ಗಂಡ ಹೆಂಡತಿ ಎಷ್ಟೇ ವಯಸ್ಸಾದರೂ ಅವರ ಪ್ರೀತಿ ಬೆಳೆಯುತ್ತಲೇ ಹೋಗುತ್ತದೆ !
ಎಂಭತ್ತು ವರುಷದ ಮುದುಕಿ ತೊಂಭತ್ತರ ಗಂಡನಿಗೆ  ಹೇಳುತ್ತಾಳೆ :
   " ಈ ದಾಂಪತ್ಯಯಾನದಲಿ
     ಎನ್ನ ಕೈ ಪಿಡಿದವರು
     ಹಿಡಿದ ಕೈ ಬಿಡದವರು
     ನೀವಲ್ಲವೇ ನನ್ನ ದೊರೆ ನೀವಲ್ಲವೇ !
           ಹಬ್ಬಗಳು  ಬಂದಾಗ
           ಹೊಸಪಂಚೆ ನಿಮಗಿರಲಿ, ಇರದಿರಲಿ
           ನಾ ಹಳೆ ಸೀರೆ ಉಟ್ಟಾಗ
           ಬಿಟ್ಟುಬಿಡು  ಎಂದವರು
           ಸಾಕುಬಿಡು ಎಂದವರು
           ಹೊಸಸೀರೆ ಕೊಟ್ಟವರು,
           ಮಲ್ಲಿಗೆಯನಿತ್ತವರು,
           ನೀವಲ್ಲವೇ ನನ್ನ ದೊರೆ ನೀವಲ್ಲವೇ ?
    ಮತ್ತೆ ನಾ  ತವರೂರು ಹೊರಟಾಗ
    ಬಾಗಿಲಬಳಿ  ಬಂದವರು‌
    ಬೇಗ ಬಾ  ಎಂದವರು
    ನೀವಲ್ಲವೇ ನನ್ನ ದೊರೆ  ನೀವಲ್ಲವೇ
          ಮತ್ತೆ  ಫೋನುಗಳ ಮಾಡುತ್ತ ,
          ಮನೆಯೊಳಗೆ ನೀನಿಲ್ಲ
          ಬಳೆಗಳ ಸದ್ದಿಲ್ಲ , ಬಾಯಿಗೆ ರುಚಿಯಿಲ್ಲ
          ಬೇಗನೆ ಬರುವೆಯಲ್ಲ  ಎಂದವರು
          ನೀವಲ್ಲವೇ, ನನ್ನ ದೊರೆ ನೀವಲ್ಲವೇ ? "
ಅದಕ್ಕೆ  ಗಂಡ ಹೇಳ್ತಾನೆ !
       " ಬೇರಿಲ್ಲದೆ ಮರವೆಲ್ಲಿದೆ
         ಮರವಿಲ್ಲದೆ ಹೂವೆಲ್ಲಿದೆ
         ಹೂವಿಲ್ಲದೆ ಹಣ್ಣೆಲ್ಲಿದೆ
         ನೀನಿಲ್ಲದ ಮನೆ ಯಾರಿಗೆ ಬೇಕಾಗಿದೆ ?
ಎಂತಹ ಹೃದಯಸ್ಪರ್ಶಿ ಮಾತು !....
           "  ಮನೆಯೊಳಗೆ ಬಂದವಳೇ ,
              ಮನೆಯಾಕೆ ಆದವಳೇ,
              ಮನದೊಳಗೆ ನಿಂದವಳೇ,
             ನೀನಲ್ಲವೇ ನನ್ನರಸಿ ನೀನಲ್ಲವೇ ?
      ಬಡತನವೊ ,ಸಿರಿತನವೊ ,
      ಕಷ್ಟನಷ್ಟಗಳಲಿ ಎನ್ನ ಜೊತೆ ಬಂದವಳು !
      ಜೊತೆಯಾಗಿ ನಿಂದವಳು
      ನೀನಲ್ಲವೇ ನನ್ನರಸಿ ನೀನಲ್ಲವೇ ! "
ಮತ್ತೆ ಕೊನೆಗೆ  ಆ ಮುದುಕ ಒಂದು ಮಾತು ಹೇಳುತ್ತಾನೆ !
         "  ವೃದ್ಧಾಪ್ಯ ಬಂದಾಗ
            ಆರೋಗ್ಯ ಹೋದಾಗ ,
            ಆದಾಯ ಇರದಾಗ ,
            ಹಣವೆಲ್ಲ ಸವೆದಾಗ‌ ,
            ಬಂಧುಗಳು  ಬರದಾಗ ,
            ಮಕ್ಕಳು ಮರೆತಾಗ ,
            ನಾ ಒಳಗೊಳಗೆ ಅತ್ತಾಗ ,
            ಬಳಿ ಬಂದು ನಿಂದವಳು ,
            ಮರುಗದಿರಿ ಅಂದವಳು ,
            ಕಣ್ಣೀರ ತಡೆದವಳು ,
            ಯಾರಿರಲಿ, ಇರದಿರಲಿ ,
           ನಾನಿಲ್ಲವೇ ನಿಮ್ಮ ಜೊತೆ , ಎಂದವಳು ,
           ನೀನಲ್ಲವೇ ನನ್ನರಸಿ ನೀನಲ್ಲವೇ !

    ಇದು  ನಮ್ಮ ಭಾರತೀಯ ಸಂಸ್ಕೃತಿ !

ಇದು ತಳ್ಳಿದ ಸಂದೇಶವೇ ಆದರೂ, ಇದನ್ನು ನನಗೆ ತಳ್ಳಿ ದವರಿಗೆ ನಮನ ಮಾಡಿ ನಿಮಗೆ
ತಳ್ಳಿದ್ದೇನೆ.
ನೀವು ಸಹ ನಿಮ್ಮ ಬಂಧು ಮಿತ್ರರುಗಳಿಗೆ ತಳ್ಳಿ.

ಸಮೀರ ( ಕನ್ನಡ ಭಾಷಾ ಶಿಕ್ಷಕಿ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to