On Sep 9, 2015 11:40 AM, "Mallu Chavalagi" <[email protected]> wrote:
> ಅಧ್ಯಾಯ-8 > ಚಲನೆಯ ವಿಧಗಳು > ಪಠ್ಯ ಪುಸ್ತಕದ ಪ್ರಶ್ನೆಗಳು ಮತ್ತು ಉತ್ತರಗಳು. > I. ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆಯ್ಕೆಮಾಡಿ ಬರೆಯಿರಿ. > 1. ಈ ಕೆಳಗಿನವುಗಳಲ್ಲಿ ಯಾವುದು ವೃತ್ತಿಯ ಚಲನೆ______ > (ಎ)ಇಲಿಜಾರು ಸಮತಲದಿಂದ ಕೆಳಗುರುಳಿತ್ತಿರುವ ಚಿಂಡು > (ಬಿ)ಸರಳ ಲೋಲಕದ ಚಲನೆ > (ಸಿ)ಒಂದು ಕಾಯದ ಮುಕ್ತಪತನ > (ಡಿ)ಒಂದು ಕಲ್ಲನ್ನು ದಾರಕ್ಕೆ ಕಟ್ಟಿ ತಿರುಗಿಸಿದಾಗ ಆಗುವ ಚಲನೆ. > ಉತ್ತರ: (ಡಿ)ಒಂದು ಕಲ್ಲನ್ನು ದಾರಕ್ಕೆ ಕಟ್ಟಿ ತಿರುಗಿಸಿದಾಗ ಆಗುವ ಚಲನೆ. > 2. ತರಂಗದಲ್ಲಿ ವರ್ಗಾವಣೆ ಆಗುವುದು_______ > (ಎ)ಸಾಮರ್ಥ್ಯ (ಬಿ)ಶಕ್ತಿ (ಸಿ)ಸ್ಥಾನಪಲ್ಲಟ (ಡಿ)ಕೆಲಸ > ಉತ್ತರ: (ಬಿ)ಶಕ್ತಿ > 3. ನೀಳ ತರಂಗದ ಉದಾಹರಣೆ____________ > (ಎ)ರೇಡಿಯೋ ತರಂಗ (ಬಿ)ಕ್ಷ – ಕಿರಣ (ಸಿ)ದೃಗ್ಗೋಚರ ಬೆಳಕು (ಡಿ)ಧ್ವನಿತರಂಗ > ಉತ್ತರ: (ಡಿ)ಧ್ವನಿತರಂಗ > 4. ತರಂಗ ದೂರವನ್ನು ಅಳೆಯುವ ಮಾನ(SI)_______ > (ಎ) cm (ಬಿ) dm (ಸಿ) m (ಡಿ) km > ಉತ್ತರ: (ಸಿ) m > 5. ಒಂದು ತರಂಗದ ದೂರ 4m ಪ್ರತಿಸೆಕೆಂಡಿಗೆ ಒಂದು ಬಿಂದುವಿನ ಮೂಲಕ 2 ತರಂಗಗಳು ಹಾದು > ಹೋದರೆ, ಆ ತರಂಗದ ವೇಗ____________________ > (ಎ)2 m/s (ಬಿ)8 m/s (ಸಿ)6 m/s (ಡಿ)4 m/s > ಉತ್ತರ: (ಬಿ)8 m/s > > II. ಬಿಟ್ಟಿರುವ ಸ್ಥಳವನ್ನು ಸೂಕ್ತ ಪದಗಳಿಂದ ಭರ್ತಿಮಾಡಿ > 1. ತರಂಗಗಳು ಉಂಟಾಗಲು ಕಾರಣವೇನೆಂದರೆ, ಮಾಧ್ಯಮದ ಕಂಪನ > 2. ತರಂಗದ ವೇಗವನ್ನು ನಿರ್ಧರಿಸುವ ಅಂಶ ಮಾಧ್ಯಮದ ಸ್ವರೂಪ > 3. ಎರಡು ಆವರ್ತಕ ಸಂಪೀಡನ/ವಿರಳನಗಳ ಅಂತರ ತರಂಗದ ದೂರ > 4. ವಿದ್ಯುತ್ ಕಾಂತೀಯ ತರಂಗಗಳ ವಿಧವೆಂದರೆ ಶೃಂಗ ಮತ್ತು ಗರ್ತ > 6. ನೀಳ ತರಂಗದಲ್ಲಿ ಕಂಪನ ದಿಕ್ಕು ಮತ್ತು ತರಂಗದ ಚಲನೆಯದಿಕ್ಕು ಪರಸ್ಪರ > ಸಮಾಂತರವಾಗಿರುತ್ತದೆ. > > III. ಹೊಂದಿಸಿ ಬರೆಯಿರಿ > 1. ನೀಳ ತರಂಗ – ಸ್ಪ್ರಿಂಗ್ ನಲ್ಲಿನ ಆಂದೋಲನ > 2. ಅಡ್ಡ ತರಂಗ – ಉಬ್ಬುಗಳು ಮತ್ತು ತಗ್ಗುಗಳು > 3. ಸರಳ ಸಂಗತ ಚಲನೆ – ಸರಳ ಲೋಲಕದ ಆಂದೋಲನ > IV. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಿ. > 1. ಅಡ್ಡತರಂಗ ಮತ್ತು ನೀಳ ತರಂಗಗಳಿಗಿರುವ ವ್ಯತ್ಯಾಸವನ್ನು ತಿಳಿಸಿ. > ಅಡ್ಡ ತರಂಗ > ನೀಳ ತರಂಗ > ಅಡ್ಡತರಂಗಗಳಲ್ಲಿ ಮಾಧ್ಯಮ ಕಣಗಳು ತರಂಗದ ಚಲನೆಯ ದಿಕ್ಕಿಗೆ ಲಂಬವಾಗಿ ಕಂಪಿಸುತ್ತವೆ. > ನೀಳ ತರಂಗಗಳಲ್ಲಿ ಮಾಧ್ಯಮದ ಕಣಗಳು, ತರಂಗದ ಚಲನೆಯ ದಿಕ್ಕಿನಲ್ಲೇ ಕಂಪಿಸುತ್ತವೆ. > ಅಡ್ಡತರಂಗಗಳಲ್ಲಿ ಉಬ್ಬು ಮತ್ತು ತಗ್ಗುಗಳು ಉಂಟಾಗುತ್ತವೆ > ನೀಳ ತರಂಗಗಳಲ್ಲಿ ಸಂಪೀಡನ ಮತ್ತು ವಿರಳನಗಳು ಉಂಟಾಗುತ್ತವೆ. > ಒಂದು ಉಬ್ಬು ಮತ್ತು ಒಂದು ತಗ್ಗು ಒಂದು ತರಂಗವನ್ನು ಪ್ರತಿನಿಧಿಸುತ್ತದೆ. > ಒಂದು ಸಂಪೀಡನ ಮತ್ತು ಒಂದು ವಿರಳನ, ಒಂದು ಅಲೆಯನ್ನು ಪ್ರತಿನಿಧಿಸುತ್ತದೆ. > ಉದಾ: ನೀರಿನ ತರಂಗಗಳು, ದೃಗ್ಗೋಚರ ಬೆಳಕು > ಉದಾ: ಶಬ್ದ ತರಂಗಗಳು ಅನಿಲಗಳಲ್ಲಿನ ಕಂಪನ, ಸ್ಪ್ರಿಂಗ್ ನಲ್ಲಿನ ದೋಲನ. > > 2. ತರಂಗಗಳು ಚಲಿಸುವಾಗ ಮಾಧ್ಯಮದ ಕಣಗಳು ವರ್ಗಾವಣೆಗೊಳ್ಳುತ್ತವೆಯೇ?ಉದಾಹರಣೆಯೊಂದಿಗೆ > ವಿವರಿಸಿ. > ಮಾಧ್ಯಮದಲ್ಲಿ ತರಂಗಗಳು ಪ್ರಸರಿಸುವಾಗ, ಮಾಧ್ಯಮದ ಕಣಗಳು ತಮ್ಮ ಸಮಸ್ಥಾನದಲ್ಲಿ > ಕಂಪಿಸುತ್ತದೆ, ಇದರಿಂದ ಶಕ್ತಿಯವರ್ಗಾವಣೆ ಆಗುವುದೇ ವಿನಹ ಮಾಧ್ಯಮದ ಕಣಗಳ ವರ್ಗಾವಣೆ ಆಗದು, > ಉದಾ: ಒಂದು ಅಗಲವಾದ ಗಾಜಿನ ಪಾತ್ರೆಯಲ್ಲಿ ನೀರು ಹಾಕಿ, ಬಿರಡೆ ಚೂರನ್ನು ತೇಲಿಬಿಡಿ, > ನೀರನ್ನು ಕ್ಷೋಭೆಗೊಳಿಸಿ, ತೇಲುವ ವಸ್ತುವು ಇದ್ದ ಸ್ಥಾನದಲ್ಲಿ ಮೇಲೆ ಕೆಳಗೆ ಚಲಿಸುತ್ತದೆ > ಆದರೆ ಮುಂದಕ್ಕೆ ಚಲಿಸುವುದಿಲ್ಲಿ. > > 3. ಕಂಪನದ ಆವರ್ತಾಂಕವನ್ನು ದ್ವಿಗುಣಗೊಳಿಸಿದರೆ, ಅದರ ಅವಧಿ ಎಷ್ಷಾಗುತ್ತದೆ? > T=1/n ಕಂಪನದ ಆವರ್ತಾಂಕವನ್ನು ದ್ವಿಗುಣಗೊಳಿಸಿದರೆ ಅವಧಿಯು ಆವರ್ತಾಂಕದ > ಅರ್ಧದಷ್ಷಾಗುತ್ತದೆ. > > 4. ಒಂದು ಅಡ್ಡತರಂಗದ ಆವರ್ತಾಂಕ 10 Hz, ಹಾಗೂ ಅನುಕ್ರಮ ಶೃಂಗಗಳ ಅಂತರ 2m ಆದಲ್ಲಿ, > ತರಂಗ ದೂರವನ್ನು ಕಂಡುಹಿಡಿಯಿರಿ? > n=10Hz l=2m > v=nl > v=10 x 2 > v=20 m/s > > 5. ಸರಳ ಸಂಗತ ಚಲನೆಯ ಎರಡು ಉದಾಹರಣೆಗಳನ್ನು ಕೊಡಿ. > a) ಸರಳ ಲೋಲಕದ ಆಂದೋಲನ > b) ರಬ್ಬರ್ ಪ್ಯಾಡ್ ನ ಮೇಲೆ ಶೃತಿಕವೆಯನ್ನು ಬಡಿದಾಗ ಅದರ ಕವೆಗಳು ಸರಳ ಸಂಗತ > ಚಲನೆಯನ್ನು ಕೈಗೊಳ್ಳುತ್ತವೆ. > c) ಸ್ಟ್ರಿಂಗ್ ತಾಸಿನ ಬುಡದಲ್ಲಿ ಭಾರವನ್ನು ಜೋಡಿಸಿ ಅದನ್ನು ಮೊಳೆಗೆ ತಗುಲಿಸಿ, > ತೂಕವನ್ನು ಜಗ್ಗಿದಾಗ ಸರಳ ಸಂಗತ ಚಲನೆ ಉಂಟಾಗುತ್ತದೆ. > d) ಬಸ್ಸನ್ನು ಕ್ಲಚ್ ಗೇರಿನಲ್ಲಿ ಇರಿಸಿದಾಗ ಕಂಪನವು ಉಂಟಾಗುವುದನ್ನು ಗಮನಿಸಬಹುದು > ಹಾಗೂ ಅದಕ್ಕೆ ಸಂಬಂಧಿಸಿದ ಹಾಗೆ ಶಬ್ದ ಉಂಟಾಗುವುದನ್ನು ಕೇಳಬಹುದು, ಇದು ಒಂದು ಸರಳಸಂಗತ > ಚಲನೆ. > 6. ಸರಳ ಸಂಗತ ಚಲನೆಯ ಎರಡು ಅನ್ವಯಗಳನ್ನು ತಿಳಿಸಿರಿ. > a) ಕಾಲ ಮಾಪನಕ್ಕೆ ಲೋಲಕದ ಸರಳ ಸಂಗತ ಚಲನೆಯನ್ನು ಅವಲಂಬಿಸಲಾಗುತಿತ್ತು. > b) ಸಂಗೀತ ವಾದ್ಯಗಳ ಶೃತಿಗೊಳಿಸುವಿಕೆಗೆ, ಶೃತಿಕವೆಯ ಸರಳ ಸಂಗತ ಚಲನೆಯ > ಬಳಕೆಯಾಗುತ್ತದೆ. > c) ಅಲೆಗಳು ಸರಳ ಸಂಗತ ಚಲನೆಯ ಪರಿಣಾಮವಾಗಿ ಉಂಟಾಗುವಂತಹವು, ಅಲೆಗಳ ಅಧ್ಯಯನ > ಪರೋಕ್ಷವಾಗಿ ಸರಳ ಸಂಗತ ಚಲನೆಯ ಅಧ್ಯಯನ. > d) ಅಣುಗಳು ಸರಳ ಸಂಗತ ಚಲನೆಯಲ್ಲಿ ತೊಡಗಿರುತ್ತದೆ, ಅವುಗಳ ಅಧ್ಯಯನವನ್ನು ಕಂಪನ > ರೋಹಿತ ಮೂಲಕ ಮಾಡಲಾಗುತ್ತದೆ. > > ಹೆಚ್ಚುವರಿ ಪ್ರಶ್ನೆಗಳು ಮತ್ತು ಉತ್ತರಗಳು > 1. ತರಂಗ ಎಂದರೇನು? > ಯಾವುದೇ ಮಾಧ್ಯಮದಲ್ಲಿನ ಆವರ್ತಕ ಕ್ಷೋಭೆಯೇ ತರಂಗ. > 2. ತರಂಗವೇಗ ಎಂದರೇನು? > ಮಾಧ್ಯಮದಲ್ಲಿನ ಕ್ಷೋಭೆಯ ಪ್ರಸರಿಸುವ ವೇಗಕ್ಕೆ ತರಂಗ ವೇಗ ಎನ್ನುತ್ತಾರೆ. > 3. ತರಂಗ ದೂರ ಎಂದರೇನು? > ಒಂದು ಸಂಪೂರ್ಣ ತರಂಗವನ್ನು ತರಂಗ ದೂರ ಎನ್ನುವರು. > 4. ಯಾಂತ್ರಿಕ ತರಂಗಗಳು ಎಂದರೇನು? ಉದಾಹರಣೆ ಕೊಡಿ. > ದ್ರವ್ಯ ಮಾಧ್ಯಮದಲ್ಲಿ ಪ್ರಸಾರವಾಗುವ ತರಂಗಗಳು ಯಾಂತ್ರಿಕ ತರಂಗಗಳು. > ಉದಾ: ಶಬ್ದತರಂಗ, ನೀರಿನ ತರಂಗ, > 5. ವಿದ್ಯುತ್ ಕಾಂತೀಯ ತರಂಗಗಳು ಎಂದರೇನು? ಉದಾಹರಣೆ ಕೊಡಿ. > ಯಾವ ತರಂಗಗಳು ವಿದ್ಯುತ್ ಕ್ಷೇತ್ರ ಮತ್ತು ಕಾಂತೀಯ ಕ್ಷೇತ್ರಗಳ > ಕಂಪನಗಳನ್ನೊಳಗೊಂಡಿರುತ್ತದೆಯೋ ಅದನ್ನು ವಿದ್ಯುತ್ ಕಾಂತೀಯ ತರಂಗಗಳು ಎನ್ನುತ್ತೇವೆ. > ಉದಾ: ದೃಗ್ಗೋಚರ ಬೆಳಕು, ನೇರಳಾತೀತ ಬೆಳಕು, ರೇಡಿಯೋ ತರಂಗಗಳು, ಕ್ಷ-ಕಿರಣ, ಅವಕೆಂಪು > ಕಿರಣ, ಸೂಕ್ಷ್ಮ ತರಂಗಗಳು, ಗಾಮಾ ಕಿರಣ, > 6. ಸರಳ ಸಂಗತ ಚಲನೆ ಎಂದರೇನು? > ತನ್ನಷ್ಟಕ್ಕೆ ತಾನೇ ದಿಕ್ಕು ಮತ್ತು ವೇಗೋತ್ಕರ್ಷವನ್ನು ಬದಲಾಯಿಸಿಕೊಳ್ಳುವ ಚಲನೆಯನ್ನು > ಸರಳ ಸಂಗರ ಚಲನೆ ಎನ್ನುತ್ತೆವೆ. > 7. ಪಾರ ಎಂದರೇನು? > ತನ್ನ ಸಮಸ್ಥಾನದಿಂದಾಗುವ ಗರಿಷ್ಠ ಪಲ್ಲಟದದೂರಕ್ಕೆ ಪಾರ ಎನ್ನುತ್ತಾರೆ. > 8. ಆಂದೋಲನ ಎಂದರೇನು? > ಒಂದು ಚಕ್ರೀಯ ಚಲನೆಗೆ ಆಂದೋಲನ ಎನ್ನುತ್ತಾರೆ. > 9. ಅವಧಿ ಎಂದರೇನು? > ಸರಳ ಸಂಗತ ಚಲನೆಯಲ್ಲಿ ಚಕ್ರೀಯವಾಗಿ ಪುನರಾವರ್ತಕ ಚಲನೆಗೆ ತೆಗೆದುಕೊಳ್ಳುವ ಸಮಯಕ್ಕೆ ಅವಧಿ > ಎಂದು ಕರೆಯುತ್ತಾರೆ. > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at http://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
