G
On Jan 26, 2016 2:53 PM, "karunesh sajjan" <[email protected]> wrote:

> Useful information. Thanks
> On Jan 26, 2016 6:25 AM, "Eranna Eras" <[email protected]> wrote:
>
>> ವಂದೇ ಮಾತರಂ…
>> ಸುಜಲಾಂ ಸುಫಲಾಂ ಮಲಯಜ ಶೀತಲಾಂ
>> ಸಸ್ಯ ಶ್ಯಾಮಲಾಂ ಮಾತರಂ
>> ವಂದೇ ಮಾತರಂ….
>>
>> “ಗಣರಾಜ್ಯೋತ್ಸವದ  ಹಾರ್ದಿಕ ಶುಭಾಷಯಗಳು”
>>
>> ಗಣರಾಜ್ಯೋತ್ಸವದ ಬಗ್ಗೆ ಮಾಹಿತಿ ನಿಮಗಾಗಿ ಇಲ್ಲಿ…(Wikipedia ದಿಂದ ಕದ್ದಿದ್ದು)
>> ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ ೨೬ ರ೦ದು ಆಚರಿಸಲಾಗುವ ದಿನಾಚರಣೆ. ಭಾರತೀಯ
>> ಸ೦ವಿಧಾನ ಜಾರಿಗೆ ಬ೦ದು ಭಾರತ ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರ೦ದು. ಇದರ ಪ್ರಯುಕ್ತ ಈ
>> ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯ೦ತ ಸರ್ಕಾರಿ ರಜಾ
>> ದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು
>> ಹಮ್ಮಿಕೊಳ್ಳುವುದು೦ಟು. ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಪೇರಿ
>> ನಡೆಯುತ್ತದೆ.
>> ಇತಿಹಾಸ
>>
>> ಆಗಸ್ಟ್ ೧೫ ೧೯೪೭ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು ಡಾ. ಅಂಬೇಡ್ಕರ್ ಅವರ
>> ನೇತೃತ್ವದಲ್ಲಿ ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು
>> ಪ್ರತಿಯನ್ನು ತಯಾರಿಸಿ ನವೆಂಬರ್ ೪ ೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು. ಅನೇಕ ಪರಿಶೀಲನೆ
>> ಮತ್ತು ತಿದ್ದುಪಡಿಗಳ ನಂತರ ಜನವರಿ ೨೬ ೧೯೫೦ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ
>> ಸ್ವಾತ೦ತ್ರ್ಯ ಚಳುವಳಿಯಲ್ಲಿ ಜನವರಿ ೨೬, ೧೯೩೦ ರ೦ದು ಭಾರತ ರಾಷ್ಟ್ರೀಯ ಕಾ೦ಗ್ರೆಸ್ ಪೂರ್ಣ
>> ಸ್ವರಾಜ್ಯದ ಧ್ಯೇಯವನ್ನು ಹಾಕಿಕೊ೦ಡಿತ್ತು. ಲಾಹೋರ್ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ
>> ಈ ನಿರ್ಧಾರವನ್ನು ತೆಗೆದುಕೊ೦ಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎ೦ದು
>> ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತ೦ತ್ರ್ಯಾನ೦ತರ ಭಾರತದ ಸ೦ವಿಧಾನವನ್ನು ಈ
>> ದಿನದ೦ದೇ ಜಾರಿಗೆ ತರಲಾಯಿತು.
>>
>> ಏನಿದು ಗಣರಾಜ್ಯ? ಎಂದು ಪೂರ್ತಿ ದಿನ ತಲೆ ಕೆಡೆಸಿಕೊಂಡು ಕೊನೆಗೆ ಗೂಗಲ್ ದೇವರ ಮೊರೆ
>> ಹೋದೆ. ಭಾರತದ ಸಂವಿಧಾನ (the Covnstitution of India) ಅಸ್ತಿತ್ವಕ್ಕೆ ಬಂದ ಸಲುವಾಗಿ
>> ಭಾರತೀಯರು ಕಳೆದ ೬೭ ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ರಾಷ್ಟ್ರೀಯ ಹಬ್ಬ ಜನವರಿ ೨೬
>> ಗಣರಾಜ್ಯೋತ್ಸವ ನಮಗೆಲ್ಲರಿಗೂ ತಿಳಿದಿರುವಂಥಹುದೇ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದ
>> ವಿದ್ಯಾರ್ಥಿಯಾಗಿದ್ದ ನನಗೆ ಸಾರ್ವಜನಿಕ ಆಡಳಿತ/ ರಾಜ್ಯಶಾಸ್ತ್ರದ ಗಣರಾಜ್ಯ ಪದದ ನಿಜವಾದ
>> ಅರ್ಥ ಅಷ್ಟಾಗಿ ಇಲ್ಲ. ಆ ಕುತೂಹಲದಿಂದಲೇ ಸ್ವಲ್ಪ ಸಮಯ ಹೊಂದಿಸಿಕೊಂಡು ವಿಕಿಯಾದಿಯಾಗಿ
>> ಗೂಗಲಿಸಿ ಒಂದಿಷ್ಟು ಮಾಹಿತಿ ಕಲೆ ಹಾಕಿದೆ, ಅವುಗಳನ್ನೇ ಇಲ್ಲಿ ರಾಶಿ ಹಾಕಲು ಹೊರಟಿರುವೆನು.
>>
>>           ಅಮೇರಿಕಾದ ಎರಡು ರಾಜಕೀಯ ಪಕ್ಷಗಳೆಂದರೆ ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕ್
>> ಪಕ್ಷಗಳು. ಅವೆರಡರ ತತ್ವ ಸಿದ್ಧಾಂತಗಳು ತದ್ವಿರುದ್ಧವಾದವುಗಳೇ. ಆದರೆ ನಮ್ಮ ಭಾರತ
>> ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕ್ ರಾಷ್ಟ್ರ (ಪ್ರಜಾಪ್ರಭುತ್ವ ಮತ್ತು ಗಣರಾಜ್ಯ).
>> ಪ್ರಜಾಪ್ರಭುತ್ವವೆಂದರೆ ಎಲ್ಲರಿಗೂ ತಿಳಿದಿರುವಂತೆ " ಜನರಿಂದ, ಜನರಿಗಾಗಿ, ಜನರಿಂದಲೇ
>> ನಡೆಯುವ ಸರ್ಕಾರ", ಅಂದರೆ ಜನರ ಒಳಿತಿಗಾಗಿ ಶ್ರಮಿಸುವ ಚುನಾಯಿತ ಪ್ರತಿನಿಧಿಗಳ ಆಡಳಿತ
>> ಮತ್ತು ಯಾವುದೇ ಸಂದರ್ಭದಲ್ಲಿ ಚುನಾಯಿಸಿದ ಮತದಾರರಿಗೆ ತಮ್ಮ ಪ್ರತಿನಿಧಿಯನ್ನು ವಿರೋಧಿಸುವ
>> / ಜನಪ್ರತಿನಿಧಿಯು ಜಾರಿಗೆ ತಂದ ಕಾನೂನುಗಳನ್ನು ತಡೆಹಿಡಿಯುವ ಅಧಿಕಾರವಿರುತ್ತದೆ. ಸರಕಾರ
>> ಜನರ ಶ್ರೇಯೋಭಿವೃದ್ಧಿಗಾಗಿ ದುಡಿಯಬೇಕು ಹೊರತಾಗಿ ಜನರನ್ನು ತಮ್ಮ ಇಷ್ಟಾರ್ಥಕ್ಕಾಗಿ
>> ಬಳಸಿಕೊಳ್ಳುವುದು ಡೆಮಾಕ್ರೆಸಿಯ ಅಪಹಾಸ್ಯವೇ ಸರಿ. ಗಣರಾಜ್ಯವೆಂದರೆ ಒಂದು ಸಂವಿಧಾನ ಅಥವಾ
>> ಆಳ್ವಿಕೆಗೆ (ಸರಕಾರಕ್ಕೆ) ಒಳಪಟ್ಟೆರುವಂಥದ್ದು ಆಡಳಿತ ವಂಶ ಪಾರಂಪರ್ಯವಾಗಿರದೆ ಅಧಿಕಾರ
>> ಚುನಾಯಿತ ಜನಪ್ರತಿನಿಧಿಗಳ ಆಯ್ಕೆ ಮತ್ತವರ ಆಯ್ಕೆಯಿಂದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ
>> (ಸಂವಿಧಾನದ ಒಡೆಯ) ಚುನಾವಣೆ. (A republic is a form of government in which the
>> country is considered a "public matter" (Latin: res publica), not the
>> private concern or property of the rulers, and where offices of state are
>> subsequently directly or indirectly elected or appointed rather than
>> inherited ). ಆದರೆ ಸದ್ಯದ/ ಮುಂದಿನ ಪರಿಸ್ಥಿತಿಗಳನ್ನು ಗಮನಿಸಿದರೆ ಎರಡೂ ಪದಗಳು ತಮ್ಮ
>> ನಿಜಾರ್ಥಗಳನ್ನು ಕಳೆದುಕೊಂಡು ಸಂವಿಧಾನದ ಪರಿಭಾಷೆಯನ್ನೇ ಬದಲಿಸಲು ಹೊರಟಿರುವುದು ಭಾರತ
>> ಸಂವಿಧಾನದ ದುರಂತವೇ ಸರಿ.
