ಎಲ್ಲ ಕನ್ನಡಿಗರು ಅಭಿಮಾನಪೂರ್ವಕವಾಗಿ  ನಿಸ್ಸಂಶಯವಾಗಿ ಒಪ್ಪಿ ಕೊಳ್ಳಬೇಕಾದ ವಿಚಾರ.

On Mon, Nov 4, 2019, 11:30 PM Girisha T P <[email protected] wrote:

>
> ---------- Forwarded message ---------
> From: Girish T P <[email protected]>
> Date: Mon, 4 Nov 2019, 23:17
> Subject: ಕನ್ನಡ ನಾಡಿನ ಶಾಲಾ ಶಿಕ್ಷಣದಲ್ಲಿ ಕನ್ನಡವೇ ಕಲಿಕಾ‌ ಮಾಧ್ಯಮವಾಗಬೇಕು.
> To: <[email protected]>, <[email protected]>,
> girish t p <[email protected]>, <[email protected]>, <
> [email protected]>, <[email protected]>
>
>
> *ಹಿರಿಯರಲ್ಲಿ ಗೌರವಪೂರ್ವಕ, ಸ್ನೇಹಿತರಲ್ಲಿ ಪ್ರೀತಿಪೂರ್ವಕ‌ ನಮನಗಳು.*
>
> ನನ್ನ ಮನದಾಳದ ಮಾತುಗಳನ್ನು ಸಾವಧಾನದಿಂದ‌‌ ಓದಬೇಕೆಂಬ ಸವಿನಯ,‌ ವಿನಮ್ರ‌ತೆಯಿಂದ
> ವಿನಂತಿಸಿಕೊಳ್ಳುತ್ತಾ ಕಾಗುಣಿತ ದೋಷಗಳಿದ್ದಲ್ಲಿ‌ ಸಹಿಸಿಕೊಳ್ಳಿ,‌ ಹೇಳಿದರೆ
> ತಿದ್ದಿಕೊಳ್ಳುವೆ.
>
> *ಕನ್ನಡ ನಾಡಿನ ಶಾಲಾ ಶಿಕ್ಷಣದಲ್ಲಿ ಕಲಿಕಾ ಮಾಧ್ಯಮವಾಗಿ ಕನ್ನಡವೇ ಅಗತ್ಯ ನಿತ್ಯ ಸತ್ಯ*
>
> ಸತ್ಯ ಯಾವಾಗಲೂ ಕಹಿಯೇ...
> ಆದರೆ ಸತ್ಯವನ್ನು ಒಪ್ಪಿಕೊಂಡು ಸತ್ಯದ ದಾರಿಯಲ್ಲಿ ನಡೆಯುತ್ತಾ  ಖಂಡಿತವಾಗಿ ಕಾಲಕ್ರಮೇಣ
> ಸತ್ಯದ ಹಾದಿ ಸಿಹಿಯ ಹಾದಿಯಾಗುವುದರಲ್ಲಿ ಸಂದೇಹವಿಲ್ಲ.
>
> ಈಗ ನಾ ಹೇಳ ಹೊರಟಿರುವುದು ತೀರಾ ಹೊಸ ವಿಚಾರವೊಂತು ಅಲ್ಲ.
>
> ಪ್ರತಿಯೊಂದು ನಾಡಿನಾಲ್ಲಿಯೂ ಆಯಾಯಾ ನಾಡಿನ ಭಾಷೆಯೇ ಅಲ್ಲಿಯ ಶಾಲಾ ಶಿಕ್ಷಣದಲ್ಲಿ ಕಲಿಕೆಯ
> ಮಾಧ್ಯಮವಾಗಬೇಕು ಎಂಬುದನ್ನು ಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಕುವೆಂಪುರವರಿಂದ
> ಹಿಡಿದು ನಾಡಿನ ಆನೇಕ ಸಾಹಿತಿಗಳು, ಜನಪರ-ಜೀವಪರ ನೈಜ್ಯ ಕಾಳಜಿಯುಳ್ಳ ರಾಜಕಾರಣಿಗಳು,
> ವಿದ್ವಾಂಸರು, ಸಿ ಎನ್ನ್ ಆರ್ ರಾವ್ ರಂತಹ ವಿಜ್ಞಾನಿಗಳು ಸೇರಿದಂತೆ ಇನ್ನೂ ಆನೇಕರು,
> ಶಿಕ್ಷಣ ತಜ್ಞರು ಹಾಗೂ ಸ್ವಾತಂತ್ರ್ಯ ಪೂರ್ವದಿಂದಲೂ ಮೈಸೂರು ಸಂಸ್ಥಾನದ ದಿವಾನ್ ಮಿರ್ಜಾ
> ಇಸ್ಮಾಯಿಲ್ ರವರು ಸಹ ಶಾಲಾ ಶಿಕ್ಷಣದಲ್ಲಿ ಆಯಾಯ ನಾಡಿನ ಭಾಷೆಯೇ ಕಲಿಕಾ ಮಾಧ್ಯಮವಾಗಬೇಕು
> ಎಂಬುದನ್ನು ಮನೋ ವೈಜ್ಞಾನಿಕವಾಗಿ ಸಾಂಸ್ಕೃತಿಕವಾಗಿ ಪ್ರತಿಪಾದಿಸುತ್ತಾ ಬಂದಿದ್ದಾರೆ.
>
> ಕಲಿಕಾ ಮಾಧ್ಯಮವಾಗಿ ಆಯಾಯ ನಾಡಿನ ಭಾಷೆಯೇ ಇರಬೇಕು ಎಂಬುದರ ಬಗ್ಗೆ ಬಲಪಂಥೀಯರು ಮತ್ತು
> ಎಡಪಂಥೀಯರು, ಸಮಾಜವಾದಿಗಳು ಸಹ ಸಮಾನವಾದ ಅಭಿಪ್ರಾಯ ಹೊಂದಿದ್ದಾರೆ.
>
> ಬಹುತೇಕ ವಿಚಾರಗಳಿಗೆ ಸಂಬಂದಿಸಿದಂತೆ ತದ್ವಿರುದ್ಧ ನಿಲುವುಳ್ಳ  ನಮ್ಮ‌ ನಾಡಿನ ಕೆಲ
> ಸಾಹಿತಿಗಳು ಕನ್ನಡ ಮಾಧ್ಯಮದ ವಿಚಾರ ಬಂದಾಗ ಸಮಾನ ನಿಲುವುಳ್ಳರಾಗಿದ್ದೂ ಈ ವಿಚಾರವಾಗಿ ಸಭೆ
> ಸಮಾರಂಭಗಳಲ್ಲಿ ಜೊತೆಯಾಗಿ ಭಾಗವಹಿಸಿದ್ದಾರೆ.
>
> ನಮ್ಮ ನಾಡಿನ ಆನೇಕ ಮಠಗಳ ಸ್ವಾಮೀಜಿಯವರು ಸಹ ನಾಡಿನ ಭಾಷೆಯೇ  ಕಲಿಕಾ ಮಾಧ್ಯಮವಾಗಿರಬೇಕು
> ಎಂಬುದನ್ನು ಪ್ರತಿಪಾದಿಸುತ್ತಾರೆ.
>
> ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಶ್ರೀಮಠ ಕಳೆದ ೧೬ ವರ್ಷಗಳಿಂದ ನವಂಬರ್ ಮಾಹೆಯ ಒಂದು
> ಅಥವಾ ಎರಡನೇ ತಾರೀಖಿನಿಂದ ಕನ್ನಡ ರಾಜ್ಯೋತ್ಸವದ ಜೊತೆಗೆ ರಾಷ್ಟ್ರೀಯ ನಾಟಕೋತ್ಸವವನ್ನು ಸಹ
> ಆಚರಿಸಿಕೊಂಡು ಬರುತ್ತಿದೆ. ಇದರ ರೂವಾರಿಗಳಾದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ
> ಸ್ವಾಮೀಜಿಯವರು ಕನ್ನಡ ನಾಡಿನ ಶಾಲಾ ಶಿಕ್ಷಣದಲ್ಲಿ ಕನ್ನಡವೇ ಕಲಿಕೆಯ ಮಾಧ್ಯಮವಾಗಬೇಕು
> ಎಂಬುದನ್ನು ಎಲ್ಲರಿಗೂ ಅರ್ಥವಾಗುವಂತೆ‌ ಸರಳ ಸಾಮಾನ್ಯವಾದ ಭಾಷೆಯಲ್ಲಿಯೇ
>  ಕಲಿಕೆಯ ಹೆಜ್ಜೆಗಳು ಎಂಬ ಕೃತಿಯನ್ನು ರಚಿಸಿದ್ದಾರೆ.
> ೨೦೧೯ನೇ ಸಾಲಿನ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಂದರ್ಭದಲ್ಲಿಯೂ(೦೨/೧೧/೨೦೧೯)
> ಸ್ವಾಮೀಜಿಯವರು ಕನ್ನಡ ಮಾಧ್ಯಮದಲ್ಲಿಯ ಕಲಿಕೆಯ ಅಗತ್ಯತೆಯನ್ನು ಪ್ರತಿಪಾದಿಸುತ್ತಾ ಆಂಗ್ಲ
> ಮಾಧ್ಯಮದ ಕಲಿಕೆಯ ಕುರುಡು ವ್ಯಾಮೋಹಿಗಳಾಗಿರುವ ಸರ್ಕಾರವನ್ನು, ಸಾರ್ವಜನಿಕರನ್ನು,
> ನ್ಯಾಯಾಲಯವನ್ನು ಎಚ್ಚರಿಸಿದ್ದಾರೆ.
>
> ನಮ್ಮ ಕನ್ನಡ ನಾಡಿನ ಶಾಲಾ ಶಿಕ್ಷಣದಲ್ಲಿ ಕನ್ನಡವೇ ಮಾಧ್ಯಮವಾಗಿರಬೇಕೆಂದು ಪ್ರತಿಪಾದಿಸುವ
> ಯಾರೂ ಸಹ ಆಂಗ್ಲ ಭಾಷೆಯ ಕಲಿಕೆಯ ವಿರೋಧಿಗಳಲ್ಲ. ಅಷ್ಟು ಮಾತ್ರವಲ್ಲದೇ ಜಾಗತೀಕ
> ಸವಾಲುಗಳನ್ನು, ವಿಷಮ ಪರಿಸ್ಥಿತಿಯನ್ನು ಎದುರಿಸಲು ಇಂಗ್ಲೀಷ್ ಅನ್ನು ಒಂದು ಸಂವಹನ ಸಂಪರ್ಕ
> ಭಾಷೆಯನ್ನಾಗಿ ಸಮರ್ಪಕವಾಗಿ ಕಲಿತು ಕಲಿಸುವುದನ್ನು ಪ್ರತಿಪಾದಿಸುತ್ತಾರೆ.
>
> ಸ್ವತಃ ಕನ್ನಡ ಮಾಧ್ಯಮದಲ್ಲಿಯೇ ಕಲಿತು
> ವಿಜ್ಞಾನದ ಪದವೀಧರರಾಗಿರುವ ಚಾಮರಾಜನಗರದ ದೀನಬಂಧು ಆಶ್ರಮದ ಸ್ಥಾಪಕರು ಮತ್ತು ಈಗ ಗೌರವ
> ಕಾರ್ಯದರ್ಶಿಗಳಾಗಿರುವ ಪ್ರೋ. ಜಿ.ಎಸ್. ಜಯದೇವರು ಚಾಮರಾಜನಗರದ ಜೆ.ಎಸ್.ಎಸ್. ಪದವಿ
> ಕಾಲೇಜಿನಲ್ಲಿ ಸುಮಾರು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಪ್ರಾಣಿಶಾಸ್ತ್ರವನ್ನು
> ತರಗತಿಗಳಲ್ಲಿ ಬೋಧಿಸಿದವರು.
>
> ಕನ್ನಡ ಮಾಧ್ಯಮವೇ ಶಾಲಾ ಶಿಕ್ಷಣದ ಕಲಿಕಾ ಮಾಧ್ಯಮವಾಗಬೇಕು ಎನ್ನುವ ಬಗ್ಗೆ
> ಜಯದೇವಣ್ಣನವರ ಹಾದಿ ಉಳಿದವರಿಗಿಂತ ಬಲು ಭಿನ್ನ.
> ೧೯೯೮ರಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಸುವ ದೀನಬಂಧು ಪ್ರಾಥಮಿಕ ಶಾಲೆಯನ್ನು ಜಯದೇವಣ್ಣನವರು
> ತೆರೆದರು.
> ದೀನಬಂಧು ಪ್ರಾಥಮಿಕ ಶಾಲೆಯೂ ಪ್ರೌಢಶಾಲೆಯಾಗಿ ವಿಸ್ತರಣೆಗೊಂಡು
> ಪ್ರಸ್ರುತ ೨೦೧೯-೨೦ನೇ ಶೈಕ್ಷಣಿಕ ವರ್ಷದಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪ್ರೌಢಶಾಲಾ
> ಹಂತದವರೆಗೆ ೪೪೭ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ.
> ದೀನಬಂಧು ಶಾಲೆಗಿಂತ, ಜಯದೇವಣ್ಣನವರಿಗಿಂತ ಉತ್ತಮ ಉದಾಹರಣೆ ಬೇಕೆ??
