ಬದುಕು-ಬರಹ ಎರಡೂ ಒಂದೇ ಆದದ್ದೇ ದೇವನೂರರ ವೈಶಿಷ್ಟ್ಯ ಸಂಕಟದಲ್ಲಿರುವ ಅನ್ಯರ ಬಗ್ಗೆ ಚಿಂತಿಸುವುದು ಅವರಲ್ಲಿನ ಸಂವೇದನೆಯ ಜೀವಂತಿಕೆಗೆ. ಸಾಕ್ಷಿ ಉತ್ತಮ ಸಾಹಿತ್ಯವು ಸಂವೇದನೆಯನ್ನುಂಟು ಮಾಡುತ್ತದೆ ಅಪರೂಪದ ಲೇಖಕರಲ್ಲಿ ದೇವನೂರು ಒಬ್ಬರು
On 10-Jun-2017 5:01 PM, "Sharadamma" <[email protected]> wrote: > Abbha olle lekhana madam > > Sameera samee <[email protected]> wrote: > > ಈ ದಿನ ಖ್ಯಾತ ಸಾಹಿತಿ ದೇವನೂರು ಮಹದೇವ ಅವರ ಜನುಮ ದಿನ. > ಅವರಿಗೆ ಜನುಮ ದಿನದ ಶುಭಾಷಯಗಳನ್ನು ತಿಳಿಸುತ್ತಾ, ಅಂತರ್ಜಾಲದಲ್ಲಿ ದೊರೆತ ಅವರ ಕುರಿತ > ಒಂದು ಲೇಖನ.... > ದೇವನೂರ ಮಹಾದೇವ > > ದೇವನೂರ ಮಹಾದೇವ ಅವರು ಹುಟ್ಟಿದ್ದು ಜೂನ್ 10, 1948ರಂದು. ಹಾಗೆಂದು ಅವರ ಬಳಿ ಹೋಗಿ > ‘ಹ್ಯಾಪಿ ಬರ್ತ್ ಡೇ ಸಾರ್’ ಅಂತ ಹೇಳಿದರೆ, ‘ಇವನ್ಯಾವನಯ್ಯಾ ಮಿಕ’ ಎಂದು > ಗಂಭೀರರಾಗಿಬಿಡುತ್ತಾರೇನೋ ಅನಿಸುತ್ತದೆ. ಅವರು ಮನುಷ್ಯನ ಮೂಲ ಆಳವನ್ನು ತಲುಪದ ಯಾವ > ಆಚರಣೆಗಳನ್ನೂ ಒಪ್ಪುವವರಲ್ಲವೇನೋ ಎಂದೆನಿಸುತ್ತಿದೆ. > > ದೂರದರ್ಶನ ಬಂದ ಪ್ರಾರಂಭದ ದಿನಗಳಲ್ಲಿ ಇರಾನ್, ಇರಾಕ್ ದೇಶಗಳ ಯುದ್ಧಗಳು ಕ್ರಿಕೆಟ್ ಆಟ > ನೇರ ಪ್ರಸಾರವಾಗುವಂತೆ ವಾರ್ತೆಗಳಲ್ಲಿ ಪ್ರಸಾರವಾಗುತ್ತಿದ್ದವು. ಯುದ್ಧದಲ್ಲಿನ ಕ್ಷಿಪಣಿ > ಪ್ರಯೋಗಗಳು, ಬಾಂಬ್ ಹೇಗೆ ಬೀಳುತ್ತಿವೆ ಎಂದು ಕುತೂಹಲದಿಂದ ಅಲ್ಲಿನ ರಸ್ತೆಗಳಲ್ಲಿ > ನೋಡುತ್ತಿದ್ದ ಮಕ್ಕಳು, ಇಂಧನ ಸೋರಿಕೆಯಿಂದ ಕಪ್ಪುಗಟ್ಟಿದ ಸಮುದ್ರ, ಆ ಸಮುದ್ರದ ದಡದಲ್ಲಿ > ಬದುಕಲೂ ಆಗದೆ, ಸಾಯಲು ಆಗದೆ ನಲುಗುತ್ತಿದ್ದ ಒಂದು ಪಕ್ಷಿ ಇವೆಲ್ಲಾ ನನ್ನ ಮನಸ್ಸಿನಲ್ಲಿ > ಮರೆಯಾಗದೆ ನಿಂತಿವೆ. ಅದೇ ದಿನಗಳಲ್ಲಿ ನಮ್ಮ ದೇವನೂರು ಮಹಾದೇವರ ಒಂದು ಸಂದರ್ಶನ ಕೂಡಾ > ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಅವರನ್ನು ಕೇಳಿದ ಪ್ರಶ್ನೆ, “ಇಂದಿನ ಬದುಕಿನಲ್ಲಿ > ತಮ್ಮನ್ನು ಕಾಡುತ್ತಿರುವ ಪ್ರಶ್ನೆ ಯಾವುದು?”