On 04-Sep-2017 21:52, "prabhulingaswami hiremath" < [email protected]> wrote:
> On 03-Sep-2017 11:41, "Anasuya M R" <[email protected]> wrote: > >> ಒಮ್ಮೆತಪ್ಪದೇ ಓದಿರಿ. ನಿಮಗೂ ಉಪಯೋಗ ಆಗಬಹುದು. >> >> ಡಾಕ್ಟರ ಅಂದರೆ ಹೇಗಿರಬೇಕು ಗೊತ್ತಾ !!! >> >> ಕಳೆದ ಶತಮಾನದಲ್ಲಿ ಶಿವಮೊಗ್ಗ ನಗರದಲ್ಲಿದ್ದ ಡಾ॥ಕೃಷ್ಣಮೂರ್ತಿ ಎಂಬ ಜನಪ್ರಿಯ >> ವೈದ್ಯರನ್ನು ಕಾಣಲು ದೂರದ ಮದರಾಸಿನಿಂದ ರಾಮನಾಥ ಚೆಟ್ಟಿಯಾರ್ ಮತ್ತು ಅವರ ಮಗಳು >> ಮುತ್ತುಲಕ್ಷ್ಮಿ ಎಂಬುವವರು ಬಂದರು. ಚೆಟ್ಟಿಯಾರರು ತಮ್ಮ ಮಗಳು ಒಪ್ಪಿದ ಹುಡುಗನೊಡನೆ ಒಂದು >> ವರ್ಷದ ಹಿಂದೆ ಆಕೆಯ ಮದುವೆ ಮಾಡಿದ್ದರು. ಮದುವೆಯಾದ ಸ್ವಲ್ಪ ದಿವಸಕ್ಕೆ ಅವಳಿಗೆ ವಿಪರೀತ >> ತಲೆನೋವು ಶುರುವಾಯಿತು. ಅದರಿಂದ ಅವಳ ಜೀವನವು ದುರ್ಭರವಾಯಿತು. ತಂದೆ ಅವಳನ್ನು ಮದರಾಸಿನ >> ಅನೇಕ ಪ್ರಸಿದ್ಧ ವೈದ್ಯರುಗಳಿಗೂ, ವೆಲ್ಲೂರಿನ ಜಗತ್ಪ್ರಸಿದ್ಧ ಆಸ್ಪತ್ರೆಗೂ ಕರೆದುಕೊಂಡು >> ಹೋಗಿ ತೋರಿಸಿದ್ದರು. ಎಲ್ಲೂ ಪ್ರಯೋಜನವಾಗಲಿಲ್ಲ. ಅವಳನ್ನು ಪರೀಕ್ಷಿಸಿದ ವೈದ್ಯರುಗಳು >> ಅವಳಿಗೆ ಯಾವ ಖಾಯಿಲೆಯೂ ಇಲ್ಲವೆನ್ನುತ್ತಿದುದೂ ನಿಜ! >> >> ಆದರೆ ಆಕೆಗೆ ಸಹಿಸಲಾಗದಷ್ಟು ತಲೆನೋವು ಇರುತ್ತಿದುದೂ ನಿಜ! ಚೆಟ್ಟಿಯಾರರು >> ಹತಾಶರಾಗಿದ್ದಾಗ ಸ್ನೇಹಿತರೊಬ್ಬರು ಈ ವೈದ್ಯರ ಬಗ್ಗೆ ಹೇಳಿ, ಅವರು ಎಂತೆಂತಹುದೋ >> ಖಾಯಿಲೆಗಳನ್ನು ವಾಸಿಮಾಡಿದ್ದಾರಂತೆ. ಒಮ್ಮೆ ಅವರಿಗೂ ತೋರಿಸಿ ನೋಡಿ ಎಂದಿದ್ದರು. ತಕ್ಷಣ >> ಚೆಟ್ಟಿಯಾರ್ರವರು ಮಗಳನ್ನು ಕರೆದುಕೊಂಡು ಕಾರಿನಲ್ಲಿ ಶಿವಮೊಗ್ಗಕ್ಕೆ ಧಾವಿಸಿದ್ದರು. >> ಚೆಟ್ಟಿಯಾರರು ಹೇಳಿದ ವಿವರಗಳನ್ನೆಲ್ಲಾ ಡಾ॥