> ಒಳ್ಳೆಯದು ಮಾಡುವ ನಿಷ್ಕಳಂಕ ಮನಸ್ಸು, ಚಾರಿತ್ಯ, ಕೈಂಕರ್ಯವೊಂದಿದ್ದರೆ ಸಾರ್ಥಕವಾದ ಸಾಧನೆ
> ಸಾಧ್ಯ ಎನ್ನವುದಕ್ಕೆ ದೀನಬಂಧು ಶಾಲೆಯ ಯಶೋಗಾಥಯೇ ಕಾರಣ.
>
> ದೀನಬಂಧು ಆಶ್ರಮದಲ್ಲಿ ಬೆಳೆದ, ಕನ್ನಡ ಮಾಧ್ಯಮದಲ್ಲಿಯೇ ಪದವಿ ಕಲಿತು ಮುಂದೆ ಆಂಗ್ಲ
> ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಪ್ರಸ್ತುತ Decan Herald ಪತ್ರಿಕೆಯಲ್ಲಿ
> ಉಪಸಂಪಾದಕರಾಗಿರುವ ಶ್ರೀ ಚಿರಂಜೀವಿ ರವರ ಜೀವಾನನುಭವೇ ಅಧ್ಯಯನಯೋಗ್ಯ.
>
> ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಕಲಿತು ನಾಡಿನ ಆನೇಕ ಸ್ತರಗಳಲ್ಲಿ ಸೇವೆಗಳಲ್ಲಿ
> ತೊಡಗಿಸಿಕೊಂಡಿರುವ‌ ನಮ್ಮ ಜಯದೇವಣ್ಣ ಸೇರಿದಂತೆ, ವೃತಿಯಲ್ಲಿ ಆಂಗ್ಲ ಪ್ರಾಧ್ಯಾಪಕರು
> ಪ್ರವೃತಿಯಿಂದ ನಾಡಿನ ಭಾಷೆಯ ಸಾಹಿತಿಗಳಾಗಿರುವ ಆನೇಕರ ಆಂಗ್ಲ ಭಾಷೆಯ ಮೇಲಿನ ಸದೃಢ ಜ್ಞಾನದ
> ಬಗ್ಗೆ ನಾನು ಮಾತಾಡಲು ಬಹಳ ಅಲ್ಪ ನಾನು.
>
> ಅಮೇರಿಕಾದ ಸಂಶೋಧನೆಯೊಂದು "ಯಾವ ಮಗು ತನ್ನ ಮಾತೃಭಾಷೆಯನ್ನು ಸದೃಢವಾಗಿ ಕಲಿತು, ತನ್ನ
> ಮಾತೃಭಾಷೆಯ ಸಹಾಯದ ಮೂಲಕ ಇತರ ಭಾಷೆಗಳನ್ನು ಕಲಿಯಲು ಹೊರಡುತ್ತದೆಯೋ ಆಗ ಇತರ ಭಾಷೆಗಳನ್ನು
> ಅತ್ಯಂತ ಸುಲಲಿತವಾಗಿ ಕಲಿಯುತ್ತದೆ" ಎಂದು ಹೇಳುತ್ತದೆ.
> ಈ ಮಾತನ್ನು ಸುಮಾರು ೩೦ಕ್ಕೂ ಹೆಚ್ಚು ಮುದ್ರಣಗಳನ್ನು ಕಂಡಿರುವ, ಕನ್ನಡದ ಮೂಲಕ ಇಂಗ್ಲೀಷ್
> ಅನ್ನು ಕಲಿಯಲು, ಕಲಿಸಲು ಸಹಾಯಕವಾಗಿರುವ Applied English Courseನ ಪುಸ್ತಕ ಹಿಂಬದಿ
> ರಕ್ಷಾ ಪುಟದಲ್ಲಿ ಪ್ರಕಟಿಸಲಾಗಿದೆ.
> ಈ ಮಹತ್ವದ ಕೃತಿಯ ಕರ್ತೃ ಹಾಸನ ಆಕಾಶವಾಣಿಯಲ್ಲಿ ಉದ್ಯೋಗಿಯಾಗಿರುವ ಬೇದ್ರೆ ಎನ್ ಮಂಜುನಾಥ್
> ರವರು.
>
> ಶಾಲಾ ಶಿಕ್ಷಣ ಹೇಗಿರಬೇಕು ಎಂಬುದರ ಕುರಿತು ನಾ ಹೇಳುವುದಕ್ಕಿಂತ ದೀನಬಂಧು ಸಂಸ್ಥೆಯು
> ಹೊರತರುವ  ಅನುಭವ ಎಂಬ ಹೆಸರಿನ ಮಾಸಪತ್ರಿಕೆಯಲ್ಲಿ ಜಯದೇವಣ್ಣನವರ ಸಂಪಾದಕೀಯವೊಂದನ್ನು‌ ಈ
> ಲೇಖನದೊಟ್ಟಿಗೆ ಹಂಚಿಕೊಳ್ಳುವೆ.
>
> ಹೆಸರಿಗೆ ಮಾತ್ರ ಸೇವಾ ಕ್ಷೇತ್ರಗಳೆಂದು ಕರೆಯಲ್ಪಡುವ ಆರೋಗ್ಯ ಮತ್ತು ಶಿಕ್ಷಣ
> ಕ್ಷೇತ್ರಗಳಿಂತ ಆರ್ಥಿಕವಾಗಿ ಅತ್ಯಂತ ಲಾಭದಾಯಕವಾದ ಬೇರೆ ಕ್ಷೇತ್ರಗಳಿಲ್ಲ.
>
> ನಾಡಿನ ನಡೆದಾಡುವ ದೇವರು ಎಂದು ಕರೆಯಲ್ಪಡುತ್ತಿದ್ದ ತುಮಕೂರಿನ ಡಾ. ಸಿದ್ಧಗಂಗಾ ಶ್ರೀಗಳು
> ಲಿಂಗೈಕ್ಯರಾದಾಗ ಕೇಳು ಬರುತ್ತಿದ್ದ ಮಾತೊಂದನ್ನು ಗಮನಿಸಬೇಕು. ಶ್ರೀಗಳು ಮನಸ್ಸು
> ಮಾಡಿದ್ದರೆ ಎಂದೋ ಒಂದು ಮೆಡಿಕಲ್ ಕಾಲೇಜನ್ನು ತೆರೆಯಬಹುದಿತ್ತು. ಆದರೆ ಶ್ರೀಗಳು ಪ್ರಾಥಮಿಕ
> ಮತ್ತು ಪ್ರೌಢಶಿಕ್ಷಣ ಪಸರಿಸುವ ಕಡೆಗೆ ತಮ್ಮ ತನು ಮನ ವನ್ನು ಸಮರ್ಪಿಸಿಕೊಂಡವರು.
