Mahantagouda sir incharge principal/HM avrige yearly 30 ELiruttave anta
tilisiddiri adakke sambandisida order copy send madi pleas sir...

On 03-Jan-2017 6:52 AM, "Mahantagoud Patil" <[email protected]> wrote:

> 👁👁  *ಸಿಸಿ ಕ್ಯಾಮರಾ ಇಲ್ಲದಿದ್ರೆ ಪರೀಕ್ಷಾ ಕೇಂದ್ರ ರದ್ದು*
> Tuesday, 03.01.2017,      ವಿಜಯವಾಣಿ ಸುದ್ದಿಜಾಲ
>
> *MAHANTAGOUD.T.PATIL.SWCM.KSPSTA*
>
> *ಪ್ರಸಕ್ತ ವರ್ಷ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದ ಪ್ರತಿ ಪರೀಕ್ಷಾ
> ಕೇಂದ್ರದ ಕಾರ್ಯ ಚಟುವಟಿಕೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಲಿದ್ದು, ಜ.31ರವರೆಗೆ ಕ್ಯಾಮರಾ
> ಅಳವಡಿಸಲು ಕೇಂದ್ರಗಳ ಮುಖ್ಯಸ್ಥರಿಗೆ ಡೆಡ್​ಲೈನ್ ನೀಡಲಾಗಿದೆ.*
>
> *ಅಷ್ಟರೊಳಗಾಗಿ ಕ್ಯಾಮರಾ ಅಳವಡಿಸದ ಕೇಂದ್ರಗಳನ್ನು ಪರೀಕ್ಷೆ ಸಂಘಟಿಸುವ ಜವಾಬ್ದಾರಿಯಿಂದಲೇ
> ದೂರವಿಡಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತೀರ್ವನಿಸಿದೆ.*
>
> *ಕಳೆದ ವರ್ಷದ ಪರೀಕ್ಷೆಯಲ್ಲಿ ಎಲ್ಲ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಿರಲಿಲ್ಲ.
> ಕ್ಯಾಮರಾ ಅಳವಡಿಸದ ಕೇಂದ್ರಗಳಲ್ಲಿ ಸಾಮೂಹಿಕ ನಕಲಿಗೆ ಅವಕಾಶ ನೀಡಲಾಗಿದೆ ಎಂಬ ಆರೋಪ
> ಕೇಳಿಬಂದಿತ್ತು. ಈ ಬಾರಿ ಇದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಮಂಡಳಿಯು ಪ್ರತಿ
> ಕೇಂದ್ರದಲ್ಲಿ ಕ್ಯಾಮರಾ ಅಳವಡಿಕೆ ಕಡ್ಡಾಯಗೊಳಿಸಲು ಮುಂದಾಗಿದೆ.*
>
> *2017ರ ಮಾರ್ಚ್​ನಲ್ಲಿ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಸಿಸಿ ಕ್ಯಾಮರಾ ಅಳವಡಿಸಿದ
> ಕೇಂದ್ರಗಳ ಪಟ್ಟಿಯನ್ನು ಆಯಾ ಜಿಲ್ಲಾ ಡಿಡಿಪಿಐಗಳು ಮಂಡಳಿಯ ಕೇಂದ್ರ ಕಚೇರಿಗೆ
> ಕಳುಹಿಸಿದ್ದಾರೆ. ಕ್ಯಾಮರಾ ಅಳವಡಿಸದಿದ್ದರೂ ಅನಿವಾರ್ಯವಾಗಿ ಕೇಂದ್ರ ರಚಿಸುವ ಅವಶ್ಯಕತೆ
> ಇದ್ದ ಕಡೆಗಳಲ್ಲಿ ಜ.31ರೊಳಗಾಗಿ ಕ್ಯಾಮರಾ ಅಳವಡಿಸುವ ಬಗ್ಗೆ ಕೇಂದ್ರದ (ಶಾಲಾ)
> ಮುಖ್ಯಸ್ಥರಿಂದ ಮುಚ್ಚಳಿಕೆ ಬರೆಯಿಸಿಕೊಳ್ಳುತ್ತಿದ್ದಾರೆ.*
> *MAHANTAGOUD T PATIL SWCM KSPSTA*
>
> *ಗಡುವು ನೀಡಿದ ಹೊರತಾಗಿಯೂ ಕ್ಯಾಮರಾ ಅಳವಡಿಸದಿದ್ದರೆ ಕೇಂದ್ರವನ್ನೇ ರದ್ದುಗೊಳಿಸಿ,
> ಪರ್ಯಾಯ ವ್ಯವಸ್ಥೆ ಕಲ್ಪಿಸಲು ಈಗಿನಿಂದಲೇ ಯೋಜನೆ ರೂಪಿಸುತ್ತಿದ್ದಾರೆ.*
>
> *ಪ್ರಶ್ನೆಪತ್ರಿಕೆ ಪಾಲಕರ ನೇಮಕ*
>
> *ಪ್ರಶ್ನೆಪತ್ರಿಕೆ ಕೆಲಸ ನಿರ್ವಹಣೆ, ಸೋರಿಕೆ ತಡೆಗಟ್ಟಲು ರಾಜ್ಯದಲ್ಲೇ ಇದೇ ಮೊದಲ
> ಬಾರಿಗೆ ಪ್ರತಿ ಪರೀಕ್ಷಾ ಕೇಂದ್ರಕ್ಕೂ ತಲಾ ಒಬ್ಬ ಪ್ರಶ್ನೆಪತ್ರಿಕೆ ಪಾಲಕರನ್ನು
