಿ ಕಲಿಸು ಬಾ
ನಮಗೂ ಒಂದು ರಾಗವ !
ನಿನ್ನ ನೋಡಿ ನಲಿವೆವು
ಮರೆತು ವರ್ಣಭೇದವ !!//೬//

©®ಚಂದ್ರೇಗೌಡನಾರಮ್ನಳ್ಳಿ
ಮೋ :8722199344
ಸಹಶಿಕ್ಷಕರು,ಸರ್ಕಾರಿ ಪ್ರೌಢಶಾಲೆ,ಕೆಂಕೆರೆ.
ಅರಸೀಕೆರೆ ತಾ,573119

ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119.
ಮೊ 8722199344

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAE6PbrkeVBvXrtaa_pM4xmkVZ18Mg2D0sDEuhLwiYm84_isTng%40mail.gmail.com.
For more options, visit https://groups.google.com/d/optout.

Reply via email to