Nice sir..
On 02-Nov-2016 3:23 PM, "Sameera samee" <[email protected]> wrote:

> ಅಕ್ಕನ ವಚನಗಳು
>   ೨೯೧.
> ಹುಟ್ಟು-ಹೊರೆಯ ಕಟ್ಟಳೆಯ ಕಳೆದನವ್ವ
> ಹೊನ್ನು-ಮಣ್ಣಿನ ಮಾಯೆಯ ಮಾಣಿಸಿದನವ್ವ
> ಎನ್ನ ತನುವಿನ ಲಜ್ಜೆಯನಿಳುಹಿ
> ಎನ್ನ ಮನದ ಕತ್ತಲೆಯ ಕಳೆದ
> ಚೆನ್ನಮಲ್ಲಿಕಾರ್ಜುನಯ್ಯನ
> ಒಳಗಾದವಳನೇನೆಂದು ನುಡಿಯಿಸುವಿರವ್ವ
>
> ೨೯೨.
> ಕಾಯದ ಕಳವಳವ ಕೆಡಿಸಿ
> ಮನದ ಮಾಯೆಯ ಮಾಣಿಸಿ
> ಎನ್ನ ಹರಣವ ಮೇಲೆತ್ತಿ ಸಲಹಿದೆಯಯ್ಯ
> ಶಿವಶಿವಾ ಎನ್ನ ಬಂಧನವ ಬಿಡಿಸಿ
> ನಿಮ್ಮತ್ತ ತೋರಿದ ಘನವನುಪಮಿಸಬಾರದಯ್ಯ
> ಇರುಳೋಸರಿಸದ ಜಕ್ಕವಕ್ಕಿಯಂತೆ ನಾನಿಂದು
> ನಿಮ್ಮ ಶ್ರೀಪಾದವನಿಂಬುಗೊಂಡು
> ಸುಖದೊಳಗೋಲಾಡುವೆನಯ್ಯ ಚೆನ್ನಮಲ್ಲಿಕಾರ್ಜುನ
>
> ೨೯೩.
> ಅಯ್ಯ, ನೀನೆನ್ನ ಮೊರೆಯನಾಲಿಸಿದೊಡಾಲಿಸು
> ಆಲಿಸದಿರ್ದೊಡೆ ಮಾಣು
> ಅಯ್ಯ, ನೀನೆನ್ನ ದುಃಖವ ನೋಡಿದೊಡೆ ನೋಡು
> ನೋಡದಿರ್ದೊಡೆ ಮಾಣು
> ಎನಗಿದು ವಿಧಿಯೆ?!
> ನೀನೊಲ್ಲದೊಡೆ ನಾನೊಲಿಸುವ ಪರಿಯೆಂತಯ್ಯ?
> ಮಾನವಳಿಸಿ ಮಾರುವೋಗಿ ಮರೆವೊಕ್ಕೊಡೆ
> ಕೊಂಬ ಪರಿಯೆಂತಯ್ಯ ಚೆನ್ನಮಲ್ಲಿಕಾರ್ಜುನ
>
> ೨೯೪.
> ಮುಡಿ ಬಿಟ್ಟು ಮೊಗ ಬಾಡಿ ತನು ಕರಗಿದವಳ
> ಎನ್ನನೇಕೆ ನುಡಿಸುವಿರಿ ಎಲೆ ಅಣ್ಣಗಳಿರಾ?
> ಎನ್ನನೇಕೆ ಕಾಡುವಿರಿ ಎಲೆ ತಂದೆಗಳಿರಾ?
> ಬಲುಹಳಿದು, ಭವಗೆಟ್ಟು ಛಲವಳಿದು
> ಭಕ್ತೆಯಾಗಿ ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದವಳ
>
> ೨೯೫.
> ಬಟ್ಟಿಹ ಮೊಲೆಯ, ಭರದ ಜವ್ವನವ
> ಚೆಲುವ ಕಂಡು ಬಂದಿರಣ್ಣಾ
> ಅಣ್ಣಾ, ನಾನು ಹೆಂಗೂಸಲ್ಲ
> ಅಣ್ಣ, ನಾನು ಸೂಳೆಯಲ್ಲ
> ಅಣ್ಣಾ, ಮತ್ತೆ ನನ್ನ ಕಂಡು ಕಂಡು
> ಆರೆಂದು ಬಂದಿರಣ್ಣ?
> ಚೆನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿದ ಪುರುಷನು
> ನಮಗಾಗದ ಮೋರೆ ನೋಡಣ್ಣ
>
> ೨೯೬.
> ಎಲೆ ಅಣ್ಣಾ, ಎಲೆ ಅಣ್ಣಾ, ನೀವು ಮರುಳಲ್ಲ
> ಅಣ್ಣಾ, ಎನ್ನ ನಿನ್ನಳವೆ?
> ಹದಿನಾಲ್ಕು ಲೋಕವ ನುಂಗಿದ
> ಕಾಮನ ಬಾಣದ ಗುಣ ಎನ್ನನಿನ್ನಳವೆ?
