ತುಂಬ ಚೆನ್ನಾಗಿದೆ.

On Jun 17, 2017 10:00 PM, "Sameera samee" <[email protected]> wrote:

> 18ವರ್ಷ ಮೇಲ್ಪಟ್ಟವರು ಮಾತ್ರ ಓದಿ,ಯಾಕೆಂದರೆ ಅವರಿಗೆ ಮಾತ್ರ ಅರ್ಥವಾಗುವುದು ಈ ನಿಜಾಂಶ!
>
> ಬೆಳಗ್ಗಿನ ಜಾವ,ಆಫೀಸಿಗೆ ಹೊರಡಬೇಕಾಗಿದೆ ನಾನು!
>
> ದಿನಪತ್ರಿಕೆಯನ್ನು ಎತ್ತಿ ನೋಡುತ್ತಿರುವೆನು,ಪುಟದ ಭಾವಪೂರ್ಣ ಶ್ರದ್ಧಾಂಜಲಿಯಲ್ಲಿ ನನ್ನ
> ಪಟ!
> ಅಯ್ಯೋ...
>
> ಏನಾಯಿತು ನನಗೆ?
>
> ನಾನು ಸೌಖ್ಯವಾಗಿ ತಾನೆ ಇರುವೆನು?
>
> ಒಂದು ನಿಮಿಷ ಯೋಚಿಸಿದೆನು!
>
> ನಿನ್ನೆಯ ರಾತ್ರಿ ಮಲಗುವಾಗ ಎದೆಯಲ್ಲಿ ಕಠಿಣವಾದ ನೋವುಂಟಾಯಿತು,ತದನಂತರ ಏನು
> ತೋಚಲಿಲ್ಲಾ,ನನಗೆ ಗಾಢವಾದ ನಿದ್ರೆ ಎಂದು ಭಾವಿಸಿದೆನು!
>
> ಕಾಫಿ ಬೇಕಲ್ಲಾ,ನನ್ನ ಮಡದಿ ಎಲ್ಲಿ?ಸಮಯ ಹತ್ತಾಯಿತು!
>
> ಅದ್ಯಾರಲ್ಲಿ?ಮಂಚದಲಿ ಕಣ್ಣಮುಚ್ಚಿ ಆಯಾಸದಿಂದ?
> ಅಯ್ಯೋ...ನಾನೇ,
>
> ಆಗಾದರೇ ನಾನು ಸತ್ತುಹೋದೆನಾ?ಕಿರುಚಿದೆನು!
>
> ನನ್ನ ಕೋಣೆಯ ಹೊರಗೆ ಗುಂಪುಗುಂಪಾಗಿ ಜನರ ಸಮೂಹ,ಸಂಬಂಧಿಕರು,ಸ್ನೇಹಿತ ವೃಂದದವರು
> ನೆರೆದಿದ್ದರು!
>
> ಹೆಂಗಸರೆಲ್ಲಾ ಅಳುತ್ತಿದ್ದರು,ಗಂಡಸರೆಲ್ಲಾ ಮೌನಾಚರಣೆಯಿಂದ ಮೂಕವಾಗಿ ನಿಂತಿರುವರು!
>
> ಬೀದಿ ಜನರೆಲ್ಲಾ ನನ್ನ ದೇಹವ ನೋಡಿ ಹೋಗುತ್ತಿರುವರು,ನನ್ನ ಹೆಂಡತಿಗೆ ಕೆಲವರು ಸಮಾಧಾನ
> ಪಡಿಸುತ್ತಿರುವರು,ನನ್ನ ಮಗನನ್ನು ಅಪ್ಪಿಕೊಂಡು ಅಳುತ್ತಿರುವರು!
>
> ನಾನು ಸತ್ತಿಲ್ಲಾ,ಇಲ್ಲೇ ಇರುವೆನು ಎಂದು ಕಿರುಚಿದೆನು!
>
> ಆದರೆ ನನ್ನ ಧ್ವನಿ ಯಾರಿಗೂ ಕೇಳಿಸಲಿಲ್ಲಾ,
>
> ನನ್ನ ದೇಹ ಸನಿಹದಲ್ಲಿ ನಿಂತಿರುವುದು ಕೂಡ ಯಾರಿಗೂ ಕಾಣಿಸುತ್ತಿಲ್ಲಾ!
>
> ಅಯ್ಯೋ ದೇವರೆ,!ಏನು ಮಾಡಲಿ ನಾನು?
> ಹೇಗೆ ಅವರಿಗೆ ಕಾಣಲ್ಪಡುವೆನು ನಾನು?
