Sir ..nice article..
On Jan 20, 2016 7:41 AM, "HAREESHKUMAR K huskuru" <[email protected]>
wrote:

> http://m.prajavani.net/article/2016_01_20/380982
>
> *ವಿಕಿಪೀಡಿಯಾ–15: ಕನ್ನಡದ ತಲ್ಲಣಗಳು*
>
> 20 Jan, 2016
>
> <https://www.facebook.com/sharer/sharer.php?u=http%3A%2F%2Fgoo.gl%2FqdfW9Z>
> <https://twitter.com/intent/tweet?text=%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF%E0%B2%BE%E2%80%9315%3A+%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6+%E0%B2%A4%E0%B2%B2%E0%B3%8D%E0%B2%B2%E0%B2%A3%E0%B2%97%E0%B2%B3%E0%B3%81+http%3A%2F%2Fgoo.gl%2FqdfW9Z>
> <https://plus.google.com/share?url=http%3A%2F%2Fgoo.gl%2FqdfW9Z>
> <http://www.pinterest.com/pin/find/?url=http%3A%2F%2Fgoo.gl%2FqdfW9Z>
> <http://www.linkedin.com/shareArticle?mini=true&title=%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF%E0%B2%BE%E2%80%9315%3A+%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6+%E0%B2%A4%E0%B2%B2%E0%B3%8D%E0%B2%B2%E0%B2%A3%E0%B2%97%E0%B2%B3%E0%B3%81+&url=http%3A%2F%2Fgoo.gl%2FqdfW9Z>
>
> ಈ ವರ್ಷದ ಜನವರಿ 15ಕ್ಕೆ ಸರಿಯಾಗಿ ವಿಕಿಪೀಡಿಯಾ ಎಂಬ ಆನ್‌ಲೈನ್ ವಿಶ್ವಕೋಶಕ್ಕೆ 15 ವರ್ಷ
> ತುಂಬಿತು. ತಿಂಗಳಿಗೆ 49.3 ಕೋಟಿ ಓದುಗರಿರುವ ಈ ವಿಶ್ವಕೋಶವನ್ನು ರೂಪಿಸಿರುವುದು ಒಂದು
> ಸಂಪಾದಕ ಮಂಡಳಿಯಲ್ಲ. ಇದನ್ನು ಆರಂಭಿಸುವುದರ ಹಿಂದೆ ಒಂದು ತಂಡವಿತ್ತಾದರೂ ಅದು ಬೆಳೆದದ್ದು
> ವಿಶ್ವವ್ಯಾಪಿಯಾಗಿರುವ ಬಳಕೆದಾರ ಸಂಪಾದಕರಿಂದ. ಪ್ರತಿಯೊಬ್ಬ ಬಳಕೆದಾರನೂ ಒಬ್ಬ ಸಂಪಾದಕನೇ
> ಎಂಬ ತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ವಿಕಿಪೀಡಿಯಾ ಇಂದು ಪ್ರಪಂಚದಲ್ಲೇ ಅತಿ
> ಹೆಚ್ಚು ಮಂದಿ ಬಳಸುವ ಜಾಲತಾಣಗಳಲ್ಲಿ ಒಂದು.
>
> ಇದರಲ್ಲಿ ಲೇಖನಗಳು ಮತ್ತು ಚಿತ್ರಗಳೆಲ್ಲವೂ ಮುಕ್ತ ಹಕ್ಕುಸ್ವಾಮ್ಯದಡಿಯಲ್ಲಿವೆ.
> ಇಂಗ್ಲಿಷ್‌ನ ವಿಕಿಪೀಡಿಯಾ ಕನ್ನಡವೂ ಸೇರಿದಂತೆ ಪ್ರಪಂಚದ ಅನೇಕ ಭಾಷೆಗಳಿಗೆ
> ವಿಸ್ತರಿಸಿಕೊಂಡಿದೆ. ಆದರೆ ಇಂಗ್ಲಿಷ್ ಮತ್ತು ಯೂರೋಪಿನ ಕೆಲವು ಭಾಷೆಗಳಲ್ಲಿ ಇದಕ್ಕೆ ದೊರೆತ
> ಯಶಸ್ಸು ಉಳಿದ ಭಾಷೆಗಳಲ್ಲಿ ದೊರೆತಿಲ್ಲ. ಭಾರತೀಯ ಭಾಷೆಗಳ ಸಂದರ್ಭಕ್ಕೆ ಬಂದರಂತೂ ಲೇಖನಗಳ
> ಸಂಖ್ಯೆಯಲ್ಲಿ ಕೆಲವು ಸಾಧನೆಗಳನ್ನು ಕಾಣಬಹುದೇ ಹೊರತು ಒಟ್ಟಾರೆ ಬಳಕೆಯ ದೃಷ್ಟಿಯಲ್ಲಿ
> ನೋಡಿದರೆ ಇಂಗ್ಲಿಷ್‌ ವಿಕಿಪೀಡಿಯಾದ ವಿಷಯ ವ್ಯಾಪ್ತಿಗೆ ಸಾಟಿಯಾಗುವಂಥ ಯಾವ ಭಾಷೆಯೂ ಇಲ್ಲ
> ಎನ್ನುವುದು ವಾಸ್ತವ.
