ಲೇಖನ ತುಂಬಾ ಚನ್ನಾಗಿದೆ. ಮೆಡಮ್.
On 15 Sep 2017 10:07 am, "Revananaik B B Bhogi" < [email protected]> wrote: > ಲೇಖನ ತುಂಬಾ ಚನ್ನಾಗಿದೆ ಮೇಡಮ್ > > On Sep 15, 2017 8:49 AM, "Sameera samee" <[email protected]> wrote: > >> ✍🙏🙏 *ಮಹಾ ಮೇಧಾವಿ,ಭಾರತ ರತ್ನ, ಸರ್ ಎಂವಿ* >> (Mallikarjun Hulasur) >> >> 🌹 *ಇಂದು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ ಹುಟ್ಟು ಹಬ್ಬ ಪ್ರಯುಕ್ತ >> ಇಂಜನೀಯರರ ದಿನದ ಲೇಖನ* >> >> Vijaya Karnataka >> Sep 15, 2017, >> - ಜಿ ಬಿ ಹರೀಶ್ >> >> ಕೆಲವು ಮಹಾನುಭಾವರು ತೀರಿಕೊಂಡು ಹತ್ತಾರು ವರ್ಷಗಳು ಕಳೆದರೂ ಸಮಾಜದ ಮೇಲೆ ಅಗಾಧವಾದ >> ಪ್ರಭಾವ ಬೀರುತ್ತಾರೆ. ಇದಕ್ಕೆ ಕಾರಣ ಹಣ, ಜಾತಿ ಅಥವಾ ತೋಳ್ಬಲವಾಗಿರುವುದಿಲ್ಲ. ಬದಲಾಗಿ >> ಅವರು ತಮ್ಮ ಜೀವನದಲ್ಲಿ ಮಾಡಿದ ಸಮಾಜಮುಖೀ ಕೆಲಸಗಳು ಕಾರಣ. ಅಂಥ ಒಂದು ಚೇತನ ಸರ್. >> ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಬಡತನದ ಮಧ್ಯೆ ಬೆಳೆದ ಅವರು ಜೀವನದಲ್ಲಿ ಓದಿ ಮುಂದೆ >> ಬಂದರು. ಇಂಜಿನಿಯರ್ ಪದವಿ ಪೂರೈಸಿ, 1885ರಲ್ಲಿ ಮುಂಬೈ ಪ್ರಾಂತದ ಲೋಕೋಪಯೋಗಿ ಇಲಾಖೆ >> ಇಂಜಿನಿಯರ್ ಆದರು. ಈಗ ನಾವು ಯಾವುದನ್ನು ಇನೋವೇಶನ್/ ಹೊಸತನದ ಆವಿಷ್ಕಾರ ಎನ್ನುವೆವೋ >> ಅದನ್ನು ಮಾಡಿದವರು ಅವರು. ಅಲ್ಲಿಂದ ಅವರು 1909ರಲ್ಲಿ ಸರ್ಕಾರಿ ಸೇವೆಯಿಂದ ಸ್ವಯಂ >> ನಿವೃತ್ತಿ ಪಡೆಯುವ ತನಕ ನಾನಾ ಮುಖಗಳಲ್ಲಿ ಸಾಧನೆ ಮಾಡಿದರು. ನಾಸಿಕ್ ಮತ್ತು ಪುಣೆಯಲ್ಲಿ >> ಸೇವೆ, ಸಿಂಧ್ ಪ್ರಾಂತದಲ್ಲಿ ನೀರು ಸರಬರಾಜಿನ ವಿನ್ಯಾಸ, ಸೂರತ್‌ನಲ್ಲಿ ಎಕ್ಸಿಕ್ಯುಟಿವ್ >> ಇಂಜಿಯರ್ ಆಗಿ ಸೇವೆ, ನಂತರ ಪುಣೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ >> ಪ್ರಾಮಾಣಿಕವಾಗಿ ದುಡಿದರು. 