>
> ನಾನು ಮತ್ತೊಮ್ಮೆ ನನ್ನ ಕೋಣೆಗೆ ನಡೆದೆ,"ನಾನು ಸತ್ತು ಹೋದೆನಾ"?ನಾನು ನನ್ನೇ
> ಕೇಳಿದೆ,ಸಾವು ಹೀಗೆ ಇರುವುದಾ?
>
> ನನ್ನ ಮಡದಿಯೂ,ಅಮ್ಮ,ಅಪ್ಪನೂ ಮತ್ತೊಂದು ಕೋಣೆಯಲ್ಲಿ ಅಳುತ್ತಿರುವರು,!ನನ್ನ ಮಗನಿಗೆ
> ಏನಾಯಿತೆಂದು ಕೂಡ ತಿಳಿಯಲಿಲ್ಲಾ,ಮನೆಯವರೆಲ್ಲಾ ಅಳುತ್ತಿರುವುದನ್ನು ಕಂಡು ಅವನೂ ಕೂಡ
> ಅಳುತ್ತಿರುವನು.!
>
> ನಾನು ಅವನನ್ನು ತುಂಬಾ ಪ್ರೀತಿಸುವೆನು,ಅವನನ್ನು ಬಿಟ್ಟು ನಾ ಎಂದಿಗೂ ಇರಲಾರೆ,ನನ್ನ ಮಡದಿ
> ನನ್ನ ಮೇಲೆ ಅತಿಯಾದ ಪ್ರೀತಿಯೂ,ಸಹನೆಯೂ ಉಳ್ಳವಳು!ನಾನು 'ತಲೆನೋವು' ಎಂದರೆ ಸಾಕು ಅವಳು
> ಅತ್ತೇ ಬಿಡುವಳು!ಅವಳನ್ನು ಬಿಟ್ಟು ಬಂದೆನೆಂದು ಮನದಲ್ಲಿ ಕೂಡ ನೆನೆಯಲಾಗುತ್ತಿಲ್ಲಾ,!
>
> ಅಮ್ಮಾ,ನಾನು ಒಂದು ಮಗುವಿಗೆ ಅಪ್ಪನಾಗಿದ್ದರೂ ಕೂಡ ನನ್ನನ್ನು ಮಗುವಾಗಿಯೇ
> ಕಾಣುತ್ತಿದ್ದವಳು ನನ್ನವ್ವ!ಅಪ್ಪ ಗಂಭೀರವಾಗಿದ್ದರೂ ಕೂಡ,ಅವರಾಡೋ ಒಂದೊಂದು ಮಾತು ಸಹನೆಯಿಂದ
> ಕೂಡಿರುತ್ತಿದ್ದವು!
> ಇದೋ,ಒಂದು ಮೂಲೆಯಲ್ಲಿ ನಿಂತು ಅಳುತ್ತಿರುವನು
>  ಅಯ್ಯೋ,...ನನ್ನ ಸ್ನೇಹಿತ! ಸೇಡನ್ನು ಮರೆತು ಬಂದಿರುವನೇ?ಕೆಲ ಕಾದಾಟಗಳು ನಮ್ಮನ್ನು
> ಒಂದಾಗಿರಲು ಬಿಡಲಿಲ್ಲಾ,ಇಬ್ಬರು ಮಾತನಾಡಿ ಎರಡು ವರ್ಷಕ್ಕಿಂತ ಮೇಲಾಯಿತು!ಅವನಲ್ಲಿ
> ಕ್ಷಮಾಪಣೆ ಕೇಳಲು ತೋಚಿತು,!
>
> ಪಕ್ಕದಲ್ಲಿ ಹೋಗಿ ಅವನನ್ನು ಕರೆದೆನು,ಆದರೆ ನನ್ನ ಧ್ವನಿ ಅವನಿಗೆ ಕೇಳಿಸಲಿಲ್ಲಾ,ನನ್ನ
> ದೇಹವ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿರುವನು,!
>
> ಹೌದು,ನಾನು ಸತ್ತು ಹೋದೆನೆ?,ಪಕ್ಕದಲ್ಲಿದ್ದ ದೇವರ ಪಟವ ನೋಡುತ್ತಾ...
>
> ಓ ದೇವರೇ!,ನನಗೆ ಇನ್ನೂ ಕೆಲವು ದಿನಗಳು ಕೊಡಿ!ನಾನು ನನ್ನ ಮಡದಿ,ಹೆತ್ತವರು,ಸ್ನೇಹಿತರಲ್ಲಿ
> ಎಷ್ಟು ಪ್ರೀತಿ ಇಟ್ಟಿರುವೆನೆಂದು ತೋರಿಸಬೇಕು.
