👆 👆ಎಲ್ಲ ಆತ್ಮೀಯ ಗುರು ಬಳಗಕ್ಕೆ ನಮಸ್ಕಾರಗಳು ಈ ಮೇಲಿನ ಪ್ರೌಢ ಶಾಲಾ ಶಿಕ್ಷಕರ ಹೆಚ್ಚುವರಿ ವೇತನ ಬಡ್ತಿ ಸಂಬಂಧ ಸರಕಾರಿ ಆದೇಶದಲ್ಲಿ ಡಯಟ, ಉಪನಿರ್ದೇಶಕರ/ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕರು ಎಂದರೆ ಯಾರು? ಶಿಕ್ಷಕರು ಎಂದರೆ ಯಾರು? ಎಂಬುದರ ಬಗ್ಗೆ ಸ್ಪಷ್ಟೀಕರಣ ಬೇಕಾಗಿದೆ. ನನ್ನ ತಿಳುವಳಿಕೆ ಪ್ರಕಾರ ಮುಖ್ಯ ಶಿಕ್ಷಕರೆಂದರೆ ಉಪನಿರ್ದೇಶಕರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಷಯ ಪರಿವೀಕ್ಷಕರು/ಎ ಪಿ ಸಿ ಡಯಟಗಳಲ್ಲಿನ ಕಿರಿಯ ಉಪನ್ಯಾಸಕರು/ ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ವಿಷಯ ಶಿಕ್ಷಕರೆಂದರೆ ಕ್ಷೇತ್ರ ಡಯಟಗಳಲ್ಲಿನ ವೃತ್ತಿ/ದೈಹಿಕ/ಸಂಗೀತ ಶಿಕ್ಷಕರು/ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೆರಿಯಲ್ಲಿನ ಪ್ರೌಢ ಶಾಲಾ ಶಿಕ್ಷಣ ಸಂಯೋಜಕರು/ಪ್ರೌಢ ಬಿ ಆರ್ ಪಿ ಗಳು ವಿಷಯ ಶಿಕ್ಷಕರಾಗಿರುತ್ತಾರೆ ಹಾಗಾದರೆ ಇವರಿಗೆ ಹೆಚ್ಚುವರಿ ವೇತನ ಬಡ್ತಿ ನೀಡುವಲ್ಲಿ ಕಛೇರಿಯವರು ಮೇನಾ ಮೇಷ ಎನಿಸುತ್ತಿರುವುದು ಏಕೆ? ಇವರಿಗೆ ಈ ಬಡ್ತಿ ನೀಡಲು ಬರುತ್ತದೆಯೋ ಇಲ್ಲವೋ? ಈ ಕುರಿತು ಹೆಚ್ಚಿನ ಮಾಹಿತಿ ಇರುವವರು ದಯವಿಟ್ಟು ತಿಳಿಸಬೇಕಾಗಿ ವಿನಂತಿ ಶುಭರಾತ್ರಿ ಇಂದ ಪ್ರೌಢ ಬಿ ಆರ್ ಪಿ ನಿಪ್ಪಾಣಿ
-- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CAORzVHUTeS8EEK6c_vMKZ0Pt0E55pTLJq7X65UVWbGs_uyP7cw%40mail.gmail.com. For more options, visit https://groups.google.com/d/optout.