. ದೇವನೂರು ಮಹಾದೇವ ಅವರು ಹೇಳಿದ್ದು, > “ಗಲ್ಫ್ ಯುದ್ಧದಲ್ಲಿ ತನ್ನ ಬದುಕನ್ನು ಕಳೆದು ಕೊಂಡು ಒದ್ದಾಡುತ್ತಿದೆಯಲ್ಲಾ ಆ ಪಕ್ಷಿ.... > ಅದು ನನ್ನನ್ನು ತುಂಬಾ ಕಾಡುತ್ತಿದೆ!” > > ದೇವನೂರ ಮಹಾದೇವ ಎಂದರೆ ತಕ್ಷಣ ನೆನಪಿಗೆ ಬರುವುದು ಅವರ ಒಡಲಾಳ, ಕುಸುಮಬಾಲೆ, ಅಮಾಸ, > ಗ್ರಸ್ತ, ಡಾಂಬರು ಬಂದುದು, ಮೂಡಲ ಸೀಮೆಯ ಕೊಲೆಗಿಲೆ, ಮಾರಿಕೊಂಡವರು ಹೀಗೆ ಹಲವು ಕಥೆಗಳು. > ನಮ್ಮ ದೇಶದಲ್ಲಿ ನಾವು ಜನರನ್ನು ಪ್ರಾಂತ್ಯ, ಭಾಷೆ, ಜಾತಿ, ಉಪಜಾತಿ, ಮರಿ ಜಾತಿ ಹೀಗೆ > ಯಾವ ರೀತಿಯಲ್ಲಿ ಛಿದ್ರ ಛಿದ್ರವಾಗಿ ಒಡೆದುಹಾಕಿದ್ದೇವೆಯೋ ನಮ್ಮ ಬುದ್ಧಿವಂತ ಜನಾಂಗ > ಸಾಹಿತ್ಯವನ್ನೂ ಕೂಡ ನವ್ಯ, ದಲಿತ, ಬಂಡಾಯ, ಮರಿ ಬಂಡಾಯ ಹೀಗೆ ಒಡೆದು ಹಾಕಿಬಿಟ್ಟಿದೆಯೇನೋ > ಅಂತನಿಸುತ್ತದೆ. ನಾನು ಸಾಹಿತ್ಯದ ಬಗ್ಗೆ ಅಷ್ಟೊಂದು ಬಲ್ಲವನಲ್ಲವಾದದ್ದರಿಂದ ಆ ಬಗ್ಗೆ > ಹೇಳಿದರೆ ಇವನೊಬ್ಬ ಶುದ್ಧ ಶುಂಠ, ಅವೈಜ್ಞಾನಿಕ ಎಂದು ಹಲವು ಮಹನೀಯರು ಪ್ರತಿಭಾನ್ವಿತ > ವಿಶ್ಲೇಷಣೆಗೆ ಬರುವ ಸರ್ವ ಸಾಧ್ಯತೆಗಳಿವೆ! ಅದು ಏನೇ ಇರಲಿ, ಇಂತಹ ವಾದ ವಿವಾದಗಳು > ನಮ್ಮನ್ನು ಮಾನವನ ಆಳದಲ್ಲಿ ಇಳಿಯುವ ಶ್ರೇಷ್ಠ ಅನುಭಾವದಿಂದ ದೂರ ಮಾಡುತ್ತಿವೆಯೇನೋ ಎಂಬುದು > ನನ್ನಲ್ಲಿರುವ ವ್ಯಥೆ. ದೇವನೂರ ಮಹಾದೇವ ಅಂತಹ ಅಂತರಾಳಕ್ಕಿಳಿಯುವ ಸಮರ್ಥ ಬರಹಗಾರನನ್ನು > ಯಾವುದೋ ದಲಿತ - ಬಂಡಾಯ ಎಂದು ಪ್ರತ್ಯೇಕಿಸ ಹೊರಟಾಗ ಇಡೀ ಮಾನವ ಸಂಕುಲಕ್ಕೆ ಅಗತ್ಯವಾಗಿರುವ > ಅವರ ಬರಹಗಳಲ್ಲಿನ ತೀವ್ರವಾದ ಸ್ಪಂದನೆಗಳ ಲಾಭ ಸರಿಯಾಗಿ ಆಗುವುದಿಲ್ಲ. ಅವರ ಬರಹಗಳ > ಆಳವನ್ನು ವರ್ಗರಹಿತವಾಗಿ ಪ್ರತಿಯೊಬ್ಬರೂ ತಲುಪಿ ಮಾನವನ ಮೂಲಸ್ಪಂದನೆಗಳನ್ನು ಅರ್ಥೈಸಿ > ಅದರಲ್ಲೊಂದಾಗುವ ಅವಶ್ಯಕತೆ ತುಂಬಾ ಇದೆ. > > ಒಮ್ಮೆ ಅವರು ಮಾನಸ ಗಂಗೋತ್ರಿಯಲ್ಲಿ ಮಾಡಿದ ಭಾಷಣದ ತುಣುಕುಗಳು ಹೀಗಿವೆ ‘ನಾನು > ಬರೆಯುತ್ತಾ ಬರೆಯುತ್ತಾ ಬರೆಯುವ ಪ್ರಕ್ರಿಯೆಯಲ್ಲಿ ನನ್ನನ್ನು ನಾನು ಕಳೆದುಕೊಂಡು > ಬೇರೆಯವನಾಗಬೇಕು. ಹಾಗೆ ಬೇರೆಯಾದವನು ಯಾರೂ ಆಗಬಹುದು ಆ ಮೂಲಕ ಎಲ್ಲರಂತೂ ಆಗಬಹುದು. > ಹೀಗಾದಾಗ ನನ್ನನ್ನು ನಾನು ಕಳೆದುಕೊಳ್ಳಲು ಸಾಧ್ಯ. ನಾನು ಮಹಾದೇವ ಎನ್ನುವುದನ್ನೂ ಬಿಟ್ಟು > ಬಿಡಬೇಕು. ನನ್ನ ಜಾತಿಯನ್ನು