⚜⚜⚜⚜⚜⚜⚜⚜
✍ " ಉಪದೇಶ " *ಯಾರಿಗೂ ಉಪದೇಶ
ಮಾಡಲು ಹೋಗಬೇಡಿ...ಕಾರಣ, ದಡ್ಡರು ಕೇಳುವುದಿಲ್ಲ, ಜಾಣರಿಗೆ ಅದರ ಅವಶ್ಯಕತೆಯೇ ಇಲ್ಲ*....
ಹೆರಡೋಟಸ್.....
✍ "ಶಿಕ್ಷಕ"
*ವಿದ್ಯಾರ್ಥಿಗಳನ್ನು ಉತ್ಸಾಹಗೊಳಿಸದೆ ಕೇವಲ ಪಾಠ ಹೇಳುವ ಶಿಕ್ಷಕನು, ಕಬ್ಬಿಣವನ್ನು
ಕಾಯಿಸದೆಯೇ ಬಡಿಯುತ್ತಿದ್ದಾನೆ ಎಂದರ್ಥ*.....
ಹೋರೆಸ್ ಮನ್.....
✍ "ನಾಲಿಗೆ" *ನಾಲಿಗೆಗೆ ಆದ ಗಾಯ
ಮಾಯಬಹುದು...ಆದರೆ ನಾಲಿಗೆಯಿಂದ ಆದ ಗಾಯ*...??!!!
ಅನಾಮಿಕ...
✍ "ಸುಖ" *ಸುಖವಾಗಿರುವುದರಲ್ಲಿ ಸುಖವಿಲ್ಲ.
ಸುಖವಾಗಿದ್ದೇನೆಂದು, ಸುಖವಾಗಿಲ್ಲದವರಿಗೆ ಹೇಳುವುದರಲ್ಲಿ ಹೆಚ್ಚು ಸುಖವಿದೆ*....
ಬೀ-chi
✍ "ಹುಡುಕು"
*ಕಳೆದುಕೊಂಡಲ್ಲಿಯೇ ಹುಡುಕಬೇಡ. ಒಂದು ದೊರೆತಲ್ಲಿಯೇ ಇನ್ನೊಂದನ್ನು ಹುಡುಕು*....
✍ "ಕನಸು" *ಕನಸು
ಎಂದಿಗಾದರೂ ನಿಜವಾದುದುಂಟೆ ಎನ್ನುವವನು, ಎಂದೂ ಒಳ್ಳೆಯ ಕನಸನ್ನೇ ಕಂಡಿಲ್ಲ*....
ಕಲಾಂ...
✍ "ಕೂದಲು" *ಬಿಳಿ ಕೂದಲಿನ
ಬೆಲೆ ಏನೆಂಬುದನ್ನು ತಿಳಿಯಬೇಕಾದರೆ, ಬೋಳು ತಲೆಯವನನ್ನು ಕೇಳಿ ನೋಡು*....
'ಸಮಸ್ತಂ ಸಮಾನ ಗೌರವಂ'
✍ "ಒಂದು" *ಕತ್ತೆ
ಇರುವ ಅಗಸ,ಅದನ್ನು ಕುದುರೆಯಂತೆ ಕಾಣುತ್ತಾನೆ. ಒಂದೇ ಮಗನಿರುವ ತಂದೆ ಅವನನ್ನು
ಕತ್ತೆಯನ್ನಾಗಿ ಮಾಡುತ್ತಾನೆ*....
ಪ್ರಾಣೇಶ್..
✍ "ದಣಿವು"
*ದಣಿವಿನಲ್ಲಿ ವಿಶ್ರಾಂತಿ ದೊರೆಯಬೇಕು. ವಿಶ್ರಾಂತಿಯಿಂದಲೇ ದಣಿವು ಆಗಬಾರದು*.....
ಅನುಭವಿ..
✍ "ವಿವೇಕಿ" *ವಿವೇಕಿಯ
ನಾಲಿಗೆ ಅವನ ಹೃದಯದಲ್ಲಿರುತ್ತದೆ. ಅವಿವೇಕಿಯ ಹೃದಯ ಅವನ ನಾಲಿಗೆಯಲ್ಲಿರುತ್ತದೆ*.....
ಲಿಂಕನ್..
✍ "ಹಾಳು"
*ಹುಂಜ ಸುಮ್ಮನಿದ್ದು ಹೇಂಟೆ
ಕೂಗಾಡುವ ಮನೆ ಹಾಳಾಗಲು ಬಹು ದಿನಗಳು ಬೇಕಿಲ್ಲ*.....
ಬೀ-chi
✍ "ಮೌನ"
*ಕೊನೆಗೆ ನೆನಪಿನಲ್ಲುಳಿಯುವುದು,
ಶತ್ರುಗಳ ಮಾತಲ್ಲ, ಮಿತ್ರರ ಮೌನ ಮಾತ್ರ*......
