*🌻🌻ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ  ಸಾಹಿತಿಗಳು...!!🌻🌻*

*ಗಳಗನಾಥರು:-ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ
ಪುಣ್ಯಾತ್ಮರು ಇವರು.ಸತ್ತಮೇಲೆ ಅಂತ್ಯಸಂಸ್ಕಾರ ಮಾಡಲೂ ಇವರ ಮನೆಯವರ ಬಳಿ ಹಣವಿರಲಿಲ್ಲ.
ಪುಸ್ತಕಗಳಿಂದಲೇ ಇವರ ಅಂತ್ಯಸಂಸ್ಕಾರ  ಮಾಡಬೇಕಷ್ಟೇಯೆಂದು ಅವರ ಮನೆಯವರು ಅ ಸಂದರ್ಭದಲ್ಲಿ
ನೊಂದುಕೊಂಡು ನುಡಿದಿದ್ದರು.

ವಿ.ಸೀತಾರಾಮಯ್ಯ÷ಇವರು ದಿನಾ ಬೆಳಿಗ್ಗೆ ಹೊಟೇಲಿನಿಂದ ಹತ್ತು ಇಡ್ಲಿ
ತರಿಸುತ್ತಿದ್ದರಂತೆ.ಅದರಲ್ಲಿ ಒಂದು ಇಡ್ಲಿಯನ್ನಷ್ಟೇ ತಾವು ತಿಂದು ಉಳಿದ ಒಂಬತ್ತು
ಇಡ್ಲಿಯನ್ನು ಪ್ರಾಣಿ ಪಕ್ಷಿಗಳಿಗೆ ತಿನ್ನಿಸುತ್ತಿದ್ದರು.ಇದನ್ನು ಅವರು ತಮ್ಮ
ಬದುಕಿನುದ್ದಕ್ಕೂ ದಿನಚರಿಯಂತೆ ಪಾಲಿಸುತ್ತಿದ್ದರು.

ದ.ರಾ.ಬೇಂದ್ರೆ:-ಇವರೊಮ್ಮೆ ದಾರಿಯಲ್ಲಿ ನಡೆದುಕೊಂಡು ಬರಬೇಕಾದರೆ ಚಪ್ಪಲಿ
ಕಿತ್ತುಹೋಗುತ್ತದೆ.ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಸ್ವಲ್ಪ ದೂರ ನಡೆದುಕೊಂಡು
ಬಂದಮೇಲೆ,ದಾರಿಪಕ್ಕ ಕೂತಿದ್ದ ಚಮ್ಮಾರ ಸಿಗುತ್ತಾನೆ.ಬಿರುಬಿಸಿಲು ಆಗಿದ್ದರಿಂದ ಬೇಂದ್ರೆ
ಅಜ್ಜ ಛತ್ರಿಬಿಡಿಸಿಕೊಂಡಿದ್ದರು.ಚಮ್ಮಾರ ತಮ್ಮ  ಚಪ್ಪಲಿಯನ್ನು ರಿಪೇರಿ ಮಾಡುವಾಗ ಅವರು
ತಮ್ಮ ಛತ್ರಿಯನ್ನು ಬಿಸಿಲಲ್ಲಿದ್ದ ಚಮ್ಮಾರನಿಗೆ ಹಿಡಿದಿದ್ದರು..! ಇದರಿಂದ ಮುಜುಗರಗೊಂಡ
ಚಮ್ಮಾರ,‘ನಾನು ದಿನಾ ಬಿಸಿಲಲ್ಲೇ ಕೂತು ಕೆಲಸ ಮಾಡುವವನು ನನಗಿದೆಲ್ಲ ಬೇಡ‘ಅಂದ.ಅದಕ್ಕೆ
ಬೇಂದ್ರೆ ಅಜ್ಜ ನೀನಿಗ ನಿನ್ನ ಕೆಲಸ ಮಾಡುತ್ತಿದ್ದೀಯ,ನಾನೀಗ ನನ್ನ ಕೆಲಸ ಮಾಡುತ್ತಿದ್ದೇನೆ
ಅಂದರಂತೆ...!

ಡಿವಿಜಿ:-ಡಿವಿಜಿಯವರು ತಮ್ಮ ಹೆಂಡತಿಯನ್ನು ಆಪ್ತರೊಬ್ಬರ ಮದುವೆಗೆ ಹೋಗಲು ಹೇಳಿ ತಾವು
ಬೇರೊಂದು ಕಾರ್ಯಕ್ರಮಕ್ಕೆ ಹೋಗಿದ್ದರು.ಕಾರ್ಯಕ್ರಮ ಮುಗಿಸಿ ಮನೆಗೆ ಬಂದಾಗ ಹೆಂಡತಿ
ಮನೆಯಲ್ಲಿರೋದನ್ನು ನೋಡಿ ಸಿಟ್ಟಾದ ಡಿವಿಜಿ,ಮದುವೆಗೆ ಯಾಕೆ ಹೋಗಲಿಲ್ಲವೆಂದು ಹೆಂಡತಿಯನ್ನು
ಪ್ರಶ್ನಿಸಿದರು.ಅವರ ಪತ್ನಿ,‘ಮಗನನ್ನು ಕಳಿಸಿದ್ದೇನೆ‘ಅಂದರು.ಡಿವಿಜಿ,ಬಹಳ ಆತ್ಮೀಯರ ಮದುವೆ
ಎಂದು ಹೇಳಿದ್ದೆನ್ನಲ್ಲ ನೀನೇ ಹೋಗಬೇಕಿತ್ತು ಎಂದು ಮತ್ತೊಮ್ಮೆ ಏರಿದ ಧ್ವನಿಯಲ್ಲಿ
ಹೇಳಿದರು.ಆಗ ಅವರ ಪತ್ನಿ,‘ನನ್ನತ್ರ ಇರೋದು ಒಂದೇ ಸೀರೆ.ಅದು ಕೂಡ ಅಲ್ಲಿ ಇಲ್ಲಿ
ಹರಿದಿದೆ.ಅದನ್ನು ಉಟ್ಕೊಂಡು ಮದ್ವೆಗೆ ಹೋದ್ರೆ ನನ್ ಯಜಮಾನ್ರ ಮಾನ ಹೋಗುತ್ತೆ. ಅದ್ಕೆ
ಮಗನನ್ನು ಕಳಿಸಿದೆ ಅಂದರಂತೆ.ಈ ಮಾತನ್ನು ಕೇಳಿದ ಡಿವಿಜಿಯವರಿಗೆ ಮರು ಮಾತನಾಡಲು ಅವಕಾಶವೇ
ಇರಲಿಲ್ಲ.