>
> ವಿಕಿಪೀಡಿಯಾದ ಹದಿನೈದು ವರ್ಷಗಳ ಅಸ್ತಿತ್ವವನ್ನು ಹೇಳುವಾಗಲೇ ಈ ಅವಧಿಯಲ್ಲಿ ನಡೆದ
> ಇನ್ನಷ್ಟು ಬೆಳವಣಿಗೆಗಳನ್ನೂ ಗಮನಿಸ
> ಬೇಕಾಗುತ್ತದೆ. ‘ವಿಶ್ವಕೋಶ’ ಎಂಬುದಕ್ಕೆ ಪರ್ಯಾಯ ನಾಮವೆಂಬಂತೆ ಇದ್ದ ಎನ್‌ಸೈಕ್ಲೋಪೀಡಿಯಾ
> ಬ್ರಿಟಾನಿಕಾ 2010ರಲ್ಲಿ ತನ್ನ ಮುದ್ರಿತ ಆವೃತ್ತಿಗಳ ಪ್ರಕಟಣೆಯನ್ನು ನಿಲ್ಲಿಸಿತು. 244
> ವರ್ಷಗಳ ಕಾಲ ನಿರಂತರವಾಗಿ ಪರಿಷ್ಕೃತ ಮುದ್ರಣಗಳನ್ನು ಕಂಡಿದ್ದ ಬ್ರಿಟಾನಿಕಾ ಈಗ ಕೇವಲ
> ಆನ್‌ಲೈನ್ ಆಗಿ ಮಾತ್ರ ಉಳಿದುಕೊಂಡಿದೆ. 2010ರಲ್ಲಿಯೇ ಮುದ್ರಿತ ಆವೃತ್ತಿಯ ಪ್ರಕಟಣೆ
> ನಿಲ್ಲಿಸಿದ ಮತ್ತೊಂದು ಕೋಶವಿದೆ–ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿ. 153 ವರ್ಷಗಳ ನಿರಂತರ
> ಪ್ರಕಟಣೆಯ ನಂತರ ಇದು ತನ್ನ ಪರಿಷ್ಕೃತ ಆವೃತ್ತಿಯನ್ನು ಕೇವಲ ಆನ್‌ಲೈನ್‌ಗಷ್ಟೇ
> ಸೀಮಿತಗೊಳಿಸಿತು.
>
> ಇಂಗ್ಲಿಷ್ ವಿಕಿಪೀಡಿಯಾಕ್ಕೆ 15 ತುಂಬುವಾಗಲೇ ಕನ್ನಡದ ವಿಕಿಪೀಡಿಯಾಕ್ಕೆ 13 ತುಂಬಿತು.
