Bharathyadav On 2 Sep 2017 9:28 am, "Sameera samee" <[email protected]> wrote:
ಆಲೋಚಿಸಿ... *"ಚಿಂತೆ ಬೇಡವೇ ಬೇಡ"* ಜಗತ್ತಿನ ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಟೈಮ್ ರೆನ್ ಇದೆ. ಭಾರತದಲ್ಲಿ ಕತ್ತಲು ಕವಿದಿದ್ದರೆ, ಇನ್ಯಾವುದೋ ದೇಶದ ಜನ ಆಗಷ್ಟೇ ಮೈ ಮುರಿದು ಏಳುತ್ತಿರುತ್ತಾರೆ. ಇನ್ನೆಲ್ಲೋ ಮಧ್ಯಾಹ್ನದ ಸುಡು ಬಿಸಿಲು ನೆತ್ತಿ ಸುಡುತ್ತಿರುತ್ತದೆ. ಕ್ಯಾಲಿಫೋರ್ನಿಯಾಕ್ಕಿಂತಲೂ ನ್ಯೂಯಾರ್ಕ್ ಮೂರು ಗಂಟೆ ಮುಂದಿದೆ. ನ್ಯೂಯಾರ್ಕ್‌ನಲ್ಲಿ ಬೆಳಗ್ಗೆ ಆರು ಗಂಟೆಯಾಗಿದ್ದರೆ, ಕ್ಯಾಲಿಫೋರ್ನಿಯಾದಲ್ಲಿ ಗಂಟೆ ಮೂರಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ನ್ಯೂಯಾರ್ಕ್‌ಗಿಂತ ಕ್ಯಾಾಲಿಫೋರ್ನಿಯಾ ಹಿಂದೆ ಬಿದ್ದಿದೆ ಎಂದು ಹೇಳಲಾಗುತ್ತದೆಯೇ? ಯಾರೋ ಒಬ್ಬ ಹುಡುಗ 22 ವರ್ಷಕ್ಕೇ ಪದವೀಧರನಾದರೂ ಒಂದು ಒಳ್ಳೆಯ ಕೆಲಸ ಪಡೆಯಲು ಐದು ವರ್ಷ ಕಾಯಬೇಕಾದೀತು. ಆದರೆ ಇನ್ಯಾರೋ ಒಬ್ಬ 25ನೇ ವಯಸ್ಸಿಗೆ ಕಂಪನಿಯ ಸಿಇಒ ಆಗಿ, 50 ವರ್ಷಕ್ಕೇ ಸತ್ತು ಹೋಗಿ ಬಿಡಬಹುದು. ಇನ್ನೊಬ್ಬ 52ನೇ ವರ್ಷದಲ್ಲಿ ಸಿಇಒ ಆಗಿ 90 ವರ್ಷದವರೆಗೆ ಬದುಕಿದ. ನಿಮ್ಮಲ್ಲಿ ಎಷ್ಟೋ ಮಂದಿ ಇನ್ನೂ ಅವಿವಾಹಿತರಿದ್ದೀರಿ. ಆದರೆ ಕೆಲವರಿಗೆ ಮದುವೆಯಾಗಿ, ಈಗಾಗಲೇ ಮಕ್ಕಳಿವೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ 55ನೇ ವರ್ಷದಲ್ಲಿ ನಿವೃತ್ತಿ ಹೊಂದಿದ. ಆದರೆ ಡೊನಾಲ್ಡ್ ಟ್ರಂಪ್‌ನ ರಾಜಕೀಯ ಜೀವನ ಆರಂಭವಾಗಿದ್ದೇ 70ನೆ ವರ್ಷದಲ್ಲಿ! ಎಷ್ಟೊಂದು ವಿಚಿತ್ರ ಅಲ್ಲವೇ ಇದು! ಹೇಗೆ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಬೇರೆ ಬೇರೆ ಟೈಮ್ ರೆನ್ (ಸಮಯದಲ್ಲಿ ವ್ಯತ್ಯಾಸ) ಅನ್ನುವುದು ಇದೆಯೋ, ಪ್ರತಿ ಮನುಷ್ಯನೂ ತನ್ನದೇ ಆದ ಟೈಮ್ ರೆನ್ ಪ್ರಕಾರ ಬದುಕುತ್ತಿದ್ದಾನೆ. ನಿಮ್ಮ ಸಹಪಾಠಿಯೋ, ಸಹೋದ್ಯೋಗಿಯೋ ಜೀವನದಲ್ಲಿ ನಿಮಗಿಂತ ಮುಂದೆ ಹೋಗುತ್ತಿದ್ದಾನೆಂದು ಅನಿಸುತ್ತದೆ. ಇನ್ನೂ ಕೆಲವರು ನಿಮಗಿಂತ ಹಿಂದೆಯೇ ಇದ್ದಾರೆಂದು ನೀವು ಸಮಾಧಾನ ಪಟ್ಟುಕೊಳ್ಳುತ್ತೀರಿ. ಆದರೆ ಎಲ್ಲರೂ ತಮ್ಮ ತಮ್ಮ ಟೈಮ್ ರೆನ್ ಪ್ರಕಾರ ತಮ್ಮ ಜೀವನದ ಓಟದಲ್ಲಿದ್ದಾರೆ. ಹಾಗಾಗಿ ಯಾರ ಮೇಲೂ ಅಸೂಯೆ ಪಡಬೇಡಿ, ಯಾರನ್ನೂ ಅಪಮಾನಿಸಬೇಡಿ. They are in their TIME ZONE, and you are in yours! ನಮ್ಮ ನಮ್ಮ ಸಮಯ ಯಾವಾಗ ಬರುತ್ತದೆಂದು ತಾಳ್ಮೆಯಿಂದ ಕಾಯುತ್ತಾ ಕೆಲಸ ಮಾಡುತ್ತಿರುವುದೇ ಜೀವನ. ಚಿಂತೆ ಬೇಡವೇ ಬೇಡ. ನೀವು ಯಾರಿಗಿಂತಲೂ ಮುಂದೆ ಹೋಗಿಲ್ಲ, ಯಾರಿಗಿಂತಲೂ ಹಿಂದೆ ಬಿದ್ದಿಲ್ಲ. ನೀವು ನಿಮ್ಮ ಕಾಲಚಕ್ರದ ಪ್ರಕಾರ ನಡೆಯುತ್ತಿದ್ದೀರಿ ಅಷ್ಟೇ. ನೀವೆಷ್ಟೇ ನಿಧಾನವಾಗಿ ನಡೆದರೂ, ವೇಗವಾಗಿ ನಡೆದರೂ ಗುರಿ ತಲುಪುವುದು ನಿಮ್ಮ ಟೈಮ್ ರೆನ್ ಪ್ರಕಾರವೇ! ಸಮೀರ ( ಕನ್ನಡ ಭಾಷಾ ಶಿಕ್ಷಕಿ -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL 8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