> ನೇಮಿಸಲಾಗುತ್ತಿದೆ. ಈ ಹಿಂದೆಲ್ಲ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಎಲ್ಲರೂ
> ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದರು. ಯಾರ ಮೇಲೆ ಕ್ರಮ ಜರುಗಿಸಬೇಕೆಂದು ಮಂಡಳಿಯು
> ಗೊಂದಲ, ಇಕ್ಕಟ್ಟಿಗೆ ಸಿಲುಕುತ್ತಿತ್ತು. ಇನ್ಮುಂದೆ ಪ್ರಶ್ನೆಪತ್ರಿಕೆ ಸೋರಿಕೆಯಾದರೆ
> ಮಂಡಳಿಯು ನೇರವಾಗಿ ಪ್ರಶ್ನೆಪತ್ರಿಕೆ ಪಾಲಕರನ್ನೇ ಹೊಣೆಯಾಗಿಸಲಿದೆ. ಖಜಾನೆಯಿಂದ ಬರಲಿರುವ
> ಪ್ರಶ್ನೆಪತ್ರಿಕೆಗಳನ್ನು ಪ್ರಶ್ನೆಪತ್ರಿಕೆ ಪಾಲಕರುಸುಪರ್ದಿಗೆ ಪಡೆದು ಕೇಂದ್ರದ ಮುಖ್ಯ
> ಅಧೀಕ್ಷಕರಿಗೆ ವಿತರಿಸಲಿದ್ದಾರೆ. ಗೈರಾದ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆ ವಾಪಸ್ ಪಡೆದು
> ಮಂಡಳಿಗೆ ಮರಳಿಸಲಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ತಡೆಗಟ್ಟಲಿದ್ದಾರೆ
> ಎನ್ನುತ್ತಾರೆ ಬೆಳಗಾವಿ ಬಿಇಒ ಎಂ.ಆರ್.ಅಲಾಸೆ.*
>
> *ಹೇಗೆ ಅಳವಡಿಸಬೇಕು?*
>
> *ಪರೀಕ್ಷಾ ಕೇಂದ್ರದಲ್ಲಿ ಅಳವಡಿಕೆಯಾದ ಕ್ಯಾಮರಾಗಳು ದಿನದ 24 ಗಂಟೆಗಳ ಕಾರ್ಯ
> ನಿರ್ವಹಿಸಬೇಕು. ಕೇಂದ್ರದ ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಕ್ಯಾಮರಾ ಅಳವಡಿಸಬೇಕು. ಕೇಂದ್ರದ
> ಮುಖ್ಯ ಅಧೀಕ್ಷಕರ ಕೊಠಡಿಯಲ್ಲಿ ಎಲ್ಲ ಪರೀಕ್ಷಾ ಚಟುವಟಿಕೆ ವೀಕ್ಷಿಸಲು ಸ್ಕ್ರೀನ್ ಪರದೆ
> ವ್ಯವಸ್ಥೆ ಮಾಡಬೇಕು. ಕೊಠಡಿಯ ಕಪ್ಪು ಹಲಗೆಯಿಂದ ಆರಡಿ ಜಾಗ ಬಿಟ್ಟು ಎಲ್ಲ 24
> ವಿದ್ಯಾರ್ಥಿಗಳು ಕಾಣುವಂತೆ 360 ಡಿಗ್ರಿ ಕೋನದಲ್ಲಿ ಕ್ಯಾಮರಾ ಅಳವಡಿಸುವಂತೆ
> ಸೂಚಿಸಲಾಗಿದೆ. ಬೆಳಗಾವಿ ಸೇರಿ ರಾಜ್ಯದ ಹಲವೆಡೆ ಕೇಂದ್ರಗಳಲ್ಲಿ ಕ್ಯಾಮರಾ ಅಳವಡಿಕೆ
> ಪ್ರಕ್ರಿಯೆ ಭರದಿಂದ ಸಾಗಿದೆ.*
>
> --
> You received this message because you are subscribed to the Google Groups
> "KSHST" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> To view this discussion on the web visit https://groups.google.com/d/
> msgid/kshst/CAL8OgzBSeQCWpc6moPH%2BRG1pHDbGmMyqcMWG-JWODVD-N4%
> 2BEpw%40mail.gmail.com
> <https://groups.google.com/d/msgid/kshst/CAL8OgzBSeQCWpc6moPH%2BRG1pHDbGmMyqcMWG-JWODVD-N4%2BEpw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAMgShGtKeqD3WxZj%3DPwMJ%3DH-0x%3D79sortK3LFQyOOWNjSS7dUg%40mail.gmail.com.
For more options, visit https://groups.google.com/d/optout.

Reply via email to