ಮರೆಯಬೇಕು. ನನ್ನ ಭಾಷೆಯನ್ನು ಮರೆಯಬೇಕು. ಆ ಬರೆಯುವ > ಕ್ರಿಯೆಯಲ್ಲಿ ಈ ಎಲ್ಲವುಗಳನ್ನೂ ಮೀರಬೇಕು. ಸಭೆಯ ಮಧ್ಯದ ಸಭಿಕನಾಗದಿದ್ದರೆ ಹೇಗೆ ಮಾತನಾಡಲು > ಸಾಧ್ಯವಿಲ್ಲವೋ ಹಾಗೆ ಬರೆಯುವ ಕ್ರಿಯೆ ಕೂಡ. ಅಂದರೆ ಬಿಕಮಿಂಗ್ ಅದರ್ ಬೀಯಿಂಗ್ ಎಂದಾಯಿತು. > ಬರೆಯುವ ಕ್ರಿಯೆಯಲ್ಲಿ ಕೆಲವು ಬಾರಿ ‘ಆತ್ಮ'ವಾಗಿ ಬರಬಹುದು. ಕೆಲವು ಬಾರಿ ‘ದೇಹ'ವಾಗಿ > ಬರಬಹುದು. ಒಟ್ಟಿನಲ್ಲಿ ನೋಡಿದರೆ ನೋವು, ಕಷ್ಟ, ಸಂಕಟ, ದುಃಖ, ಖುಷಿ ಎಲ್ಲವೂ ಒಂದೇ. ಅದು > ಒಂದು ಜೀವದಿಂದ ಮತ್ತೊಂದು ಜೀವಕ್ಕೆ ಹೋಗುವಂತೆ ಅಥವಾ ತನ್ನೊಳಗೆ ಜಗತ್ತನ್ನು ಭಾವಿಸುವ, > ಜಗತ್ತಿನೊಳಗೆ ತನ್ನನ್ನು ಭಾವಿಸಿಕೊಳ್ಳುವಂತಹ ಪ್ರಕ್ರಿಯೆ. ಹಿಂದೆ ಹೇಳಿದೆನಲ್ಲಾ ರೂಢಿ > ಎಂದು ಹಾಗೆ. ಅಂದರೆ ನಾನು ಮುಸ್ಲಿಂ, ದಲಿತ, ಬ್ರಾಹ್ಮಣ, ಮಹಾದೇವ ಎಂಬಲ್ಲಿಗೇ ನಿಂತರೇ > ಸಾಯುವವರೆಗೂ ಆ ಸ್ಥಿತಿಯಲ್ಲೇ ನಿಂತು ಬಿಡುತ್ತೇನೆ (ಅರವತ್ತು ವರ್ಷದವನಾದರೂ ಪ್ರೈಮರಿ > ಶಾಲೆಯೇ ಫೇಲಾಗಿರುವ ಹುಡುಗನ ಮನಸ್ಥಿತಿಯಲ್ಲಿಯೇ ಉಳಿದಂತೆ ಕಾಣುತ್ತಾನೆ). ಗಿರೀಶ > ಕಾರ್ನಾಡ್ ಒಮ್ಮೆ ಹೇಳುತ್ತಿದ್ದರು - ಪಂಜಾಬ್ನಲ್ಲಿ ಗಲಭೆ ಆಗಿ ಆಗಿ ಹೆಣ ರಸ್ತೇಲಿ > ಬಿದ್ದಿದ್ದರೂ ಮಕ್ಕಳು ಅದನ್ನೂ ನೋಡಿ ಸುಮ್ಮನೆ ಹೋಗುತ್ತಿರುತ್ತಾರೆ - ಅಂದರೆ ಅವರು > ಅದಕ್ಕೆಲ್ಲ ಅಡ್ಜೆಸ್ ಆಗಿ ಹೋಗಿರುತ್ತಾರೆ. ಸಾವಿನ ಬಗೆಗಿನ ಸೂಕ್ಷ್ಮತೆ ಕೂಡ ಕಳೆದುಕೊಂಡು > ಬಿಟ್ಟಿದ್ದಾರೆ. ಹೀಗೆ ಸೂಕ್ಷ್ಮತೆಯನ್ನು ಕಳೆದುಕೊಂಡರೆ ಅದು ಸೃಜನಶೀಲವಾಗುವುದಿಲ್ಲ”. > ದೇವನೂರು ಮಹಾದೇವ ಅವರು ಸೂಕ್ಷ್ಮಜ್ಞತೆಯಲ್ಲಿ ನಮ್ಮನ್ನು ಇಳಿಸುವ ವಿಶಿಷ್ಟ ಬರಹಗಾರ. > ವೆಬ್ ಅಂತರ್ಜಾಲದಲ್ಲಿರುವ ಅವರ ಹಲವು ಲೇಖನಗಳಾದ ಅಂಬೇಡ್ಕರ್, ಗಾಂಧೀ ಮತ್ತು ಹಲವು > ವರ್ಗಸಂಹಿತೆಗಳ ವಿರೋಧಗಳು ಇವೆಲ್ಲಾ ವೈಯಕ್ತಿಕತೆಗೆ ಮೀರಿದ ಆಳದಲ್ಲಿ ಮನಸ್ಸು ಈಜುತ್ತಿರುವ, > ಏನನ್ನೋ ಗಾಢವಾದದ್ದನ್ನು ಅರಸುತ್ತಿರುವ ಅನುಭಾವವನ್ನು ಕೊಡುತ್ತವೆ. > > ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದಲ್ಲಿ ಜನಿಸಿದ ಮಹಾದೇವರು ತಮ್ಮ > ಶಿಕ್ಷಣ-ವಿದ್ಯಾಭ್ಯಾಸವನ್ನು ದೇವನೂರು, ನಂಜನಗೂಡು, ಮೈಸೂರುಗಳಲ್ಲಿ ಪಡೆದು ಮೈಸೂರು > ವಿಶ್ವವಿದ್ಯಾಲಯದ ಕನ್ನಡ ಎಂ.