Your personality very nice 

Sent from my Samsung Galaxy smartphone.
-------- Original message --------From: Sameera samee <[email protected]> 
Date: 09/01/2017  10:24 a.m.  (GMT+05:30) To: [email protected] 
Subject: [Kannada Stf-18716] ಶ್ರೀಕೃಷ್ಣಾಯನಮ ಪಾಪ —ಪುಣ್ಯದ ಲೆಕ್ಕಾಚಾರ .ಹಾಗೇ ಸ್ವಲ್ಪ 
ನಕ್ಕು ಬಿಡಿ 
ಶ್ರೀಕೃಷ್ಣಾಯನಮ

ಮಹಾಭಾರತ ಯುದ್ಧದ ನಂತರ ಎಲ್ಲಾ ಕಾರ್ಯಗಳೂ ಮುಗಿದು ಶ್ರೀಕೃಷ್ಣ ತನ್ನರಮನೆಗೆ ಬಂದಾಗ ದೇವಿ 
ರುಕ್ಮಿಣಿ ಪತಿಯನ್ನು ಎದುರ್ಗೊಂಡು ಈ ರೀತಿ ಪ್ರಶ್ನಿಸುತ್ತಾಳೆ. " ಪಿತಾಮಹ ಭೀಷ್ಮರು ಮತ್ತು 
ಗುರು ದ್ರೋಣರು ಅಷ್ಟು ಪ್ರಾಮಾಣಿಕರೂ ಸಜ್ಜನರೂ ಆಗಿದ್ದರೂ ಸಹ ಅವರು ಕೊಲ್ಲಲ್ಪಟ್ಟರು, ಮತ್ತು 
ನೀನೂ ಅದರ ಭಾಗವಾಗಿದ್ದೆ‌. ಯಾಕೆ ಹೀಗೆ ? "
ಕೇಶವ ತನ್ನ ಎಂದಿನ ಮುಗುಳ್ನಗೆಯೊಂದಿಗೆ ಪತ್ನಿಯ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು 
ಪ್ರಯತ್ನಿಸುತ್ತಾನೆ. ಆದರೆ ರುಕ್ಮಿಣೀದೇವಿ ಒತ್ತಾಯಿಸಿದಾಗ ಗಂಭೀರವಾಗಿ ಉತ್ತರಿಸುತ್ತಾನೆ." 
ಸಂಶಯವೇ ಇಲ್ಲ, ಅವರಿಬ್ಬರೂ ಜೀವನದುದ್ದಕ್ಕೂ ಸಜ್ಜನಿಕೆ, ಪ್ರಾಮಾಣಿಕತೆಯ ಪರಮಾವಧಿಯನ್ನು 
ತಲುಪಿದವರು. ಆದರೆ ಅವರು ಮಾಡಿದ ಒಂದು ತಪ್ಪು ಅವರ ಎಲ್ಲಾ ಪುಣ್ಯ, ಪ್ರಾಮಾಣಿಕತೆಯನ್ನು 
ನಾಶಮಾಡಿತು. "
ರುಕ್ಮಿಣೀದೇವಿ :- ಏನದು ? ಯಾವ ತಪ್ಪು ?
ಶ್ರೀಕೃಷ್ಣ :-  " ಒಬ್ಬ ಸ್ತ್ರೀ ಅಸಹಾಯಕಳಾಗಿ ಮಾನಭಂಗಕ್ಕೆ ಒಳಗಾಗುತ್ತಿದ್ದ ಸಂದರ್ಭದಲ್ಲಿ ಆ 
ಸಭೆಯಲ್ಲಿ ಆ ಇಬ್ಬರೂ ಹಿರಿಯರೆನಿಸಿಕೊಂಡವರು ಉಪಸ್ಥಿತರಿದ್ದರು. ಆ ಹೀನಕೃತ್ಯವನ್ನು ನಡೆಯದಂತೆ 
ತಡೆಯುವ ಎಲ್ಲಾ ಅಧಿಕಾರವೂ ಸಾಮರ್ಥವೂ ಅವರಿಗಿತ್ತು‌. ಆದರೂ ಅವರು ತಡೆಯಲಿಲ್ಲ, ಬದಲಿಗೆ 
ನಿಸ್ಸಹಾಯಕರಂತೆ ಕುಳಿತರು. ಇದೊಂದೇ ಅಪರಾಧ ಅವರ ಎಲ್ಲ ಪುಣ್ಯವನ್ನೂ ಪ್ರಾಮಾಣಿಕತೆಯನ್ನೂ ನಾಶ 
ಮಾಡಿತು. "
