ಕನ್ನಡ ಸಾಹಿತ್ಯ ಪರಿಷತ್ ಅಧಿಕಾರಾವಧಿ
 ಮೂರೇ ವರ್ಷ ಸಾಕು ಐದು ವರ್ಷ ಬೇಡ :

   * * * ಫೆ.೨೫ ರಂದು ಹುಲಿಕಲ್ ನಟರಾಜ ಮುಖ್ಯಸ್ಥಿಕೆಯಲ್ಲಿ " ನಾವು ಕ.ಸಾ.ಪ ಸದಸ್ಯರು
" ಎಂಬ ಶೀರ್ಷಿಕೆ ಅಡಿಯಲ್ಲಿ ದಾವಣಗೆರೆಯಲ್ಲಿ ಸಭೆ ನಡೆಯಲಿದೆ * * *

   * ಕನ್ನಡ ಸಾಹಿತ್ಯ ಪರಿಷತ್ ನಮ್ಮ ಕನ್ನಡಿಗರ ಹೆಮ್ಮೆಯ ಸರಸ್ವತಿ ಮಂದಿರ. ಅದು
ಮೊದಲು ಸಾಹಿತಿಗಳ ಹಾಗೂ ಸಾಹಿತ್ಯಾಸಕ್ತರ ನೆಲೆವೀಡಾಗಿತ್ತು. ಈಗೀಗ ಅದೊಂದು
ವಿಧಾನಸೌಧವಾಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ. ಈಗಿನ ರಾಜ್ಯ ಸಮಿತಿಯು ಅಧ್ಯಕ್ಷರ
ಆಡಳಿತಾವಧಿಯನ್ನು ೩ ವರ್ಷಗಳಿಂದ ೫ ವರ್ಷಗಳಿಗೆ ಏರಿಸಲು ಹೊರಟಿರುವುದು ಸರಿಯಲ್ಲ.

   * ಹೀಗಾದಲ್ಲಿ ಈಗಾಗಲೆ ಜಡವಾಗುತ್ತ ಸಾಗುತ್ತಿರುವ ಕಸಾಪವು ಹಣ, ಅಧಿಕಾರ, ಗುಂಪು
ಕಟ್ಟಿಕೊಂಡು ಮೆರೆಯುವ ಮರಿ ರಾಜಕೀಯ ಪುಡಾರಿಗಳ ತಂಗುದಾಣವಾಗುತ್ತದೆ.

    * ಈಗಾಗಲೇ ಕನ್ನಡ ಸಾಹಿತ್ಯ ಕ್ಷೇತ್ರವು ಸೃಜನಶೀಲತೆ ಕ್ರಿಯಾಶೀಲತೆ ಕಳೆದುಕೊಂಡು
ಬಡವಾಗಿ ಹೋಗುತ್ತಿದೆ. ಚುನಾವಣೆ ಖರ್ಚು ಅಧಿಕವಾಗಿ ವ್ಯರ್ಥವಾಗುತ್ತದೆ ಎಂಬ ಕಾರಣ
ಮುಂದಿಟ್ಟುಕೊಂಡು ಈ ತಪ್ಪು ನಿರ್ಧಾರ ಕೈಗೊಳ್ಳುತ್ತಿರುವುದು ಅಧಿಕಾರ ದಾಹದ
ಸೋಗಲಾಡಿತನವಲ್ಲದೆ ಬೇರೇನೂ ಅಲ್ಲ.

   * ಈ ಹಿಂದೆ ಅಧಿಕಾರ ಪಡೆಯಲು ಹೇಗೊ ಹೇಗೋ ಹಣದ ಗಳಿಸಿದ ಕೆಲವು ಅಭ್ಯರ್ಥಿಗಳು ತಮ್ಮ
ಹಣವನ್ನು ನೀರಂತೆ ಖರ್ಚು ಮಾಡುವ ಮೂಲಕ ಕಸಾಪವನ್ನು ರಾಜಕೀಯ ಕ್ಷೇತ್ರ ಮಾಡಿದ್ದಾರೆ.

    * ಯಾವುದೇ ಕಾರಣಕ್ಕೂ ೫ ವರ್ಷಕ್ಕೊಮ್ಮೆ ಚುನಾವಣೆ ನಡೆಸುವಂತೆ ಕಸಾಪ ಬೈಲಾ
ತಿದ್ದುಪಡಿ ಮಾಡಬಾರದು. ಈ ನಿರ್ಧಾರವನ್ನು ಜಾರಿಗೆ ತರಲು ನಮ್ಮ ಹಿರಿಕಿರಿ ಸಾಹಿತಿಗಳು
ಹಾಗೂ ಸಮಗ್ರ ಕನ್ನಡಿಗರು ವಿರೋಧಿಸಬೇಕು. ಈ ಬಗ್ಗೆ ನಾಡಿನಾದ್ಯಂತ ಸಾರ್ವಜನಿಕವಾಗಿ ಚರ್ಚೆ
ಚಿಂತನೆ ಸಭೆಗಳು ಜಿಲ್ಲೆ ತಾಲ್ಲೂಕು ಮಟ್ಟಗಳಲ್ಲಿ ನಡೆಯಬೇಕಿದೆ.

