ಸಮೀರ ಅವರೇ ಪಂ. ರೇವಣಾರಾಧ್ಯರು ತಿಳಿಸಿರುವ ಸಂಕ್ರಾತಿ ಹಬ್ಬದ ವಿಶೇಷತೆ,ಮಹತ್ವಗಳ
ವಿಚಾರವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಹಾಗೂ ಸಂಕ್ರಾತಿ ಹಬ್ಬದ ಶುಭಾಶಯಗಳು.
On Jan 14, 2018 12:15 PM, "Sameera samee" <mehak.sa...@gmail.com> wrote:

> *ಮಕರ ಸಂಕ್ರಮಣ ನಿರ್ಣಯ*
>
> ದಿನಾಂಕ *14-01-2018* ಭಾನುವಾರ *ಧನುರ್ಮಾಸ ಸಮಾಪ್ತಿ* ಹಾಗೂ *ಭೋಗಿ* ಹಬ್ಬವನ್ನು
> ಆಚರಿಸಿ.ಈ ದಿನವೇ *ಪ್ರದೋಷ ಸಹ*ಬಂದಿದೆ ಬಹಳ ವಿಶೇಷ *ಶಿವನಿಗೆ* ಪ್ರದೋಷ ಕಾಲದಲ್ಲಿ
> ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ.
>
> ದಿನಾಂಕ  *14-01-2018* ಭಾನುವಾರ *ಮಧ್ಯಾಹ್ನ 2:00* ಗಂಟೆಯಿಂದ *ಉತ್ತರಾಯಣ ಪುಣ್ಯ*
> ಆರಂಭವಾಗುತ್ತದೆ.
>
> ದಿನಾಂಕ *15-01-2018* ರಂದು *ಸೋಮವಾರ ಬೆಳಿಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ*
> ಉತ್ತರಾಯಣ ಪರ್ವಪುಣ್ಯ  ಕಾಲ  ಇರುವುದರಿಂದ *ನದಿ ಸ್ನಾನ,*  *ತಿಲದಾನ* *ತಿಲ ತರ್ಪಣ*
>  *ತಿಲಭಕ್ಷಣ*  *ತಿಲ ತರ್ಪಣ ದಿಗಳಿಂದ *ಸುಖ ಸೌಖ್ಯ*
>
> ಆದ್ದರಿಂದ ಮಕರ ಸಂಕ್ರಮಣವನ್ನು ಸೋಮವಾರ ದಿವಸವೇ ಮಾಡಬೇಕು.
> ಸಡಗರದ ಮಕರ ಸಂಕ್ರಮಣ 2018; ಎಳ್ಳು-ಬೆಲ್ಲ ತಿಂದು ಒಳ್ಳೇ ಮಾತನಾಡಿ.
> ನಮ್ಮ ಋಷಿಮುನಿಗಳ ಪ್ರಕಾರ ಆರು ವೇದಗಳಲ್ಲಿ ಜ್ಯೋತಿಷ್ಯವು ಒಂದು. ಜ್ಯೋತಿಷ್ಯವನ್ನು ವೇದಗಳ
> ಕಣ್ಣೆಂದು ಗುರುತಿಸುತ್ತಾರೆ. ವೇದಗಳ ಕಾಲದಿಂದಲೂ ಶುಭ ಕಾರ್ಯಗಳಿಗೆ ಮೂಹೂರ್ತಾದಿ ಕಾಲವನ್ನು
> ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ ಎಲ್ಲವನ್ನು ಸೂರ್ಯನ ಚಲನದಿಂದ
> ನಿರ್ಧರಿಸುತ್ತಿದ್ದರು. ಸೂರ್ಯನು ಒಂದು ರಾಶಿಯಲ್ಲಿ ಒಂದು ತಿಂಗಳು ಇರುತ್ತಾನೆ.
> ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಾಂತಿ ಕಾಲ
> ಎನ್ನುವರು. (ಅವುಗಳು ಮೇಷ ಸಂಕ್ರಾಂತಿ-ವಿಷುವತ್ ಪುಣ್ಯಕಾಲ, ವೃಷಭ ಸಂಕ್ರಾಂತಿ- ವಿಷ್ಣುಪಾದ
> ಪುಣ್ಯಕಾಲ, ಮಿಥುನ ಸಂಕ್ರಾಂತಿ -ಸಾಡೆಸಾತಿ ಪುಣ್ಯಕಾಲ, ಕಟಕ ಸಂಕ್ರಾಂತಿ, ದಕ್ಷಿಣಾಯನ
> ಪುಣ್ಯಕಾಲ, ಸಿಂಹ ಸಂಕ್ರಾಂತಿ-ವಿಷ್ಣುಪಾದ ಪುಣ್ಯಕಾಲ, ಕನ್ಯಾ ಸಂಕ್ರಾಂತಿ -ಸಾಡೆಸಾ
> ಪುಣ್ಯಕಾಲ, ತುಲಾ ಸಂಕ್ರಾಂತಿ-ವಿಷುವತ್ ಪುಣ್ಯಕಾಲ, ವೃಶ್ಚಿಕ ಸಂಕ್ರಾಂತಿ-ವಿಷ್ಣುಪಾದ
> ಪುಣ್ಯಕಾಲ, ಧನಸ್ಸು ಸಂಕ್ರಾಂತಿ -ಸಾಡೆಸಾತಿ ಪುಣ್ಯಕಾಲ, ಮಕರ ಸಂಕ್ರಾಂತಿ-ಉತ್ತರಾಯಣ
> ಪುಣ್ಯಕಾಲ, ಕುಂಭ ಸಂಕ್ರಾಂತಿ-ವಿಷ್ಣಪಾದ ಪುಣ್ಯಕಾಲ, ಮೀನ ಸಂಕ್ರಾಂತಿ -ಸಾಡೆಸಾತಿ
> ಪುಣ್ಯಕಾಲವೆಂದು ಪ್ರಸಿದ್ದಿಯಗಿದೆ )
>  ವಿಷ್ಣುಪಾದ, ಸಾಡೆಸಾತಿ, ವಿಷ್ಣವತ್, ದಕ್ಷಿಣಾಯನ- ಉತ್ತರಾಯಣ ಪುಣ್ಯಕಾಲಗಳು ಎಂದು
> ವಿಂಗಡಿಸಿರುವರು. ಅವುಗಳಲ್ಲಿ ವಿಷ್ಣುಪಾದಕ್ಕಿಂತಲೂ ಸಾಡೆಸಾತಿ ಪುಣ್ಯಕಾಲ ಶ್ರೇಷ್ಠವಾಗಿದೆ.
> ಸಾಡೆಸಾತಿಕ್ಕಿಂತಲೂ ವಿಷುವತ್ ಪುಣ್ಯಕಾಲ ಶ್ರೇಷ್ಠವಾಗಿದೆ. ವಿಷುವತ್ ಪುಣ್ಯಕಾಲಕ್ಕಿಂತಲೂ
> ಆಯನ ಪುಣ್ಯಕಾಲ ಶ್ರೇಷ್ಠವಾಗಿದೆ. ಅದರಲೂ ದಕ್ಷಿಣಾಯನ ಕಾಲಕ್ಕಿಂತಲೂ ಉತ್ತರಾಯಣ ಕಾಲ
> ಶ್ರೇಷ್ಠವಾಗಿದೆ. ಅಂದರೆ ಸೂರ್ಯ ಮಕರ ರಾಶಿಗೆ ಬರುವ ಪುಣ್ಯಕಾಲ ಶ್ರೇಷ್ಠ.
>  ಉತ್ತರ ಎಂಬ ಪದಕ್ಕೆ ಶ್ರೇಷ್ಠ ಎಂಬ ಅರ್ಥವಿದ್ದು ಇದನ್ನು ಶ್ರೇಷ್ಠವಾದ ದಾರಿ ಎಂದೂ ಕೂಡಾ
> ಅರ್ಥೈಸಬಹುದು ಇದರ ಬಗ್ಗೆ ಭಗವದ್ಗೀತೆಯ 8ನೇ ಅಧ್ಯಾಯದ 24ನೇ ಶ್ಲೋಕದಲ್ಲಿ ಈ ರೀತಿ
> ಉಲ್ಲೇಖವಿದೆ.
