ಬಸವನಾರೆಂಬೆ .....
ಬಸವನಾರೆಂಬೆ........
ಹೊಸ ವಿಚಾರಧಾರೆಗಳ
ಹೆದ್ದಾರಿಯ ತೆರೆದಾತನು..
ಅಸಲಿನಲಿ ಉಸಿರುಗಟ್ಟಿ,ಅದನೇ ಮೆಟ್ಟಿ
ವಿಶಾಲತೆಯನು ಮೆರೆಯುತಾ
ಮನ- ಮನಗಳ ಮುಟ್ಟಿತಟ್ಟಿದ ವಿಭೂತಿಪುರುಷನು...
ಪರಸ್ಥಳದ ಅವ್ಯಕ್ತವನು
ಕರಸ್ಥಳದಲಿ ನೆಲೆಗೊಳಿಸಿ
ಭಕ್ತಿಯ ಹಾದಿಯನು ಸುವ್ಯಕ್ತಗೊಳಿಸಿದವನು..
ಊರ ಹೊರಗಿರುವವರನಲ್ಲ !
ವಲಸು ಮುಕ್ಕುವ ಒಳಗಿರುವವರನೆಲ್ಲ
ಖಂಡಿಸಿ ದೂರ ಅಟ್ಟಿದ ಧೀರನಿವನು....
ಇವನಾರವನೆಂದು ಭೇದವೆಣಿಸದೇ...
ತನ್ನವರೆಂದು ಸಂಗನ ಶರಣರನೆಲ್ಲಾ
ಬಾಚಿ ತಬ್ಬಿಕೊಂಡ ವಿಶ್ವಪ್ರೇಮಿಯು...
ಆ ಲೋಕ ಈ ಲೋಕ ಮೂಲೋಕವಿಲ್ಲ !
ಸತ್ಯವ ನುಡಿವೆಡೆಯೇ ಸಗ್ಗವೆಂದಾತನು
ಕಳುವ ಕೊಲುವ ಹುಸಿವ
ಹಳಿವ ಅಸಹ್ಯಿಸುವ ಬಣ್ಣಿಸದಿರುವ...
ಶುದ್ಧಾಂತರಂಗದ ಸತ್ಪಥವ ತೋರಿದಾತನು.....
ಅನ್ನದಗುಳ ಸೀರೆಎಳೆಯ ,ಹೊನ್ನಿನೆರೆಯಲಿ
ಕಳುವ ತೋರಿದಡೆ ಒರೆಗೆ ಶಿರವನೊಡ್ಡುವೆನೆಂದವ....
ಎಲವೋ ಎಂಬುದು ಬಿಡಿರಿ,
ಅಯ್ಯಾ ಎಂಬುದನ್ನೇ ಉಲಿರಿ
ಮುತ್ತು ಪೋಣಿಸಿದಂತೆ ನುಡಿಯಿರೆಂದಾತನು
ಮೃದುನುಡಿಗಳಲಿ ಲಿಂಗವನು ಒಲಿಸಿಕೊಂಡಾತನು...
ನುಡಿದಂತೆ ನಡೆದೊಡೆ,ಕಡೆಯಿದೇ ಜನ್ಮ
ನಿಷ್ಠೆಯಿಂ ದುಡಿದೊಡೆ ಕಾಯಕದೊಳು
ಕಟ್ಟಿಹುದು ಏಣಿ ಕೈಲಾಸಕೆ
ಬಡತನವನು ಓಡಿಸಿರೋ
ಉತ್ತಮರ ಒಡನಾಡಿರೆಂದು ಜಗಕೆ ಸಾರಿದವನು...
ಪುರಾಣ ವೇದಾಗಮಗಳ ಮಥಿಸಿ
ಓರಟೆಯ ಪುಂಡರ ಗೋಷ್ಠಿಗಳ ಕೆಡಿಸಿ
ಆಡುನುಡಿಯ ಗದ್ದುಗೆಗೆ ಅಡಿಗಲ್ಲನಿರಿಸಿ....
ಕಂನುಡಿಯಲೇ ಮೆರೆಸಿ ಎಲ್ಲವ ಅಮರನಾದವನು...
ಇಂತಿಪ್ಪ ಶರಣರ ನಡೆ ದಾರಿದೀಪ
ಹೊತ್ತಿಸುತ ಬೆಳಗಲಿ ಶರಣರೆದೆಯಲಿ ಸೈಪ
.... ಚಂದ್ರೇಗೌಡ ನಾರಮ್ನಳ್ಳಿ
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
-http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
For more options, visit https://groups.google.com/d/optout.