ಅದ್ಬುತ ಸರ್
On Sep 30, 2017 11:13 AM, "mahendra ks" <[email protected]> wrote:

> ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ  ಸಾಹಿತಿಗಳು...!!
>
> *ಗಳಗನಾಥರು:-* ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ
> ಪುಣ್ಯಾತ್ಮರು ಇವರು.ಸತ್ತಮೇಲೆ ಅಂತ್ಯಸಂಸ್ಕಾರ ಮಾಡಲೂ ಇವರ ಮನೆಯವರ ಬಳಿ ಹಣವಿರಲಿಲ್ಲ.
> ಪುಸ್ತಕಗಳಿಂದಲೇ ಇವರ ಅಂತ್ಯಸಂಸ್ಕಾರ  ಮಾಡಬೇಕಷ್ಟೇಯೆಂದು ಅವರ ಮನೆಯವರು ಅ ಸಂದರ್ಭದಲ್ಲಿ
> ನೊಂದುಕೊಂಡು ನುಡಿದಿದ್ದರು.
>
> *ವಿ.ಸೀತಾರಾಮಯ್ಯ* ಇವರು ದಿನಾ ಬೆಳಿಗ್ಗೆ ಹೊಟೇಲಿನಿಂದ ಹತ್ತು ಇಡ್ಲಿ
> ತರಿಸುತ್ತಿದ್ದರಂತೆ.ಅದರಲ್ಲಿ ಒಂದು ಇಡ್ಲಿಯನ್ನಷ್ಟೇ ತಾವು ತಿಂದು ಉಳಿದ ಒಂಬತ್ತು
> ಇಡ್ಲಿಯನ್ನು ಪ್ರಾಣಿ ಪಕ್ಷಿಗಳಿಗೆ ತಿನ್ನಿಸುತ್ತಿದ್ದರು.ಇದನ್ನು ಅವರು ತಮ್ಮ
> ಬದುಕಿನುದ್ದಕ್ಕೂ ದಿನಚರಿಯಂತೆ ಪಾಲಿಸುತ್ತಿದ್ದರು.
>
> *ದ.ರಾ.ಬೇಂದ್ರೆ:-* ಇವರೊಮ್ಮೆ ದಾರಿಯಲ್ಲಿ ನಡೆದುಕೊಂಡು ಬರಬೇಕಾದರೆ ಚಪ್ಪಲಿ
> ಕಿತ್ತುಹೋಗುತ್ತದೆ.ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಸ್ವಲ್ಪ ದೂರ ನಡೆದುಕೊಂಡು
> ಬಂದಮೇಲೆ,ದಾರಿಪಕ್ಕ ಕೂತಿದ್ದ ಚಮ್ಮಾರ ಸಿಗುತ್ತಾನೆ.ಬಿರುಬಿಸಿಲು ಆಗಿದ್ದರಿಂದ ಬೇಂದ್ರೆ
> ಅಜ್ಜ ಛತ್ರಿಬಿಡಿಸಿಕೊಂಡಿದ್ದರು.ಚಮ್ಮಾರ ತಮ್ಮ  ಚಪ್ಪಲಿಯನ್ನು ರಿಪೇರಿ ಮಾಡುವಾಗ ಅವರು
> ತಮ್ಮ ಛತ್ರಿಯನ್ನು ಬಿಸಿಲಲ್ಲಿದ್ದ ಚಮ್ಮಾರನಿಗೆ ಹಿಡಿದಿದ್ದರು..! ಇದರಿಂದ ಮುಜುಗರಗೊಂಡ
> ಚಮ್ಮಾರ,'ನಾನು ದಿನಾ ಬಿಸಿಲಲ್ಲೇ ಕೂತು ಕೆಲಸ ಮಾಡುವವನು ನನಗಿದೆಲ್ಲ ಬೇಡ'ಅಂದ.ಅದಕ್ಕೆ
> ಬೇಂದ್ರೆ ಅಜ್ಜ ನೀನಿಗ ನಿನ್ನ ಕೆಲಸ ಮಾಡುತ್ತಿದ್ದೀಯ,ನಾನೀಗ ನನ್ನ ಕೆಲಸ ಮಾಡುತ್ತಿದ್ದೇನೆ
> ಅಂದರಂತೆ...!
