💥ಗುರುಪೂರ್ಣಿಮೆ ಎಂದರೇನು?
🌹ಗುರು,ಸದ್ಗುರು,ಜಗದ್ಗುರುವನ್ನು ಸ್ಮರಿಸಿ,ಧ್ಯಾನಿಸಿ,ಪೂಜಿಸಿ ಗುರುವಂದನೆಯನ್ನು
ಮಾಡುವುದೇಗುರುಪೂರ್ಣಿಮೆ.
ಪೂರ್ಣಿಮೆಯ ದಿವಸ(ಗ್ರೀಷ್ಮ ಋತು ಆಶಾಡ ಮಾಸದ ಶುದ್ಧ ಪೂರ್ಣಿಮೆ ದೇವಾನು ದೇವತೆಗಳು ತಮ್ಮ
ಗುರುಗಳನ್ನು ಪೂಜಿಸುವ ದಿವಸ,
ಉದಾಹರಣೆಗೆ ಶ್ರೀರಾಮನು ವಿಶ್ವಾಮಿತ್ರರನ್ನು,ಶ್ರೀಕೃಷ್ಣನು
ಸಾಂದೀಪಿನಿಯವರನ್ನು,ಶ್ರೀವಿಷ್ಣುವು ಮೃಗುಮಹರ್ಷಿಗಳನ್ನು ದೇವಾನು ದೇವತೆಗಳು
ಬೃಹಸ್ಪತಿಗಳನ್ನು ಪೂಜಿಸುತ್ತಾರೆ, ಆ ದಿವಸ ವ್ಯಾಸಪೂರ್ಣಮಿ ಅಥವಾ ಗುರುಪೂರ್ಣಿಮಿ.
ಗುರುಪೂರ್ಣಿಮ ಮಹತ್ವ🌹
ಗುರುಗಳಿಗೆ ಈ ಕೆಳಕಂಡ ರೀತಿಯಲ್ಲಿ ತಪ್ಪುಮಾಡಿದ್ದರೆ:-
1.ಗುರುಗಳನ್ನು ಬೈದಿದ್ದರೆ ಹಾಗೂ ಗುರುಗಳ ಸ್ಥಾನಮಾನ ಕೀರ್ತಿಗೆ ಕಳಂಕ ತಂದಿದ್ದರೆ,
2.ಗುರುಗಳ ಎದುರುನಿಂತು ಅಥವಾ ಬೇರೆಯವರ ಮುಂದೆ ಅವಮಾನ ಮಾಡಿದ್ದರೆ,
3.ಗುರುಗಳ ವಚನವನ್ನು ಅಗೌರವದಿಂದ ತಿರಸ್ಕಾರ ಮಾಡಿದ್ದರೆ,
4. ಗುರುಗಳಬಗ್ಗೆ ಅಪಪ್ರಚಾರಮಾಡಿದ್ದರೆ ಅಥವಾ ಅನುಮಾನದಿಂದ-ಸಂಶಯದಿಂದ ನೋಡಿದ್ದರೆ,
5.ಗುರುಗಳಬಗ್ಗೆ ಪರೀಕ್ಷೆ ನಡೆಸಿದ್ದರೆ,
6.ಗುರುಗಳ ಸ್ಥಾನಮಾನಗಳಿಗೆ ಕಳಂಕವನ್ನು ತಂದಿದ್ದರೆ,
7.ಗುರುಗಳ ವಸ್ತ್ರ,ಪುಸ್ತಕ,ಇನ್ನಿತರ ವಸ್ತುಗಳನ್ನು ಕದ್ದಿದ್ದರೆ,
8.ಗುರುಗಳ ಪತ್ನಿ,ಪುತ್ರ,ಪುತ್ರಿಯರನ್ನು ಕಾಮದೃಷ್ಠಿಯಿಂದ ನೋಡಿದ್ದರೆ,ನಿಂದಿಸಿದರೆ,
9.ಗುರುಗಳ ಮನೆಯಲ್ಲಿ ಕಳ್ಳತನಮಾಡಿದ್ದರೆ, ಅನಗತ್ಯ ತರ್ಕವನ್ನು ಮಾಡಿದ್ದರೆ,
10,ಗುರುಗಳ ಅಪ್ಪಣೆಯಿಲ್ಲದೆ ವಿದ್ಯೆ ಕಲಿಸಿದ್ದರೆ-ಮಾರಾಟ ಮಾಡಿದ್ದರೆ
11,ಗುರುಗಳಿಗೆ ದುಃಖಕ್ಕೀಡು ಮಾಡಿದ್ದರೆ,
12,ಗುರುಗಳಿಗೆ ಹೊಡೆದಿದ್ದರೆ,ರಹಸ್ಯ-ಗುಪ್ತ ವಿಚಾರಗಳನ್ನು ಬೇರೆಯವರಿಗೆ ತಿಳಿಸಿದ್ದರೆ,
13.ಗುರುಗಳಿಗೆ ಆಶ್ರಮದಿಂದ ಹೂರಹಾಕಿದ್ದರೆ,ಅವರ ಮೃತ್ಯುವಿಗೆ ಕಾರಣವಾಗಿದ್ದರೆ,
14.ಗುರುಗಳಕೈಲಿ ನಮಸ್ಕಾರ ಮಾಡಿಸಿಕೂಂಡರೆ,ಕೆಲಸ ಮಾಡಿಸಿಕೂಂಡಿದ್ದರೆ,
15.ಗುರುಗಳಿಗೆ ಎಂಜಲು ತಿನ್ನಿಸಿದ್ದರೆ,ಉಗುಳಿದ್ದರೆ,ಮಾಟ ಮಂತ್ರ ಮಾಡಿಸಿ ತೊಂದರೆ
ಕೊಟ್ಟಿದ್ದರೆ,
ಮೇಲ್ಕಂಡ ಯಾವುದೇ ತಪ್ಪುಗಳನ್ನು ಈ ಜನ್ಮ ಅಥವಾ ಹಿಂದಿನ ಜನ್ಮಗಳಲ್ಲಿ ಮಾಡಿದ್ದರೆ ಅಂತಹವರು
ಅವಿದ್ಯಾವಂತರಾಗಿ,ಗುರು ಚಾಂಡಾಲದೋಶ ಸಹಿತರಾಗಿ,ರಾಹು ಚಂಡಾಲ ದೋಶಸಹಿತರಾಗಿ ಪ್ರಾಣಿ ಜನ್ಮ