> ಅವರ ಸೇವಾ ತತ್ಪರತೆ ಬಗ್ಗೆ ನುಡಿಯಲು ನಮ್ಮ ನೈತಿಕತೆ ನೀತಿಯುತವಾಗಿರಬೇಕು.
>
> ಆದರೆ ಇವತ್ತಿನ ಶಾಲಾ ಶಿಕ್ಷಣದ ಮತ್ತು ಪೋಷಕರ ಉದ್ದೇಶವಾದರೂ ಏನೂ..??
>
> ಮಗು, ದುಬಾರಿ ಸರಕುಗಳನ್ನು ಕೊಳ್ಳುವ ಶಕ್ತಿ ಪಡೆಯುವ ಮತ್ತೊಂದು ಸರಕಷ್ಟೇ.
>
> ಆಂಗ್ಲಮಾಧ್ಯಮದ ಶಾಲೆಯಲ್ಲಿ ಚೆನ್ನಾಗಿ ಕಲಿತು ಒಳ್ಳೆಯ ಅಂಕಗಳಿಸಿ, ಉತ್ತಮವಾದ ವೃತ್ತಿಪರ‌
> ಪದವಿಯೊಂದನ್ನು ಗಳಿಸಿ ಕೈತುಂಬಾ ಸಂಬಳ ಬರುವ ಕೆಲಸಕ್ಕೆ ಸೇರುವುದು, ವಿದೇಶಗಳಲ್ಲಿ ದುಡಿದು
> ದುಬಾರಿ ಹಣ ಸಂಪಾದಿಸುವುದು.
> ಸುಖಲೋಲುಪ್ತರಾಗುವುದು.
> ಪರಧನ ಪರಸ್ತ್ರೀ ಪರಪುರುಷ ವ್ಯಾಮೋಹಿಗಳು, ಭೋಗಿಗಳು ಆಗುವುದು.
>
> ಜನ್ಮ ನೀಡಿದ ತಾಯಿ, ಸ್ವಂತಿಕೆ ಬೆಳೆಸಿಕೊಳ್ಳಲು ಅಡಿಯಾದ ತಾಯಿನುಡಿ ಮತ್ತು ತಾಯಿನಾಡನ್ನು
> ಮರೆಯುವುದು.
>
> ಸಂಪತ್ತನ್ನು ಕೂಡಿಡುತ್ತಾ ಒಟ್ಟಿಗೆ ಆಡಿ ಬೆಳೆದ ಸಹೋದರ ಸಹೋದರಿಯರ ಕಷ್ಟ-ಸುಖಗಳಲ್ಲಿ
> ಭಾಗಿಯಾಗದೇ ಒಂಟಿಯಾಗಿ ಉಳಿಯುವುದು.
>
> ಸ್ನೇಹಿತರ ಬಂಧು ಬಳಗದವರಿಂದ ಅಂತರ ಕಾಯ್ದುಕೊಳ್ಳುವುದು.
>
> ಜನ್ಮ‌ನೀಡಿದ ತಾಯಿ-ತಂದೆ
> ಸಾಕು ಬೆಳೆಸಿದ ಸ್ವಂತ ಊರು, ಸಮುದಾಯ,
> ಕಲಿತ ಶಾಲೆ, ಕಲಿಸಿದ ಗುರುಗಳನ್ನು
> ಒಟ್ಟಿಗೆ ಕೂಡಿ ಆಡಿ ಬೆಳೆದ, ನೋವು ನಲಿವು ಹಂಚಿಕೊಂಡ ಸ್ನೇಹಿತರನ್ನು ಮರೆತು
> ಹೊರಗೆ ಸಾಧಕನೆಂಬ ತೋರಿಕೆಯ ಹುಸಿನಗುವಿನ, ಆದರೆ ಒಳಗೊಳಗೆ ಬೇಗುದಿಯಲ್ಲಿರುವ ಅತೃಪ್ತ
> ಆತ್ಮದಂತಿರುವ ಬಾಳುವೆ ನಡೆಸುವುದು.
>
> ಅದಕ್ಕಲ್ಲವೇ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು.
>
> ನೆಲೆಮೂಲ ಸಂಸ್ಕೃತಿ ಮತ್ತು ಜೀವನ ಶೈಲಿಯಿಂದ ದೂರವುಳಿದು ಸ್ವಂತಿಕೆಯಿಲ್ಲದ ಒಂದು ಭೋಗ
> ಸಾಧನವಾಗುವುದು.
>
> ಇವತ್ತಿನ ಸಂಪತ್ತಿನ ಅಸಮಾನ ಹಂಚಿಕೆಗೆ ಇಂದಿನ ಶಿಕ್ಷಣ ಪದ್ಧತಿಯೇ ಕಾರಣ.
> ಸಿರಿವಂತ ಮತ್ತಷ್ಟೂ ಸಿರಿವಂತ,
> ಬಡವ ಮತ್ತಷ್ಟೂ ಬಡವನಾಗಲಿಕ್ಕೆ ಇವತ್ತಿನ ಅನ್ಯರನ್ನು ಅನುಕರಿಸಲು ಉದ್ದೀಪನಗೊಳಿಸುವ
> ಕೃತ್ರಿಮ ಶಿಕ್ಷಣ ಪದ್ಧತಿಯೇ ಕಾರಣ.
> ಅಸಲೀಗೆ ಇದನ್ನು ಶಿಕ್ಷಣ ಪದ್ಧತಿಯೆಂದು ಪರಿಗಣಿಸಲಾಗದು.
> ಜಾಗತೀಕ ಮಾರುಕಟ್ಟೆಯಲ್ಲಿ ಒಂದು ಸಾಧನವಾಗಿ ಚಲಾವಣೆಯಾಗಲು ಬೇಕಾದ ಆತ್ಮಬಲ, ಹೃದಯವಿಲ್ಲದ
> ಒಂದು ಯಂತ್ರದಂತೆ.
>
> ಇವತ್ತಿನ ಶಿಕ್ಷಣ ತನ್ನ ಮನ ತನ್ನನ್ನು  ಮೆಚ್ಚುವುದಕ್ಕಿಂತಲೂ ಅನ್ಯರನ್ನು,
> ಹೊರಗಿನವರನ್ನು‌,‌ಜಗತ್ತನ್ನು ಮೆಚ್ಚಿಸುವ ಸಲುವಾಗಿ‌ ಹೋರಾಡುವ ಸಲುವಾಗಿ ಆಂತರಿಕ
> ಪ್ರೇರಣೆಯಿಲ್ಲದ ಬಾಹ್ಯ ಸೆಳೆತೆಗಳೆ  ಸೆಲೆಯಾಗಿರುವ ನಾಟಕೀಯ ರಂಗ.