ಎ ಪದವಿ ಪಡೆದರು. 1975-1989ರ ಅವಧಿಯಲ್ಲಿ ಮೈಸೂರಿನ > ಸೆಂಟ್ರಲ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಲ್ಯಾಂಗ್ವೇಜಸ್ ನಲ್ಲಿ ಉದ್ಯೋಗನಿರತರಾಗಿದ್ದ > ಇವರು ನಂತರದ ವರ್ಷಗಳಲ್ಲಿ ಪೂರ್ಣಾವಧಿಯ ಕೃಷಿಕರಾಗಿದ್ದಾರೆ. ದ್ಯಾವನೂರು ಸಂಕಲನದ > ಕತೆಗಳನ್ನು ಗಮನಿಸಿದರೆ ನವ್ಯ ಸಾಹಿತ್ಯ ಚಳುವಳಿಯ ಪರಿಚಯ ಪ್ರೇರಣೆ ಒಂದು ಹಂತದಲ್ಲಿ ಇವರಿಗೆ > ಗಾಢವಾಗಿತ್ತೆಂದು ತಿಳಿದು ಬರುತ್ತದೆ. ಇದರ ಜೊತೆಗೆ ಅರವತ್ತು – ಎಪ್ಪತ್ತರ ದಶಕಗಳಲ್ಲಿ > ಕ್ರಿಯಾಶೀಲವಾಗಿದ್ದ ಲೋಹಿಯಾವಾದಿ ಸಮಾಜವಾದಿ ಯುವಜನ ಸಭಾದ ಚಿಂತನ ಚಟುವಟಿಕೆಗಳು, > ಮೈಸೂರಿನಲ್ಲಿ ವಾಸವಾಗಿದ್ದ ಯು. ಆರ್. ಅನಂತಮೂರ್ತಿ, ಶ್ರೀ ಕೃಷ್ಣ ಆಲನಹಳ್ಳಿ ಇಂತಹ > ಲೇಖಕರೊಡನೆ ಇದ್ದ ಒಡನಾಟ, ಇವೆಲ್ಲವೂ ಮಹಾದೇವರಿಗೆ ಲೇಖಕ ವ್ಯಕ್ತಿತ್ವವನ್ನು > ಹುಡುಕಿಕೊಳ್ಳಲು ನೆರವಾಗಿರಬಹುದು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ‘ನರ’ ಎಂಬ > ಪ್ರತಿಭಟನಾ ಪತ್ರಿಕೆಯ ಸಂಪಾದಕ-ಪ್ರಕಾಶಕರಾಗಿದ್ದರು. 1975ರಲ್ಲಿ ಲೋಕನಾಯಕ ಜಯಪ್ರಕಾಶ > ನಾರಾಯಣರು ಮೈಸೂರಿಗೆ ಬಂದಿದ್ದಾಗ, ಸಾರ್ವಜನಿಕ ಸಭೆಯೊಂದರ ಅಧ್ಯಕ್ಷರಾಗಿದ್ದುದು ಆ ಕಾಲದ > ಇವರ ಆಸಕ್ತಿಯ ಹರವುಗಳನ್ನು ಸೂಚಿಸುತ್ತದೆ. > > ದೇವನೂರ ಮಹಾದೇವ ಅವರ ಸಾಧನೆಗಳನ್ನು ಕನ್ನಡ ಸಾಂಸ್ಕೃತಿಕ ಲೋಕ ಮನಸಾರೆ ಒಪ್ಪಿ ಗೌರವಿಸಿದೆ. > 1984ರಲ್ಲಿ ಕಲ್ಕತ್ತಾದ ಭಾರತೀಯ ಪರಿಷತ್ ಇವರ ‘ಒಡಲಾಳ’ ವನ್ನು ಉತ್ತಮ ಸೃಜನಶೀಲ > ಕೃತಿಯೆಂದು ಗೌರವಿಸಿದೆ. ಅದೇ ವರ್ಷ ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ > ದೊರೆಯಿತು. 1989ರಲ್ಲಿ ಅಮೆರಿಕಾದಲ್ಲಿ ನಡೆದ “ಇಂಟರ್ನ್ಯಾಷನಲ್ ರೈಟಿಂಗ್ > ಪ್ರೋಗ್ರಾಂ”ನಲ್ಲಿ ಮಹಾದೇವ ಭಾಗವಹಿಸಿದರು. 