ಈ ಬಾರಿ ಚುನಾವಣಾ ಆಯೋಗ ಸಂಪೂರ್ಣವಾಗಿ ಸರ್ಕಾರಿ ನೌಕರರನ್ನೆ ಬಳಸಿಕೊಂಡು ಚುನಾವಣೆ ನಡೆಸಲು ಸಿದ್ಧವಾಗಿದೆ. ಈಗಾಗಲೇ ಚುನಾವಣಾ ಆಯೋಗ ಹೆಚ್.ಆರ್.ಎಂ.ಎಸ್ ಮೂಲಕ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ನೌಕರರ ಕೆ.ಜಿ.ಐ.ಡಿ ಮತ್ತು ಹೆಚ್.ಆರ್.ಎಂ.ಎಸ್ ಸಂಖ್ಯೆಯನ್ನು ಜಿಲ್ಲಾಧಿಕಾರಿ ಅವರಿಗೆ ಕಳಿಸಿದ್ದು, ತಾಲೂಕಿನ ವಿಧಾನ ಸಭಾ ಕ್ಷೇತ್ರದಿಂದ ಈಗಾಗಲೇ ಕಳಿಸಿರುವ ಪಟ್ಟಿಯೊಂದಿಗೆ ತಾಳೆ ಮಾಡಿ ಹೆಸರು ಬಿಟ್ಟುಹೋದ, ಮಾಹಿತಿ ನೀಡದ ಪಟ್ಟಿಯನ್ನು ತಾಲ್ಲೂಕು ಕಚೇರಿಗೆ ಅವರಿಗೆ ಸಲ್ಲಿಸಿ, ಸಂಪೂರ್ಣ ವಿವರದೊಂದಿಗೆ ಶನಿವಾರ ಸಲ್ಲಿಸಲು ತಾಲ್ಲೂಕು ಚುನಾವಣಾ ಅಧಿಕಾರಿ ಅವರಿಗೆ ಸೂಚಿಸಿದ್ದಾರೆ. ಹೆಚ್.ಆರ್.ಎಂ.ಎಸ್ ಅಲ್ಲಿ ದಾಖಲಾಗಿರುವ ನೌಕರರ ಪಟ್ಟಿಯನ್ನು ಚುನಾವಣಾ ಆಯೋಗ ನೀಡಿದ್ದು, ಇದರಲ್ಲಿ ಗರ್ಬಿಣಿ ಮಹಿಳೆ, ಒಂದು ವರ್ಷದೊಳಗಿನ ಮಗು, ಅಂಗವಿಕಲ, ನಿವೃತ್ತಿ ಅಂಚಿನಲ್ಲಿ ಇರುವ ಮತ್ತು ತೀವ್ರತರ ಕಾಯಿಲೆ ಇರುವ ನೌಕರರ ಹೊರತುಪಡಿಸಿ ಬೇಕಾಗುವ ಸಿಬ್ಬಂದಿಯನ್ನು ಖಾಸಗಿ ಅವರಿಂದ ಪಡೆದು ಚುನಾವಣಾ ಆಯೋಗದ ಒಪ್ಪಿಗೆ ಪಡೆಯಲು ಸೂಚಿಸಲಾಗಿದೆ. ಒಂದು ವರ್ಷದ ಮಗುವಿನ ಪ್ರಕರಣ - ಮಗುವಿನ ಜನನ ಪ್ರಮಾಣ ಪತ್ರ. ಗರ್ಭಿಣಿ ಮಹಿಳೆ - ತಾಲ್ಲೂಕು ವೈದ್ಯಾಧಿಕಾರಿಯವರ ಮೇಲುರುಜುವಿನೊಂದಿಗೆ ಪ್ರಮಾಣ ಪತ್ರ. ಅಂಗವಿಕಲ ನೌಕರರು - ಜಿಲ್ಲಾ ವೈದ್ಯಾಧಿಕಾರಿಯವರಿಂದ ಪಡೆದ ಅಂಗವಿಕಲ ಪ್ರಮಾಣ ಪತ್ರ. ತೀವೃತರ ಕಾಯಿಲೆ ಮತ್ತು ಶಸ್ತ್ರಚಿಕಿತ್ಸೆ - ಜಿಲ್ಲಾ ವೈದ್ಯಾಧಿಕಾರಿಗಳ ಪ್ರಮಾಣ ಪತ್ರ ಅಥವಾ ಮೇಲು ರುಜು. ವಿಶೇಷ ಕಾರ್ಯಕ್ರಮ - ಆಹ್ವಾನ ಪತ್ರಿಕೆ ಮತ್ತು ಕಾರ್ಯಕ್ರಮ ನಡೆಸಲು ಚುನಾವಣಾ ಆಯೋಗದಿಂದ ಪಡೆದ ನಿರಪೇಕ್ಷಣಾ ಪತ್ರ. ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳದಿರಿ. ವೈದ್ಯಕೀಯ ಕಾರಣ ಸರಿಯಾಗಿ ನೀಡಿರಿ, ಚುನಾವಣಾ ಆಯೋಗ ನೌಕರರು ನೀಡಿರುವ ಪ್ರಮಾಣ ಪತ್ರಗಳನ್ನು ವೈದ್ಯಕೀಯ ಮಂಡಳಿಗೆ ಕಳಿಸಿ, ನೈಜ್ಯತೆ ಪರೀಕ್ಷಿಸುವ ಸಾಧ್ಯತೆ ಇದೆ. ತಪ್ಪು ಮಾಹಿತಿಯನ್ನು ನೀಡಿ ಶಿಸ್ತುಕ್ರಮಕ್ಕೆ ಒಳಗಾಗದಿರಿ.
ಸಮೀರ ( ಕನ್ನಡ ಭಾಷಾ ಶಿಕ್ಷಕಿ -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
