ಅಲಹಾಬಾದಿನ ಆನಂದಭವನದಿ
ಹುಟ್ಟಿಬಂದನೊಬ್ಬ ಹೋರಾಟಗಾರ
ಭಾರತದೇಶವು ಸ್ವಾತಂತ್ರ್ಯ ಪಡೆಯಲು
ಜೊತೆಗೂಡೆ ಬಾಪು ತಿಲಕ ಸರದಾರ /
ಡೆಹ್ರಾಡೂನಿನ ಕತ್ತಲೆ ಜೈಲಿನಲಿ
ಬೆಳಕಾಯ್ತು ಜಗತ್ತಿನ ಇತಿಹಾಸ
ಪತ್ರದ ರೂಪದಿ ಪುತ್ರಿಗೆಕಳುಹಲು
ಗಟ್ಟಿ ಅಸ್ಥಿಭಾರವು ದಿಟ್ಟ ಮನಸು
ಸ್ವತಂತ್ರ ದೇಶದ ಮೊದಲ ಪ್ರಧಾನಿ
ಪಂಚವಾರ್ಷಿಕ ಯೋಜನೆಗಳ ಗಣಿ
ಅಪಾರ ದುಡಿತದ ಬಿಡುವಿನಲೂ
ಮಕ್ಕಳ ನಡುವೆಯೆ ಮಿಡಿದ ಮನ
ದೇಶ-ವಿದೇಶಗಳ ಸೌದಾರ್ದತೆಗೆ
ಪಂಚಶೀಲ ತತ್ವದ ಶಾಂತಿದೂತ
ನಿರುದ್ಯೋಗ ಬಡತನ ನಿರ್ಮೂಲನೆಗೆ
ಕೈಗಾರಿಕೆ-ಅಣೆಕಟ್ಟುಗಳ ಭಾರತರತ್ನ
ಮಕ್ಕಳಿಗಿವರು ಬಲು ಅಚ್ಚುಮೆಚ್ಚು
ಪ್ರೀತಿಯಲಿ ಕರೆದರೆಲ್ಲರೂ ಚಾಚಾ
ಕೆಂಪು ಗುಲಾಬಿಯ ಕೋಟಿಗೆ ಸಿಕ್ಕಿಸಿ
ತಬ್ಬಿ ಮುತ್ತಿಟ್ಟರು ಮೃದುಮನ ಸಾಚಾ
..........ಚಂಗೌನಾ
Chandregowda m.d. pin 573119. mo 8722199344
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit
https://groups.google.com/d/msgid/kannadastf/CAE6PbrmYkarDYzx2MOuQW8qvzzS8EQg0onBLPdfdNGfUG6r5Vw%40mail.gmail.com.
For more options, visit https://groups.google.com/d/optout.