>
> ಅಗ್ನಿ ಜ್ಯೋರ್ತಿರ್ ಅಹ:ಶುಕ್ಲ:ಷಣ್ವೈಸ ಉತ್ತರಾಯಣಂ |
> ತತ್ರ ಪ್ರಯತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾ: ||
>
> ಅಂದರೆ ಈ ಕಾಲದಲ್ಲಿ ಎಲ್ಲಾ ಕಾರ್ಯಗಳು ಹೆಚ್ಚು ಶ್ರೇಯಸ್ಕರವಾಗಿ ನಡೆಯುವುದು. ಸ್ವರ್ಗದ
> ಬಾಗಿಲು ತೆರೆದಿರುವುದು. ಮುಕ್ತಿಯನ್ನು ಹೊಂದಲಿರುವ ಸೂತ್ರದ ಬಗ್ಗೆ ಈ ಶ್ಲೋಕದಲ್ಲಿ
> ವಿವರಿಸಲಾಗಿದೆ. ಅರ್ಥಾತ್, ಅಗ್ನಿ, ಜ್ಯೋತಿ, ಹಗಲು ಶುಕ್ಲ ಪಕ್ಷ ಉತ್ತರಾಯಣದ ಆರು
> ತಿಂಗಳುಗಳಲ್ಲಿ ಬ್ರಹ್ಮವಿದರಾದ ದೂಗಿಗಳ ಪ್ರಾಣಗಳು ಬ್ರಹ್ಮದಲ್ಲಿ ವಿಲೀನವಾಗುವುದು. ಇದು
> ಮುಕ್ತಿಯ ಕಡೆಗಿರುವ ಯಾತ್ರೆಯಾಗಿದೆ.
>
> ಮಹಾಭಾರತದಲ್ಲಿ ಇಚ್ಛಾ ಮರಣಿಯಾಗಿದ್ದ ಭೀಷ್ಮರು ಈ ಉತ್ತರಾಯಣಕ್ಕಾಗಿ ಕಾದಿದ್ದರು. ಮನುಷ್ಯರ
> ಒಂದು ವರ್ಷವು ದೇವತೆಗಳ ಒಂದು ದಿನಕ್ಕೆ ಸಮ. ಆ ದಿನ ಹಗಲು-ರಾತ್ರಿಯನ್ನು ಒಳಗೊಂಡಿರುತ್ತದೆ.
> ಭೂಮಿಯಲ್ಲಿ ದಕ್ಷಿಣಾಯನವಿದ್ದಾಗ ದೇವಲೋಕದಲ್ಲಿ ರಾತ್ರಿ. ದೇವತೆಗಳು
> ನಿದ್ರಿಸುತ್ತಿರುತ್ತಾರೆ. ಪಿತೃಗಳ ಜಾಗೃತರಾಗಿರುತ್ತಾರೆ. ಹಾಗಾಗಿ ಈ ಅವಧಿ ಪಿತೃಯನ ನಮಗೆ
> ಉತ್ತರಾಯಣವಾದಾಗ ದೇವತೆಗಳಿಗೆ ಹಗಲು . ಅವರು ಜಾಗೃತವಾಗಿರುವ ಕಾಲ ಹಾಗಾಗಿ ಉತ್ತರಾಯಣದಲ್ಲಿ
> ಸ್ವರ್ಗದ ಬಾಗಿಲು ತೆರೆದಿರುವುದರಿಂದ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ.
> ಆದ್ದರಿಂದ ಭೀಷ್ಮರು ಉತ್ತರಾಯಣ ಬರುವವರಿಗೂ ಜೀವ ಹಿಡಿದಿದ್ದರು.
