Ho janm dinn ka mubhark
On 21-Mar-2017 10:44 PM, "Sameera samee" <[email protected]> wrote:

> ಇಂದು *ಖ್ಯಾತ ಶಹನಾಯಿ ವಾದಕ ಭಾರತರತ್ನ ಬಿಸ್ಮಿಲ್ಲಾ ಖಾನ್ ಅವರ ಜನುಮ ದಿನ.*
> ಅವರ ಬಗ್ಗೆ ಮಾಹಿತಿ......
> ಶೆಹನಾಯಿ ವಾದನದ ಮಾಂತ್ರಿಕ ಭಾರತರತ್ನ ಬಿಸ್ಮಿಲ್ಲಾಖಾನ್
>
> ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನರು ಜನಿಸಿದ್ದು ಮಾರ್ಚ್ 21, 1916ರಲ್ಲಿ.
>  ಬಿಸ್ಮಿಲ್ಲಾ ಖಾನರು ಮೂಲತಃ ಮುಸ್ಲಿಮರಾದರೂ ಹಿಂದೂ ಧರ್ಮೀಯರ ಪರಿಸರದಲ್ಲಿ ಬೆಳೆದರು.
>  ಬಿಸ್ಮಿಲ್ಲಾ ಖಾನರ ಪೂರ್ವಜರು ಭೋಜಪುರ ರಾಜ ಮನೆತನದ ಆಸ್ಥಾನದಲ್ಲಿ ಶೆಹನಾಯಿ
> ವಿದ್ವಾಂಸರಾಗಿದ್ದರಂತೆ.  ಬಿಸ್ಮಿಲ್ಲಾ ಖಾನರ ತಂದೆ ಬಿಹಾರದ ಪ್ರಾಂತ್ಯವೊಂದರ ದೊರೆಯಾಗಿದ್ದ
> ಮಹಾರಾಜ ಕೇಶವ ಚಂದ್ರ ಪ್ರತಾಪರ ಆಸ್ಥಾನದಲ್ಲಿ ಶೆಹನಾಯ್ ವಿದ್ವಾಂಸರಾಗಿದ್ದರು.
>
> ಆರು ವಯಸ್ಸಿನ  ಬಿಸ್ಮಿಲ್ಲಾ ಖಾನರು ವಾರಣಾಸಿಯಲ್ಲಿದ್ದ ತಮ್ಮ ಚಿಕ್ಕಪ್ಪ, ಅಲಿ ಬಕ್ಸ್
> ವಿಲಾಯತು ಅವರ ನೆಲೆಗೆ ಬಂದು ಶಹನಾಯಿ ವಾದನ ಕಲಿಯತೊಡಗಿದರು. ಅಲಿ ಬಕ್ಸ್ ವಿಲಾಯತುರವರು
> ವಾರಣಾಸಿಯ ವಿಶ್ವನಾಥ ದೇವಾಲಯದೊಂದಿಗಿದ್ದವರು.  ಹೀಗಾಗಿ ಬಿಸ್ಮಿಲ್ಲಾಖಾನರ ಮನೆಯವರು ಕಾಶೀ
> ವಿಶ್ವನಾಥನ ದಿನ ನಿತ್ಯದ ದರ್ಶನಾರ್ಥಿಗಳಾಗಿದ್ದು ಆ ಸನ್ನಿಧಾನದಲ್ಲಿ ಪರಮಾಪ್ತತೆಯನ್ನು
> ಹೊಂದಿದ್ದರು.  ಜ್ಞಾನ ಮತ್ತು ಕಲೆಗಳ ಅದಿದಿದೇವತೆಯಾದ ಸರಸ್ವತಿ ಮಾತೆಯ ಬಗೆಗೆ ಅವರು ಅಪಾರ
> ಭಕ್ತಿ ಹೊಂದಿದವರಾಗಿದ್ದು ತಮ್ಮ ಸಂಗೀತ ಸೇವೆಯನ್ನೂ ಕೂಡಾ ಸರಸ್ವತಿ ಮಾತೆಯ ಸೇವೆಯೆಂದು
> ಹೇಳುತ್ತಿದ್ದರು.  ಸಂಗೀತಕ್ಕೆ ಯಾವುದೇ ಮತಧರ್ಮಗಳ ಸೋಂಕು ಇಲ್ಲ ಎಂಬುದು ಅವರು ಆಗಾಗ ಹೇಳುವ
> ಮಾತಾಗಿತ್ತು.
>
> ಒಮ್ಮೆ ಬಿಸ್ಮಿಲ್ಲಾ ಖಾನರು ಕುಂಭಮೇಳದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ರೈಲಿನಲ್ಲಿ
> ಪಯಣಿಸುತ್ತಿದ್ದಾಗ ಅವರ ಬದುಕಿನಲ್ಲಿ ಒಂದು ಅವಿಸ್ಮರಣೀಯ ಘಟನೆ ನಡೆಯಿತು.  ಒಂದು
> ನಿಲ್ದಾಣದಲ್ಲಿ ರೈಲು ನಿಂತಾಗ ಒಬ್ಬ ಗೋಪಾಲ ಬಾಲಕನು ಇವರಿರುವ ರೈಲಿನ ಡಬ್ಬಿಗೆ ಬಂದು ಇವರ
> ಮುಂದೆ ಸುಶ್ರಾವ್ಯವಾಗಿ ಕೊಳಲು ನುಡಿಸಲಾರಂಭಿಸಿದನಂತೆ. ಅವರಿಗೆ ಆ ಹುಡುಗ ನುಡಿಸುತ್ತಿದ್ದ
> ರಾಗದ ಅರಿವು ಕೂಡಾ ಇರಲಿಲ್ಲ.   ಆ ದನಿಗೆ ಮಾರುಹೋದ ಬಿಸ್ಮಿಲ್ಲಾ ಖಾನರು ನಾನು ನಿನಗೆ ಒಂದು
> ನಾಣ್ಯ ಕೊಡುತ್ತೇನೆ ಇನ್ನೊಮ್ಮೆ ನುಡಿಸು ಎಂದು ಪ್ರಾರ್ಥಿಸಿದರು.  ಹೀಗೆ ಮತ್ತೊಮ್ಮೆ,
> ಮಗದೊಮ್ಮೆ ಎಂದು ಮುಂದುವರೆದು  ಅವರಲ್ಲಿದ್ದ ನಾಣ್ಯಗಳೆಲ್ಲಾ ಮುಗಿದವು.  ಬಿಸ್ಮಿಲ್ಲಾ
> ಖಾನರಿಗೆ ಆ ಹುಡುಗ ಕೃಷ್ಣ ಪರಮಾತ್ಮನಾಗಿ ಕಂಡನಂತೆ.
>
> ಅಂದಿನ ಕಾರ್ಯಕ್ರಮದಲ್ಲಿ ಅನೇಕ ಮಹಾನ್ ಪಂಡಿತರ ಎದುರಿನಲ್ಲಿ ಬಿಸ್ಮಿಲ್ಲಾ ಖಾನರು ಈ
> ರಾಗವನ್ನು ನುಡಿಸಿದರು.  ಆ ರಾಗಕ್ಕೆ ಪುನಃ ಪುನಃ ಪ್ರೇಕ್ಷಕರಿಂದ ಬೇಡಿಕೆ ಬಂತು.
>  ಸಭಿಕರನ್ನು ಮಂತ್ರಮುಗ್ಧವಾಗಿಸಿದ್ದ ಆ ರಾಗ ಯಾವುದು ಎಂಬುದು ಅಲ್ಲಿದ್ದ ಯಾವ ಪಂಡಿತರಿಗೂ
> ತೋಚಲಿಲ್ಲ.  ಬಿಸ್ಮಿಲ್ಲಾ ಖಾನರನ್ನು ಕೇಳಿದಾಗ ಅದು ‘ಕನ್ಹೇರ ರಾಗ’ ಎಂದು ನುಡಿದರು.
>  ಕನ್ಹಯ್ಯ ಎಂಬುದು ಕೃಷ್ಣನ ಒಂದು  ಹೆಸರು.   ಮಾರನೆಯ ದಿನ ಪತ್ರಿಕೆಗಳಲ್ಲಿ ಹೊಸ ರಾಗವೊಂದು
> ಉದ್ಭವವಾದ ಮೋಡಿಯ ಬಗೆಗೆ  ಬರವಣಿಗೆಗಳು ಬಂದವು.
>
> ಈ ಕತೆಯ ಬಗ್ಗೆ ಸ್ವತಃ ಬಿಸ್ಮಿಲ್ಲಾ ಬಿಸ್ಮಿಲ್ಲಾ ಖಾನರೇ ಯಾವುದೇ ಪ್ರಚಾರ ಕೊಡಲಿಲ್ಲ.
>  ಅವರ  ಆತ್ಮೀಯ ಗೆಳೆಯ ಹರಿ ಪ್ರಸಾದ್ ಚೌರಾಸಿಯ ಅವರು ಈ ರಾಗದ  ಬಗೆಗಿನ ವಿವರ ಕೇಳಲಾಗಿ
> ಕಣ್ಣಲ್ಲಿ ಭಕ್ತಿಭಾವದ ಮಿನುಗು ತುಂಬಿಕೊಂಡ ಬಿಸ್ಮಿಲ್ಲಾ ಖಾನರು ಕೃಷ್ಣನೋಪಾದಿಯ ಗೋಪಾಲಬಾಲನ
> ಗಾಯನದಿಂದ ತಮಗಾದ ಅನುಭಾವವನ್ನು ತೆರೆದಿಟ್ಟುಕೊಂಡರಂತೆ.  ಇದನ್ನು ಕೇಳಿ ಹರಿಪ್ರಸಾದ
> ಚೌರಾಸಿಯಾ ಅವರ ಕಣ್ಣಾಲಿಗಳು ತುಂಬಿ ಹರಿದವು.
>
> ಬಿಸ್ಮಿಲ್ಲಾ ಖಾನರು ತಮ್ಮ  ಕೀರ್ತಿ ಉತ್ತುಂಗಕ್ಕೇರಿದ್ದರೂ ವಾರಣಾಸಿಯ ಸಾಮಾನ್ಯರಲ್ಲಿ
> ಸಾಮಾನ್ಯರಂತೆ ಬದುಕು  ನಡೆಸಿದವರು.  ಜೀವನದ ಕೊನೆಯವರೆಗು ತಮ್ಮ ಓಡಾಟಕ್ಕಾಗಿ ಸೈಕಲ್
> ರಿಕ್ಷಾವನ್ನೇ ಅವಲಂಬಿಸಿದ್ದರು. ಬಿಸ್ಮಿಲ್ಲಾ ಖಾನ್ ಅವರಿಗೆ ಬನಾರಸ್ ಹಿಂದೂ
> ವಿಶ್ವವಿದ್ಯಾಲಯ, ಶಾಂತಿನಿಕೇತನದ ವಿಶ್ವ ಭಾರತಿ ವಿಶ್ವವಿದ್ಯಾಲಯಗಳಿಂದ ಗೌರವಪೂರ್ವಕ
> ಡಾಕ್ಟರೇಟ್ ಪುರಸ್ಕಾರಗಳು ಸಂದವು. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಭಾರತ ರತ್ನ
> ಪ್ರಶಸ್ತಿಗಳಲ್ಲದೆ ದೇಶದ ವಿವಿಧೆಡೆಗಳಲ್ಲಿನ ಪಶಸ್ತಿಗಳು ಕೂಡಾ ಅವರನ್ನರಸಿ ಬಂದವು.
>
> ಶೆಹನಾಯಿಯನ್ನು ಪ್ರಸಿದ್ಧ ಶಾಸ್ತ್ರೀಯ ಸಂಗೀತ ವಾದ್ಯವಾಗಿಸಿದ ಕೀರ್ತಿ ಬಿಸ್ಮಿಲ್ಲಾ ಖಾನ್
> ಅವರಿಗೆ ಸಲ್ಲಬೇಕು. 1937ರಲ್ಲಿ ಕಲ್ಕತ್ತದಲ್ಲಿ ನಡೆದ ಅಖಿಲ ಭಾರತ ಸಂಗೀತ ಸಮ್ಮೇಳನವು ಇವರ
> ವಾದ್ಯ ಕಛೇರಿ ಶೆಹನಾಯಿಯನ್ನು ಪ್ರಮುಖ ವಾದ್ಯಗಳ ಸಾಲಿನಲ್ಲಿ ತಂದು ನಿಲ್ಲಿಸಿತು.
>  ವಿಶ್ವದೆಲ್ಲೆಡೆ ಅವರ ನಾದಲಹರಿ ನಿರಂತರವಾಗಿ ಹರಿಯಿತು.  1977ರಲ್ಲಿ ಬಿಡುಗಡೆಯಾದ ‘ಸನಾದಿ
> ಅಪ್ಪಣ್ಣ’ ಕನ್ನಡ ಚಲನಚಿತ್ರದಲ್ಲಿ ಬಿಸ್ಮಿಲ್ಲಾಖಾನರು ನುಡಿಸಿದ ಶೆಹನಾಯಿ ವಾದನ ಕನ್ನಡಿಗರ
> ಹೃದಯದಲ್ಲಿ ಅವಿಸ್ಮರಣೀಯವಾಗಿದೆ.
>
> ಹೀಗೆ ಸಂಗೀತ ಲೋಕವನ್ನು ತಮ್ಮ ಶೆಹನಾಯಿಯ ನಾದದಿಂದ ತುಂಬಿದ ಈ ಮಹಾನ್ ಚೇತನರಾದ
> ಬಿಸ್ಮಿಲ್ಲಾಖಾನರು 2006ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಈ ಮಹಾನ್ ಸರಸ್ವತೀ ಪುತ್ರ,
> ಶ್ರೀಕೃಷ್ಣ ಪ್ರೀತಿಪಾತ್ರ ಸಂಗೀತ ತಪಸ್ವಿಗಳು ಹರಿಸಿದ ಸಂಗೀತ ಮಾತ್ರ ಎಂದೆಂದೂ ಚಿರಂತನ.
>  ಇಂಥಹ ಮಹಾನ್ ಸಂಗೀತಗಾರರ ಯುಗದಲ್ಲಿ ಜೀವಿಸಿದ್ದ ನಮ್ಮ ಪುಣ್ಯವೆಂದರೂ ಸರಿಯೇ.
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to