ಅತ್ಯುತ್ತಮ

21 ಅಕ್ಟೋ. 2016 8:43 AM ರಂದು, "H D Basavaraj Naik" <[email protected]>
ಅವರು ಬರೆದಿದ್ದಾರೆ:

> *ಕೃಪಾಂಕದ ಪಾಸ್‌ಗೆ ಬ್ರೇಕ್ : ಶಿಕ್ಷಣ ಕಾನೂನು ಮಾರ್ಪಾಟಿಗೆ ಕೇಂದ್ರದ ಹೆಜ್ಜೆ*
> ಸಂಜೆವಾಣಿ ಸುದ್ಧಿ ವಿಭಾಗ
> 20 Oct 2016,
> (Mallikarjun Hulasur)
>
> ನವದೆಹಲಿ, ಅ. ೨೦- ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸಲು ಕೇಂದ್ರ
> ಸರಕಾರ ತೀರ್ಮಾನಿಸಿದೆ. ಹೀಗಾಗಿ ಎಂಟನೇ ತರಗತಿವರೆಗೆ ವಿದ್ಯಾರ್ಥಿಗಳು ಅನುತ್ತೀರ್ಣರಾದಲ್ಲಿ
> ಅವರು ಮಾರನೇ ವರ್ಷವೂ ಅದೇ ತರಗತಿಯಲ್ಲಿ ಮುಂದುವರಿಯಬೇಕಾಗುವುದು.
> ಈ ಹಿಂದಿನ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ ಸರಕಾರವು ಶಿಕ್ಷಣದ ಹಕ್ಕು ಕಾಯಿದೆಗೆ
> ತಿದ್ದುಪಡಿಯೊಂದನ್ನು ಅಳವಡಿಸಿತ್ತು. *ತಿದ್ದುಪಡಿಯ ರೀತ್ಯಾ ಎಂಟನೇ ತರಗತಿವರೆಗೆ
> ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡಿದ್ದರೂ ಕೂಡ ಅವರನ್ನು ಮುಂದಿನ ತರಗತಿಗೆ
> ತೇರ್ಗಡೆ ಮಾಡಬೇಕಾಗಿತ್ತು.*
> ಐದನೇ ತರಗತಿಯ ನಂತರ ಪರೀಕ್ಷೆ ಆಧಾರಿತ ತೇರ್ಗಡೆ ಕ್ರಮವನ್ನು ಮತ್ತೆ ಜಾರಿಗೊಳಿಸುವ
> ಉದ್ದೇಶದಿಂದ ಶಿಕ್ಷಣ ಹಕ್ಕಿನ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಬಯಸಿದೆ.
>
> * ಯುಪಿಎ ಕೊಡುಗೆ ಶಿಕ್ಷಣ ಹಕ್ಕು ಕಾಯಿದೆ ತಿದ್ದುಪಡಿಗೆ ಪ್ರಸ್ತಾಪ.
> * ಪ್ರಸಕ್ತ ಕಾಯಿದೆಯಿಂದ ಶಿಕ್ಷಣ ಗುಣಮಟ್ಟ ಕುಸಿತಕ್ಕೆ ತಿದ್ದುಪಡಿ.
> * ಪ್ರಸ್ತುತ ಕಾಯಿದೆ ಪ್ರಕಾರ 5-8 ತರಗತಿವರೆಗೆ ಎಲ್ಲರೂ ಪಾಸ್.
> * ಕೇಂದ್ರದ ಉದ್ದೇಶಿತ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯಗಳ ಒಲವು.
> * ಹಾಲಿ ಕಾಯಿದೆಯಿಂದ ಶಿಕ್ಷಣ ಗುಣಮಟ್ಟಕ್ಕೆ ಧಕ್ಕೆ ಅಭಿಮತ.
> * ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ.
> (Mallikarju Hulasur)
>
> ಶಿಕ್ಷಣದ ಹಕ್ಕು ಕುರಿತಂತೆ ಇರುವ ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸುವ ವಿಚಾರದಲ್ಲಿ
> ಎಲ್ಲ ರಾಜ್ಯ ಸರಕಾರಗಳು ಕೂಡ ಒಲವು ವ್ಯಕ್ತಪಡಿಸಿವೆ ಎಂದು ಕೇಂದ್ರ ಸರಕಾರವು ಹೇಳಿಕೊಂಡಿದೆ.
> ಈ ಉದ್ದೇಶಕ್ಕಾಗಿ ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಖಾತೆಯು ಮಸೂದೆಯೊಂದನ್ನು
> ರೂಪಿಸಬೇಕಾಗಿದೆ. ಹೊಸ ಮಸೂದೆಯಲ್ಲಿ, ಶಾಲೆಗಳಲ್ಲಿ ಮತ್ತೆ ವಾರ್ಷಿಕ ಪರೀಕ್ಷೆ ಆಧಾರಿತ
> ತೇರ್ಗಡೆ ಪದ್ಧತಿಗೆ ಮರು ಜೀವ ದೊರೆಯುವುದು. ಇಲಾಖೆಯ ಮೂಲಗಳ ಪ್ರಕಾರ ರಾಜ್ಯ ಸರಕಾರಗಳೂ ಕೂಡ
> ಇಂಥ ಬದಲಾವಣೆಗೆ ಒಲವು ವ್ಯಕ್ತಪಡಿಸಿವೆ.
>
> ಮುಂದಿನ ತಿಂಗಳು ನವೆಂಬರ್ ಹದಿನಾರರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ
> ಅಧಿವೇಶನದಲ್ಲಿ ಶಿಕ್ಷಣ ಹಕ್ಕು ತಿದ್ದುಪಡಿ ಮಸೂದೆಯನ್ನು ಮಂಡಿಸುವ ನಿರೀಕ್ಷೆ ಇದೆ.