>
> ಖಗೋಳಶಾಸ್ತ್ರದ ಪ್ರಕಾರ:
> ಸಾಮಾನ್ಯವಾಗಿ ಸೂರ್ಯೋದಯ ಪೂರ್ವದಲ್ಲಿ, ಸೂರ್ಯಾಸ್ತಮಾನ ಪಶ್ಚಿಮದಲ್ಲಿ ಎಂದು ಹೇಳುವುದಾದರೂ
> ಯಾವುದೇ ಸ್ಥಳದಲ್ಲಿ ಕರಾರುವಕ್ಕಾಗಿ ಪೂರ್ವದಲ್ಲೇ ಸೂರ್ಯೋದಯ. ಪಶ್ಚಿಮದಲ್ಲೇ
> ಸೂರ್ಯಾಸ್ತಮಾನವಾಗುವುದು ವರ್ಷದಲ್ಲಿ ಎರಡೇ ದಿನಗಳಂದು. ಆ ದಿನಗಳನ್ನು ಈಕ್ವಿನಾಕ್ಸ್ ಎಂದು
> ಕರೆಯುತ್ತಾರೆ. ಅಂದು ಹಗಲು-ಇರಳು ಸಮವಾಗಿರುವುದು ವರ್ಷದ ಉಳಿದ ದಿನಗಳಲ್ಲಿ ಹಗಲಿರುಳುಗಳ
> ಪಾಲು ಸಮವಾಗಿರುವುದಿಲ್ಲ.
>
> ಈಕ್ವಿನಾಕ್ಸ್ ದಿವಸಗಳ ಹೊರತಾಗಿ ಸೂರ್ಯನ ಉದಯ ಪೂರ್ವದ ಬಲಕ್ಕೆ (ಉತ್ತರಕ್ಕೆ) ಅಥವಾ
> ಎಡಕ್ಕೆ (ದಕ್ಷಿಣಕ್ಕೆ) ಆಗುತ್ತದೆ. ಸೂರ್ಯನು 6 ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುವ
> ಕಾರಣ ಅದನ್ನು ಉತ್ತರಾಯಣ ಕಾಲ ಎನ್ನುವರು. ವಾತಾವರಣದಲ್ಲಿ ಬದಲಾವಣೆಗಳಾಗುತ್ತದೆ.ಹಗಲಿನ
> ಅವಧಿ ಹೆಚ್ಚು ಇರಳಿನ ಅವಧಿ ಕಡಿಮೆಯಗುತ್ತಾ ಹೋಗುತ್ತದೆ. ಚಳಿಯೂ ಕಡಿಮೆಯಗುತ್ತಾ ಹೋಗಿ
> ವಾತಾವರಣ ಉಲ್ಲಾಸದಾಯಕವಾಗಿರುತ್ತದೆ. ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ
> ಸಂಕ್ರಾಂತಿ ಬರುವುದು.
>
> ಆಚರಣೆ:
> ಸೂರ್ಯದೇವನು ತನ್ನ ಏಳು ಕುದುರೆಗಳಿಂದ ಎಳೆಯಲ್ಪಡುವ ಭವ್ಯ ರಥದಲ್ಲಿ ಮಕರ ರಾಶಿಗೆ
> ಪ್ರವೇಶಿಸುವ ಕಾಲವೇ ಮಕರ ಸಂಕ್ರಾಂತಿ ಹಬ್ಬ. ಸಂಕ್ರಾಂತಿಯ ನಾಯಕ ಬೆಳಕು ನೀಡುವ
> ಸೂರ್ಯನಾದರೆ. ನಾಯಕಿ ಸಸ್ಯ ಬೆಳೆಯಲು ಅನುವು ಮಾಡುವ ಭೂಮಿತಾಯಿ. ಹಾಗೂ ವ್ಯವಸಾಯಕ್ಕೆ ಸಹಾಯ
> ಮಾಡುವ ದನಕರು. ಯಂತ್ರಗಳು ಪೋಷಕ ನಟರು. ಸಂಕ್ರಾಂತಿ ಹಬ್ಬದ ಹಿಂದಿನ ದಿನವೇ ಭೋಗಿ ಹಬ್ಬ,
> ಅಂದು ಹಳೆಯದನ್ನು ತೊರೆದು ಹೊಸದನ್ನು ಪಡೆದು ಸಂತೋಷಗೊಂಡು ಸಡಗರದಿಂದ ಮನೆಯನ್ನು
> ಶುದ್ದಿಗೊಳಿಸುವುದು. ಮನೆ ಮಂದಿ ಎಲ್ಲಾ ಎಳ್ಳು ಎಣ್ಣೆ ಸ್ನಾನ ಮಾಡಿ ನೂತನ ವಸ್ತ್ರಗಳನ್ನು
> ಧರಿಸುವುದು. ಅಂದು ಅಕ್ಕಿ ರೊಟ್ಟಿ, ಸಿಹಿ ಕುಂಬಳಕಾಯಿ ಪಲ್ಯ, ಮನೆ ಅವರೆಕಾಯಿ ಪಲ್ಯ
> ಭೋಜನದಲ್ಲಿ ಪ್ರಮುಖವಾಗಿರುವುದು.
>
> ಸಂಕ್ರಾಂತಿ ಹಬ್ಬಕ್ಕೆ ಪ್ರತ್ಯೇಕವಾದ ಯಾವುದೇ ಪೂಜಾವಿಧಾನ ವ್ರತವಿಲ್ಲ. ಒಂದು ವಾರದಿಂದಲೇ
> ಮಹಿಳೆಯರು ಸಡಗರದಿಂದ ತಯಾರಿಸಿದ ಸಕ್ಕರೆ ಅಚ್ಚು, ಹುರಿದ ಬಿಳಿ ಎಳ್ಳು ,ಸಿಪ್ಪೆತೆಗೆದ
> ಕಡಲೇಕಾಯಿ ಬೀಜ, ಬೆಲ್ಲ ಕೊಬ್ಬರಿ, ಹುರಿಗಡಲೆ ಈ ಐದು ಸಾಮಗ್ರಿಗಳನ್ನು ಸರಿಯಾದ
> ಪ್ರಮಾಣದಲ್ಲಿ ಮಿಶ್ರಮಾಡಿ ದೇವರಿಗೆ ಕಬ್ಬು, ಬಾಳೆಹಣ್ಣುಗಳ ಜೊತೆ ನೈವೇದ್ಯ ಮಾಡುವರು ಹಾಗೂ
> ಹೊಸ ಧಾನ್ಯ , ಎಳ್ಳು, ಕುಂಬಳಕಾಯಿ, ಹತ್ತಿ ಸಜ್ಜೆ ,ವಸ್ತ್ರವನ್ನು ಪುರೋಹಿತರಿಗೆ ಕೊಟ್ಟು
> ನಮಸ್ಕಾರ ಮಾಡಿ ಅವರ ಅಶೀರ್ವಾದ ಪಡೆಯುತ್ತಾರೆ. ದನಕರುಗಳನ್ನು ವಿಶೇಷವಾಗಿ ಸಿಂಗರಿಸಿ
> ಮನೆಯಲ್ಲಿ ಮಾಡಿದ ವಿಶೇಷ ತಿನಿಸುಗಳನ್ನು ಅವುಗಳಿಗೆ ತಿನ್ನಿಸುತ್ತಾರೆ. ವೈಭವದ
> ಮೆರವಣಿಗೆಯಲ್ಲಿ ಅವುಗಳನ್ನು ಊರೆಲ್ಲಾ ತಿರುಗಾಡಿಸುತ್ತಾರೆ. ವರ್ಷವಿಡೀ ರೈತನೊಂದಿಗೆ
> ಬಿಡುವಿಲ್ಲದೆ ದುಡಿದ ಆ ಪ್ರಾಣಿಗಳಿಗೆ ಒಂದೆರಡು ದಿನಗಳು ವಿರಾಮವೂ ದೊರೆಯುತ್ತದೆ. ಈ ರೀತಿ
> ದನಕರುಗಳಿಗೂ ಗೌರವ ನೀಡುವರು. ಮನೆಯ ಹಿರಿಯರು (ತಂದೆ ಅಥವಾ ತಾಯಿ ಇಲ್ಲದವರು)
> ಪಿತೃದೇವತೆಗಳಿಗೆ ಪರ್ವಕಾಲದಲ್ಲಿ ಎಳ್ಳನಿಂದ ತರ್ಪಣ ನೀಡುವು ಅಂದಿನ ವಿಶೇಷ ಕಾರ್ಯಗಳಲ್ಲಿ
> ಒಂದು.
>
> ಕೆಲವು ಪ್ರದೇಶಗಳಲ್ಲಿ ಪವಿತ್ರ ಸ್ಥಳಗಳಾದ ಪ್ರಯಾಗ, ಹರಿದ್ವಾರ್ , ಉಜ್ಜೈನಿ, ನಾಸಿಕ
> ಮೂದಲಾದೆಡೆಗಳಲ್ಲಿ ವಿಶೇಷ ಮೇಳಗಳು ನಡೆಯುತ್ತದೆ. 12 ವರುಷಕ್ಕೊಮ್ಮೆ ಬರುವ ಕುಂಭಮೇಳ
> ಹರಿದ್ವಾರದಲ್ಲಿ ನಡೆಯುತ್ತದೆ.
>
>
> ಎಳ್ಳಿನ ವಿಶೇಷತೆ:
> ಸಂಕ್ರಾಂತಿಯ ಆಚರಣೆಯಲ್ಲಿ ಎಳ್ಳು ಬೆಲ್ಲದ ಸೇವನೆಯು ಆರೋಗ್ಯಕರವಾಗಿರುತ್ತದೆ. ಎಳ್ಳಿಗೆ
> ಶಾಖವನ್ನು ಮಾಡುವ ಶಕ್ತಿಯಿರುವುದರಿಂದಲೇ ಚಳಿಗಾಲದಲ್ಲಿ ಇದರ ಸೇವನೆ ಉತ್ತಮ. ಬರಿಯ ಎಳ್ಳು
> ಸೇವನೆಯು ಕಫ, ಪಿತ್ತ ರೋಗವೃದ್ದಿಗೆ ಕಾರಣವಾಗುವುದರಿಂದ ಎಳ್ಳಿನೊಡನೆ ಹುರಿದ ಕಡಲೆ ಬೀಜ
> ,ಕೊಬ್ಬರಿ, ಬೆಲ್ಲವನ್ನು ಸೇವಿಸಲಾಗುತ್ತದೆ. ಹಾಗೂ ಹವಾಮಾನದಲ್ಲಿ ನಿಧಾನವಾಗಿ ಉಷ್ಣತೆ
> ಹೆಚ್ಚುತ್ತಾ ಹೋಗುವುದರಿಂದ ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಏರುಪೇರು ಮಾಡುತ್ತದೆ. ಹೃದಯದ
> ಬಡಿತ ಹಾಗೂ ರಕ್ತ ಚಲನೆ ಹೆಚ್ಚುತ್ತದೆ. ಇದನ್ನು ಹತೋಟಿಯಲ್ಲಿಡಲು ಬೋರೆ ಹಣ್ಣು ಔಷಧಿ ರೀತಿ
> ಕೆಲಸ ಮಾಡುತ್ತದೆ. ಜಡ್ಡು ಆಲಸ್ಯಗಳನ್ನು ದೂರ ಮಾಡುತ್ತದೆ.
>
> ನಮ್ಮ ಹಿರಿಯರು ತುಂಬ ಬುದ್ದಿವಂತರು ಯವ ಋತುವಿನಲ್ಲಿ ಯಾವ ಯಾವ ಆಹಾರ ದೇಹಕ್ಕೆ ಅವಶ್ಯಕ
> ಎಂದು ಅರಿತು ಹಬ್ಬಹರಿದಿನಗಳ ಮೂಲಕ ಆರೋಗ್ಯದ ದೃಷ್ಟಿಯಿಂದ ವೈಜ್ಞಾನಿಕವಾಗಿಯೂ ಹಬ್ಬ ಆಚರಣೆ
> ಮಾಡುವುದರ ಹಿಂದಿನ ಗುಟ್ಟು. ನಮ್ಮ ಬಾಳಲ್ಲೂ ಕತ್ತಲೆ ಹೋಗಿ ಹೊಸ ಬೆಳಕು ಬರಲಿ ಎಂದು ಹರಸುವ.
> ವೇ. ಪಂಡಿತ ರೇವಣ್ಣಾರಾಧ್ಯರು ಶ್ರೀರಾಂಪುರ ಮೈಸೂರು
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to