1991ರಲ್ಲಿ ಕುಸುಮ ಬಾಲೆಗೆ ಕೇಂದ್ರ ಸಾಹಿತ್ಯ > ಅಕಾಡೆಮಿ ಪ್ರಶಸ್ತಿ ದೊರಕಿತು. ನಲವತ್ತೊಂದರ ಕಿರಿವಯಸ್ಸಿನಲ್ಲೇ ಕೇಂದ್ರ ಸಾಹಿತ್ಯ > ಅಕಾಡೆಮಿ ಪ್ರಶಸ್ತಿ ಪುರಸ್ಕಾರ ಪಡೆದ ಭಾರತೀಯ ಲೇಖಕರಲ್ಲಿ ಮಹಾದೇವ ಅವರೇ > ಮೊದಲನೆಯವರಿರಬೇಕು. ಇತ್ತೀಚಿನ ವರ್ಷದಲ್ಲಿ ಅವರಿಗೆ ಭಾರತ ಸರ್ಕಾರದ ‘ಪದ್ಮಶ್ರೀ’ ಗೌರವ > ಕೂಡಾ ಸಂದಾಯವಾಯಿತು. ಪ್ರಶಸ್ತಿ ಸ್ವೀಕರಿಸಲು ಕೂಡಾ ಅವರು ಹೋಗಿರಲಿಲ್ಲ. ಅವರ ಮನೆ > ಬಾಗಿಲಿಗೇ ಅದು ಅರಸಿಕೊಂಡು ಬಂತು. ಕಳೆದ ವರ್ಷ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ > ಎಂದು ಕೇಂದ್ರಸರ್ಕಾರದ ವಿರುದ್ಧವಾಗಿ ಹಲವಾರು ಸಾಹಿತಿಗಳು ಪ್ರಶಸ್ತಿ ವಾಪಸ್ > ಮಾಡುತ್ತಿದ್ದ ಅಭಿಯಾನದಲ್ಲಿ ಮಹಾದೇವರೂ ತಮಗೆ ಸಂದಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ > ಗೌರವ ಮತ್ತ ಪದ್ಮಶ್ರೀ ಗೌರವಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದರು. > > ಈ ರೀತಿಯ ಸಾಂಸ್ಥಿಕ ಪ್ರಶಸ್ತಿಗಳೇ ಅಲ್ಲದೆ ದೇವನೂರ ಮಹಾದೇವ ಅವರು ಪಡೆದಿರುವ > ವಿಮರ್ಶಾ-ಪ್ರೀತಿ ಗೌರವ ಕೂಡಾ ತುಂಬಾ ಅಪೂರ್ವವಾದದ್ದು. ಪುತಿನ, ಜಿ.ಎಚ್.ನಾಯಕ, > ಯು.ಆರ್.ಅನಂತಮೂರ್ತಿ, ಯಶವಂತ ಚಿತ್ತಾಲ, ಪಿ. ಲಂಕೇಶ್ ಅಂತಹ ಹಿರಿಯರು ಕೂಡಾ ಈ ವಿಮರ್ಶಾ > ಚರ್ಚೆಯಲ್ಲಿ ಭಾಗವಹಿಸಿದ್ದಾರೆಂಬುದು ಮುಖ್ಯ. ಒಡಲಾಳ, ಕುಸುಮಬಾಲೆ, ಅಮಾಸ – ಈ > ಕೃತಿಗಳೆಲ್ಲಾ ನಾಟಕಗಳಾಗಿ ರೂಪಾಂತರಗೊಂಡು ರಂಗಭೂಮಿಯಲ್ಲಿ ಯಶಸ್ವಿಯಾಗಿವೆ. > > ಹಿಂಸೆ, ದಬ್ಬಾಳಿಕೆ ಕ್ರೌರ್ಯ – ಇವೆಲ್ಲವೂ ನಮ್ಮ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಹಾಸು > ಹೊಕ್ಕಾಗಿವೆಯೆಂದರೆ,ಈ ವಿದ್ಯಮಾನಗಳೆಲ್ಲಾ ನಮಗೆ ಸಹಜವಾಗಿ, ಸರಿಯಾಗಿಯೇ ಕಾಣುತ್ತವೆ. ಇಂತಹ > ಸಮಾಜದಲ್ಲಿ ಲೇಖಕನಾಗುವವನಿಗೆ ಪ್ರತಿಭಟನೆಯ ಬಂಡಾಯದ ಅನಿವಾರ್ಯತೆ ಮತ್ತು ಸಂದಿಗ್ಧತೆ > ತಿಳಿದಿರಬೇಕು. ಇಲ್ಲಿ ಮನುಷ್ಯನಲ್ಲಿ ಪ್ರೀತಿಸುವ ಮತ್ತು ತಿಳಿಯುವ ಶಕ್ತಿಯು ಎಷ್ಟೊಂದು > ಮುಕ್ಕಾಗಿ ಹೋಗಿದೆ ಎಂಬುದನ್ನು ಹೇಳುತ್ತಲೇ, ಈ ಜನವೇ ಪೂರ್ಣವಾಗಿ ಮನುಷ್ಯರಾಗಿ > ಅನಾವರಣಗೊಂಡಾಗ, ಎಷ್ಟೊಂದು ಪ್ರೀತಿಸಬಲ್ಲರು, ಎಷ್ಟೊಂದು ಗಾಢವಾಗಿ ತಿಳುವಳಿಕೆ ಪಡೆಯಬಲ್ಲರು > ಎಂಬುದನ್ನು ಸೂಚಿಸುವ, ಕನವರಿಸುವ ಶಕ್ತಿಯೂ ಇರಬೇಕು. ಮಹಾದೇವರ ಬರವಣಿಗೆ ಪ್ರಾರಂಭಿಕ > ಹಂತದಿಂದಲೂ ಈ ಎಲ್ಲ ಗುಣ ಸ್ವಭಾವಗಳನ್ನು ಬೇರೆ ಬೇರೆ ಸ್ತರದಲ್ಲಿ ಪ್ರಕಟಿಸುತ್ತಾ, > ವಿಕಾಸಗೊಂಡಿದೆ ಎಂಬುದೇ ಅವರ ಸಾಹಿತ್ಯದ ವೈಶಿಷ್ಟ್ಯ ಮತ್ತು ಮಹತ್ವ. ಈ ಕಾರಣಕ್ಕಾಗಿಯೇ > ಮಹಾದೇವ ದಲಿತರ ಬದುಕಿನ ಬಗ್ಗೆ ಬರೆಯುತ್ತಲೇ ಒಟ್ಟು ಸಮಾಜವನ್ನು, ಒಟ್ಟು ಚರಿತ್ರೆಯನ್ನು > ಗ್ರಹಿಸಲು ಅಭಿವ್ಯಕ್ತಿಸಲು ಪ್ರಯತ್ನಿಸುತ್ತಾರೆ. ದಲಿತರು ನಮ್ಮಗಳ ಮನಸ್ಸನ್ನು > ಪರಿಭಾವಿಸುವಷ್ಟು ಪ್ರತ್ಯೇಕರಲ್ಲ ಎಂದು ಸೂಚಿಸುವ ಕ್ರಮ ಕೂಡಾ ಇದಾಗಿರಬಹುದು. > > ಈ ರೀತಿಯ ಗ್ರಹಿಕೆಯ ಸೂಚನೆಗಳೆಲ್ಲಾ ಅವರ ಮೊದಲ ಕಥಾ ಸಂಕಲನದಲ್ಲೇ ಇದೆ. ಗ್ರಸ್ತ, > ಮಾರಿಕೊಂಡವರು ಇಂಥ ಪುಟ್ಟ ಕತೆಗಳಲ್ಲಿನ ಕಥಾ ವಿನ್ಯಾಸವೇ ದೊಡ್ದದಾಗಿದೆ. ಅವುಗಳು > ಒಳಗೊಳ್ಳುವ ಪ್ರಪಂಚದ ವಿಸ್ತಾರ ಮತ್ತು ಸಂಕೀರ್ಣತೆ ಸಾಂಪ್ರದಾಯಕ ಸಣ್ಣಕತೆಯ ಅಳವಿಗೆ > ಮೀರಿದ್ದು. ಗ್ರಸ್ತ ಕತೆಯಲ್ಲಿ ನಿರೂಪಕ, ಆತನ ತಾಯಿ, ಆತನನ್ನು ಓದಿಸಿ ಬೆಳೆಸಿದ ಊರ > ಗೌಡ-ಎಲ್ಲರೂ ಬರವಣಿಗೆಯಲ್ಲಿ ಸಿಕ್ಕಿಹಾಕಿಕೊಂಡವರೆ, ಅಪೂರ್ಣರೇ, ಅವರೊಳಗೆ ಪ್ರೀತಿಸುವ > ಮತ್ತು ಅಷ್ಟೇ ಮುಖ್ಯವಾಗಿ ಸತ್ಯ ಹೇಳುವ ಶಕ್ತಿಯೂ ಇದೆ. ಹೀಗಾಗಿ ದಲಿತನೊಬ್ಬನು ತನ್ನ ಸದ್ಯದ > ಅವಸ್ಥೆಯನ್ನು ಮೀರಲು ಪ್ರಯತ್ನಿಸುತ್ತಲೇ, ತನ್ನ ಪ್ರತಿಭಟನೆ ಮತ್ತು ಪ್ರೀತಿಯಲ್ಲಿ > ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನದ ಕತೆಯೂ ಆಗಿದೆ. ಡಾಂಬರು ಬಂದುದು, ಮೂಡಲ ಸೀಮೆಯ > ಕೊಲೆಗಿಲೆ ಮುಂತಾಗಿ ಮಾರಿಕೊಂಡವರು ಕತೆಗಳ ಪಾತ್ರ ಮತ್ತು ಕಥಾವಿನ್ಯಾಸವೂ ಇದೆ ರೀತಿಯದು. > > ‘ಒಡಲಾಳ’ ಕಥಾನಕವನ್ನು ಕನ್ನಡ ಸಾಹಿತ್ಯ ಲೋಕ ಕ್ಲಾಸಿಕ್ ಎಂದು ಗುರುತಿಸಿಬಿಟ್ಟಿದೆ. > ಸಾಕವ್ವನ ಪರಿವಾರದ ಸದಸ್ಯರೆಲ್ಲಾ ಒಟ್ಟಿಗೆ ಕುಳಿತು ಕಡಲೇಕಾಯಿ ತಿನ್ನುವುದು, ಪುಟ್ಟಗೌರಿ > ನವಿಲು ಬಿಡಿಸುವುದು, ಇಂತಹ ಪ್ರಕರಣಗಳು ಕನ್ನಡ ಓದುಗರ ಸಂವೇದನೆಯಲ್ಲಿ ಶಾಶ್ವತ ಸ್ಥಾನ > ಪಡೆದಿವೆ. ನೂರಾರು ಪ್ರತಿಭಟನಾ ಬಂಡಾಯದ ಕತೆಗಳನ್ನು ಬರೆದರೂ, ಒಡಲಾಳದಂತಹ ಶುದ್ಧಮಾನವ > ಪ್ರೀತಿಯ ಕತೆಯ ಪ್ರಭಾವ ಮುಕ್ಕಾಗಲಾರದು. ಒಡಲಾಳವು