ಹೆರಡೋಟಸ್..
✍ "ಸ್ಪಷ್ಟ"
*ನೀರಿನಲ್ಲಿ ಮುಖವು ಅಸ್ಪಷ್ಟವಾಗಿ ಕಂಡರೂ, ಸರಾಯಿಯಲ್ಲಿ ಹೃದಯವು ಸ್ಪಷ್ಟವಾಗಿ
ಕಾಣುತ್ತದೆ*......
ಅ.ನ.ಕೃ..
✍. "ಖಾಲಿ" *ಬಹು
ಮಾತನಾಡುವವನು, ಬರಿಗೈಲೆ ಉಣ್ಣಿಸುತ್ತಾನೆ*......
ಕೌಟಿಲ್ಯ..
✍ "ಹೆಣ್ಣು".
*ತಾನು ಸೊಸೆಯಾಗಿದ್ದಾಗ ಅತ್ತೆಯನ್ನು ಸಹಿಸದ, ತಾನು ಅತ್ತೆಯಾದಾಗ ಸೊಸೆಯನ್ನು
ಸಹಿಸಿಕೊಳ್ಳಲಾಗದವಳೇ ಹೆಣ್ಣು*....
ಜಿ..ಎಸ್..ಎಸ್..
✍ "ಪ್ರೇಮ" *ಪ್ರೇಮಕ್ಕೆ ಕಲಹವೇ
ಆಹಾರ. ಹೆಚ್ಚಾದರೆ ಅಜೀರ್ಣದಿಂದ ಸಾಯುತ್ತದೆ, ಕಡಿಮೆಯಾದರೆ ಹಸಿವಿನಿಂದ
ಸಾಯುತ್ತದೆ*........
'ಶೇಕ್ಸ್ ಪಿಯರ್'
✍ "ಜಾಣತನ" *ಜಾಣತನವನ್ನು
ಬಚ್ಚಿಟ್ಟುಕೊಳ್ಳುವುದೇ, ಜಾಣತನದ ಮೊದಲ ಜಾಣತನ*.....
'ಟಿ.ಪಿ.ಕೈಲಾಸಂ'..
✍. "ಸಾಮ್ಯತೆ" *ಮಲತಾಯಿ ಇರುವ
ಮನೆಯಲ್ಲಿ, ಹೆತ್ತ ತಂದೆ ಮಲತಂದೆಯಾಗಲು ಬಹು ಸಮಯ ಬೇಕಿಲ್ಲ*.....
'ಡಿ.ವಿ.ಜಿ'...
✍ "ಪುರುಷ" *ಹೆಣ್ಣನ್ನು
ತೆಗಳುವವನಿಗೆ, ಹೆಣ್ಣಿನ ಹೃದಯದ ಪರಿಚಯ ಸಾಕಷ್ಟು ಆಗಿಲ್ಲ. ಹೊಗಳುವವನಿಗೆ ಎಷ್ಟೂ
ಆಗಿಲ್ಲ*.....
ಅ.ನ.ಕೃ...
✍ "ಕುಮಾರಿ" *ಮದುವೆಯಾಗದ ಹೆಣ್ಣು
ಕಳ್ಳ ಮಾಲು ಇದ್ದಂತೆ. ಅದನ್ನು ಬೇಗ ಸಾಗಿಸಿದಷ್ಟು ಹೆಚ್ಚು ಲಾಭ*.......
ಪಿ.ಲಂಕೇಶ್...
✍ "ಸುಖ"
*ಮದುವೆಯಾದವರಲ್ಲಿ ಕೂಡ ಕೆಲವರು ಸುಖವಾಗಿದ್ದಾರೆ.ಆದರೆ ಅವರ ಸುಖಕ್ಕೆ ಕಾರಣ
ಮದುವೆಯಲ್ಲ*......
ಅನುಭವಿ..
✍ 'ಬುದ್ಧಿವಂತಿಕೆ'
*ಶತ್ರುವಿನಿಂದಲೂ ಬುದ್ಧಿ ಕಲಿ, ಮಿತ್ರನಿಗೂ ಹೇಳಲು ಹೋಗಬೇಡ*....
'ಅಣ್ಣಾ ಅಜಾರೆ'...
✍ "ಶ್ರಮ" *ಎಲ್ಲವನ್ನು ಮಾಡುವವನು
ಾನೇ ಎನ್ನುವಂತೆ ದುಡಿ, ಎಲ್ಲವನ್ನು ಕೊಡುವವನು ದೇವನೇ ಎನ್ನುವಂತೆ ನುಡಿ*......
"ಸಾಯಿ ಬಾಬಾ"
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit
https://groups.google.com/d/msgid/kannadastf/CAM0vjV1%2B5r2m0y3NBAMnbvCJjX0kZDgdxq5KduWNxFH%3DFUWCFw%40mail.gmail.com.
For more options, visit https://groups.google.com/d/optout.