> ಇಂಗ್ಲಿಷ್‌ನಲ್ಲಿ ಆರಂಭವಾಗಿದ್ದ ‘ವಿಕಿ ಆಂದೋಲನ’ ಬಹಳ ಬೇಗ ಕನ್ನಡಕ್ಕೂ ತಲುಪಿತ್ತು. ಕನ್ನಡ
> ವಿಕಿಪೀಡಿಯಾಕ್ಕೆ ಭಾರತೀಯ ಭಾಷೆಗಳ ವಿಕಿಪೀಡಿಯಾಗಳ ನಡುವೆ 10ನೇ ಸ್ಥಾನವಿದ್ದರೆ
> ವಿಶ್ವಭಾಷೆಗಳ ಮಧ್ಯೆ 107ನೇ ಸ್ಥಾನವಿದೆ. ಲೇಖನಗಳ ಸಂಖ್ಯೆಯನ್ನು ನೋಡಿದರೆ ಭಾರತೀಯ ಭಾಷೆಗಳ
> ವಿಕಿಪೀಡಿಯಾ
> ಗಳಲ್ಲಿ ಉರ್ದು ವಿಶ್ವಕೋಶಕ್ಕೆ ಮೊದಲ ಸ್ಥಾನವಿದೆ. ನಂತರದ ಸ್ಥಾನಗಳನ್ನು ಹಿಂದಿ, ತಮಿಳು,
> ತೆಲುಗು, ಮರಾಠಿ ,ಮಲಯಾಳಂಗಳು ಹಂಚಿಕೊಂಡಿವೆ. ಉತ್ಸಾಹಿ ಸ್ವಯಂ ಸೇವಕರ ಹೊರತಾಗಿ ಬೇರೇನನ್ನೂ
> ಬಯಸದ ಕನ್ನಡ ವಿಕಿಪೀಡಿಯಾ ಏಕೆ ಹೀಗೆ ಬಡವಾಗಿದೆ? ಈ ಪ್ರಶ್ನೆಯನ್ನು ಕೇವಲ ಕನ್ನಡ
> ವಿಕಿಪೀಡಿಯಾಕ್ಕೆ ಸೀಮಿತವಾಗಿ ಕೇಳಿಕೊಳ್ಳಬೇಕಾಗಿಲ್ಲ.
>
> ಉಳಿದ ಭಾರತೀಯ ಭಾಷೆಗಳ ಸ್ಥಿತಿಯೂ ಹೀಗೆಯೇ ಇದೆ. ಬಳಸುವವರ ಸಂಖ್ಯೆಯನ್ನು ಪರಿಗಣಿಸಿ
> ನೋಡಿದರೆ ವಿಶ್ವಮಟ್ಟದಲ್ಲಿ ಅವುಗಳ ಸ್ಥಿತಿ ಬಹಳ ಉತ್ತಮವೇನೂ ಅಲ್ಲ. ಫಿಲಿಫೀನ್ಸ್‌ನಲ್ಲಿ
> ಎರಡು ಕೋಟಿಯಷ್ಟು ಮಂದಿ ಮಾತನಾಡುವ ಸೆಬುವಾನೋ ಭಾಷೆಯ ವಿಕಿಪೀಡಿಯಾ ವಿಶ್ವಮಟ್ಟದಲ್ಲಿ
> ನಾಲ್ಕನೇ ಸ್ಥಾನದಲ್ಲಿದೆ.
>
> ವಿಕಿಪೀಡಿಯಾದಂಥ ಜ್ಞಾನ ಪ್ರಸರಣದ ವೇದಿಕೆಯಲ್ಲಿ  ಭಾರತೀಯ ಭಾಷೆಗಳಿಗೆ ಒಂದು ಉತ್ತಮ
> ಸ್ಥಾನವಿಲ್ಲದಿರುವುದರ ಕಾರಣಗಳು ಬಹಳ ಸಂಕೀರ್ಣವಾದವು. ಕನ್ನಡದ ಉದಾಹರಣೆಯನ್ನೇ ನೋಡೋಣ.
> ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ 244 ವರ್ಷಗಳ ಸತತವಾಗಿ ಪರಿಷ್ಕರಣೆಗೆ ಒಳಗಾಗಿ ಮುದ್ರಣ
> ಕಾಣುತ್ತಿತ್ತು.
>
> ವಿಶ್ವಕೋಶದಂಥ ಗ್ರಂಥಗಳನ್ನು ಪರಾಮರ್ಶಿಸುವವರು ಸಂಪೂರ್ಣವಾಗಿ ಆನ್‌ಲೈನ್ ಸೇವೆಗಳನ್ನು
> ಅವಲಂಬಿಸಲು ಆರಂಭಿಸಿದ ನಂತರವಷ್ಟೇ ಅದು ತನ್ನ ಮುದ್ರಿತ ಆವೃತ್ತಿಯನ್ನು ನಿಲ್ಲಿಸಿ
> ಆನ್‌ಲೈನ್‌ಗೆ ಸೀಮಿತಗೊಂಡಿತು. ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿಯೂ 153 ವರ್ಷಗಳ ಕಾಲ
> ಸತತವಾಗಿ ಮುದ್ರಿತ ಆವೃತ್ತಿಗಳನ್ನು ತಂದು ಆಮೇಲೆ ತನ್ನನ್ನು ಆನ್‌ಲೈನ್ ವೇದಿಕೆಯಲ್ಲಷ್ಟೇ
> ಪರಿಷ್ಕರಿಸಿಕೊಳ್ಳಲು ತೊಡಗಿತು.