>
> ಅಂದಾಗೇ ಎಲ್ಲರೂ ತ್ಯಾಗಮಯಿಗಳಾಗಬೇಕಿಲ್ಲ.
> ತ್ಯಾಗಿಯಾಗುವುದು ಅಸಂಬದ್ಧ.
>
> ತ್ಯಾಗ ಮತ್ತು ಭೋಗಗಳೆರಡೂ ಅತಿರೇಕದವು, ಅವನತಿಯ ಅವಾಸಾನಕ್ಕೆ ದೂಡುವಂತಹವು‌.
>
> ನನ್ನನ್ನು ನಾನು ಅರಿಯಲು ಸಹಾಯಕವಾಗದ ಶಿಕ್ಷಣ ಅದೆಂತಹ ಶಿಕ್ಷಣ??
> ನನ್ನನ್ನು ನಾನೇ ಅರಿಯಲು ಸಾಧ್ಯವಾದರೆ ಮಾತ್ರ ಅನ್ಯರನ್ನು ಜಗತ್ತನ್ನು ಅರಿಯಲು ಸಾಧ್ಯ.
> ನಾನ್ಯಾರು ಎಂಬುದನ್ನು ನನ್ನೊಳಗೆ ಪ್ರಶ್ನಿಸಿಕೊಳ್ಳುವ ಉತ್ತರ ಕಂಡುಕೊಳ್ಳುವ
> ಸತ್ಯಾನ್ವೇಷಣೆಯ ಪ್ರಕ್ರಿಯೆಗೆ ಇಂಬು ಕೊಡುವಂತೆ ಇರಬೇಕು ನಮ್ಮ ಶಿಕ್ಷಣ ಪದ್ಧತಿ.
>
> ಲೌಕಿಕ ಅಲೌಕಿಕಗಳೆರೆಡರ ಸಮಾಗಮವಾಗಬೇಕು ಶಿಕ್ಷಣ‌ ನೀಡಿಕೆಯ ಕ್ರಮ.
>
> ಒಂದಷ್ಟೂ ಸಮಯ ಎಲ್ಲರೂ ಮೌನವಹಿಸಬೇಕಾದ ಕಾಲಘಟ್ಟವಿದು.
>
> **************************
>
> ಈಗ ಒಂದಿಷ್ಟೂ ಪ್ರಾಯೋಗಿಕ ಹಂತಕ್ಕೆ ಬರೋಣಾ.
> ಒಂದು ತುಲನಾತ್ಮಕ ಅಧ್ಯಯನಕ್ಕೆ ಸಿದ್ಧವಾಗೋಣಾ.
> ಇದನ್ನು ನೀವುಗಳೇ ನಿಮ್ಮ ಹಂತದಲ್ಲಿ ಮಾಡಿಕೊಳ್ಳಬಹುದು.
>
> ಇತ್ತೀಚೆಗೆ ನಾನು, ನನ್ನ ಕೆಲ ಸ್ನೇಹಿತರು, ಬಂಧುಗಳು ಪರಿಚಯಸ್ಥರು ಅವರವರ ಜೀವನ
> ಶೈಲಿಯಲ್ಲಿ ವೈಯಕ್ತಿಕ ಬದುಕಿನಲ್ಲಿ ಮತ್ತು ವೃತ್ತಿಪರ ಬದುಕಿನಲ್ಲಿ ತನ್ನ
> ಸುತ್ತಮುತ್ತಲಿನವರೊಂದಿಗೆ ಹೇಗೆ ವ್ಯವಹರಿಸುತ್ತಾರೆ, ಸಾಮರಸ್ಯದಿಂದ ಎಲ್ಲರೊಂದಿಗೆ
> ಬೆರೆಯುತ್ತಾ ತಾವಂದುಕೊಂಡ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಾ, ಸಮಚಿತ್ತದಿಂದ
> ವರ್ತಿಸುತ್ತಾ ಜೀವನದಲ್ಲಿ ಯಶಸ್ವಿ ಎನಿಸಿಕೊಂಡಿದ್ದಾರೆ ಎಂಬುದನ್ನು ಕೂಲಕುಂಷವಾಗಿ
> ವೀಕ್ಷಿಸುತ್ತಾ ವಿಶ್ಲೇಷಿಸುತ್ತಾ ಹೋದರೆ ಅಚ್ಚರಿಯೂ ಸಂತಸವೂ ಆಗುತ್ತದೆ.
>
> ಯಾವ ಮಗುವಿನ/ವ್ಯಕ್ತಿಯ ಬಾಲ್ಯ ಸಮೃದ್ಧವಾಗಿರುತ್ತದೆಯೋ ಆ ಮಗು/ವ್ಯಕ್ತಿಯ ಮುಂದಿನ ಜೀವನವೂ
> ಅಷ್ಟೇ ಸಮೃದ್ಧವಾಗಿರುತ್ತದೆ.
>
> ನಮ್ಮ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳು ಶಾಲಾ ಶಿಕ್ಷಣ ಮುಗಿಸಿದ ನಂತರ
> ಉದ್ಯೋಗ ಪಡೆಯುವಲ್ಲಿ ಮತ್ತು ಉದ್ಯೋಗ ಆರಂಭಿಸಿದ ಪ್ರಾರಂಭದ ದಿನಗಳಲ್ಲಿ ಸಮಾಜದಲ್ಲಿ
> ಹೊಂದಿಕೊಳ್ಳಲು ವ್ಯವಹರಿಸಲು ಸ್ವಲ್ಪಮಟ್ಟಿಗೆ ಸಮಸ್ಯೆ ಎದುರಿಸುತ್ತಾರೆ.
> ಆದರೆ ದಿನಕಳೆದಂತೆ ನಿಜಜೀವನದಲ್ಲಿ ಇವರೇ ಚಾಂಪಿಯನ್ ಗಳು.
> ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಇವರ ಸಮಾಜಿಕ ಸಂಬಂಧಗಳು ಅತ್ಯುತ್ತಮವಾಗಿ ಜನರ ನಡುವೆ
> ಸ್ನೇಹಪರವಾಗಿ ವರ್ತಿಸುತ್ತಾ ಎಂತಹ ವಿಷಮ ಕ್ಲಿಷ್ಟಕರ ಸನ್ನಿವೇಶಗಳನ್ನು ನಿಭಾಯಿಸುವ ಜೀವನ
> ಕೌಶಲ್ಯ ಬೆಳೆಸಿಕೊಳ್ಳುತ್ತಾ ಹೋಗುತ್ತಾರೆ.
