ಬದುಕಿಗೆ ಗಾಂಭೀರ್ಯದ ಕ್ಷಣದಲ್ಲಿ ವಿವೇಕಯುತ ನಿರ್ಧಾರ /ವರ್ತನೆ, ಹಾಗು ತಿಳಿ ಹಾಸ್ಯ ಎರಡೂ ಬೇಕು. ಬಲು ಅರ್ಥಪೂರ್ಣವಾಗಿದೆ. ಮಹಾಭಾರತದ ಉತ್ತಮ ಪ್ರಸಂಗವೊಂದನ್ನು ಎಲ್ಲರಿಗೆ ನೆನಪುಮಾಡಿದ್ದಿರಿ . ಧನ್ಯವಾದಗಳು ಮೇಡಂ
2017-01-09 10:24 GMT+05:30 Sameera samee <[email protected]>: > ಶ್ರೀಕೃಷ್ಣಾಯನಮ > > > ಮಹಾಭಾರತ ಯುದ್ಧದ ನಂತರ ಎಲ್ಲಾ ಕಾರ್ಯಗಳೂ ಮುಗಿದು ಶ್ರೀಕೃಷ್ಣ ತನ್ನರಮನೆಗೆ ಬಂದಾಗ ದೇವಿ > ರುಕ್ಮಿಣಿ ಪತಿಯನ್ನು ಎದುರ್ಗೊಂಡು ಈ ರೀತಿ ಪ್ರಶ್ನಿಸುತ್ತಾಳೆ. " ಪಿತಾಮಹ ಭೀಷ್ಮರು ಮತ್ತು > ಗುರು ದ್ರೋಣರು ಅಷ್ಟು ಪ್ರಾಮಾಣಿಕರೂ ಸಜ್ಜನರೂ ಆಗಿದ್ದರೂ ಸಹ ಅವರು ಕೊಲ್ಲಲ್ಪಟ್ಟರು, > ಮತ್ತು ನೀನೂ ಅದರ ಭಾಗವಾಗಿದ್ದೆ. ಯಾಕೆ ಹೀಗೆ ? " > > ಕೇಶವ ತನ್ನ ಎಂದಿನ ಮುಗುಳ್ನಗೆಯೊಂದಿಗೆ ಪತ್ನಿಯ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು > ಪ್ರಯತ್ನಿಸುತ್ತಾನೆ. ಆದರೆ ರುಕ್ಮಿಣೀದೇವಿ ಒತ್ತಾಯಿಸಿದಾಗ ಗಂಭೀರವಾಗಿ ಉತ್ತರಿಸುತ್ತಾನೆ. > " ಸಂಶಯವೇ ಇಲ್ಲ, ಅವರಿಬ್ಬರೂ ಜೀವನದುದ್ದಕ್ಕೂ ಸಜ್ಜನಿಕೆ, ಪ್ರಾಮಾಣಿಕತೆಯ ಪರಮಾವಧಿಯನ್ನು > ತಲುಪಿದವರು. ಆದರೆ ಅವರು ಮಾಡಿದ ಒಂದು ತಪ್ಪು ಅವರ ಎಲ್ಲಾ ಪುಣ್ಯ, ಪ್ರಾಮಾಣಿಕತೆಯನ್ನು > ನಾಶಮಾಡಿತು. " > > ರುಕ್ಮಿಣೀದೇವಿ :- ಏನದು ? ಯಾವ ತಪ್ಪು ? > > ಶ್ರೀಕೃಷ್ಣ :- " ಒಬ್ಬ ಸ್ತ್ರೀ ಅಸಹಾಯಕಳಾಗಿ ಮಾನಭಂಗಕ್ಕೆ ಒಳಗಾಗುತ್ತಿದ್ದ > ಸಂದರ್ಭದಲ್ಲಿ ಆ ಸಭೆಯಲ್ಲಿ ಆ ಇಬ್ಬರೂ ಹಿರಿಯರೆನಿಸಿಕೊಂಡವರು ಉಪಸ್ಥಿತರಿದ್ದರು. ಆ > ಹೀನಕೃತ್ಯವನ್ನು ನಡೆಯದಂತೆ ತಡೆಯುವ ಎಲ್ಲಾ ಅಧಿಕಾರವೂ ಸಾಮರ್ಥವೂ ಅವರಿಗಿತ್ತು. ಆದರೂ > ಅವರು ತಡೆಯಲಿಲ್ಲ, ಬದಲಿಗೆ ನಿಸ್ಸಹಾಯಕರಂತೆ ಕುಳಿತರು. ಇದೊಂದೇ ಅಪರಾಧ ಅವರ ಎಲ್ಲ > ಪುಣ್ಯವನ್ನೂ ಪ್ರಾಮಾಣಿಕತೆಯನ್ನೂ ನಾಶ ಮಾಡಿತು. " > > ರುಕ್ಮಿಣೀದೇವಿ :- " ಸರಿ, ಮತ್ತೆ ಕರ್ಣ? " > ಕರ್ಣನ ದಾನಶೂರತೆ ಎಲ್ಲರಿಗೂ ಗೊತ್ತಿರುವಂಥದ್ದೇ. ಅವನ ಮನೆಬಾಗಿಲಿಗೆ ಯಾರೇ ಬಂದರೂ > ಬರಿಕೈಯಲ್ಲಿ ಹಿಂದಿರುಗುತ್ತಿರಲಿಲ್ಲ. ಇಂಥವನು ಏಕೆ ಕೊಲ್ಲಿಸಿದೆ ? " > > ಕೇಶವ :- " ಹೌದು, ಕರ್ಣನ ಮನೆಯಿಂದ ಯಾರೊಬ್ಬರೂ ಬರಿಕೈಯಿಂದ ಹಿಂತಿರುಗಿಲ್ಲ. ಆದರೆ ಬಾಲಕ > ಅಭಿಮನ್ಯು ಇಂಥಾ ಅತಿರಥ ಮಹಾರಥರಿರುವ ಸೇನೆಯ ವಿರುದ್ಧ ಏಕಾಂಗಿಯಾಗಿ ಯಶಸ್ವೀ ಹೋರಾಟ ನಡೆಸಿ, > ಕೊನೆಗೆ ಸಾಯುವ ಸ್ಥಿತಿ ತಲುಪಿದಾಗ ಹತ್ತಿರದಲ್ಲೇ ಇದ್ದ ಕರ್ಣನಲ್ಲಿ ನೀರು ಕೇಳಿದ. ಕರ್ಣನ > ಬಳಿಯಲ್ಲೇ ಒಂದು ಹಳ್ಳದಲ್ಲಿ ಸ್ವಚ್ಛವಾದ ಕುಡಿಯುವ ನೀರಿತ್ತು. ದುರ್ಯೋಧನನ ಸ್ನೇಹಬಂಧಕ್ಕೆ > ಸಿಲುಕಿದ ಕರ್ಣ ಸಾಯುತ್ತಿರುವ ವ್ಯಕ್ತಿಗೆ ನೀರು ಕೊಡಲಿಲ್ಲ. ದಾನಶೂರತೆಯಿಂದ ಜೀವನಪರ್ಯಂತ > ತಾನು ಗಳಿಸಿದ ಪುಣ್ಯವನ್ನು ತನ್ನ ಕೈಯಾರೆ ನಾಶಮಾಡಿಕೊಂಡ. ಕೊನೆಗೆ ಅದೇ ಹಳ್ಳದಲ್ಲಿ ರಥದ > ಚಕ್ರ ಸಿಲುಕಿ ಕರ್ಣ ಕೊಲ್ಲಲ್ಪಟ್ಟ. " > ನಮ್ಮ ಒಂದೇ ಒಂದು ನಿರ್ಲಕ್ಷ್ಯದ ಪ್ರಮಾದ ನಮ್ಮ ಎಲ್ಲಾ ಪುಣ್ಯಗಳನ್ನೂ ನಾಶ ಮಾಡಬಲ್ಲುದು. > ಜೀವನಪರ್ಯಂತ ನಾವು ಗಳಿಸಿದ ಎಲ್ಲಾ ಗೌರವವನ್ನು ಮಣ್ಣುಮುಕ್ಕಿಸಬಹುದು. > > ಅಭಿವೃದ್ಧಿಯ ಪಥದಲ್ಲಿ ಕರ್ಮಯೋಗದ ಒಂದು ಸಣ್ಣ ಉದಾಹರಣೆಯಿದು. ಆದ್ದರಿಂದ ಪಾಪಪುಣ್ಯಗಳ > ಸರಿಯಾದ ಅರಿವಿನೊಂದಿಗೆ ಕರ್ಮಗಳನ್ನು ಆಚರಿಸೋಣ ಮತ್ತು ಅದನ್ನು ಪರಮಪುರುಷನ ಪದತಲದಲ್ಲಿ > ಅರ್ಪಿಸೋಣ. ಆ ಮೂಲಕ ಭಗವಂತನ ಕಾರುಣ್ಯ ಪಡೆಯೋಣ > > ನಕ್ಕು ಬಿಡಿ. ಜೀವನದಲ್ಲಿ ಸ್ವಲ್ಪ ಇರಲಿ ಹಾಸ್ಯ > ಅತಿಯಾದರೆ ಅಮೃೃತವೂ ವಿಷ. > > ಒಬ್ಬೊಬ್ಬರ ಹೆಂಡತಿಯರು ಹೇಗೇಗೆ ತಮ್ಮ ತಮ್ಮ ಗಂಡನ ಜೊತೆ ಜಗಳವಾಡುತ್ತಾರೆ ಗೊತ್ತಾ…!! > ಪೈಲೆಟ್ ನ ಹೆಂಡತಿ: > ಜಾಸ್ತಿ ಮೇಲೆ ಹಾರಬೇಡಿ > > ಟೀಚರ್ ನ ಹೆಂಡತಿ: > ನನಗೆ ಪಾಠ ಕಲಿಸಬೇಡಿ > > ಪೈಂಟರ್ ನ ಹೆಂಡತಿ: > ನನಗೆ ಬಣ್ಣ ಹಚ್ಚಬೇಡಿ > > ದೋಬಿಯ ಹೆಂಡತಿ: > ಜಾಸ್ತಿ ವದರಬೇಡಿ > > ಆಕ್ಟರ್ ನ ಹೆಂಡತಿ: > ಸುಮ್ನೆ ನಾಟಕ ಆಡಬೇಡಿ > > ಡೆಂಟಿಸ್ಟ್ ನ ಹೆಂಡತಿ: > ಜಾಸ್ತಿ ಮಾತನಾಡುದ್ರೆ ಹಲ್ಲು ಮುರಿದು ಹೋಗುತ್ತೆ > > ಚಾರ್ಟರ್ಡ್ ಅಕೌಂಟೆಂಟ್ ಹೆಂಡತಿ: > ಲೆಕ್ಕ ಮಾಡಿ ಮಾತಾಡಿ > > ಇಂಜಿನಿಯರ್ ನ ಹೆಂಡತಿ: > ಎಲ್ಲಾ ಪಾರ್ಟ್ ಸಪರೇಟ್ ಆಗುತ್ತೆ > > ಆರ್ಕಿಟೆಕ್ಟ್ ನ ಹೆಂಡತಿ: > ಸರಿಯಾಗಿ ಇದ್ದರೆ ಸರಿ ಇಲ್ಲದಿದ್ದರೆ ಮುಖದ ಡಿಸೈನ್ ಚೇಂಜ್ ಮಾಡಿ ಬಿಡ್ತಿನಿ. > > ಲಾಯರ್ ನ ಹೆಂಡತಿ: > ಹೆಚ್ಚು ವಾದ ಮಾಡಬೇಡಿ, ನೀವು ಹೇಳೋದನ್ನು ಕೇಳೋಕೆ ನಾನೇನೂ ನಿಮ್ಮ ಜಡ್ಜ್ ಅಲ್ಲ > > ಡ್ರೈವರ್ ನ ಹೆಂಡತಿ: > ನಿಮ್ಮ ಮಾತಿಗೆ ಸ್ವಲ್ಪ ಬ್ರೇಕ್ ಹಾಕಿ > > ರಾಜಕಾರಣಿಗಳ ಹೆಂಡತಿ: > ಹೆಚ್ಚು ಆಶ್ವಾಸನೆ ಕೊಡಬೇಡಿ > > ಹಂಗ್ ಇರಲಿ ಪರವಾಗಿಲ್ಲ > ಆದರೆ > > ಮಾರ್ಕೆಟಿಂಗ್ ನವರ ಹೆಂಡತಿ: > ಜಾಸ್ತಿ ಮಾತಾಡುದ್ರೆ OLX ನಲ್ಲಿ ಮಾರಿ ಬಿಡ್ತಿನಿ. > ನಗಿರಿ.. ನಗಿಸಿರಿ.... > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit https://groups.google.com/d/ > msgid/kannadastf/CAP9Vewo0QiURwjzjmy2fh_CZHjMp5jwye_GErriKVtehe0uzxw% > 40mail.gmail.com > <https://groups.google.com/d/msgid/kannadastf/CAP9Vewo0QiURwjzjmy2fh_CZHjMp5jwye_GErriKVtehe0uzxw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *ಸುಂದರೇಶ ಮೂರ್ತಿ. ಟಿ . ವಿ * *ಶಿಕ್ಷಕರು * ಸರ್ಕಾರಿ ಪ್ರೌಢ ಶಾಲೆ ಲಕ್ಷ್ಮೀ ಸಾಗರ , ಪಾಂಡವಪುರ ತಾಲೂಕು , ಮಂಡ್ಯ ಜಿಲ್ಲೆ . -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CADDbdW0A6tyW%2Ba9BnMikdbxm%2BAvy2%3DxwgzTzUHNyHf1ZuqYQLQ%40mail.gmail.com. For more options, visit https://groups.google.com/d/optout.