ಪಡೆಯುತ್ತಾರೆಂದು ಗರ್ಗ ಸಂಹಿತೆ,ಭವಿಷ್ಯತ್ ಪುರಾಣ,ಶ್ರೀ ದತ್ತಾತ್ರೇಯ ಕಾತ್ಯವೀರ್ಯಾರ್ಜುನ
ಸಂವಾದ,ಅವಧೂತ ಗೀತೆ,ಗುರುಗೀತೆ,ಸಿದ್ದನಾಗಾರ್ಜುನ ತಂತ್ರಸಾರ,ಶ್ರೀ ದತ್ತಾತ್ರೇಯ
ಸಂಹಿತೆ,ಮತ್ತು ಗರುಡ ಪುರಾಣದಲ್ಲಿ ಉಲ್ಲೇಖವಿದೆ.🙏
ಈ ಎಲ್ಲಾ ದೋಷಗಳನ್ನು ಪರಿಹರಿಸಿಕೊಳ್ಳಲು ಬರುವ ಒಂದು ವಿಶೇಷ ದಿನವೇ ಗುರುಪೂರ್ಣಿಮಿ.�
ಗುರು ಬೃಹ್ಮಾ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ ಪರಬೃಹ್ಮಾ ತಸ್ಮೈಶ್ರೀ
ಗುರುವೇನಮಹಃ.....!
ನನ್ನ ಅನಿಸಿಕೆ ತಪ್ಪಿದ್ದರೆ ದಯವಿಟ್ಟು ಕ್ಷಮೆ ಇರಲಿ .....
ಜನ್ಮ ಕೊಟ್ಟ ತಂದೆ ತಾಯಿ
ಹಾಗೂ ವಿಧ್ಯೇ ಕಲಿಸಿ ನಮಗೊಂದು ಜೀವನ ರೂಪಿಸಿಕೊಳ್ಳಲು ನೆರವಾದ ಗುರುಗಳಿಗೆ ಎಂದು
ಸಹ ಮೋಸ ಮಾಡಬಾರದು , ಹಾಗೂ ಅವರ ನಂಬಿಕೆಗೆ ದ್ರೋಹ ಬಗೆಯ ಬಾರದು ....
ಅಕ್ಷರ ಕಲಿಸಿದ ಗುರುವಿಗೆ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ , ನಮ್ಮನ್ನು
ತಿದ್ದಿ , ತೀಡಿ , ಬುದ್ಧಿಶಕ್ತಿಯನ್ನು ಹೆಚ್ಚಿಸಿದ ಗುರುಗಳು , ಮನೆಯಲ್ಲಿ ಎಷ್ಟೇ
ಬೇಸರವಾಗಿದ್ದರು ತನ್ನ ಶಿಷ್ಯರನ್ನು ನೋಡಿದ ಕೂಡಲೇ ಎಲ್ಲವನ್ನೂ ಮರೆತು ಮಗುವಿನಂತೆ
ಮಕ್ಕಳೊಂದಿಗೆ ಬೆರೆತು ತನ್ನ ಪ್ರೀತಿಯನ್ನು ಹಂಚಿ , ಮಕ್ಕಳಿಗೆ ಖುಷಿ ಕೊಡುವ , ಬಾಂಧವ್ಯ
ಬೆಸೆಯುತ್ತಾ , ನಮ್ಮನ್ನು ಬುದ್ಧಿವಂತ ರನ್ನಾಗಿ ಮಾಡುವ ಮನುಷ್ಯ ರೂಪದ ಸಾಕ್ಷಾತ್
ಪರಬ್ರಹ್ಮ ಸ್ವರೂಪದ ನಮ್ಮ ಗುರುಗಳ ಪಾದಗಳಿಗೆ ಸಾಷ್ಟಾಂಗ ಪ್ರಣಾಮಗಳನ್ನು ಸಮಾಜದ
ಪ್ರತಿಯೊಬ್ಬ ಪ್ರಜೆಯೂ ಸಲ್ಲಿಸಬೇಕೆಂದು ತಮ್ಮಲ್ಲಿ ವಿನಂತಿಸಿ ಕೊಳ್ಳುತ್ತಿದ್ದೇನೆ
........
ಗುರುಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.......
.......✍✍✍✍.........
💐💐🙏🤝🙏💐💐
💐💐🙏🤝🙏💐💐
ಗುರು ಬ್ರಹ್ಮಾ ಗುರು ವಿಷ್ಣು ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ
ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೆ ನಮಃ
ಸಮೀರ ( ಕನ್ನಡ ಭಾಷಾ ಶಿಕ್ಷಕಿ
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
-http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
For more options, visit https://groups.google.com/d/optout.