> ಸಂಪತ್ತಿನ ಗಳಿಕೆ ಕಡಿಮೆಯೇ ಇರಬಹುದು.
> ಆದರೆ ಸಂತೃಪ್ತ ಜೀವನ ನಡೆಸುವ ಕಲೆ ಶೈಲಿ ಕರಗತ ಮಾಡಿಕೊಂಡವರು.
>
> ಬೇರೆಯವರ ಕಷ್ಟಸುಖಗಳಿಗೆ ಧ್ವನಿಯಾಗುವ,
> ಸಾಮಾಜಿಕ ಸಮಸ್ಯೆಗಳಿಗೆ, ನಾಡಿನ ಕುಂದುಕೊರತೆಗಳನ್ನು ಪರಿಹರಿಸುವ,
> ಆಶಕ್ತರಿಗೆ, ಧ್ವನಿ‌ಇಲ್ಲದವರಿಗೆ ಧ್ವನಿಯಾಗುವ ಸಾಮಾಜಿಕ ಸಂತ್ಕಪನವನ್ನು ಮೈಗೂಡಿಸಿಕೊಂಡ
> ಮಾತೃಹೃದಯಿ ಮತ್ತು ನಿಜಾರ್ಥದ ಮನುಷ್ಯತ್ವದ ಮನಸ್ಸುಳ್ಳವರಾಗಿರುತ್ತಾರೆ.
>
> ಒರ್ವ ಹೃದಯ ಸಿರಿವಂತಿಕೆ ಇರುವ ನಾ ಅತ್ಯಂದ ಹತ್ತಿರದಿಂದ ಬಲ್ಲ, ಅಸಾಮಾನ್ಯ ಶಕ್ತಿಯುಳ್ಳ
> ಸಾಮಾನ್ಯ ವ್ಯಕ್ತಿಯೊಬ್ಬರನ್ನು ಸ್ಮರಿಸುತ್ತೇನೆ.
> ಪ್ರಸ್ತುತ ‌ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮಧ್ಯಾಹ್ನ ಉಪಾಹಾರ
> ಯೋಜನೆಯಲ್ಲಿ ಅಕ್ಷರ ದಾಸೋಹ ಕಛೇರಿಯಲ್ಲಿ ಸಹಾಯಕ‌ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ
> ಶ್ರೀ ಗಣೇಶ್ ಟಿ.‌ಎಸ್.
> ಇವರು ಸರ್ಕಾರಿ ಕನ್ನಡ ಮಾಧ್ಯಮದಲ್ಲಿ ಕಲಿತವರು. ತಮ್ಮ ಶಿಕ್ಷಣ ಪೂರ್ಣಗೊಳಿಸಿದ ನಂತರ
> ಸುಮಾರು ದಶಕದ ಕಾಲ ಪೋಲಿಸ್ ಇಲಾಖೆಯಲ್ಲಿ ಪೇದೆಯಾಗಿದ್ದವರು. ನಂತರ ಸರ್ಕಾರಿ ಪ್ರೌಢಶಾಲಾ
> ಮುಖ್ಯಶಿಕ್ಷಕರಾಗಿ ನೇಮಕಗೊಂಡು ಕೊಪ್ಪ ತಾಲ್ಲೂಕಿನ ಲೋಕನಾಥಪುರದಲ್ಲಿ ಮೂರು ವರ್ಷಗಳ ಕಾಲ
> ಮತ್ತು ಕಡೂರು ತಾಲ್ಲೂಕಿನ ಸೋಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಐದು ವರ್ಷಗಳ ಕಾಲ
> ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು.
> ಇವರೆನೂ ನಾಡಿನಾದ್ಯಂತ ಪರಿಚಿತರಾದವರಲ್ಲ. ಆದರೆ‌ ನಮ್ಮ ಇಲಾಖೆಯಲ್ಲಿ, ನಮ್ಮ‌
> ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಚಿತರಾದವರು.
> ಅಪ್ಪಟ ಮಾನವೀಯ ಅಂತಃಕರಣವುಳ್ಳ ಸರ್ಕಾರಿ ಸೇವಕ.
> ತಾವು ಕೆಲಸ ಮಾಡಿದ ಸ್ಥಳಗಳೆಲ್ಲಾ ತಮ್ಮ ಛಾಪು ಮೂಡಿಸಿದವರು.
> ಎಲ್ಲರ ಮೆಚ್ಚುಗೆಗೆ, ಪ್ರಶಂಸೆಗೆ, ಪ್ರೀತಿಗೆ ಪಾತ್ರರಾದವರು.
> ಮಾತು-ಕೃತಿ ನಡೆ-ನುಡಿಯ ಸಾಮ್ಯತೆ ಸಾಧಿಸಿದವರು.
> ಎಲ್ಲರೊಂದಿಗೂ ಬೆರೆಯುತ್ತಿದ್ದರೂ ಸತ್ಯದ ಹಾದಿ ಬಿಟ್ಟವರಲ್ಲ.
> ಇವರೊಂದು ಉದಾಹರಣೆ.
>
> ಇದಕ್ಕೆ ತದ್ವಿರುದ್ಧವಾಗಿ ನಮ್ಮ ನೆಲೆಮೂಲ, ಜನಪದ ಸಂಸ್ಕೃತಿಯಿಂದ ಹೊರತಾದ ಶಿಕ್ಷಣ
> ಸಂಸ್ಥೆಗಳಲ್ಲಿ, ಆಂಗ್ಲ ಮಾಧ್ಯಮದಲ್ಲಿ ಕಲಿತ ಮಕ್ಕಳ ಮುಂದಿನ ಬದುಕೇ ವಿಭಿನ್ನ.
> ಬಹುಮುಖ್ಯವಾಗಿ ಇವರ ಶಾಲಾ ಶಿಕ್ಷಣ ಮುಗಿದ ನಂತರ ಅತ್ಯುತ್ತಮ ಉದ್ಯೋಗಗಳನ್ನು
> ದೊರಕಿಸಿಕೊಳ್ಳುತ್ತಾರೆ.
> ತುಂಬಾ ಒಳ್ಳೆಯ ಎನ್ನಬಹುದಾದ ಆದಾಯವನ್ನು ಕೂಡ ಸಂಪಾದಿಸುತ್ತಾರೆ.
> ಆದರೆ ದಿನಕಳೆದಂತೆ ಇವರುಗಳಿಗೆ ಜನರ ನಡುವಿನ ಹೊಂದಾಣಿಕೆಯ ಬದುಕು ಸಾಧ್ಯವಾಗದೇ
> ಜನರಿಂದ(ಬಂಧು ಬಳಗ) ದೂರವುಳಿಯುತ್ತಾರೆ.
