#ಶಿಕ್ಷಕರ_ಸಂತೃಪ್ತಿ ( ಈ ಪೋಸ್ಟ್ ಕೇವಲ ಶಿಕ್ಷಕರಿಗೆ #ಸಮರ್ಪಣೆ 🙏🙏🙏 )
🙏🙏🙏 #ಒಬ್ಬ_ಶಿಕ್ಷಕರನ್ನು_ವಿಧ್ಯಾರ್ಥಿ_ಕೇಳಿದನು .. ಸರ್ ನೀವು ಕಲಿಸುತ್ತಿರುವ ವಿದ್ಯೆಯಿಂದ ನಾವು ಬಹಳ ಉನ್ನತ ಸ್ಥಾನಕ್ಕೆ ಸೇರಿಕೊಂಡಾಗ , ನಿಮಗೆ ಅಸೂಯೆ ಅಗುವುದಿಲ್ಲವೆ , ಏಕೆಂದರೆ ನೀವೂ ಸೇರಿಕೊಳ್ಳದ ಸ್ಥಾನಕ್ಕೆ ನಾವು ಸೇರಿಕೊಂಡಿದ್ದೆವೆ.. ನೀವು ಮಾತ್ರ ಇದೇ ತರಹ ಜೀವನ ಪರ್ಯಂತ ಇರುತ್ತೀರ.. ಇದರಿಂದ ನಿಮಗೆ ನೋವು ಆಗುವುದಿಲ್ಲವೇ.. ? ಎಂದು ಕೇಳಿದನು.. ವಿಧ್ಯಾರ್ಥಿ ಕೇಳಿದ ಪ್ರಶ್ನೆಗೆ ಶಿಕ್ಷಕರು ಸ್ವಲ್ಪ #ತರ್ಕಬದ್ಧವಾಗಿ ಹೇಳಿದರು.. #ಐವತ್ತು_ಅಂತಸ್ತುಗಳ ಕಟ್ಟಡವನ್ನು ಯಾರು ಕಟ್ಟುತ್ತಾರೆ.. ಐವತ್ತು ಅಡಿಗಳ ಮನುಷ್ಯ ಅಲ್ಲ ತಾನೇ. ಅರು ಅಡಿಗಳ ಒಳಗಡೆ ಇರುವ ಮನುಷ್ಯ ಐವತ್ತು ಅಂತಸ್ತಿನ ಕಟ್ಟಡವನ್ನು ಕಟ್ಟುತ್ತಾನೆ. ಐವತ್ತು ಅಂತಸ್ತುಗಳ ಕಟ್ಟಡವನ್ನು ಕಟ್ಟಲು ಐವತ್ತು ಅಡಿ ಮನುಷ್ಯ ಬೇಕೆಂದರೆ ಹೇಗೆ ? #ಎಷ್ಟೋ ಜನರಿಗೆ ನೆರಳು ಕೊಡುವ #ಮರ ತನಗೆ ನೆರಳು ಇಲ್ಲ ಅಂದರೆ ಈ ಸೃಷ್ಟಿಯಲ್ಲಿ ಇರುವ ಪ್ರಕೃತಿಗೆ ಅರ್ಥವಿಲ್ಲ.. ತನ್ನ ನೆರಳು ಬಗ್ಗೆ ಯೋಚನೆ ಮಾಡದೆ ಇದ್ದರೆ ತಾನೆ ಹತ್ತಾರು ಜನರಿಗೆ ನೆರಳು ಕೊಡಲು ಸಾಧ್ಯ... ತನ್ನ ನೆರಳಿನಲ್ಲಿ ಎಷ್ಟೋ ಜನ ಉನ್ನತಿ ಹೊಂದಿದರು.. ಅವರ ಉನ್ನತಿಯೇ ತನ್ನ ಸಾಧನೆ ಎಂದು ಸಂತೃಪ್ತಿ ಹೊಂದಿದರೆ ಅದಕ್ಕಿಂತ ಮಿಗಿಲಾದ ಅನಂದ ಮತ್ತೊಂದಿಲ್ಲ... ಅದನ್ನೇ ನಾನು ಅನುಭವಿಸುತ್ತೇನೆ ಎಂದು ಶಿಕ್ಷಕರು ಹೇಳಿದರು "Being a Teacher" ✍✍✍✍✍✍✍✍✍✍✍ -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