    * ದಾವಣಗೆರೆಯಲ್ಲಿ ನಾವು ನಾಳೆ ಭಾನುವಾರ ಫೆ. 25 ರಂದು ಬೆಳಗ್ಗೆ 11 ಗಂಟೆಗೆ
ಕಸಾಪ ಆಜೀವ ಸದಸ್ಯರ ಸಭೆ ಕರೆದಿದ್ದೇವೆ. ಸ್ಥಳ: ಕನ್ನಡ ಕಾವ್ಯ ಮಂಟಪ, ವಿದ್ಯಾನಗರ
ಉದ್ಯಾನವನ, ದಾವಣಗೆರೆ‌‌

  * ಈ ಸಭೆಗೆ ಪವಾಡ ಗುಟ್ಟುಬಯಲು ಖ್ಯಾತಿಯ ಜಾದುಗಾರರಾದ ಹುಲಿಕಲ್ ನಟರಾಜ್ ಹಾಗೂ
ವಿವಿಧ ಜಿಲ್ಲೆಗಳ ಹಿರಿಕಿರಿ ಕಸಾಪ ಸದಸ್ಯರು ಆಗಮಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ
ಎಲ್ಲಾ ತಾಲ್ಲೂಕುಗಳ ಕಸಾಪ ಸದಸ್ಯರು ಆಗಮಿಸಿ ಕಸಾಪ ಉಳಿಸಿ ಅಭಿಯಾನಕ್ಕೆ ಬಲ ತಂದುಕೊಡಲು
ವಿನಂತಿ.

   * ಅಂದು ಈ ಸರ್ವಾಧಿಕಾರಿ ಧೋರಣೆಯ ಕಸಾಪ ಅಧ್ಯಕ್ಷರಾದ ಮನು ಬಳಿಗಾರರು ಕೈಗೊಂಡಿರುವ
೩ರ ಬದಲು ೫ ವರ್ಷ ಅಧಿಕಾರಾವಧಿ ಮಾಡುವ ನಿರ್ಧಾರಗಳನ್ನು ಕೈಬಿಡುವಂತೆ ಒತ್ತಾಯಿಸಲಾಗುವುದು.
ನಾಡಿನಾದ್ಯಂತ ಹೀಗಾಗಲು ಬಿಡದಂತೆ ಹೋರಾಟವನ್ನು ನಡೆಸಲು ಕರೆ ನೀಡಲಾಗುವುದು.

  * ಮಾರ್ಚ್ ೧೫ ರಂದು ಕುಂದಾಪುರ ತಾಲ್ಲೂಕಿನ ಪುಟ್ಟ ಗ್ರಾಮದಲ್ಲಿ ನಡೆಸಲಿರುವ 'ವಿಶೇಷ
ಸಕಲ ಸದಸ್ಯರ ಸಭೆ' ಯನ್ನು ಬೆಂಗಳೂರು ಅಥವಾ ರಾಜ್ಯದ ಮಧ್ಯಭಾಗ ದಾವಣಗೆರೆಯಲ್ಲಿ ನಡೆಸಲು
ಒತ್ತಾಯಿಸಲಾಗುವುದು. ಅಲ್ಲದೆ ಈ ಸರ್ವಾಧಿಕಾರಿ ಧೋರಣೆ ಕುರಿತು ಹಾಲಿ ಸಮಿತಿಯ ವಿರುದ್ಧ
ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು.

  * ದಯವಿಟ್ಟು ಸಕಲ ಕಸಾಪ ಸದಸ್ಯರೂ ಈ ದಾವಣಗೆರೆಯಲ್ಲಿ ನಡೆಯುವ ಸಭೆಗೆ ಬನ್ನಿ. ಈ
ಸಂದೇಶವನ್ನು ದಯಮಾಡಿ ಎಲ್ಲರಿಗೂ ರವಾನಿಸಿರಿ.

  * ದಯಮಾಡಿ ದೂರದರ್ಶನ ಹಾಗು ಪತ್ರಿಕಾ ಮಾದ್ಯಮ ಮಿತ್ರರು ಈ ಸಂದೇಶವನ್ನು ರಾಜ್ಯ ಮಟ್ಟದ
ಸುದ್ಧಿಯಾಗಿ ಪ್ರಕಟಿಸಿರಿ. ದಾವಣಗೆರೆಯಲ್ಲಿ ನಡೆವ ಸಭೆಗೆ ತಮ್ಮ ಮಾದ್ಯಮ ಪ್ರತಿನಿಧಿಗಳನ್ನು
ಕಳುಹಿಸಿಕೊಡಲು ವಿನಂತಿಸಿಕೊಳ್ಳುತ್ತೇವೆ.

.....ಆರ್. ಶಿವಕುಮಾರಸ್ವಾಮಿ ಕುರ್ಕಿ, ದಾವಣಗೆರೆ ಕನ್ನಡ ಪರಿಚಾರಕ. ಮೊ:೮೯೭೦೯೪೮೨೨೧
email: shivukur...@gmail.com

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to