>
> ಕಾರ್ಪೋರೆಟ್ ಜಗತ್ತಿನಲ್ಲಿ ಹಲವಾರು‌ ಸಹಸ್ರಾರು  ಸಿರಿವಂತರಿದ್ದಾರೆ.
>
> ಆದರೆ ಸುಧಾಮೂರ್ತಿ,‌ ಅಜೀಂ‌ಪ್ರೇಮ್ ಜೀ ಮತ್ತು ರತನ್ ಟಾಟಾ ತರಹದವರು ಎಷ್ಟು ಮಂದಿ
> ಇದ್ದಾರೆ.
>
> ಒಂದು ಸಂದರ್ಶನದಲ್ಲಿ ರತನ್ ಟಾಟಾ ರವರಿಗೆ‌ ಮುಖೇಶ್ ಅಂಬಾನಿಗೂ ತಮಗೂ ಯಾವ ರೀತಿಯ ಸಂಬಂಧ
> ಎಂದು ಕೇಳಿದಾಗ, ಅಂಬಾನಿಯವರು Businessesman ಮತ್ತು ನಾನು Industrialist ಎಂದು
> ಗುರುತಿಸುತ್ತಾರೆ.
>
> ಒರ್ವ ಬ್ಯುಸಿನೆಸ್‌ ಮೆನ್ ಗೂ, ಇಂಡಸ್ಟ್ರೀಯಲಿಸ್ಟ್ ಗೂ ಇರುವ ವತ್ಯಾಸವನ್ನು ಅವರಿಬ್ಬರ
> ಜೀವನ ಶೈಲಿ‌ ಮತ್ತು  ಜೀವನ ದೃಷ್ಟಿಕೋನದಿಂದಲೇ ಮನಗಾಣಬಹುದು.
>
> ಬಂಧುಗಳೇ..
> ತಮ್ಮ ಮನದಾಳದಿಂದ ಅಲೋಚಿಸಿ.
> ಕೆಲವರು ಉತ್ತಮ‌ ಕನ್ನಡ ಮಾಧ್ಯಮದ ಶಾಲೆಗಳಿಲ್ಲದ ಕಾರಣ ಅನಿವಾರ್ಯವಾಗಿ ಆಂಗ್ಲ ಮಾಧ್ಯಮದ
> ಶಾಲೆಗಳಿಗೆ ಜೋತು ಬೀಳುತ್ತಿದ್ದೇವೆಂಬ ಸತ್ಯವಲ್ಲದ ಅಸಹಾಯಕ ನಿರಾಶಾದಾಯಕ
> ನುಡಿಗಳನ್ನಾಡುತ್ತಾರೆ.
>
> ನಾವು ಒಳಹೊಕ್ಕದೇ ಯಾವುದು ಸುಧಾರಿಸುವುದಿಲ್ಲ.
> ಒಟ್ಟಾಗಿ ಹೋಗುವ ಮನಸ್ಸಿಲ್ಲದಿರುವುದೇ ನಮ್ಮ ನೆಲಮೂಲ‌ ಜನಪದ ಜೀವಪರ‌ ನಿಲುವುಳ್ಳ ಸರ್ಕಾರಿ
> ಶಾಲೆಗಳು ಅನಾಕರ್ಷವಾಗಿ ಕಾಣುತ್ತಿರಬಹುದು.
>
> ಆದರೆ ಇದು ಖಂಡಿತವಾಗಿ ಸಂಪೂರ್ಣ ಸತ್ಯವಲ್ಲ.
> ನಮ್ಮ ನಾಡಿನಲ್ಲಿ ಹಲವಾರು ಉತ್ತಮ ಗುಣಮಟ್ಟದ ಸರ್ಕಾರಿ ಶಾಲೆಗಳಿವೆ.
> ಅವುಗಳನ್ನು ಗುರುತಿಸಿ, ಅವುಗಳ ಶಾಲಾ ಪ್ರಕ್ತಿಯೆಯಲ್ಲಿ ಇಡೀ ಸಮುದಾಯವೆಲ್ಲವೂ ಒಟ್ಟಾಗಿ
> ಒಗ್ಗಟ್ಟಾಗಿ ಭಾಗವಹಿಸಿದರೆ ನಮ್ಮ ತನ ಉಳಿಯುತ್ತದೆ.
> ನಿಜದ ಬಾಳುವೆ, ಅರ್ಥಪೂರ್ಣ ಬದುಕು ನಮ್ಮದಾಗುತ್ತದೆ.
>
> ನಾಡು-ನುಡಿ, ನಾಡಿನ‌ ಸಂಸ್ಕ್ರತೀಯ ಬಗ್ಗೆ ಹೃದಯದಿಂದ ಚಿಂತಿಸೋಣಾ, ಅಲೋಚಿಸೋಣಾ,
> ಸಂವಾದಿಸೋಣಾ, ವರ್ತಿಸೋಣಾ.
>
> ಸಿರಿಗನ್ನಡಂ ಗೆಲ್ಗೆ-ಸಿರಿಗನ್ನಡಂ‌ ಬಾಳ್ಗೆ.
>
> ಪ್ರೀತಿಪೂರ್ವಕ ನಮನಗಳೊಂದಿಗೆ ವಂದನೆಗಳು.
>
> -ಗಿರೀಶ್ ಟಿ ಪಿ.
> ಶಿಕ್ಷಕರು, ಸ.ಪ್ರೌ.ಶಾಲೆ. ಹಾದಿಕೆರೆ, ತರೀಕೆರೆ ತಾ.
> ___________________________________________________
> ನನಗೆ ಇದು ಬರೆಯಲು ಕಾರಣ ಅಥವಾ ಒಳಸೆಳೆತ ಯಾವುದಂದ್ರೆ..
>
> ಇವತ್ತು ಕನ್ನಡ ಮಾಧ್ಯದಲ್ಲಿ ಕಲಿಯುತ್ತಿರುವ ಮಕ್ಕಳನ್ನು ಸ್ವತಃ ಅವರ ಪೋಷಕರೇ
> ಕೀಳರಿಮೆಯಿಂದ ನೋಡುವಂತಾಗಿದೆ.
> ಇನ್ನೂ ಸ್ನೇಹಿತರು, ಬಂಧುಗಳು, ಸಮುದಾಯ, ಸಮಾಜ..‌ಇಡೀ ವ್ಯವಸ್ಥೆ....???
>
> ನಮ್ಮ ಪ್ರೌಢಶಾಲೆಯಲ್ಲಿ ಅವಳಿ-ಜವಳಿಯಾದ ಅಣ್ಣ ತಂಗಿ ಒಂದೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.