1898ರಲ್ಲಿ ಅವರು ಜಪಾನ್ ಮತ್ತು ಚೀನಾ ದೇಶಗಳಿಗೆ ನೀಡಿದ ಭೇಟಿ >> ಅವರ ಒಳನೋಟ ವಿಸ್ತರಿಸಿತು. ಭಾರತಕ್ಕೆ ಬಂದ ಮೇಲೆ ವ್ಯವಸಾಯ ಮತ್ತು ಒಳಚರಂಡಿ ವ್ಯವಸ್ಥೆಗೆ >> ಸೇವೆ ಸಲ್ಲಿಸಿದರು. ನಗರಗಳ ಬಡಾವಣೆಯ ವಿನ್ಯಾಸ ಅವರ ಶಕ್ತಿಶಾಲಿ ಏರಿಯಾಗಳಲ್ಲಿ ಒಂದು. >> ಅದರೊಳಗೆ ನೀರು ಸರಬರಾಜು, ಒಳಚರಂಡಿ, ರಸ್ತೆ, ವಿದ್ಯುತ್ ಎಲ್ಲವೂ ಸೇರುತ್ತದೆ ಎಂಬುದು >> ಗಮನಿಸಬೇಕಾದ ಅಂಶ. ಅಣೆಕಟ್ಟುಗಳಿಗೆ ಸ್ವಯಂಚಾಲಿತ ಅಣೆಕಟ್ಟು ದ್ವಾರ ರೂಪಿಸಿ ಅದರ ಬೌದ್ಧಿಕ >> ಹಕ್ಕು ಪಡೆದುಕೊಂಡ ಹೆಗ್ಗಳಿಕೆ ಸರ್ ಎಂವಿ ಅವರದ್ದು. ಈ ಹಿನ್ನೆಲೆ ಇದ್ದ ಅವರು ಸ್ವಯಂ >> ನಿವೃತ್ತರಾದ ಮೇಲೆ ಮೈಸೂರಿನ ಮಹಾರಾಜರ ಆಹ್ವಾನದಂತೆ ಅಂದಿನ ಕನ್ನಡ ನಾಡಿಗೆ ಬಂದು >> ನೆಲೆಸಿದರು. ಭಾರತದ ರಾಜಕೀಯ, ಕಾಂಗ್ರೆಸ್‌ನ ಹೋರಾಟ, ಗೋಖಲೆ ಮುಂದೆ ಗಾಂಧೀಜಿ ಅವರ >> ಕಾರ್ಯಶೈಲಿ ಯಾವುದೂ ಅವರಿಗೆ ಅಪರಿಚಿತವಾಗಿ ಉಳಿಯಲಿಲ್ಲ. >> >> ನಿನ್ನ ಏಳ್ಗೆಗೆ ನೀನೆ ಶಿಲ್ಪಿ ಎಂಬ ಮಾದರಿಯನ್ನು ಮಹಾರಾಷ್ಟ್ರದ ಬಾಬಾ ಸಾಹೇಬ್ >> ಅಂಬೇಡ್ಕರ್ ಕಾನೂನು ಅರ್ಥಶಾಸ್ತ್ರ ವಿಷಯದಲ್ಲಿ ಮಾಡಿ ತೋರಿಸಿದರೆ, ವಾಸ್ತುಶಿಲ್ಪ, ಕಟ್ಟಡ >> ನಿರ್ಮಾಣ, ಹೊಸರಾಜ್ಯದ ನಿರ್ಮಾಣದಲ್ಲಿ ವಿಶ್ವೇಶ್ವರಯ್ಯನವರು ಮಾಡಿ ತೋರಿಸಿದರು. ನೆಹರೂ, >> ಗಾಂಧಿ ಮತ್ತು ದೀನದಯಾಳ್ ಉಪಾಧ್ಯಾಯ ಹೀಗೆ ಮೂರು ಭಿನ್ನ ವೈಚಾರಿಕತೆಯ ಚಿಂತಕರಿಂದ >> ಏಕಕಾಲಕ್ಕೆ ಮಾನ್ಯತೆ ಪಡೆದ ಕ್ರಿಯಾಶೀಲ ವ್ಯಕ್ತಿತ್ವ ಇವರದ್ದು. ಗಾಂಧಿಯವರ ಬಗೆಗೆ ಸರ್ >> ಎಂವಿ ಅವರಿಗೆ ಅಪಾರ ಗೌರವ, ಹಾಗೆ ಅವರ ಹಠಮಾರಿತನದ ಬಗೆಗೆ ಅರಿವು ಕೂಡ ಇತ್ತು. ಜೋಗದ ಜಲಪಾತ >> ತೋರಿಸಿ ಯಾರೋ ಎಷ್ಟು ಸುಂದರ ಅಂದರೆ ಈ ಪುಣ್ಯಾತ್ಮ ಎಷ್ಟೊಂದು ನೀರು ಹರಿದು >> ಪೋಲಾಗುತ್ತಿದೆಯಲ್ಲಾ ಎಂದು ಉದ್ಗರಿಸಿದ್ದರು ಎಂಬ ಕಥೆ ಇದೆ. ಯಂತ್ರಗಳನ್ನು ವಿವೇಕಯುತವಾಗಿ >> ಬಳಸುವುದರಲ್ಲಿ ಎಂವಿಯವರಿಗೆ ಅಪಾರ ನಂಬಿಕೆ. ಕುವೆಂಪು ತಮ್ಮ ಒಂದು ಕವನದಲ್ಲಿ ಇವರನ್ನು >> 'ಯಂತ್ರರ್ಷಿ' ಎಂದು ಕರೆದಿದ್ದಾರೆ. ವೈಜ್ಞಾನಿಕ ಮನೋಭಾವ, ಕೃಷಿಗೆ ಪೂರಕವಾದ ತಂತ್ರಜ್ಞಾನ, >> ನೀರಾವರಿ ವ್ಯವಸ್ಥೆ, ಕಾರ್ಖಾನೆಗಳು ಇದು ಅವರ ಕಲ್ಪನೆ. ಗಾಂಧೀಜಿ ಹೆಚ್ಚಾಗಿ ಗ್ರಾಮ >> ಭಾರತಕ್ಕೆ ಒತ್ತುಕೊಟ್ಟರು, ನೆಹರು ಉದ್ಯೋಗಾಧಾರಿತ ಆರ್ಥಿಕತೆಗೆ ಇಂಬು ನೀಡಿದರು. ಸರ್ >> ಎಂವಿ ಭಾರತ ಸ್ವಾತಂತ್ರ್ಯ ಪಡೆಯುವ ಮೊದಲೇ ಮೊದಲು ಪೂನಾದಲ್ಲಿ ನಂತರ ಮೈಸೂರು ಸಂಸ್ಥಾನದಲ್ಲಿ >> ತಮ್ಮ ಕನಸುಗಳಿಗೆ ರೂಪ ನೀಡಿದರು. ಕೈಗಾರೀಕರಣದ ಅನಿವಾರ್ಯತೆಯನ್ನು ಮನಗಂಡ ಮೊದಮೊದಲ >> ದಾರ್ಶನಿಕರಲ್ಲಿ ಅವರೊಬ್ಬರು. ಕೈಗಾರೀಕರಣ ಅಥವಾ ನಾಶ (ಇಂಡಸ್ರ್ಟಿಯಲೈಸ್ ಆರ್ ಪೆರಿಷ್) >> ಎಂಬುದು ಅವರ ಘೋಷಣೆ. ಒಂದು ದೊಡ್ಡ ಹರಹು, ದರ್ಶನ ಇದ್ದವರನ್ನು ಸಮಾಜ ಅವರ ಜೀವಿತ ಕಾಲದಲ್ಲಿ >> ಅರ್ಥಮಾಡಿಕೊಳ್ಳುವುದು ಕಷ್ಟ. ಅಧ್ಯಾತ್ಮ, ಪರಲೋಕದ ಪ್ರೀತಿ, ಆದರ್ಶಮಯ ತತ್ತ್ವಶಾಸ್ತ್ರ, >> ಗಾಂಧಿ ಹವಾ ಇದ್ದ ಕಾಲದಲ್ಲಿ ಬ್ರಿಟಿಷರ ನಿಯಂತ್ರಣ ಇರುವ ಒಂದು ರಾಜಸಂಸ್ಥಾನದ ದಿವಾನರಾಗಿ >> ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಂದಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು >> ಸರ್ ಎಂವಿ ಜೋಡಿ ಇಡೀ ಬಾರತದಲ್ಲೇ ಹೇಳಿ ಮಾಡಿಸಿದ್ದ ಮಹಾರಾಜ-ದಿವಾನರ ಜೋಡಿ ಎಂದರೆ >> ಸರಿಯಾಗುತ್ತದೆ. ಮೂಮೂಲಿ ಇಂಜಿನಿಯರ್ ಕೆಲಸ ಬಿಟ್ಟು ಛಾಲೆಂಜಿಂಗ್ ಆದ ಏನಾದರೂ ಕೆಲಸ >> ಇದ್ದರೆ ತಾವು ಮೈಸೂರಿಗೆ ಬರುವುದಾಗಿ ಸರ್ ಎಂವಿ ಮಹಾರಾಜರಿಗೆ ತಿಳಿಸಿದ್ದರು. ಅದೇ ರೀತಿ >> ಈಗಾಗಲೇ ಆರಂಭಗೊಂಡು ಅನೇಕ ತಾಂತ್ರಿಕ ಮತ್ತು ರಾಜಕೀಯ ಅಡೆತಡೆಗಳನ್ನು ಅನುಭವಿಸುತ್ತಿದ್ದ >> ಕೃಷ್ಣರಾಜಸಾಗರ ಜಲಾಶಯ ಪೂರೈಕೆ, ಮೇಲಸ್ತುವಾರಿ ಕೆಲಸ ಅವರ ಪಾಲಿಗೆ ಬಂದಿತು. ಅದನ್ನು >> ಸರ್‌ಎಂವಿ ಅತ್ಯಂತ ಚಾಣಾಕ್ಷತನದಿಂದ ಪೂರೈಸಿದರು. ಇದಕ್ಕಾಗಿ ಅವರು ಬ್ರಿಟಿಷ್ ಅಧಿಕಾರಿ >> ವರ್ಗ ಮತ್ತು ಮದ್ರಾಸ್ ಪ್ರಾಂತದ ಮುಖಂಡರ ಕೆಂಗಣ್ಣಿಗೆ ಗುರಿಯಾಗಬೇಕಾಗಿ ಬಂದಿತು. >> >> ಭಾಷೆ, ಸಾಹಿತ್ಯ, ನೃತ್ಯ, ಶಿಲ್ಪ ಎಲ್ಲಾ ಅರಳಬೇಕಾದರೆ ನಾಡಿನಲ್ಲಿ ಮೊದಲು ಭೌತಿಕ, >> ಆರ್ಥಿಕ ಪ್ರಗತಿಯಾಗಬೇಕು. ನಾಡಿನ ಜನರ ಅನ್ನಸಂಪಾದನೆ, ಉದ್ಯೋಗದ ಪ್ರಶ್ನೆಯ ವಾಸ್ತವವನ್ನು >> ಮೊದಲು ಸರ್ ಎಂವಿ ಮನಗಂಡರು. ಈ ನಿಟ್ಟಿನಲ್ಲಿ ಮಹಾರಾಜರ ಸಂಪೂರ್ಣ ಬೆಂಬಲದಿಂದ ಅವರು >> ಭದ್ರಾವತಿಯ ಕಬ್ಬಿಣ ಉಕ್ಕಿನ ಕಾರ್ಖಾನೆ, ಪೇಪರ್ ಮಿಲ್, ಕೋಲಾರದ ಚಿನ್ನದ ಗಣಿ, >> ಜಲವಿದ್ಯುತ್ ಉತ್ಪಾದನೆ, ಮೈಸೂರು ಬ್ಯಾಂಕಿನ ಸ್ಥಾಪನೆಗೆ ಕಾರಣರಾದರು. ಭಾರತವನ್ನು ಸುಜಲಾಂ >> ಸುಫಲಾಂ ಆಗಿಸುವ ಬಂಕಿಮ ಚಂದ್ರರ ಕನಸನ್ನು ಭೂಮಿಗೆ ಇಳಿಸುವ ಕೆಲಸವನ್ನು ದೂರದರ್ಶಿತ್ವ >> ಇಟ್ಟುಕೊಂಡು ಅಚ್ಚುಕಟ್ಟಾಗಿ ಸಾಧಿಸಿದವರು ಸರ್‌ಎಂವಿ. >> >> ದೇವರು ಧರ್ಮದ ವಿಷಯದಲ್ಲಿ ಅವರು ಒಂದು ರೀತಿ ತಟಸ್ಥರಾಗಿದ್ದರು. ಆದರೆ ನಾಡು, ಭಾಷೆ, >> ಕೃಷಿ, ಕೈಗಾರಿಕೆ ವಿಷಯದಲ್ಲಿ ಬೇರೆಯವರಿಗೆ ಸಾಧಿಸಲು ಅಸಾಧ್ಯವೆನಿಸುವಷ್ಟು ಮಟ್ಟಿಗೆ >> ಎದೆಗಾರಿಕೆ ಹೊಂದಿದ್ದರು. ಒಂದು ಆಧುನಿಕ ಕಂಪನಿಯ ಸಿಇಓ ಅಥವಾ ಮಾಲೀಕ ಯೋಚಿಸುವ ಮಾದರಿಯಲ್ಲಿ >> ಯೋಚಿಸಿದ ಅವರು ಬಡವರನ್ನು ಮರೆಯದೆ ರಾಜ್ಯದ ಸಂಪತ್ತು ಹೆಚ್ಚಿಸುವ ಕೆಲಸ ಮಾಡಿದ್ದು ಈಗಲೂ >> ಎಲ್ಲರಿಗೂ ಆದರ್ಶ. ಬಸವಣ್ಣ ಸಮಾನತೆಯ ಆಧಾರದ ಮೇಲೆ ನಾಡನ್ನು ಕಟ್ಟುವ ಕನಸು ಕಂಡರೆ, >> ಸರ್‌ಎಂವಿ ಅವಕಾಶಗಳ ವಿಸ್ತರಣೆ ಆಧಾರದ ಮೇಲೆ ಈ ಕನಸಿಗೆ ಪೂರಕರಾದರು. ಕನ್ನಡಿಗರು ಓದಲು >> ಮದ್ರಾಸಿಗೆ ಹೋಗಬೇಕಿದ್ದ ಅನಿವಾರ್ಯತೆ ಇದ್ದಾಗ ಬ್ರಿಟಿಷ್ ಸರ್ಕಾರದ ಜತೆ ಸಂಧಾನ ಮಾಡಿ >> ಕನ್ನಡ ನಾಡಿಗೆ ಮೊತ್ತಮೊದಲ ಸ್ವತಂತ್ರ ವಿಶ್ವದ್ಯಾನಿಲಯ ತಂದು, ಮೈಸೂರು ವಿವಿ ಸ್ಥಾಪನೆಗೆ >> ಕಾರಣರಾದರು. ಒಂದು ರಾಜಸಂಸ್ಥಾನ ಇಷ್ಟೊಂದು ಮುಖಗಳಲ್ಲಿ ಕೆಲವೇ ವರ್ಷಗಳಲ್ಲಿ ಬೆಳೆದದ್ದು >> ಕಳೆದ ಶತಮಾನದ ಚರಿತ್ರೆಯಲ್ಲಿ ತೀರಾ ಅಪರೂಪ. ಮಾದರಿ ಮೈಸೂರು ರಾಜ್ಯದ ನಿರ್ಮಾಣದಲ್ಲಿ ಈ >> ಶಿಸ್ತುಗಾರ ಇಂಜಿನಿಯರ್ ಪಾತ್ರ ಬಹಳ. ಇದೇ ಕೆಲಸವನ್ನು ಮುಂದೆ ಬಂದ ಮಿರ್ಜಾ ಇಸ್ಮಾಯಿಲ್ >> ಮುಂದುವರೆಸಿದ್ದೂ ಕೂಡ ಮುಖ್ಯ. >> >> ಗಾಂಧೀಜಿಯವರು ಸಪ್ತಸಾಮಾಜಿಕ ಪಾತಕಗಳನ್ನು ಹೇಳಿದರು. ಸರ್ ಎಂವಿ ಏಳು 'ಎಂ'ಗಳ >> ಪರಿಕಲ್ಪನೆ ನೀಡಿದರು. ಮನುಷ್ಯ (ಮೆನ್), ಸಂಪನ್ಮೂಲ (ಮೆಟಿರಿಯಲ್), ಹಣ (ಮನಿ), >> ನಿರ್ವಹಣೆ (ಮ್ಯಾನೇಜ್‌ಮೆಂಟ್), ಪ್ರೇರಕ ಶಕ್ತಿ(ಮೋಟಿವ್ ಪವರ್), ಮಾರುಕಟ್ಟೆ >> (ಮಾರ್ಕೆಟ್) ಮತ್ತು ಯಂತ್ರ(ಮಷಿನ್). ಮನುಷ್ಯನಿಗೆ ಮೊದಲ ಸ್ಥಾನ, ಯಂತ್ರಕ್ಕೆ ಕೊನೆಯ >> ಸ್ಥಾನ ನೀಡಿರುವುದು ಅವರ ಅಂತಃಕರಣದ ನೈಜ ಪರಿಚಯ ಮಾಡಿಸುತ್ತದೆ. ಡಿವಿಜಿ, ವಿ.