ರುಕ್ಮಿಣೀದೇವಿ :- " ಸರಿ, ಮತ್ತೆ ಕರ್ಣ? " ಕರ್ಣನ ದಾನಶೂರತೆ ಎಲ್ಲರಿಗೂ ಗೊತ್ತಿರುವಂಥದ್ದೇ. 
ಅವನ ಮನೆಬಾಗಿಲಿಗೆ ಯಾರೇ ಬಂದರೂ ಬರಿಕೈಯಲ್ಲಿ ಹಿಂದಿರುಗುತ್ತಿರಲಿಲ್ಲ. ಇಂಥವನು ಏಕೆ 
ಕೊಲ್ಲಿಸಿದೆ ? "
ಕೇಶವ :- " ಹೌದು, ಕರ್ಣನ ಮನೆಯಿಂದ ಯಾರೊಬ್ಬರೂ ಬರಿಕೈಯಿಂದ ಹಿಂತಿರುಗಿಲ್ಲ. ಆದರೆ ಬಾಲಕ 
ಅಭಿಮನ್ಯು ಇಂಥಾ ಅತಿರಥ ಮಹಾರಥರಿರುವ ಸೇನೆಯ ವಿರುದ್ಧ ಏಕಾಂಗಿಯಾಗಿ ಯಶಸ್ವೀ ಹೋರಾಟ ನಡೆಸಿ, 
ಕೊನೆಗೆ ಸಾಯುವ ಸ್ಥಿತಿ ತಲುಪಿದಾಗ ಹತ್ತಿರದಲ್ಲೇ ಇದ್ದ ಕರ್ಣನಲ್ಲಿ ನೀರು ಕೇಳಿದ. ಕರ್ಣನ 
ಬಳಿಯಲ್ಲೇ ಒಂದು ಹಳ್ಳದಲ್ಲಿ ಸ್ವಚ್ಛವಾದ ಕುಡಿಯುವ ನೀರಿತ್ತು. ದುರ್ಯೋಧನನ ಸ್ನೇಹಬಂಧಕ್ಕೆ 
ಸಿಲುಕಿದ ಕರ್ಣ ಸಾಯುತ್ತಿರುವ ವ್ಯಕ್ತಿಗೆ ನೀರು ಕೊಡಲಿಲ್ಲ‌. ದಾನಶೂರತೆಯಿಂದ ಜೀವನಪರ್ಯಂತ ತಾನು 
ಗಳಿಸಿದ ಪುಣ್ಯವನ್ನು ತನ್ನ ಕೈಯಾರೆ ನಾಶಮಾಡಿಕೊಂಡ. ಕೊನೆಗೆ ಅದೇ ಹಳ್ಳದಲ್ಲಿ ರಥದ ಚಕ್ರ ಸಿಲುಕಿ 
ಕರ್ಣ ಕೊಲ್ಲಲ್ಪಟ್ಟ. "ನಮ್ಮ ಒಂದೇ ಒಂದು ನಿರ್ಲಕ್ಷ್ಯದ ಪ್ರಮಾದ ನಮ್ಮ ಎಲ್ಲಾ ಪುಣ್ಯಗಳನ್ನೂ ನಾಶ 
ಮಾಡಬಲ್ಲುದು. ಜೀವನಪರ್ಯಂತ ನಾವು ಗಳಿಸಿದ ಎಲ್ಲಾ ಗೌರವವನ್ನು ಮಣ್ಣುಮುಕ್ಕಿಸಬಹುದು. 
ಅಭಿವೃದ್ಧಿಯ ಪಥದಲ್ಲಿ ಕರ್ಮಯೋಗದ ಒಂದು ಸಣ್ಣ ಉದಾಹರಣೆಯಿದು. ಆದ್ದರಿಂದ ಪಾಪಪುಣ್ಯಗಳ ಸರಿಯಾದ 
ಅರಿವಿನೊಂದಿಗೆ ಕರ್ಮಗಳನ್ನು ಆಚರಿಸೋಣ ಮತ್ತು ಅದನ್ನು ಪರಮಪುರುಷನ ಪದತಲದಲ್ಲಿ ಅರ್ಪಿಸೋಣ. ಆ 
ಮೂಲಕ ಭಗವಂತನ ಕಾರುಣ್ಯ ಪಡೆಯೋಣ
ನಕ್ಕು ಬಿಡಿ. ಜೀವನದಲ್ಲಿ ಸ್ವಲ್ಪ ಇರಲಿ ಹಾಸ್ಯಅತಿಯಾದರೆ ಅಮೃೃತವೂ ವಿಷ.
ಒಬ್ಬೊಬ್ಬರ ಹೆಂಡತಿಯರು ಹೇಗೇಗೆ ತಮ್ಮ ತಮ್ಮ ಗಂಡನ ಜೊತೆ ಜಗಳವಾಡುತ್ತಾರೆ ಗೊತ್ತಾ…!!ಪೈಲೆಟ್ ನ 
ಹೆಂಡತಿ:ಜಾಸ್ತಿ ಮೇಲೆ ಹಾರಬೇಡಿ
ಟೀಚರ್ ನ ಹೆಂಡತಿ:ನನಗೆ ಪಾಠ ಕಲಿಸಬೇಡಿ
ಪೈಂಟರ್ ನ ಹೆಂಡತಿ:ನನಗೆ ಬಣ್ಣ ಹಚ್ಚಬೇಡಿ
ದೋಬಿಯ ಹೆಂಡತಿ:ಜಾಸ್ತಿ ವದರಬೇಡಿ
ಆಕ್ಟರ್ ನ ಹೆಂಡತಿ:ಸುಮ್ನೆ ನಾಟಕ ಆಡಬೇಡಿ
