ವಿಜ್ಞಾನ ವಿಸ್ಮಯ: ಕಾಯಿಲೆಗಳ ಕೂಪ- ಕಾಸ್ಮೆಟಿಕ್ಸ್!
(ಮೆಂಡಲ್ ತಂಡ-ರಚನ ೩ ತರಬೇತಿ ಡಯಟ್ ಯಾದಗಿರಿ) 23-01-2016:::

ಇಂದಿನ ಜೀವನ ಶೈಲಿಯಲ್ಲಿ ಸೌಂದರ್ಯವರ್ಧಕಗಳು (ಕಾಸ್ಮೆಟಿಕ್ಸ್) ಗಾಬರಿ ಹುಟ್ಟಿಸುವಷ್ಟು
ಮಟ್ಟಕ್ಕೆ ಬೆಳೆದು ನಿಂತಿದೆಯೆಂದರೆ ಅತಿಶಯೋಕ್ತಿಯಲ್ಲ. 30-40 ವರ್ಷಗಳ ಹಿಂದೆ, ಆಹಾರ,
ವಸತಿ, ಉಡುಪು ಆದ್ಯತೆಯ ವಿಷಯಗಳಾಗಿದ್ದವು. 'ಊಟವಿಲ್ಲದಿದ್ದರೂ ಸೌಂದರ್ಯವರ್ಧಕಗಳನ್ನು
ಬಿಡಲಾರೆವು' ಎಂಬುದೇ ಇಂದಿನ ಯುವಜನಾಂಗದ ಮಂತ್ರ! ಯುವಕ-ಯುವತಿಯರು ತಮ್ಮ ಆದಾಯದ ಹೆಚ್ಚು
ಭಾಗವನ್ನು ಸೌಂದರ್ಯವರ್ಧಕಗಳಿಗೆ ಖರ್ಚು ಮಾಡುತ್ತಿದ್ದಾರೆ. 'ಸೌಂದರ್ಯವರ್ಧಕಗಳು ಕೇವಲ
ಮಹಿಳೆಯರಿಗೆ ಮಾತ್ರ' ಎನ್ನುವ ಕಾಲ ಮಾಯವಾಗಿ ಪುರುಷರೂ ಸೌಂದರ್ಯವರ್ಧಕಗಳ ಬಳಕೆಯಲ್ಲಿ
ಸಿಂಹಪಾಲು ಹೊಂದಿದ್ದಾರೆ.

ಮಾನವನ ಚರ್ಮ ಅತ್ಯಂತ ಸೂಕ್ಷ್ಮ; ಅಲ್ಲದೆ ಅದು ವಸ್ತುಗಳನ್ನು ಹೀರಿಕೊಳ್ಳುವ ಗುಣವನ್ನು
ಹೊಂದಿದೆ. ನೀವು ಹಚ್ಚುವ ಎಲ್ಲ ಸೌಂದರ್ಯವರ್ಧಕಗಳೂ ಚರ್ಮದ ಮೂಲಕ ದೇಹವನ್ನು ಸೇರುತ್ತವೆ.
ಕೆಲವಂತೂ ಬಹಳ ವೇಗವಾಗಿ ಚರ್ಮದ ಮೂಲಕ ತೂರಿ ಹೋಗುತ್ತವೆ. ಬಹಳ ಕಾಲ ಬಳಸುವ, ಮುಖಕ್ಕೆ
ಹಚ್ಚುವ ಕ್ರೀಮುಗಳಂತೂ ಹೆಚ್ಚು ದುಷ್ಪರಿಣಾಮವನ್ನು ಬೀರುತ್ತವೆ. ಬಹುತೇಕ
ಸೌಂದರ್ಯವರ್ಧಕಗಳಲ್ಲಿ ಶೇಕಡ 13ರಷ್ಟು 'ಬ್ಯೂಟೈಲೇಟ್ ಹೈಡ್ರಾಕ್ಸಿಟಾಲಿನ್' ಹಾಗೂ ಶೇಕಡ
49ರಷ್ಟು ಪ್ರಮುಖ ಕೀಟನಾಶಕ ಡಿ.ಡಿ.ಟಿ.ಯನ್ನು ಬಳಸಲಾಗುತ್ತಿದೆ. ಈ ಎರಡೂ ಭೀಕರ
ರಾಸಾಯನಿಕಗಳು.

ಜೋಕೆ, ಕ್ಯಾನ್ಸರ್ ಬಂದೀತು!
ಹೆಚ್ಚಿನ ಸೌಂದರ್ಯವರ್ಧಕಗಳಲ್ಲಿ 'ಡೈ ಈಥನೋಮೈನ್' ಮತ್ತು 'ಟ್ರೈ ಈಥನೋಲಮೈನ್'ಗಳನ್ನು
ಬಳಸಲಾಗುತ್ತಿದೆ. ಈ ರಾಸಾಯನಿಕಗಳು ಕ್ಯಾನ್ಸರ್ ತರುವಂಥ ವಸ್ತುಗಳು ಎಂಬುದು ದೃಢಪಟ್ಟಿದೆ.
ಪ್ರಸಿದ್ಧ ಬ್ರ್ಯಾಂಡಿನ ಮಕ್ಕಳ ಸೌಂದರ್ಯವರ್ಧಕಗಳಲ್ಲಿ ಅತ್ಯಂತ ಅಪಾಯಕಾರಿಯಾದ
'ಬ್ರೋನೋಪಾಲ್' ರಾಸಾಯನಿಕವನ್ನು ಬಳಸಲಾಗುತ್ತಿದೆ. ಆದರೆ ಈ ಕಂಪನಿ ಮಾತ್ರ ಈ ಸತ್ಯವನ್ನು
ಮರೆಮಾಚಿ ಕೇವಲ ಸ್ವಾಭಾವಿಕ ಪರಿಸರದ ವಸ್ತುಗಳನ್ನು ಬಳಸುವುದಾಗಿ ಬೊಗಳೆ ಬಿಡುತ್ತಿದೆ!