>
> ಕನ್ನಡದ ಮೊದಲ ಸಂಪಾದಿತ ವಿಶ್ವಕೋಶ ಯೋಜನೆ ಆರಂಭಗೊಂಡದ್ದೇ 1967ರಲ್ಲಿ. ಎಲ್ಲಾ ಸಂಪುಟಗಳು
> ಮುದ್ರಣ ರೂಪದಲ್ಲಿ ಹೊರಬರುವುದಕ್ಕೆ 40 ವರ್ಷ ಬೇಕಾಯಿತು. ಈ ನಲವತ್ತು ವರ್ಷಗಳಲ್ಲಿ
> ಪರಿಷ್ಕರಣೆ ನಡೆಯಲಿಲ್ಲ. ಈಗಲೂ ಅದು ನಡೆಯುತ್ತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು
> ಯೋಜನೆ ಆರಂಭಗೊಂಡದ್ದು 1950ರ ದಶಕದಲ್ಲಿ. ಐದಾರು ದಶಕಗಳ ಅವಧಿಯಲ್ಲಿ ಕುಂಟುತ್ತಾ ಎಡವುತ್ತಾ
> ಹೇಗೋ ಪೂರ್ಣಗೊಂಡ ಈ ಯೋಜನೆ ಮುದ್ರಿತ ಸಂಪುಟಗಳಲ್ಲಿ ‘ಸುರಕ್ಷಿತ’ವಾಗಿದೆಯೇ ಹೊರತು
> ಪರಿಷ್ಕರಣೆಯ ಪರಂಪರೆಯೇ ಅಲ್ಲಿಲ್ಲ.
>
> ವಿಶ್ವಕೋಶ ಮತ್ತು ನಿಘಂಟಿನಂಥ ಗ್ರಂಥಗಳು ನಿರಂತರ ಪರಿಷ್ಕರಣೆಯ ಜೊತೆಗೆ ಪೂರ್ಣರೂಪದಲ್ಲಿ
> ಲಭ್ಯವಿದ್ದರೆ ಮಾತ್ರ ಅವು ವ್ಯಾಪಕ ಬಳಕೆಯಲ್ಲಿರುವ ಪರಾಮರ್ಶನ ಗ್ರಂಥಗಳಾಗಿರುತ್ತವೆ.
> ಇಲ್ಲವಾದರೆ ಅವು ಕೇವಲ ದಾಖಲೆಯಲ್ಲೇ ಇರುವ ಗ್ರಂಥಗಳಾಗಿಬಿಡುತ್ತವೆ.
> ಕನ್ನಡವೂ ಸೇರಿದಂತೆ ಬಹುತೇಕ ಭಾರತೀಯ ಭಾಷೆಗಳ ಸ್ಥಿತಿ ಇದುವೇ. ಬ್ರಿಟಾನಿಕಾವೂ ಸೇರಿದಂತೆ
> ಇಂಗ್ಲಿಷ್‌ನಲ್ಲಿ ವಿಶ್ವಕೋಶಗಳ ದೊಡ್ಡ ಪರಂಪರೆಯೇ ಇತ್ತು.
>
> ಸಹಜವಾಗಿಯೇ ಅದು ಆನ್‌ಲೈನ್‌ಗೂ ಬಂತು. ಕನ್ನಡದಲ್ಲಿ ವಿಶ್ವಕೋಶದಂಥ ಪರಾಮರ್ಶನ ಗ್ರಂಥವೊಂದರ
> ಯೋಜನೆ ರೂಪುಗೊಂಡದ್ದೇ ಬಹಳ ತಡವಾಗಿ. ಅದು ವ್ಯಾಪಕ ಬಳಕೆಗೆ ಲಭ್ಯವಾಗುವ ಮೊದಲೇ ಆ ಯೋಜನೆ
> ಅಕ್ಷರಶಃ ಸಾವನ್ನಪ್ಪಿತ್ತು. ಅಂದರೆ ಕನ್ನಡಿಗರಿಗೆ ತಮ್ಮದೇ ಭಾಷೆಯಲ್ಲಿ ವಿಶ್ವಕೋಶವೊಂದನ್ನು
> ಬಳಸುವ ಅವಕಾಶವೇ ಇರಲಿಲ್ಲ.
>
> ಈ ಮಧ್ಯೆ ಇಂಟರ್ನೆಟ್ ಏನೋ ವ್ಯಾಪಕವಾಯಿತು. ಅದು ಬಂದದ್ದೂ ಇಂಗ್ಲಿಷ್‌ನ ಮೂಲಕವೇ. ಹೊಸ
> ಸಹಸ್ರಮಾನ ಆರಂಭ
> ಗೊಂಡ ಮೇಲಷ್ಟೇ ಕಂಪ್ಯೂಟರಿನಲ್ಲಿ ಕನ್ನಡದ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಪರಿಹಾರವಾದವು. ಆ
> ಪರಿಹಾರ ಜನ ಸಾಮಾನ್ಯರನ್ನು ತಲುಪುವುದಕ್ಕೆ ಮತ್ತೂ ಒಂದು ದಶಕ ಬೇಕಾಯಿತು.
>
> ಸಾಮಾಜಿಕ ಜಾಲತಾಣಗಳು, ಬ್ಲಾಗ್‌ಗಳಲ್ಲಿ ಕನ್ನಡವನ್ನು ಬಳಸುತ್ತಿದ್ದ ಮೊದಲ ತಲೆಮಾರಿಗೆ
> ಇಂಗ್ಲಿಷ್ ಕೂಡಾ ಗೊತ್ತಿತ್ತು. ಅವರ ಪರಾಮರ್ಶೆಯ ಅಗತ್ಯಗಳನ್ನು ಇಂಗ್ಲಿಷ್ ತಾಣಗಳೇ
> ಪೂರೈಸಿದವು. ಪರಿಣಾಮವಾಗಿ ಕನ್ನಡದ್ದೇ ಆದ ‘ಜ್ಞಾನ ತಾಣ’ವೊಂದರ ಅಗತ್ಯ ಆಗ ಕಾಣಿಸಲಿಲ್ಲ.
> ಕನ್ನಡವನ್ನಷ್ಟೇ ಬಲ್ಲವರು ಆನ್‌ಲೈನ್ ಜಗತ್ತಿಗೆ ಈಗಷ್ಟೇ ಪ್ರವೇಶ ಪಡೆದಿದ್ದಾರೆ. ಅವರಿಗೆ
> ಬೇಕಿರುವ ಜ್ಞಾನವನ್ನು ಪೂರೈಸಲು ಬೇಕಿರುವ ಕೆಲಸ ಮಾತ್ರ ಆಫ್‌ಲೈನ್ ಕಾಲಘಟ್ಟದಲ್ಲಿರುವಂತೆಯೇ
> ಈಗಲೂ ಕುಂಟುತ್ತಲೇ ಇದೆ.
>
> ಇನ್ನು ವಿಕಿಪೀಡಿಯಾದಂಥ ಸ್ವಯಂ ಸೇವೆಯಿಂದ ಶ್ರೀಮಂತವಾಗಬೇಕಾದ ಯೋಜನೆಗಳು ಎದುರಿಸುವ
> ಸಮಸ್ಯೆ ಮತ್ತೊಂದು ಬಗೆಯದ್ದು. ಕನ್ನಡ ವಿಕಿಪೀಡಿಯಾಕ್ಕೆ ಲೇಖನಗಳನ್ನು ಬರೆಯಬಲ್ಲ
> ಸಾಮರ್ಥ್ಯವುಳ್ಳವರು ವಾಸ್ತವದಲ್ಲಿ ಕನ್ನಡ ವಿಕಿಪೀಡಿಯಾದ ಬಳಕೆದಾರರಲ್ಲ. ಅವರು ತಮ್ಮ
> ಜ್ಞಾನದ ವಿಸ್ತರಣೆಗೆ ಇಂಗ್ಲಿಷ್ ಬಳಸಬಲ್ಲ ಸಾಮರ್ಥ್ಯವುಳ್ಳವರು.
