ಪಣ

   ಕನ್ನಡ ತಾಯಿಯ ಕುವರರು ನಾವು
   ಕಾವೇರಿ ಮಡಿಲಲಿ ಜನಿಸಿಹೆವು
   ಕೃಷ್ಣೆ- ತುಂಗೆಯರ ನೀರನು ಸವಿದು
   ಭೀಮೆ- ಹೇಮೆಯಲಿ ಮಿಂದಿಹೆವು //೧//

    ಕಲೆಗಳ ವೈಭವ, ಗತ ಇತಿಹಾಸವ
    ಕವಿಗಳ  ಕೃತಿಯಲಿ ಅರಿತಿಹೆವು
    ಆಳಿದ ಅರಸರ ಮೇಲಾದ ಕೊಡುಗೆಯ
    ಬಾಳಿನಲಿ  ಅಳವಡಿಸಿಕೊಳ್ಳುವೆವು //೨//

    ದಾಸರು ಶರಣರು ಹಚ್ಚಿದ ಹಣತೆಗೆ
    ಬತ್ತಿ - ತೈಲ ನಾವಾಗುವೆವು
    ಮಧ್ವ,ರಾಮಾನುಜ,ಬಸವ,ಶರೀಫರ
    ತತ್ವಗಳ ಪರಿಪಾಲಿಸುವೆವು //೩//

   ಹೊಸ ಮನ್ವಂತರಕೆ ನಾಂದಿಯ ಹಾಡಿದ
   ವಿಶ್ವೇಶ್ವರಯ್ಯರ  ನೆನೆಯುವೆವು
   ನವಕರ್ನಾಟಕ ನಿರ್ಮಿಸೆ ದುಡಿದ
   ತ್ಯಾಗಪುರುಷರೆಮ್ಮ ಆದರ್ಶವು //೪//

  ಕನ್ನಡ ನೆಲದಲಿ ನೆಲೆ ನಿಂತಿರುವ
 ಅನ್ಯರಿಗೆ ಕನ್ನಡ ಕಲಿಸುವೆವು
 ಕಸ್ತೂರಿ ಕನ್ನಡ ಗಂಧದ ಪರಿಮಳ
 ಸಹಸ್ರಮಾನಕೂ ಉಳಿಸುವೆವು //೫//

   * ಚಂದ್ರೇಗೌಡ ನಾರಮ್ನಳ್ಳಿ,

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to