> ನನ್ನ ಮಡದಿ ಇರುವ ಕೋಣೆಗೆ ನಡೆದೆ,ನೀ ಬಹಳ ಸುಂದರವಾಗಿರುವೆ ಎಂದು ಕಿರುಚಿದೆನು,ಅವಳಿಗೆ
> ನನ್ನ ಮಾತಗಳು ಕೇಳಿಸಲೇ ಇಲ್ಲಾ!ನಿಜ ಜೀವನದಲ್ಲಿ ನನ್ನ ಹೆಂಡತಿಯನ್ನು ಒಂದು ಸಲವೂ ಹಾಗೇ
> ಹೇಳೇ ಇರಲಿಲ್ಲಾ!
>
> ದೇವರೇ!,ಎಂದು ಕಿರುಚಿದೆನು,ಜೋರಾಗಿ ಅತ್ತೆನು,ದಯವಿಟ್ಟು ಮತ್ತೊಂದು ಅವಕಾಶ,ನನ್ನ ಮಗನ
> ಅಪ್ಪಿಕೊಳ್ಳಲು,ನನ್ನ ತಾಯಿಯ ಮುಖದಲ್ಲಿ ಮತ್ತೆ ಸಂತೋಷವ ತರಲೂ,ನನ್ನ ಸ್ನೇಹಿತನಲ್ಲಿ ಕ್ಷಮೆಯ
> ಕೇಳಲು,ಈಗ ನಾನು ಅತ್ತೆನು!
>
> ದಿಢೀರೆಂದು ನನ್ನ ದೇಹವ ಎಬ್ಬಿಸುವಂತೆ ಭಾಸವಾಯಿತು,ರೀ ಕಣ್ಣಾ ಬಿಡ್ರೀ,ನಿದ್ದೆಯಲ್ಲಿ ಏನದು
> ಗೊಣಗಲು?,ಕನಸ್ಸು ಏನಾದರೂ ಕಂಡೀರಾ?ಎಂದಳು ಹೆಂಡತಿ!
>
> ಹೌದು...ಬರೀ ಕನಸ್ಸು...ನೆಮ್ಮದಿಯಾದೆ!!!
> ನನ್ನ ಮಡದಿಯಲ್ಲಿ ನಾನು ಮಾತನಾಡುವುದನ್ನು ಈಗ ಕೇಳಬಹುದು,ನನ್ನೀ ಜೀವನದಲ್ಲಿ ಮರೆಯಲಾಗದ
> ಸಂಧರ್ಭ!
>
> ಬೆವತಿದ್ದ ನನ್ನ ಮುಖವ,ಬಟ್ಟೆಯೊಂದನ್ನೆತ್ತಿ ಒರೆಸುತ್ತಿರುವಳು ನನ್ನವಳು!ಹಾಗೆಯೇ ಅವಳನ್ನು
> ಅಪ್ಪಿಕೊಂಡು ನೀನೆ ಈ ಪ್ರಪಂಚದಲ್ಲಿಯೇ ಸೌಂದರ್ಯವತಿ,ಎಂದೆನು ಮೊಟ್ಟ ಮೊದಲ ಬಾರಿಗೆ!
> ಮೊದಲಿಗೆ ಅರಿವಾಗದೆ ಕಣ್ಣುಬಿಟ್ಟ ಅವಳು ನನ್ನನ್ನು ಬಿಗಿಯಾಗಿ ಅಪ್ಪಿಕೊಂಡಳು,ಅವಳ
> ಕಣ್ಣಂಚಿನಲ್ಲಿ ಕಂಬನಿ ಹೊರಬರುತ್ತಿತ್ತು,ಅರಿವಾಯಿತು ನನಗೆ ಆನಂದ ಕಣ್ಣೀರೆಂದು...!
>
> ಈ ಎರಡನೇ ಅವಕಾಶ ಕೊಟ್ಟ ದೇವರಿಗೆ ಧನ್ಯವಾದಗಳು!
>
> ಇನ್ನೂ ನಿಮಗೆ ಸಮಯವಿದೆ,ನಿಮ್ಮ ಈಗೋವನ್ನು ಕಿತ್ತು ಬಿಸಾಡಿ,ನಿಮ್ಮ ಅಂತರಾಳದಲ್ಲಿರುವ
> ಪ್ರೀತಿಯನ್ನೂ,ಸಹನೆಯನ್ನೂ ಇತರರಲ್ಲಿ ಹಂಚಿಕೊಳ್ಳಿ
>  ಯಾಕೆಂದರೆ ಪ್ರೀತಿ ಮತ್ತು ಸಹನೆಯನ್ನು ಹಂಚಿಕೊಳ್ಳಲು ನಿಮಗೆ ಎರಡನೇ ಅವಕಾಶ
> ಸಿಗದಿರಬಹುದು...!
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to