> ವಾರುವ ಮುಗ್ಗಿದೊಡೆ [ಮಿಣಿ ಹರಿಯ] ಹೊಯ್ವರೆ?
> ಮುಗ್ಗಿದ ಭಂಗವ ಮುಂದೆ ರಣದಲ್ಲಿ ತಿಳಿವುದು
> ನಿನ್ನ ನೀ ಸಂಹರಿಸಿ ಕೈದುವ ಕೊಳ್ಳಿರಣ್ಣ
> ಚೆನ್ನಮಲ್ಲಿಕಾರ್ಜುನನೆಂಬ ಹಗೆಗೆ ಬೆಂಗೊಡದಿರಣ್ಣ
>
> ೨೯೭.
> ಒಬ್ಬಂಗೆ ಇಹವುಂಟು, ಒಬ್ಬಂಗೆ ಪರವುಂಟು
> ಒಬ್ಬಂಗೆ ಇಹಪರವೆರಡೂ ಇಲ್ಲ
> ಚೆನ್ನಮಲ್ಲಿಕಾರ್ಜುನದೇವರ ಶರಣರಿಗೆ
> ಇಹಪರವೆರಡೂ ಉಂಟು
>
> ೨೯೮. ಆಕಾರವಲ್ಲದ ನಿರಾಕಾರಲಿಂಗವ ಕೈಯಲ್ಲಿ ಹಿಡಿದು
> ಕೊರಳಲ್ಲಿ ಕಟ್ಟಿದೆವೆಂಬರು ನರಕಜೀವಿಗಳು
> ಹರಿಬ್ರಹ್ಮರು, ವೇದಶಾಸ್ತ್ರಂಗಳು ಅರಸಿ ಕಾಣದ ಲಿಂಗ
> ಭಕ್ತಿಗೆ ಫಲಪದಂಗಳಲ್ಲದೆ ಲಿಂಗವಿಲ್ಲ
> ಕರ್ಮಕ್ಕೆ ನರಕ[ನಾಕ?]ವಲ್ಲದೆ ಲಿಂಗವಿಲ್ಲ
> ವೈರಾಗ್ಯಕ್ಕೆ ಮುಕ್ತಿಯಲ್ಲದೆ ಲಿಂಗವಿಲ್ಲ
> ಜ್ಞಾನಕ್ಕೆ ಪರಿಭ್ರಮಣವಲ್ಲದೆ ಲಿಂಗವಿಲ್ಲ
> ಇದುಕಾರಣ; ಅದ್ವೈತದಿಂದ ತನ್ನ ತಾನರಿದು ತಾನಾದರೆ
> ಚೆನ್ನಮಲ್ಲಿಕಾರ್ಜುನಲಿಂಗ ತಾನೆ ಬೇರಿಲ್ಲ
>
> ೨೯೯.
> ಕಂಗಳ ಕಳೆದು, ಕರುಳುಗಳ ಕಿತ್ತು
> ಕಾಮದ ಮೂಗ ಕೊಯ್ದು
> ಭಂಗದ ಬಟ್ಟೆಯ ಭವ ಗೆಲಿಯದಳಿಗಂಗವೆಲ್ಲಿಯದು ಹೇಳಾ!
> ಶೃಂಗಾರವೆಂಬ ಹಂಚಿಗೆ ಹಲ್ಲ ತೆರೆದರೇನುಂಟು
> ಅಂಗವೆ ಲಿಂಗವಹ ಪರಿಯೆನಗೆ ಹೇಳಾ
> ಶ್ರೀಗಿರಿ ಚೆನ್ನಮಲ್ಲಿಕಾರ್ಜುನ
>
> ೩೦೦.
> ಮೊಲೆ-ಮುಡಿಯಿದ್ದರೇನು
> ಮೂಗಿಲ್ಲದವಳಿಂಗೆ?
> ತಲೆಯ ಮೇಲೆ ಸೆರಗೇತಕ್ಕೆ
> ಸಹಜಸಂಕಲ್ಪವಿಲ್ಲದವಳಿಂಗೆ?
> ಜಲದೊಳಗೆ ಹುಟ್ಟಿಗುಳೆ[ಗುಳ್ಳೆ?]
> ಜಾತಿಸ್ಮರತ್ವವರಿದಿತ್ತು
> ಹಲವರ ಹಾದಿಯೊಳು
> ಹರಿಸುರರು ನಿಮ್ಮ ನೆಲೆಯಂ ತೋರಿದೆ [ತೋರರೇ?]
> ಶ್ರೀಗಿರಿ ಚೆನ್ನಮಲ್ಲಿಕಾರ್ಜುನ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAP9Vewq7qEd3sr-fznZpHDxvUqY%3DJjhpMrhGORoNi73R_Z7MGA%
> 40mail.gmail.com
> <https://groups.google.com/d/msgid/kannadastf/CAP9Vewq7qEd3sr-fznZpHDxvUqY%3DJjhpMrhGORoNi73R_Z7MGA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CANNxvBohxYEqvuutBhmH7Fg%2BVkr53V%2B67YmOyJk8WUZdXCLvDA%40mail.gmail.com.
For more options, visit https://groups.google.com/d/optout.

Reply via email to