>
> ಆದರೆ ಕನ್ನಡದ್ದೇ ಆದ ಜ್ಞಾನವನ್ನು ಹೊಂದಿರುವವರಿಗೆ ತಮ್ಮಲ್ಲಿರುವುದು ಜ್ಞಾನ ಎಂಬುದರ
> ಅರಿವಾಗಲೀ ಅದನ್ನು ವಿಕಿಪೀಡಿಯಾದಂಥ ವೇದಿಕೆಗಳ ಮೂಲಕ ಹಂಚಿಕೊಳ್ಳುವುದಕ್ಕೆ ಬೇಕಿರುವ
> ಕೌಶಲವಾಗಲೀ ಇಲ್ಲ. ಈ ಸ್ಥಿತಿಯಲ್ಲಿ ಕನ್ನಡ ವಿಕಿಪೀಡಿಯಾ ಬೆಳೆಯು ಬೇಕೆಂದರೆ ಅದಕ್ಕೆ
> ಜ್ಞಾನದ ಪ್ರಸರಣದಲ್ಲಿ ಆಸಕ್ತರಾಗಿರುವ ಸ್ವಯಂ ಸೇವಕರು ಬೇಕು. ವಿಕಿಪೀಡಿಯಾಕ್ಕೆ ಲೇಖನ
> ಬರೆಯುವುದು ಹಣಕಾಸಿನ ಲಾಭ ತಂದುಕೊಡುವ ಕೆಲಸವಲ್ಲ. ಅಥವಾ ವೃತ್ತಿಯಲ್ಲಿ ಮೇಲೇರುವುದಕ್ಕೆ
> ಒಂದು ಮೆಟ್ಟಿಲಾಗುವಂಥ ಚಟುವಟಿಕೆಯೂ ಅಲ್ಲ. ಈ ಸ್ವಯಂ ಸೇವಕರನ್ನು ಹುಟ್ಟು ಹಾಕುವುದು ಹೇಗೆ?
>
> ಈ ವಿಷಯದಲ್ಲಿ ವಿಶ್ವವಿದ್ಯಾಲಯಗಳಂಥ ಜ್ಞಾನ ಸೃಷ್ಟಿಯ ಕೇಂದ್ರಗಳಿಂದ ಆರಂಭಿಸಿ ‘ಕನ್ನಡದ
> ಅಭಿವೃದ್ಧಿ’ಗಾಗಿ ಸರ್ಕಾರ ರೂಪಿಸಿರುವ ಸಂಸ್ಥೆಗಳಂಥ ಎಲ್ಲರೂ ಕಾಳಜಿವಹಿಸುವ ಅಗತ್ಯವಿದೆ.
> ಇಂಥದ್ದೊಂದು ಪ್ರಕ್ರಿಯೆಯನ್ನು ಕರ್ನಾಟಕ ಜ್ಞಾನ ಆಯೋಗದ ಸಲಹೆಯ ಮೇರೆಗೆ ಆರಂಭಗೊಂಡಿತ್ತು.
>
> ‘ಕಣಜ’ ಎಂಬ ಜಾಲತಾಣವನ್ನು ಇದಕ್ಕಾಗಿಯೇ ರೂಪಿಸಲಾಯಿತು. ಉತ್ಸಾಹಿ ಸಮನ್ವಯಕಾರರೊಬ್ಬರು
> ಅದಕ್ಕೊಂದು ಸ್ಪಷ್ಟ ರೂಪವನ್ನೇನೋ ಕೊಟ್ಟರು. ಆದರೆ ಅದನ್ನು ಮುಂದುವರಿಸುವ ಕೆಲಸ ಸರ್ಕಾರದ
> ಕಡೆಯಿಂದ ನಡೆಯಲಿಲ್ಲ. ಈಗ ಕೇಂದ್ರ ಸರ್ಕಾರ ಅನೇಕ ಭಾರತೀಯ ಭಾಷೆಗಳಲ್ಲಿ ಇದೇ ಬಗೆಯ
> ಯೋಜನೆಯೊಂದನ್ನು ರೂಪಿಸಿದೆ.
>
> ಕನ್ನಡದ ‘ಕಣಜ’ವನ್ನು ಬಹುಪಾಲು ತುಂಬಿಸಿದವರೊಬ್ಬರು ಕೇಂದ್ರ ಸರ್ಕಾರದ ‘ಭಾರತ್‌ವಾಣಿ’
> ಯೋಜನೆಯ ಸಮನ್ವಯಕಾರರಾಗಿದ್ದಾರೆ. ‘ಕಣಜ’ದಲ್ಲಿ ಸಾಧ್ಯವಾಗದೇ ಹೋದದ್ದು ‘ಭಾರತ್‌ವಾಣಿ’ಯಲ್ಲಿ
> ಆಗಬಹುದೆಂದು ನಿರೀಕ್ಷಿಸಬಹುದೇನೋ. ಇದು ಸಂಭವಿಸುವುದಕ್ಕೆ ಕೇವಲ ಬೌದ್ಧಿಕ ಸಂಪನ್ಮೂಲವಷ್ಟೇ
> ಸಾಕಾಗುವುದಿಲ್ಲ. ಅದಕ್ಕೆ ಅಗತ್ಯವಿರುವ ತಾಂತ್ರಿಕ, ಆರ್ಥಿಕ ಸಂಪನ್ಮೂಲಗಳು ನಿರಂತರವಾಗಿ
> ಲಭ್ಯವಾಗಬೇಕು.