ಕೃಷ್ಣಮೂರ್ತಿಯವರು ಶಾಂತವಾಗಿ ಕೇಳಿಸಿಕೊಂಡರು. >> ಆನಂತರ ಮುತ್ತುಲಕ್ಷ್ಮಿಯ ಮದುವೆಗೆ ಮುಂಚಿನ ಆರೋಗ್ಯದ ಬಗ್ಗೆ ಕೆಲವು ಪ್ರಶ್ನೆಗಳನ್ನು >> ಕೇಳಿದರು. >> >> ಚೆಟ್ಟಿಯಾರರು ಮದುವೆಗೆ ಮುಂಚೆ ಅವಳ ಆರೋಗ್ಯ ಬಹಳ ಚೆನ್ನಾಗಿತ್ತು ಎಂದರು. ನಂತರ ವೈದ್ಯರು >> ಮುತ್ತುಲಕ್ಷ್ಮಿಯ ಕಡೆ ತಿರುಗಿ ಮಗೂ, ನಿನ್ನ ಮೂಗುಬೊಟ್ಟನ್ನು ತೆಗೆದು ನನಗೆ ಕೊಡುತ್ತೀಯಾ? >> ಎಂದರು. ಈ ವಿಚಿತ್ರ ಬೇಡಿಕೆಗೆ ಆಕೆ ಅವಾಕ್ಕಾದಳು. ಆದರೂ ತಂದೆಯವರು ಕೊಡಲು ಸೂಚಿಸಿದಾಗ >> ಅವಳು ಮೂಗುತಿಯನ್ನು ತೆಗೆದು ಕೊಟ್ಟಳು. ಆನಂತರ ವೈದ್ಯರು ಹೊರಗೆ ಹೋಗಿ ಸ್ವಲ್ಪ ಹೊತ್ತು >> ಸುತ್ತಾಡಿ ಬಾರಮ್ಮಾ ಎಂದರು. ಆಕೆ ಮರುಮಾತನಾಡದೆ ಹೊರನಡೆದಳು. ಹೊರಗಡೆ ಬಂದ ಮುತ್ತುಲಕ್ಷ್ಮಿ >> ಹಸಿರು ಗಿಡ-ಮರ, ಅಂದದ ಹೂವು-ಹಕ್ಕಿಗಳನ್ನು ನೋಡುತ್ತಾ ಅಡ್ಡಾಡಿದಳು. ಅಲ್ಲಿಯ ಬಿಸಿಲು >> ಮತ್ತು ಗಾಳಿ ಮುಖಕ್ಕೆ ಸೋಕಿದಂತೆ, ಒಂದು ಹೊಸ ಚೈತನ್ಯ, ಹುಮ್ಮಸ್ಸು, ಆನಂದ ಅವಳಿಗೆ >> ಉಂಟಾಯಿತು. ಸುಮಾರು ಅರ್ಧ ಘಂಟೆ ಸುತ್ತಾಡಿ ಒಳ ಬಂದಳು. >> >> ಅವಳು ಬಿಸಿಲಿಗೆ ಬೆವರಿದ್ದಳು. ಆದರೆ ಮುಖದಲ್ಲಿ ಸಂತಸದ ಕಳೆ ಮೂಡಿತ್ತು. ತಲೆನೋವು >> ಮಾಯವಾಗಿತ್ತು. ವೈದ್ಯರು ಈಗ ಹೇಗನಿಸುತ್ತೇ? ಪ್ರಶ್ನಿಸಿದರು. ಮುತ್ತುಲಕ್ಷ್ಮಿಯು ಈಗ ನನಗೆ >> ತಲೆನೋವೇ ಇಲ್ಲ ಉತ್ತರಿಸಿದಳು. ಡಾ॥