ಸೀತಾರಾಮಯ್ಯ, >> ತೀನಂಶ್ರೀ, ಮಾಸ್ತಿ ಮುಂತಾದವರು ಸರ್ ಎಂವಿಯವರ ಬಹುಮುಖೀ ಚೈತನ್ಯವನ್ನು >> ಪರಿಚಯಿಸಿದ್ದಾರೆ. ಅವರ 'ನನ್ನ ವೃತ್ತಿ ಜೀವನದ ನೆನಪುಗಳು' ಇಂದಿಗೂ ಕೆಎಎಸ್, ಐಎಎಸ್ >> ಮಾಡುವವರು ಓದಬೇಕಾದ ಗ್ರಂಥ. ರಾಜಕೀಯ ದಾರ್ಶನಿಕರ ಕನಸುಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ >> ಪರಿಶೀಲಿಸಿ ಅದಕ್ಕೆ ಮೂರ್ತರೂಪ ಕೊಟ್ಟ ವಿಶ್ವೇಶ್ವರಯ್ಯನವರು ಕಟ್ಟಿದ ಜಯನಗರವಿರುವ >> ಬೆಂಗಳೂರು, ಪ್ರತಿಮಳೆ ಬಂದಾಗಲೂ ಅಸ್ತವ್ಯಸ್ತವಾಗುವುದನ್ನು ನೋಡಿದಾಗ ಈಗಿರುವ >> ಇಂಜಿನಿಯರ್‌ಗಳು, ಶಾಸಕರು ಸರ್‌ಎಂವಿಯವರನ್ನು ಅವರ ಜನ್ಮದಿನ (ಸೆ.15)ರಂದು ಮಾತ್ರ ನೆನೆಯದೆ >> ಅವರ ಅನುಭವದ ಜೀವಂತ ಮಾದರಿಗಳಿಂದ ಯಾಕೆ ಪ್ರೇರಣೆ ಪಡೆಯಬಾರದು ಎಂದು ಚಿಂತೆಯಾಗುತ್ತದೆ. >> ಸುಸಜ್ಜಿತವಾದ ಹಳ್ಳಿ, ನಗರಗಳ ನಿರ್ಮಾಣ, ಪ್ರಾಮಾಣಿಕ ಹಣಕಾಸಿನ ನಿರ್ವಹಣೆ ಇವೇ ಈ ನಾಡು >> ಸರ್‌ಎಂವಿಯವರಿಗೆ ತೋರಿಸಬಹುದಾದ ನಿಜವಾದ ನಮಸ್ಕಾರ ಅಲ್ಲವೆ? >> (Mallikarjun Hulasur) >> >> 🌹 *ಸರಳತೆಯ ಸಂಕೇತವಾಗಿದ್ದರು* >> >> ಒಮ್ಮೆ ವಿಶ್ವೇಶ್ವರಯ್ಯನವರು ಅಂದಿನ ಸಿಎಂ ಕಡಿದಾಳ್ ಮಂಜಪ್ಪರನ್ನು ನೋಡಲು ಹೋದರು. >> ಸಿಎಂ ನೋಡಲು ಜನ ಸಾಲಿನಲ್ಲಿ ಕುಳಿತಿದ್ದರು. ಇವರೂ ಅವರೊಂದಿಗೆ ಸಾಲಿನಲ್ಲಿ ಕುಳಿತುಕೊಂಡರು. >> ಅಲ್ಲಿದ್ದವರು ಅವರಿಗೆ ನೇರವಾಗಿ ಸಿಎಂ ನೋಡುವಂತೆÜ ಸೂಚಿಸಿದರು. ಆದರೆ ಎಂವಿ ಅವರು ಕೇಳದೇ, >> ಸಾಲಿನಲ್ಲಿ ಕುಳಿತು ತಮ್ಮ ಸರದಿ ಬಂದಾಗ ಸಿಎಂರನ್ನು ಭೇಟಿಯಾದರು. >> >> 🍀 *ನೆರವಿನ ಹಸ್ತ* >> >> ತಮ್ಮ ನೆಂಟರಲ್ಲಿ ಬಡತನದಲ್ಲಿರುವವರ ಒಂದು ಪಟ್ಟಿ ತಯಾರಿಸಿ ಪ್ರತಿ ತಿಂಗಳೂ ಅವರಿಗೆ >> ಮನಿಯಾರ್ಡರ್ ಮೂಲಕ ಹಣ ಕಳುಹಿಸುತ್ತಿದ್ದರು. ಅವರ ಸಂಬಂಧಿಗಳಲ್ಲಿ ಯಾರಾದರೂ ನಿಧನರಾದರೆ >> ಕಾರ್ಯಗಳನ್ನು ಮಾಡಲು ಹಣದ ಅವಶ್ಯಕತೆ ಇದೆಯೇ? ಎಂದು ಕೇಳಿ ಸಹಾಯ ಮಾಡುತ್ತಿದ್ದರು. ತಮ್ಮ >> ನೆಂಟರಲ್ಲಿ ಯಾರಾದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಥಮ ದರ್ಜೆಯಲ್ಲಿ ಪಾಸಾದರೆ ಅವರನ್ನು >> ಮನೆಗೆ ಕರೆದು, ಅವರೊಂದಿಗೆ ಊಟ ಮಾಡಿ, ನೂರು ರೂ. ಬಹುಮಾನ ಕೊಡುತ್ತಿದ್ದರು. >> >> 🌹 *ಶವಸಂಸ್ಕಾರಕ್ಕೆ ಹಣ* >> >> ಬೆಂಗಳೂರಿನಲ್ಲಿ ನಿಧನರಾದರೆ ಸರಳವಾಗಿ ತಮ್ಮ ಹುಟ್ಟೂರಾದ ಮುದ್ದೇನಹಳ್ಳಿಯಲ್ಲಿ >> ಶವಸಂಸ್ಕಾರ ಮಾಡಲು ತಿಳಿಸಿ, ಅದಕ್ಕಾಗಿ ಹಣವನ್ನು ಮೀಸಲಿಟ್ಟಿದ್ದರು. ತಮ್ಮ ನಿಧನದ ನಂತರ >> ತಮ್ಮ ಉಳಿತಾಯದ ಹಣವನ್ನು ತಮ್ಮ ಬಳಿ ನಿಷ್ಠೆಯಿಂದ ದುಡಿದಿದ್ದ ಆಪ್ತ ಕಾರ್ಯದರ್ಶಿ, >> ಅಡಿಗೆಯವರು, ಮನೆ ಕೆಲಸದವರು ಹಾಗೂ ಡ್ರೈವರ್‌ಗೆ ಹಂಚಲು ವಿಲ್ ಬರೆದಿದ್ದರು >> >> 🌹 *ಹೈದ್ರಾಬಾದ್ ನೆರೆ ಹೊರೆ ಇಳಿಸಿದರು* >> >> 1900 ದಶಕದಲ್ಲಿ ಹೈದ್ರಾಬಾದ್ ನಗರ ಮೂಸಾ ನದಿಯ ಪ್ರವಾಹಕ್ಕೆ ಪದೇ ಪದೇ >> ತುತ್ತಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಸರಕಾರ ಮೂಸಾ ನದಿಯ ಮಹಾಪೂರವನ್ನು >> ತಡೆಗಟ್ಟುವ ಪ್ರಯತ್ನಕ್ಕೆ ಕರೆತಂದಿದ್ದೇ ಈ ವಿಶ್ವೇಶ್ವರಯ್ಯ ಅವರನ್ನು. ತಮ್ಮ ತಮ್ಮ >> ಎಂಜಿನಿಯರಿಂಗ್ ಕೌಶಲಗಳನ್ನು ಬಳಸಿಕೊಂಡು ಪ್ರವಾಸ ಸವಾಲನ್ನು ನಿವಾರಿಸಿದರು. >> >> 🌹 *ನೈಟ್‌ಹುಡ್ ಪ್ರಶಸ್ತಿ* >> >> ದೇಶದ ಉನ್ನತಿಗೆ ನೀಡಿದ ಗಣನೀಯ ಕೊಡುಗೆ ಪರಿಗಣಿಸಿ ಬ್ರಿಟಿಷ್ ಸರಕಾರ 1915ರಲ್ಲಿ >> ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್(ನೈಟ್‌ಹುಡ್) ಗೌರವ >> ದಯಪಾಲಿಸಿತು. ವಿಶ್ವೇಶ್ವರಯ್ಯ ಅವರು ಮೌಲ್ಯಗಳ ವ್ಯಕ್ತಿಯಾಗಿದ್ದರು. ಅತ್ಯಂತ >> ಪ್ರಾಮಾಣಿಕರಾಗಿದ್ದ ಅವರು, ದೇಶ ಮತ್ತು ತಮ್ಮ ವೃತ್ತಿಗಾಗಿ ತಮ್ಮಲ್ಲಿರುವ ಅತ್ಯುತ್ತಮವಾದ >> ಎಲ್ಲವನ್ನೂ ನೀಡಿದರು. ತಮ್ಮ 90ನೇ ವಯಸ್ಸಿನಲ್ಲೂ ಅವರು ಶಿಸ್ತುಬದ್ಧ ಜೀವನ ನಡೆಸಿದರು. >> >> 🌹 *ಅದ್ಭುತ ನೆನಪಿನ ಶಕ್ತಿ* >> (Mallikarjun Hulasur) >> >> ವಿಶ್ವೇಶ್ವರಯ್ಯ ಅವರಿಗೆ ಅದ್ಭುತವಾದ ನೆನಪಿನ ಶಕ್ತಿ ಇತ್ತು. 1908ರಲ್ಲಿ ಅವರು ಮೂಸಾ >> ನದಿಯ ಮಹಾಪೂರ ತಡೆಯುವ ಯೋಜನೆಯನ್ನು ಯಶಸ್ವಿಗೊಳಿಸಿದ್ದರು. ಇದಾದ 50 ವರ್ಷಗಳ ಬಳಿಕ >> ನದಿಯೊಂದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ ಅವರಿಗೆ ಒಂದಿಷ್ಟು ಮಾಹಿತಿ ಬೇಕಿತ್ತು. >> ಕೂಡಲೇ ತಮ್ಮ ಸೇವಕನನ್ನು ಕರೆದ ವಿಶ್ವೇಶ್ವರಯ್ಯ ಅವರು, ಬುಕ್‌ಶೆಲ್ಫ್‌ನತ್ತ ಕೈ ತೋರಿಸಿ, >> ''ಶೆಲ್ಫ್‌ನ ಮಧ್ಯದ ಮೂರನೇ ಸಾಲಿನಲ್ಲಿರುವ ನಾಲ್ಕು ಬುಕ್‌ಗಳ ಪೈಕಿ ಮೂರನ್ನು ತೆಗೆದುಕೊಂಡ >> ಬಾ,'' ಎಂದು ಸೂಚಿಸಿದರು. ಆ ಬುಕ್‌ಗಳ ಪೈಕಿ ಒಂದನ್ನು ತೆರೆದ ಅವರು, ಚರ್ಚೆಗೆ >> ಸಂಬಂಧಿಸಿದಂತೆ ಒಂದಿಷ್ಟು ವಿವರಗಳು ಅದರಲ್ಲಿರುವುದನ್ನು ತೋರಿಸಿದರು! >> >> 🌹 *ಭಾರತ ರತ್ನ* >> >> ಸ್ವತಂತ್ರ ಭಾರತದ ಅತಿದೊಡ್ಡ ಗೌರವವಾಗಿರುವ ಭಾರತ ರತ್ನ ಪ್ರಶಸ್ತಿಯು 1955ರಲ್ಲಿ >> ವಿಶ್ವೇಶ್ವರಯ್ಯ ಅವರಿಗೆ ದೊರೆಯಿತು. ಎಂಜಿನಿಯರಿಂಗ್ ಮತ್ತು ಶೈಕ್ಷ ಣಿಕ ಕ್ಷೇತ್ರಕ್ಕೆ >> ಅವರು ನೀಡಿದ ಅನನ್ಯ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿಯನ್ನು ಸರಕಾರ ಘೋಷಿಸಿತ್ತು. ಭಾರತದ >> ಎಂಟು ವಿಶ್ವವಿದ್ಯಾಲಯಗಳು ವಿಶ್ವೇಶ್ವರಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದವು >> ಎಂಬುದು ನಿಮಗೆ ಗೊತ್ತಾ? >> >> ಸಮೀರ ( ಕನ್ನಡ ಭಾಷಾ ಶಿಕ್ಷಕಿ >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