ಡೆಂಟಿಸ್ಟ್ ನ ಹೆಂಡತಿ:ಜಾಸ್ತಿ ಮಾತನಾಡುದ್ರೆ ಹಲ್ಲು ಮುರಿದು ಹೋಗುತ್ತೆ
ಚಾರ್ಟರ್ಡ್ ಅಕೌಂಟೆಂಟ್ ಹೆಂಡತಿ:ಲೆಕ್ಕ ಮಾಡಿ ಮಾತಾಡಿ
ಇಂಜಿನಿಯರ್ ನ ಹೆಂಡತಿ:ಎಲ್ಲಾ ಪಾರ್ಟ್ ಸಪರೇಟ್ ಆಗುತ್ತೆ
ಆರ್ಕಿಟೆಕ್ಟ್ ನ ಹೆಂಡತಿ:ಸರಿಯಾಗಿ ಇದ್ದರೆ ಸರಿ ಇಲ್ಲದಿದ್ದರೆ ಮುಖದ ಡಿಸೈನ್ ಚೇಂಜ್ ಮಾಡಿ 
ಬಿಡ್ತಿನಿ.
ಲಾಯರ್ ನ ಹೆಂಡತಿ: ಹೆಚ್ಚು ವಾದ ಮಾಡಬೇಡಿ, ನೀವು ಹೇಳೋದನ್ನು ಕೇಳೋಕೆ ನಾನೇನೂ ನಿಮ್ಮ ಜಡ್ಜ್ 
ಅಲ್ಲ
ಡ್ರೈವರ್ ನ ಹೆಂಡತಿ:ನಿಮ್ಮ ಮಾತಿಗೆ ಸ್ವಲ್ಪ ಬ್ರೇಕ್ ಹಾಕಿ
ರಾಜಕಾರಣಿಗಳ ಹೆಂಡತಿ:ಹೆಚ್ಚು ಆಶ್ವಾಸನೆ ಕೊಡಬೇಡಿ
ಹಂಗ್ ಇರಲಿ ಪರವಾಗಿಲ್ಲಆದರೆ
ಮಾರ್ಕೆಟಿಂಗ್ ನವರ ಹೆಂಡತಿ: ಜಾಸ್ತಿ ಮಾತಾಡುದ್ರೆ OLX ನಲ್ಲಿ ಮಾರಿ ಬಿಡ್ತಿನಿ.ನಗಿರಿ.. 
ನಗಿಸಿರಿ..‌..
ಸಮೀರ ( ಕನ್ನಡ ಭಾಷಾ ಶಿಕ್ಷಕಿ 



-- 

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

 

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ

***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member

--- 

You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

Visit this group at https://groups.google.com/group/kannadastf.

To view this discussion on the web, visit 
https://groups.google.com/d/msgid/kannadastf/CAP9Vewo0QiURwjzjmy2fh_CZHjMp5jwye_GErriKVtehe0uzxw%40mail.gmail.com.

For more options, visit https://groups.google.com/d/optout.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/unhio9gkrgi1thoevhcs9ady.1484017014268%40email.android.com.
For more options, visit https://groups.google.com/d/optout.

Reply via email to