ಮಾಸ್ತಿ:-ಜಿಲ್ಲಾಧಿಕಾರಿಯಾಗಿದ್ದ ಮಾಸ್ತಿಯವರು ಒಮ್ಮೆ ಊರಭೇಟಿಗೆ ತೆರಳಿರುತ್ತಾರೆ.ದಾರಿ
ಮಧ್ಯೆ ಬಾಯಾರಿಕೆ ಆದ್ದರಿಂದ ಸಾರ್ವಜನಿಕ ಬಾವಿಯಿಂದ ನೀರು ಸೇದುತ್ತಿದ್ದ ವ್ಯಕ್ತಿಯ ಬಳಿ
ಒಂದು ಬೊಗಸೆ ಕುಡಿಯಲು ನೀರು ಕೇಳುತ್ತಾರೆ.ಅವನು ನೀರನ್ನು ಸೇದಿ ಮಾಸ್ತಿಯವರಿಗೆ ಕೊಡುವ
ಬದಲು ಪಕ್ಕದಲ್ಲಿರುವ ಟ್ಯಾಂಕಿಗೆ ಸುರಿಯುತ್ತಾನೆ.ಮಾಸ್ತಿಯವರಿಗೆ ಅವನು ನೀರು ಕೊಡದ್ದು
ನೋಡಿ ಮುಜುಗರವಾಗುತ್ತದೆ.ಮತ್ತೆ ಅವನು ಕೊಡವನ್ನು ಬಾವಿಗಿಳಿಸಿ ನೀರು ಸೇದುತ್ತಾನೆ.ಈ ಬಾರಿ
ಮಾಸ್ತಿಯವರನ್ನು ಕರೆದು ಬೊಗಸೆ ಹಿಡಿಯುವಂತೆ ಹೇಳಿ ನೀರು ಸುರಿಯುತ್ತಾನೆ.ಮಾಸ್ತಿಯವರು
ಆಶ್ಚರ್ಯದಿಂದ ಕೇಳುತ್ತಾರೆ ಆಗಲೆ ಯಾಕೆ ನೀನು ನನಗೆ ನೀರು ಕೊಡಲಿಲ್ಲ ಎಂದು.ಅದಕ್ಕವನು
ಸ್ವಾಮಿ ಈ ಬಾವಿ ತೋಡಿಸುವ ಮೊದಲು ಡಿಸಿಯವರು,ಯಾರೇ ನೀರು ಸೇದಿದರು ಮೊದಲ ಕೊಡವನ್ನು
ಪಕ್ಕದಲ್ಲಿರುವ ಟ್ಯಾಂಕಿಗೆ ಸುರಿಯಬೇಕು,ಅ ನೀರು ಪ್ರಾಣಿಪಕ್ಷಿಗಳಿಗೆ ಕುಡಿಯೋಕೆ
ಉಪಯೋಗವಾಗಬೇಕು ಎಂದಿದ್ದರು.ಹೀಗಾಗಿ ಈ ಊರಿನವರು ಅವರ ಅ ಮಾತನ್ನು ಪಾಲಿಸುತ್ತಿದ್ದೇವೆ
ಎಂದ.ಅಂದಹಾಗೆ ಹಾಗೆ ಆದೇಶ ಮಾಡಿದ್ದ ಡಿಸಿ ಮಾಸ್ತಿಯವರೇ ಆಗಿದ್ದರು...!ಊರಿನವರ
ಪ್ರಾಮಾಣಿಕತೆಯನ್ನು ನೋಡಿ ಮಾಸ್ತಿಯವರ ಕಣ್ಣುಗಳು ಒದ್ದೆಯಾಗಿದ್ದವು..!

ಇಂದು ನಮ್ಮ ನಡುವೆ ಇರುವ ಕೆಲವು ಬಕೆಟ್ ಸಾಹಿತಿಗಳನ್ನು ನೋಡುವಾಗ ಈ ಮೇರು ಸಾಹಿತಿಗಳ ಬಗ್ಗೆ
ಹೆಮ್ಮೆ ಅನಿಸುತ್ತಿದೆ.
http://bit.ly/2cAeWBe

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CALgBNOHCG3HR%3Dv7WvfUNYSEAtZU-uX8pbRnNPoYTcPVEcRGYmg%40mail.gmail.com.
For more options, visit https://groups.google.com/d/optout.

Reply via email to