ದಲಿತರ, ಬಂಡಾಯದ, ಪ್ರತಿಭಟನೆಯ ಒಡಲಾಳದ > ಕತೆಯೆಂದು ತಿಳಿಯುವ ಮುನ್ನವೇ ಓದುಗ ಸಂವೇದನೆಯ ಸ್ತರದಲ್ಲೇ ದಲಿತರ ಸ್ಥಿತಿಯ ಬಗ್ಗೆ, ಅವರ > ಆಸೆ-ಆಕಾಂಕ್ಷೆಗಳ ಬಗ್ಗೆ ಇತ್ಯಾತ್ಮಕ ಧೋರಣೆಯ ಮನುಷ್ಯನಾಗಿ ಪರಿವರ್ತನೆ ಹೊಂದಿರುತ್ತಾನೆ > ಎಂಬುದೇ ಈ ಕೃತಿಯ ಸಾಧನೆ. ಇಲ್ಲಿಯ ನಿರೂಪಣೆ ಕನ್ನಡ ಕಥನ ಸಾಹಿತ್ಯದ ಇಬ್ಬರು > ಶ್ರೇಷ್ಠಬರಹಗಾರರಾದ ಮಾಸ್ತಿ ಮತ್ತು ಕುವೆಂಪು ಅವರನ್ನು ಮತ್ತೆ ಮತ್ತೆ ನೆನೆಪಿಗೆ > ತರುತ್ತದೆ. ಮಹಾದೇವರ ಈ ಕೃತಿಯಲ್ಲಿ ಹಾಸ್ಯ, ತಮಾಷೆಗಳ ಮೆಲುದನಿಯಿದ್ದರೂ ಅದು > ಕಥಾವಸ್ತುವಿನಲ್ಲಿ ಅಡಕವಾಗಿರುವ ವಿಷಾದ ಭಾವಕ್ಕೆ ಅಡ್ಡಿ ಬರುವುದಿಲ್ಲ. ಈ ಕೃತಿಯಲ್ಲಿ > ಮಹಾದೇವ ಪ್ರತಿಭಟನೆ-ಬಂಡಾಯವೆನ್ನುವುದು ಎಷ್ಟೊಂದು ಪ್ರೀತಿಯ, ಎಷ್ಟೊಂದು ಅಂತಃಕಾರಣದ > ಕ್ರಿಯೆಯೆಂಬುದನ್ನು ಓದುಗರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. > > ‘ಕುಸುಮ ಬಾಲೆ’ ಒಂದು ದೃಷ್ಟಿಯಿಂದ ಕತೆಯ ಹಂಗನ್ನು ತೊರೆದ ಕಾದಂಬರಿ ಎಂದು ಹೇಳಬಹುದು. > ಹಾಗೆಂದರೆ ಕತೆ ಇಲ್ಲವೆಂದಲ್ಲ. ಘಟನೆ ಇಲ್ಲವೆಂದಲ್ಲ. ಲೇಖಕನೇ ಕತೆಯ > ಸ್ವಾರಸ್ಯವನ್ನೆಲ್ಲಾ ಕೇವಲ ಏಳೆಂಟು ವಾಕ್ಯಗಳಲ್ಲಿ ನಾಂದಿ ರೂಪದಲ್ಲಿ ಹೇಳಿ, ಕತೆಯನ್ನು > ಮೀರಿದ್ದಕ್ಕೆ ಓದುಗನನ್ನು ಸಿದ್ಧಗೊಳಿಸುವಂತಿದೆ. ಅಕ್ಕಮಹಾದೇವಿ, ಆಕೆಗೆ ಜೀತದಾಳಿನಿಂದ > ಹುಟ್ಟಿದ ಮಗ ಯಾಡ, ನಂತರ ಅವನು ಬೆಳೆದು ಯಾಡೇಗೌಡನಾಗುವುದು, ಅವನ ಮಗ ಸೋಮಪ್ಪ ಊರಿಗೆ > ದೊಡ್ಡವನು, ಅವನ ಮಗಳು ಕುಸುಮ, ಅವಳಿಗೆ ಚನ್ನನ ಮೂಲಕ ಮಗು, ಚೆನ್ನನ ಕೊಲೆ, ಅದನ್ನು > ಅರಿಯದವರು ಅವನಿಗಾಗಿ ಕಾಯುವ ಪರಿ ಇಷ್ಟು ಕತೆಯ ಹಂದರ. ಈ ಹಂದರ ಪಡೆಯಬಹುದಾದ ಕಾಲಾಂತರದ > ದೇಶಾಂತರದ ಸ್ವರೂಪವೇ ಕೃತಿಯ ಜೀವಾಳ. ಈ ಜೀವಾಳವು ಕತೆಯನ್ನು ಪ್ರವೇಶಿಸಲು ಅನೇಕ > ಕಿಟಕಿಗಳನ್ನು ತೆರೆಯುತ್ತದೆ. ಯಾವ ಕಿಟಕಿಯ ಮೂಲಕ ನೀವು ಕತೆ ಹೊಕ್ಕರೂ ಕೊನೆಗೆ ಅನುಭವಿಸುವ > ಜೀವಂತಿಕೆಯ ಮತ್ತು ವಿಷಾದದ ಭಾವ ಮಾತ್ರ ಬೇರೆ ಬೇರೆಯಾಗುವುದಿಲ್ಲ. ಬೇರೆ ಬೇರೆ > ಸ್ತರಗಳಿಗೆ, ಬೇರೆ ಬೇರೆ ಕಾಲಕ್ಕೆ ಸೇರಿದ ಪಾತ್ರಗಳ ಮೂಲಕ ತನ್ನ ಭಾಷಾ ಪ್ರಯೋಗದ ಮೂಲಕ > ನಿರೂಪಣಾ ವೈವಿಧ್ಯದ ಮೂಲಕ ಓದುಗರನ್ನು ಕೆಣಕುವುದು ಈ ಕೃತಿಯ ಒಂದು ಮುಖ್ಯಗುಣ. > > ಹೀಗೆ ದೇವನೂರು ಮಹಾದೇವರ ಬರವಣಿಗೆ ಎರಡು ದೃಷ್ಟಿಯಿಂದ ಮಹತ್ವದ್ದೆನಿಸುತ್ತದೆ. ಒಂದು ಅವರ > ಕಂದರಿಸಿ ಶೋಧಿಸಿ ಮಂಡಿಸಿದ ದಲಿದ ಲೋಕದ ಅನುಭವ, ಮತ್ತೊಂದು ಅವರು ಹುಡುಕಿದ ಹೊಸ > ಅಭಿವ್ಯಕ್ತಿ ಕ್ರಮಗಳ ಪ್ರಸ್ತುತತೆ. > > ಇತ್ತೀಚಿನ ವರ್ಷದಲ್ಲಿ ದೇವನೂರರ ಹಲವಾರು ಚಿಂತನೆಗಳ ಮೂಸೆಯಲ್ಲಿ ಅರಳಿದ ‘ಎದೆಗೆ ಬಿದ್ದ > ಅಕ್ಷರ’ ಎಂಬ ಕೃತಿ ಪ್ರಕಟಗೊಂಡಿದೆ. ಕಳೆದ ನಾಲ್ಕು ದಶಕಗಳಲ್ಲಿ ದೇವನೂರ ಅವರು ಬರೆದ, > ಆಡಿದ ಮಾತುಗಳನ್ನು ಒಟ್ಟಿಗೆ ಸೇರಿಸಿ ಓದುಗರಿಗೆ ಒಪ್ಪಿಸುವ ಒಂದು ಪ್ರಯತ್ನ ಇದಾಗಿದೆ. > ದೇವನೂರರ ಈ ಬರಹದಲ್ಲಿ ಗಾಂಧಿ, ಅಂಬೇಡ್ಕರ್ ಮತ್ತು ರಾಮಮನೋಹರ ಲೋಹಿಯಾರ ಚಿಂತನೆಗಳು > ಹಾಸುಹೊಕ್ಕಾಗಿವೆ. “ಭಾರತ ಗಾಯಗೊಂಡು ಬಿದ್ದಿದೆ, ಅದರ ಗಾಯ ಅದಕ್ಕೆ ಗಾಯ ಅಂತ > ಅನ್ನಿಸುತ್ತಿಲ್ಲ. ಅಸ್ಪೃಶ್ಯತೆ, ಜಾತಿ, ಮತೀಯತೆಯ ಗಾಯವು ನಂಜಾಗಿ ಮಿದುಳಿಗೇರಿ ಭಾರತ > ಹುಚ್ಚಾಗಿದೆ. ಈ ಗಾಯವನ್ನೇ, ಹುಚ್ಚನ್ನೇ ಸಮಾಜದೊಳಗೆ ಸಂಸ್ಕೃತಿ ಅಂತ, ಪರಂಪರೆ ಅಂತ > ಬಿಂಬಿಸಲಾಗಿದೆ” ಎಂಬ ದೇವನೂರ ಮಹಾದೇವರ ಮಾತುಗಳು ಅವರ ಚಿಂತನೆಗಳ ಆಳದಲ್ಲಿರುವ > ವ್ಯಥೆಗಳನ್ನು, ಕಾಳಜಿಗಳನ್ನು ಸ್ಪಷ್ಟಪಡಿಸುತ್ತವೆ. > > “ದಿನ ಸವೆಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ > ಇಥಿಯೋಪಿಯಾದ ಮಕ್ಕಳು ಬರುತ್ತವೆ. ಕ್ಷಾಮದ ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. > ಅವುಗಳು ನನ್ನನ್ನು ತಿನ್ನುತ್ತವೆ” ಎಂಬ ದೇವನೂರರ ಮಾತುಗಳು ಅವರಿಗೆ ಪ್ರಪಂಚದ ಕುರಿತಾಗಿ > ಇರುವ ಪ್ರೀತಿಯ ಬಗ್ಗೆ ನಮಗೆ ಇನ್ನಿಲ್ಲದಂತಹ ಗಾಢತೆಯನ್ನು ತಲುಪಿಸುತ್ತದೆ. > > ತಮ್ಮ ಬರವಣಿಗೆ, ಸಾಮಾಜಿಕ ಚಿಂತನೆ, ಮುಕ್ತ ಅಭಿಪ್ರಾಯ ಮಂಡನೆ, ಜನಸ್ಪಂದನೆಗಳ ಮೂಲಕ ನಮ್ಮ > ನಡುವಿನ ಅಪೂರ್ವ ವ್ಯಕ್ತಿತ್ವದ ದೇವನೂರ ಅವರನ್ನು ನೆನೆದು ಮನ ಕೃತಜ್ಞತೆಗಳೊಡನೆ > ಹರ್ಷಿತವಾಗುತ್ತದೆ. > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