>
> ಆದರೆ ಹುಡುಗಿ ಆಂಗ್ಲ ಮಾಧ್ಯಮದಲ್ಲಿ
> ಹುಡುಗ ಕನ್ನಡ ಮಾಧ್ಯಮದಲ್ಲಿ.
>
> ಹುಡುಗಿ ಚೆನ್ನಾಗಿ ಓದುತ್ತಾಳೆ ಅದಕ್ಕೆ ಆಂಗ್ಲ ಮಾಧ್ಯಮ.
> ಹುಡುಗ........ ಅದಕ್ಕೆ ಕನ್ನಡ ಮಾಧ್ಯಮ..
>
> ಅದೃಷ್ಟವಾಶತ್ ನಮ್ಮ ಶಾಲೆಯಲ್ಲಿ ಯಾರೂ ಸಹ ಆತನನ್ನು ಕೀಳಾಗಿ ಯಾರೂ ನೋಡುತ್ತಿಲ್ಲ.
> ಮಿಗಿಲಾಗಿ ನಮ್ಮ ಶಿಕ್ಷಕರು ಅವನಲ್ಲಿರುವ ನಾಯಕತ್ವ ಗುಣಕ್ಕೆ ಕಲಾ ಗುಣಕ್ಕೆ‌ ನೀರೆರದು
> ಆತ್ಮವಿಶ್ವಾಸವುಳ್ಳ ವಿದ್ಯಾರ್ಥಿಯಾಗಿ ಜೀವಂತವಿರಿಸಿದ್ದಾರೆ...
>
> ಆದರೆ‌ ನಾಡಿನ ಉಳಿದ ಕನ್ನಡಮ್ಮನ ಮಕ್ಕಳ ಕತೆ....??
>
> ಈ‌ ತೊಳಲಾಟದಿಂದ ಹೊರಬರಲು ಬರೆಯಬೇಕಾಯಿತು...
>
> ನನ್ನ ಅಣ್ಣ LKG ಯಿಂದ ೧೦ನೇ ವರೆಗೂ ಆಂಗ್ಲ ಮಾಧ್ಯಮದಲ್ಲಿ ಕಲಿತದ್ದೂ..
>
> ಆದರೆ  ನಮ್ಮ ಇಡೀ ಬಂಧು ಬಳಗದ ಮಕ್ಕಳೆಲ್ಲರಿಗಿಂತಲೂ  ಕ್ರೀಡೆಯಲ್ಲಿ ಚುರುಕಾಗಿದ್ದ,
> ಬಹುಮಾನ ಗಳಿಸುತ್ತಿದ್ದ ನನ್ನಣ್ಣ ಈ ಅನೈತಿಕ ಪರೀಕ್ಷಾ ನಿಯಮಗಳಿಗೆ ಬಲಿಯಾಗಿ SSLC ನಲ್ಲಿ
> ಎಲ್ಲಾ ವಿಷಯಗಳಲ್ಲಿಯೂ ಉತ್ತೀರ್ಣನಾಗಿರಲಿಲ್ಲ.
> ಪರೀಕ್ಷಾ ಸಮಯಕ್ಕೆ ಪ್ರೀತಿಯ ತಾತ ಸಹ ತೀರಿಕೊಂಡಿದ್ರು.
> ಆದರೆ ನನ್ನಣ್ಣ ಜೀವನದಲ್ಲಿ ಫೇಲ್ ಆಗಿಲ್ಲ.
>
> ಆದರೆ ಎಳವೆಯಲ್ಲಿ ಅವನ ಮನದ ಮೇಲಾದ ಗಾಯಗಳು....?????
>
> ಎಳವೆಯಲ್ಲಿ ತೀರಾ ಮಂದವೆಂದು(ಈಗಲೂ ಮಂದ-ಎಮ್ಮೆ ನ್ನನ್ನಿಷ್ಟದ ಪ್ರಾಣಿ)
> ಗುರುತಿಸಿಕೊಂಡಿದ್ದ ನಾನು, ಮನೆಯಲ್ಲಿದ್ದ ಮಕ್ಕಳೆಲ್ಲರೂ ಕಾನ್ವೆಂಟ್ ನ ಆಂಗ್ಲ
> ಮಾಧ್ಯಮದಲ್ಲಿ ಕಲಿಯುತ್ತಿರುವಾಗ ನಾನು ಕನ್ನಡ‌ ಮಾಧ್ಯದಮದ ಸರ್ಕಾರಿ ಶಾಲೆಯಲ್ಲಿ
> ಕಲಿಯುತ್ತಿದ್ದೆ‌
>
> ಈಗ ಎಲ್ಲವೂ ಸುಂದರ ಎನಿಸುತ್ತಿದೆ.
>
> ಆದರೆ ಕನ್ನಡ ನಾಡಿನ‌ಲ್ಲಿ ಕನ್ನಡದ ಮಕ್ಕಳು ಕೀಳರಿಮೆಯಿಂದ ಕೊರಗಬಾರದು.
>
> ಸರ್ಕಾರ ಕನ್ನಡ ಮಾಧ್ಯಮದ ಶಾಲೆಗಳನ್ನೇ ಅತ್ಯುತ್ತಮ ಗುಣಮಟ್ಟದ ಶಾಲೆಗಳನ್ನಾಗಿ ಪರವರ್ತಿಸುವ
> ಪ್ರಮಾಣಿಕ ಪ್ರಯತ್ನ ಮಾಡಲಿ.
> ಒಂದು ಭಾಷೆಯನ್ನಾಗಿ ಆಂಗ್ಲ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸಲಿ.
>
> ನಮ್ಮ ಶಿಕ್ಷಕರು ಸೇರಿದಂತೆ ಎಲ್ಲಾ ಅಧಿಕಾರಿಗಳು, ಸರ್ಕಾರಿ ನೌಕರರು ಮಿಗಿಲಾಗಿ
> ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕಲಿಸಲಿ.
>
> ಜೈ ಕರ್ನಾಟಕ...
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To view this discussion on the web, visit
> https://groups.google.com/d/msgid/kannadastf/CAKtQ_cybofTGuwaGJU0NwidyJz4UP6RhN573RRRhTMoK9V5%3Dog%40mail.gmail.com
> <https://groups.google.com/d/msgid/kannadastf/CAKtQ_cybofTGuwaGJU0NwidyJz4UP6RhN573RRRhTMoK9V5%3Dog%40mail.gmail.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To view this discussion on the web, visit 
https://groups.google.com/d/msgid/kannadastf/CAC-rR8vqttT2RH6drMfE5q3a51%3DF_xQgNouA5B6iMWf04U5usA%40mail.gmail.com.

Reply via email to