ನೀವು ಬಳಸುವ ಹೇರ್‌ಡೈಗಳಲ್ಲಿ, ಶಾಂಪೂಗಳಲ್ಲಿ, ಹೇರ್ ಕಂಡೀಷನರ್‌ಗಳಲ್ಲಿ, ಹೊಟ್ಟು
ನಿವಾರಕಗಳಲಿ,್ಲ ಲೋಷನ್‌ಗಳಲ್ಲಿ, ಕ್ರೀಮುಗಳಲ್ಲಿ, ಸುಗಂಧಭರಿತ ಸಾಬೂನುಗಳಲ್ಲಿ ಅತ್ಯಂತ
ಅಪಾಯಕಾರಿ '1-2 ಡಯಾಕ್ಸೇನ್' ಎಂಬ ರಾಸಾಯನಿಕವನ್ನು ಬಳಸಲಾಗುತ್ತಿದೆ. ಇದು ಅತ್ಯಂತ
ವೇಗವಾಗಿ ಆವಿಯಾಗುವ ರಾಸಾಯನಿಕ. ಇದು ಚರ್ಮದ ಮೂಲಕ ಹಾಗೂ ಉಸಿರಾಟದ ಮೂಲಕ ಬಹಳ ವೇಗವಾಗಿ
ದೇಹವನ್ನು ಸೇರುತ್ತದೆ. ಈ ರಾಸಾಯನಿಕವನ್ನು ಇಲಿಗಳ ಮೇಲೆ ಪ್ರಯೋಗಿಸಿದಾಗ ಶ್ವಾಸಕೋಶದ ಹಾಗೂ
ಯಕೃತ್‌ಗಳ ಕ್ಯಾನ್ಸರ್‌ನ ಸಾಧ್ಯತೆಗಳು ಖಚಿತಗೊಂಡಿವೆ.

ಈ ಸೌಂದರ್ಯವರ್ಧಕಗಳಲ್ಲಿ ಬಳಸುವ ಬಣ್ಣಗಳಾದ ಬ್ಲೂ-1, ಗ್ರೀನ್-3, ಡಿ ಅಂಡ್ ಸಿ-33, ಯೆಲ್ಲೋ
5-6, ಚರ್ಮದ ಕ್ಯಾನ್ಸರ್‌ಗೆ ಖಂಡಿತ ನಾಂದಿ ಹಾಡಬಲ್ಲವು. ನೀವು ಬಳಸುವ ಹೇರ್‌ಡೈಗಳಲ್ಲಿ
ಅದರಲ್ಲೂ ಕಪ್ಪು ಮತ್ತು ಕಂದು ಬಣ್ಣದ ಹೇರ್‌ಡೈಗಳಲ್ಲಿ ಕ್ಯಾನ್ಸರ್ ತರುವಂಥ
ರಾಸಾಯನಿಕಗಳಿವೆ. ಇವು ಲಿಂಪೋಮಾ, ಮಲ್ಟಿಪಲ್ ಮೈಲೋಮಾದಂತಹ ಭೀಕರ ಕ್ಯಾನ್ಸರ್ ರೋಗಗಳನ್ನು
ತರಬಲ್ಲವು. ನಾವು ಪ್ರೀತಿಯಿಂದ ಬಳಸುವ ಟಾಲ್ಕಂ ಪೌಡರ್ ಕೂಡ ಅಪಾಯಗಳನ್ನು ತರಬಲ್ಲದು ಎಂದರೆ
ನೀವು ನಂಬುತ್ತೀರಾ?

ಏನೇ ಆಗಲಿ, ಈ ಸೌಂದರ್ಯವರ್ಧಕ ತಯಾರಕರ ಮೇಲೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ
ಮಟ್ಟದಲ್ಲಿ ನಿಯಂತ್ರಣ ಮತ್ತು ಕಾನೂನುಗಳನ್ನು ಹೇರುವುದು ಅತ್ಯಗತ್ಯ. ಇಂದಿನ ಯುವ ಜನಾಂಗ
ಕೇವಲ ಜಾಹೀರಾತಿಗೆ ಮರುಳಾಗದೇ ಒಳಿತು-ಕೆಡುಕುಗಳನ್ನು ವಿಮರ್ಶಿಸಿ ಸೌಂದರ್ಯವರ್ಧಕಗಳನ್ನು
ಬಳಸುವುದು ತುಂಬಾ ಒಳ್ಳೆಯದು.
Regards

ERANNA V

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to