>
> *ಡಿವಿಜಿ:-* ಡಿವಿಜಿಯವರು ತಮ್ಮ ಹೆಂಡತಿಯನ್ನು ಆಪ್ತರೊಬ್ಬರ ಮದುವೆಗೆ ಹೋಗಲು ಹೇಳಿ ತಾವು
> ಬೇರೊಂದು ಕಾರ್ಯಕ್ರಮಕ್ಕೆ ಹೋಗಿದ್ದರು.ಕಾರ್ಯಕ್ರಮ ಮುಗಿಸಿ ಮನೆಗೆ ಬಂದಾಗ ಹೆಂಡತಿ
> ಮನೆಯಲ್ಲಿರೋದನ್ನು ನೋಡಿ ಸಿಟ್ಟಾದ ಡಿವಿಜಿ,ಮದುವೆಗೆ ಯಾಕೆ ಹೋಗಲಿಲ್ಲವೆಂದು ಹೆಂಡತಿಯನ್ನು
> ಪ್ರಶ್ನಿಸಿದರು.ಅವರ ಪತ್ನಿ,'ಮಗನನ್ನು ಕಳಿಸಿದ್ದೇನೆ'ಅಂದರು.ಡಿವಿಜಿ,ಬಹಳ ಆತ್ಮೀಯರ ಮದುವೆ
> ಎಂದು ಹೇಳಿದ್ದೆನ್ನಲ್ಲ ನೀನೇ ಹೋಗಬೇಕಿತ್ತು ಎಂದು ಮತ್ತೊಮ್ಮೆ ಏರಿದ ಧ್ವನಿಯಲ್ಲಿ
> ಹೇಳಿದರು.ಆಗ ಅವರ ಪತ್ನಿ,'ನನ್ನತ್ರ ಇರೋದು ಒಂದೇ ಸೀರೆ.ಅದು ಕೂಡ ಅಲ್ಲಿ ಇಲ್ಲಿ
> ಹರಿದಿದೆ.ಅದನ್ನು ಉಟ್ಕೊಂಡು ಮದ್ವೆಗೆ ಹೋದ್ರೆ ನನ್ ಯಜಮಾನ್ರ ಮಾನ ಹೋಗುತ್ತೆ. ಅದ್ಕೆ
> ಮಗನನ್ನು ಕಳಿಸಿದೆ ಅಂದರಂತೆ.ಈ ಮಾತನ್ನು ಕೇಳಿದ ಡಿವಿಜಿಯವರಿಗೆ ಮರು ಮಾತನಾಡಲು ಅವಕಾಶವೇ
> ಇರಲಿಲ್ಲ.
>
> *ಮಾಸ್ತಿ:-* ಜಿಲ್ಲಾಧಿಕಾರಿಯಾಗಿದ್ದ ಮಾಸ್ತಿಯವರು ಒಮ್ಮೆ ಊರಭೇಟಿಗೆ
> ತೆರಳಿರುತ್ತಾರೆ.ದಾರಿ ಮಧ್ಯೆ ಬಾಯಾರಿಕೆ ಆದ್ದರಿಂದ ಸಾರ್ವಜನಿಕ ಬಾವಿಯಿಂದ ನೀರು
> ಸೇದುತ್ತಿದ್ದ ವ್ಯಕ್ತಿಯ ಬಳಿ ಒಂದು ಬೊಗಸೆ ಕುಡಿಯಲು ನೀರು ಕೇಳುತ್ತಾರೆ.ಅವನು ನೀರನ್ನು
> ಸೇದಿ ಮಾಸ್ತಿಯವರಿಗೆ ಕೊಡುವ ಬದಲು ಪಕ್ಕದಲ್ಲಿರುವ ಟ್ಯಾಂಕಿಗೆ
> ಸುರಿಯುತ್ತಾನೆ.ಮಾಸ್ತಿಯವರಿಗೆ ಅವನು ನೀರು ಕೊಡದ್ದು ನೋಡಿ ಮುಜುಗರವಾಗುತ್ತದೆ.ಮತ್ತೆ ಅವನು
> ಕೊಡವನ್ನು ಬಾವಿಗಿಳಿಸಿ ನೀರು ಸೇದುತ್ತಾನೆ.ಈ ಬಾರಿ ಮಾಸ್ತಿಯವರನ್ನು ಕರೆದು ಬೊಗಸೆ
> ಹಿಡಿಯುವಂತೆ ಹೇಳಿ ನೀರು ಸುರಿಯುತ್ತಾನೆ.ಮಾಸ್ತಿಯವರು ಆಶ್ಚರ್ಯದಿಂದ ಕೇಳುತ್ತಾರೆ ಆಗಲೆ
> ಯಾಕೆ ನೀನು ನನಗೆ ನೀರು ಕೊಡಲಿಲ್ಲ ಎಂದು.ಅದಕ್ಕವನು ಸ್ವಾಮಿ ಈ ಬಾವಿ ತೋಡಿಸುವ ಮೊದಲು
> ಡಿಸಿಯವರು,ಯಾರೇ ನೀರು ಸೇದಿದರು ಮೊದಲ ಕೊಡವನ್ನು ಪಕ್ಕದಲ್ಲಿರುವ ಟ್ಯಾಂಕಿಗೆ ಸುರಿಯಬೇಕು,ಅ
> ನೀರು ಪ್ರಾಣಿಪಕ್ಷಿಗಳಿಗೆ ಕುಡಿಯೋಕೆ ಉಪಯೋಗವಾಗಬೇಕು ಎಂದಿದ್ದರು.ಹೀಗಾಗಿ ಈ ಊರಿನವರು ಅವರ
> ಅ ಮಾತನ್ನು ಪಾಲಿಸುತ್ತಿದ್ದೇವೆ ಎಂದ.ಅಂದಹಾಗೆ ಹಾಗೆ ಆದೇಶ ಮಾಡಿದ್ದ ಡಿಸಿ ಮಾಸ್ತಿಯವರೇ
> ಆಗಿದ್ದರು...!ಊರಿನವರ ಪ್ರಾಮಾಣಿಕತೆಯನ್ನು ನೋಡಿ ಮಾಸ್ತಿಯವರ ಕಣ್ಣುಗಳು
> ಒದ್ದೆಯಾಗಿದ್ದವು..!
>
> ಈ ಮೇರು ಸಾಹಿತಿಗಳ ಬಗ್ಗೆ ಹೆಮ್ಮೆ ಅನಿಸುತ್ತಿದೆ.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to