>
> ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಕನ್ನಡ ವಿಕಿಪೀಡಿಯಾದಂಥ ಯೋಜನೆಗಳ
> ಅಭಿವೃದ್ಧಿಗೆ ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳು ಹೇಗೆ ಸಹಕರಿಸಬಹುದು ಎಂಬುದರ
> ಬಗ್ಗೆ ಸಮಾಲೋಚನೆ ನಡೆಸುವುದಾಗಿ ಹೇಳಿದ್ದಾರೆ. ಪ್ರಾಧಿಕಾರ ಈ ವಿಷಯವನ್ನು ಗಂಭೀರವಾಗಿ
> ಪರಿಗಣಿಸಿರುವುದೇನೋ ಸ್ವಾಗತಾರ್ಹ. ಈ ಬಗೆಯ ಸಮಾಲೋಚನೆಗಳನ್ನು ಅರ್ಥಪೂರ್ಣವಾಗುವುದಕ್ಕೆ
> ಸರ್ಕಾರಿ ವೆಬ್‌ಸೈಟ್‌ಗಳಲ್ಲಿರುವ ಮಾಹಿತಿ ಸಂಪೂರ್ಣವಾಗಿ ಕನ್ನಡದಲ್ಲಿ ದೊರೆಯಬೇಕಾದ
> ಅಗತ್ಯವಿದೆ.
>
> ಇಂಗ್ಲಿಷ್ ವಿಕಿಪೀಡಿಯಾ ತಾನೇ ತಾನಾಗಿ ಬೆಳೆಯಲಿಲ್ಲ. ಅದು ಬೆಳೆಯುವುದಕ್ಕೆ ಬೇಕಾದಷ್ಟು
> ಮಾಹಿತಿ ಆನ್‌ಲೈನ್‌ನಲ್ಲಿ ಆಗಲೇ ಲಭ್ಯ
> ವಿತ್ತು ಎಂಬ ಅಂಶವನ್ನೂ ನಾವು ಮರೆಯಬಾರದು. ಇದರಲ್ಲಿ ಸರ್ಕಾರಗಳು ಒದಗಿಸುವ ಮಾಹಿತಿಯೂ
> ಸೇರಿತ್ತು. ಆನ್ ಲೈನ್ ವಿಶ್ವಕೋಶವೊಂದು ಬೆಳೆಯುವುದಕ್ಕೆ ಆನ್‌ಲೈನ್‌ನಲ್ಲಿ ಅದಕ್ಕೆ
> ಪೂರಕವಾದ ಮಾಹಿತಿ ಸಂಪನ್ಮೂಲ ಲಭ್ಯವಿರಬೇಕು.
>
> ಕನ್ನಡದಲ್ಲಿ ಅದರ ಕೊರತೆಯಿನ್ನೂ ಉಳಿದುಕೊಂಡಿದೆ. ವಿಶ್ವವಿದ್ಯಾಲಯಗಳು, ಅಕಾಡೆಮಿಗಳು,
> ಸರ್ಕಾರಿ ಇಲಾಖೆಗಳು ತಮ್ಮಲ್ಲಿರುವ ಮಾಹಿತಿ ಕಣಜವನ್ನು ತಮ್ಮದೇ ತಾಣಗಳಲ್ಲಿ
> ಮುಕ್ತವಾಗಿರಿಸಲು ತೊಡಗಿದರೆ ವಿಕಿಪೀಡಿಯಾದಂಥ ಯೋಜನೆಗಳು ತಾವಾಗಿಯೇ ಬೆಳೆಯುತ್ತವೆ.
>
> Hareeshkumar K
> AM(PCM)
> GHS HUSKURU
> MALAVALLI TQ
> MANDYA DT 571475
> mobile no 9880328224
> email [email protected]
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to