June 20, 2017

ದಿನಕ್ಕೊಂದು ಕಥೆ. 455

*🌻ದಿನಕ್ಕೊಂದು ಕಥೆ🌻                                        ಸೋತರೂ ಗೆದ್ದ.*

ಕಳೆದ ತಿಂಗಳಷ್ಟೇ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಬಂದಿದೆ. ಹೆಚ್ಚು ಅಂಕ ಪಡೆದವರೇನೋ
ಸೈನ್ಸು, ಎಂಜಿನಿಯರಿಂಗು, ಮೆಡಿಕಲ್ಲು ಎಂದು ದೊಡ್ಡ ಕಾಲೇಜು ಸೇರಿರುತ್ತಾರೆ. ಇತ್ತ ಕಡಿಮೆ
ಅಂಕ ಪಡೆದವರು, ಫೇಲ್ ಆದವರು ಜೀವನವೇ ಹಾಳಾಯಿತಲ್ಲ ಎಂದು ತಲೆ ಮೇಲೆ ಕೈ ಹೊತ್ತು
ಕುಳಿತಿರುತ್ತಾರೆ. ಆದರೆ ಕೆಲವು ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್
ಹರಿದಾಡಿದ್ದನ್ನು ಅದೆಷ್ಟು ಜನ ಗಮನಿಸಿದರೋ ಗೊತ್ತಿಲ್ಲ.

ದೆಹಲಿ ನಿವಾಸಿ 26 ವರ್ಷದ ವೈಭವ್ ಝಾ, ತಾನು ಪಿಯುಸಿ ಫೇಲಾಗಿದ್ದು, ಮನೆಯವರ, ಅಕ್ಕಪಕ್ಕದವರ
ಟೀಕೆಗೆ ಗುರಿಯಾಗಿದ್ದು, ಕೊನೆಗೆ ತನ್ನ ದಾರಿಯಲ್ಲಿ ತಾನು ನಡೆದು ಯಶಸ್ಸು ಸಾಧಿಸಿದ್ದ
ಬಗ್ಗೆ ಅವರು ಬರೆದಿದ್ದರು. ಅದಕ್ಕೆ ಹಲವು ಜನ ತಮ್ಮ ಅನುಭವವನ್ನೂ ಸೇರಿಸಿ ಪರೀಕ್ಷೆಯಲ್ಲಿ
ಫೇಲಾದರೂ ಜೀವನದಲ್ಲಿ ಸಕ್ಸಸ್ ಪಡೆಯಬಹುದು ಎಂದು ತಿಳಿಸಿದ್ದಾರೆ.

ವೈಭವ್ ಝಾ ಸಹ ಎಂಜಿನಿಯರಿಂಗ್ ಮಾಡಬೇಕು ಎಂದು ಬಯಸಿದ್ದರಂತೆ. ಆದರೆ ಪಿಯುಸಿ ಫಲಿತಾಂಶ ಬಂದ
ಬಳಿಕ ಅವರ ಅಂಕ ಪಟ್ಟಿ ನೋಡಿದ ಪೋಷಕರು, ಸಂಬಂಧಿಕರು ‘ನೀನು ಇಷ್ಟು ಮಾಡಿದ್ದು ಸಾಕು,
ಮುಂದೇನೂ ಮಾಡಬೇಡ’ಎಂದರಂತೆ. ಅಲ್ಲಿಂದ ಜಾಧವ್ ಖಿನ್ನ ಮನಸ್ಕರಾಗಿ ನರಳಿದ್ದರಂತೆ. ‘ಆದರೆ
ಇವರ ಮಾತೇ ನನ್ನ ಏಳಿಗೆಗೆ ಸ್ಫೂರ್ತಿಯಾಗಿ, ಟೀಕೆಗಳೇ ನನ್ನಲ್ಲಡಗಿದ ಶಕ್ತಿಗೆ ಕಿಡಿಯಾಗಿ,
ಬೈಗುಳವೇ ಆಶೀರ್ವಾದವಾಗಿ ನಾನು ಇಂದು ಡಿಸೈನ್ ಹಾಗೂ ಅಡ್ವರ್ಟೈಸ್ ಮೆಂಟ್ ಕಂಪನಿ
ಸ್ಥಾಪಿಸಿದ್ದೇನೆ. ಈಗ ಯಾರೂ ಏನೂ ಎನ್ನುತ್ತಿಲ್ಲ, ಬರೀ ಹೊಗಳಿಕೆಯ ಮಾತುಗಳು
ಕೇಳಿಬರುತ್ತಿವೆ.

ಅಂದು ನಾನು ಎಂಜಿನಿಯರ್ ಆಗಿದ್ದರೆ ಸಂಬಳಕ್ಕೆ ಕೈಯೊಡ್ಡುತ್ತಿದ್ದೆ. ಆದರೆ ಇಂದು ನಾನೇ
ಹಲವರಿಗೆ ಸಂಬಳ ನೀಡುತ್ತಿದ್ದೇನೆ’ಎನ್ನುತ್ತಾರೆ ಝಾ. ಒಂದು ಸೋಲಿಗೆ ಹಿಂದೆ ಸರಿಯಬಾರದು.
ಏಕೆಂದರೆ ಸೋತಾಗಲೇ ಗೆಲುವಿನ ರುಚಿ ತಿಳಿಯುವುದು ಎನ್ನುವ ಝಾ ಮಾತು ನಮಗೂ ಆದರ್ಶವಾಗಲಿ.


ಸಮೀರ ( ಕನ್ನಡ ಭಾಷಾ ಶಿಕ್ಷಕಿ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to