ಕೃಷ್ಣಮೂರ್ತಿ ಹೇಳಿದರು ಚೆಟ್ಟಿಯಾರ್ರವರೇ, ನಿಮ್ಮ ಮಗಳ >> ತಲೆನೋವಿಗೆ ಕಾರಣ ಅವಳ ಮೂಗುತಿ! ಅದರ ವಜ್ರ ಪ್ರತಿಫಲಿಸಿ ಅವಳ ಕಣ್ಣಿಗೆ ಆಯಾಸ >> ಮಾಡುತ್ತಿತ್ತು. ಅದರಿಂದ ತಲೆನೋವು ಬರುತ್ತಿತ್ತು. ಅದನ್ನು ತೆಗೆಯುತ್ತಲೆ ತಲೆನೋವು >> ಮಾಯವಾಯಿತು ಎಂದು ಹೇಳಿ ಅವಳ ಮೂಗುತಿಯನ್ನು ವಾಪಸ್ಸು ಕೊಟ್ಟರು. ಚೆಟ್ಟಿಯಾರ್ ಮತ್ತು ಅವರ >> ಮಗಳ ಆನಂದಕ್ಕೆ ಪಾರವೇ ಇರಲಿಲ್ಲ. ಚೆಟ್ಟಿಯಾರರು ವೈದ್ಯರಿಗೆ ಅಪಾರ ವಂದನೆಗಳನ್ನು >> ಸಲ್ಲಿಸಿದರು ಮತ್ತು ನೋಟುಗಳ ಒಂದು ಕಂತೆಯನ್ನು ತೆಗೆದು ಡಾಕ್ಟರ ಮೇಜಿನ ಮೇಲಿಟ್ಟರು. >> ವೈದ್ಯರು ಇಷ್ಟೆಲ್ಲ ದುಡ್ಡು ನನಗೆ ಬೇಡ. ನನ್ನ ಫೀಸು ಹತ್ತು ರುಪಾಯಿ ಮಾತ್ರ. ಅಷ್ಟು >> ಕೊಟ್ಟರೆ ಸಾಕು ಎಂದರು. ಚೆಟ್ಟಿಯಾರರು ಎಷ್ಟು ಒತ್ತಾಯ ಮಾಡಿದರೂ ಅದಕ್ಕಿಂತ ಜಾಸ್ತಿ >> ತೆಗೆದುಕೊಳ್ಳಲು ವೈದ್ಯರು ಒಪ್ಪಲಿಲ್ಲ. ವಿಸ್ಮಯಗೊಂಡ ಚೆಟ್ಟಿಯಾರ್ರವರು ಭಗವಂತ! >> ಜಗತ್ತಿನಲ್ಲಿ ಇಂತಹ ಅದ್ಭುತ ವ್ಯಕ್ತಿಗಳು ಇದ್ದಾರೆಯೇ? ಎಂದುಕೊಳ್ಳುತ್ತಾ ಹೊರಟರು. >> >> ಡಾ॥ಕೃಷ್ಣಮೂರ್ತಿಯವರ ಪುಣ್ಯಸ್ಮರಣೆಗೆ ಪ್ರಣಾಮಗಳು. ಹಾಗೂ ಭಾರತೀಯ ವಿದ್ಯಾಭವನದ ಭವ್ಸ್ >> ಜರ್ನಲ್ ಮಾಸಪತ್ರಿಕೆಯಲ್ಲಿ 1995ರಲ್ಲಿ ಪ್ರಕಟವಾಗಿದ್ದ ಈ ಘಟನೆಯನ್ನು ಮನ್ನಾರ್ ಕೃಷ್ಣರಾವ್ >> ಮಾಸ್ತರರು ತಮ್ಮ ಬದುಕು-ಬೆಳಕು ಭಾಗ-1ರಲ್ಲಿ ಉಲ್ಲೇಖಿಸಿದ್ದಾರೆ. ಅವರಿಗೂ ಧನ್ಯವಾದಗಳು. ಈ >> ಶತಮಾನದ ಹೈಟೆಕ್ ಆಸ್ಪತ್ರೆಗಳನ್ನೂ, ಅದರ ವೈದ್ಯರುಗಳ ದುಬಾರಿ ಚಿಕಿತ್ಸೆಗಳನ್ನೂ ಕಂಡಿರುವ >> ನಮ್ಮೆಲ್ಲರಿಗೂ ಈ ಘಟನೆ ವಿಸ್ಮಯಕಾರಿ ಅಲ್ಲವೆ? >> ----------- >> ಸ್ನೇಹಿತರೊಬ್ಬರು ಕಳಿಸಿದ್ದು.. ನಿಮ್ಮೊಂದಿಗೆ ಹಂಚಿಕೊಂಡೆ. >> 😊 >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