> ಈ ಹಿಂದಿನ ಕೇಂದ್ರ ಸರಕಾರದಲ್ಲಿ ಕಪಿಲ್ ಸಿಬಾಲ್ ಅವರು ಖಾತೆಯ ಸಚಿವರಾಗಿದ್ದ ಸಂದರ್ಭದಲ್ಲಿ
> ಶಿಕ್ಷಣಕ್ಕಾಗಿ ಹಕ್ಕು ಕಾಯಿದೆಯನ್ನು ಜಾರಿಗೊಳಿಸಲಾಗಿತ್ತು.
>
> ಆಗ ಶಿಕ್ಷಣಕ್ಕೆ ಸಂಬಂಧಿಸಿದ ಸರಕಾರೇತರ ಸಂಸ್ಥೆಗಳು ಹಾಗೂ ಸೋನಿಯಾಗಾಂಧಿ ನೇತೃತ್ವದ
> ರಾಷ್ಟ್ರೀಯ ಸಲಹಾ ಮಂಡಳಿ ಇಂಥ ಕಾಯಿದೆಯ ಅಸ್ತಿತ್ವಕ್ಕೆ ಪ್ರಬಲವಾಗಿ ಪ್ರತಿಪಾದಿಸಿದ್ದವು.
> ವಿದ್ಯಾರ್ಥಿಗಳನ್ನು ಒಂದೇ ತರಗತಿಯಲ್ಲಿ ಕೂಡಿಡಬಾರದು ಎಂಬ ಧೋರಣೆಯೇ ತಪ್ಪು. ಇದರಿಂದಾಗಿ
> ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕ್ರಮದಲ್ಲಿ ಯಾವ ರೀತಿಯ ಪ್ರಯೋಜನ ಹೊಂದಿದರು
> ಎಂದು ಅರಿಯಲು ಸಾಧ್ಯವಾಗುವುದಿಲ್ಲ.
> ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಕೂಡ ಅಂಥ ಸರಕಾರಗಳು ಈ ಪದ್ಧತಿಯನ್ನು
> ವಿರೋಧಿಸಿವೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಿದೆ
> ಎಂಬುದು ಅವುಗಳ ಭಾವನೆ ಎಂದು ಅಧಿಕೃತ ಮೂಲಗಳ ಹೇಳಿಕೆ.
>
> ಒಂದೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಹಾಕಬಾರದೆಂಬ ತಪ್ಪು ನೀತಿಯ ಕೆಟ್ಟ
> ಪರಿಣಾಮವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಇಂಥ ಕಡೆಗಳಲ್ಲಿ ಶಾಲೆಗಳಲ್ಲಿ
> ಮುಖ್ಯ ಉದ್ದೇಶ ಮಧ್ಯಾಹ್ನದ ಭೋಜನವಾಗಿದೆ. ಶಿಕ್ಷಕರೂ ಕೂಡ ಗುಣಮಟ್ಟದ ಶಿಕ್ಷಣ ಒದಗಿಸುವ
> ನಿಟ್ಟಿನಲ್ಲಿ ಯಾವುದೇ ರೀತಿಯ ಪ್ರಯತ್ನಗಳನ್ನು ತೋರುತ್ತಿಲ್ಲ ಎಂದು ಅಧಿಕೃತ ಮೂಲಗಳು ವಿಷಾದ
> ವ್ಯಕ್ತಪಡಿಸಿವೆ.
>
> ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿ ತರುವ ವಿಚಾರದಲ್ಲಿ ಕೇಂದ್ರ ಮಾನವ ಸಂಪನ್ಮೂಲಗಳ
> ಅಭಿವೃದ್ಧಿ ಖಾತೆ ಸಚಿವರಾದ ಪ್ರಕಾಶ್ ಜಾವೇಡ್ಕರ್ ಅವರು ಈಗಾಗಲೇ ಬಹುತೇಕ ರಾಜ್ಯಗಳ
> ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
> ಮುಖ್ಯಮಂತ್ರಿಗಳೂ ಕೂಡ ಈ ನಿಟ್ಟಿನಲ್ಲಿ ತಮ್ಮ ಬೆಂಬಲ ತೋರಿದ್ದಾರೆ. ರಾಜಕೀಯವಾಗಿ ಕಾಯಿದೆ
> ತಿದ್ದುಪಡಿಗೆ ಒಮ್ಮತ ಮೂಡಿದ್ದರೂ ಸಾಮಾಜಿಕ ವಲಯಗಳಲ್ಲಿ ಕೆಲ ಮಟ್ಟಿಗೆ ವಿರೋಧ ಇದೆ.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAOqaUtmYb5EFKaSk3rDEtF9pf%3DB33fKR4P0FaTAto0vLznhuEQ%
> 40mail.gmail.com
> <https://groups.google.com/d/msgid/kannadastf/CAOqaUtmYb5EFKaSk3rDEtF9pf%3DB33fKR4P0FaTAto0vLznhuEQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAEj7L%2BG2%2BefMHkwbtsARrcGH2YoXNX_C-yUBmEky136GDJQyaQ%40mail.gmail.com.
For more options, visit https://groups.google.com/d/optout.

Reply via email to