>>
>> ಆಗಷ್ಟ್ ೧೫-೧೯೪೭ರ್ಂದು ಪಾಕಿಸ್ಥಾನವೆಂಬ ದಾಯಾದಿಯೊಂದಿಗೆ ಭಾರತ ಸ್ವತಂತ್ರ ದೇಶವಾಗಿ ರೂಪ
>> ತಾಳಿತಾದರೂ, ಭಾರತ ಸರ್ಕಾರದ ಕಾಯಿದೆಯೊಂದಿಗೆ ಪಂಡಿತ್ ಜವಹರಲಾಲ್ ನೆಹರು ನೇತೃತ್ವದಲ್ಲಿ
>> ಆಡಳಿತ ನಡೆಸುವ ಅನಿವಾರ್ಯತೆ ಎದುರಾಗಿತ್ತು. ದೇಶ ಸ್ವತಂತ್ರವಾಗಿದ್ದರೂ ಬ್ರಿಟಿಷರ ಕಾಯಿದೆ
>> ಕಾನೂನುಗಳು ಜಾರಿಯಲ್ಲಿದ್ದವು. ಅಂದಿನವರೆಗೂ ಭಾರತ ಕಿಂಗ್ ಜಾರ್ಜ್ ೬ ಮತ್ತು ಲಾರ್ಡ್ ಮೌಂಟ್
>> ಬ್ಯಾಟನ್ ರ ಅಡಿಯಾಳಾಗಿತ್ತು. ಅದಕ್ಕಾಗಿ ಆಗಷ್ಟ್ ೨೮-೧೯೪೭ರಂದು ಡಾ. ಬಿ. ಆರ್. ಅಂಬೇಡ್ಕರ್
>> ನೇತೃತ್ವದಲ್ಲಿ ಸಂವಿಧಾನ ರಚನೆಗಾಗಿ ಕರಡು ಸಮಿತಿಯನ್ನು ರಚಿಸಲಾಯಿತು. ಆ ಸಮಿತಿಯು ನವೆಂಬರ್
>> ೪-೧೯೪೭ರಂದೇ ಭಾರತದ ಸ0ಸತ್ತಿನಲ್ಲಿ ಕರಡು ಸಂವಿಧಾನವನ್ನು ಮಂಡಿಸಲಾಯಿತು.
>> ಆದರೂ ಅಸೆಂಬ್ಲಿಯ ೩೦೮ ಸದಸ್ಯರ ಸುಮಾರು ೧೬೬ ದಿನಗಳ ಚರ್ಚೆಯ ಅನಂತರ ಅನೇಕ ಬದಲಾವಣೆ,
>> ಸೇರ್ಪಡೆಗಳ ನಂತರ ಅಂದರೆ ೨ ವರ್ಷ ೧೧ ತಿಂಗಳು ೧೮ ದಿನಗಳ ತರುವಾಯ ನವೆಂಬರ್ ೨೬-೧೯೪೯ರಂದು
>> ಎರಡು ಭಾಷೆಗಳಲ್ಲಿ ಭಾರತೀಯ ಸಂವಿಧಾನ (Constitution of India) ಸರ್ವಸಮ್ಮತವಾಗಿ
>> ಅನುಮೋದಿಸಲ್ಪಟ್ಟಿತು. ೧೯೩೦ ಜನವರಿ ೨೬ ರ ಲಾಹೋರಿನ ಸಂಪೂರ್ಣ ಸ್ವರಾಜ್ಯದ ಸವಿ ನೆನಪಿಗಾಗಿ
>> ಇನ್ನೆರಡು ತಿಂಗಳುಗಳ ನಂತರ ಭಾರತ ತನ್ನದೇ ಆದ ಸ್ವಂತ ಸಂವಿಧಾನದೊಂದಿಗೆ ಭಾರತ ಗಣರಾಜ್ಯವಾಗಿ
>> ಕರೆಯಲ್ಪಟ್ಟಿತು.
>> ಈ ಸಂವಿಧಾನವು ಬೇರೆ ಬೇರೆ ರಾಷ್ಟ್ರ‍ಗಳ ಸಂವಿಧಾನಗಳ ಕೂಲಂಕಷ ಅಧ್ಯಯನದ ಫಲವಾಗಿ
>> ರಚಿಸಲ್ಪಟ್ಟ ವಿಶ್ವದ ಅತಿ ದೊಡ್ಡ ಅತ್ಯುತ್ತಮ ಕಾಯಿದೆಗಳ ಭಂಡಾರವಾಗಿದ್ದು, ಇದರಲ್ಲಿ ೩೯೭
>> ಆರ್ಟಿಕಲ್ಸ್ ಮತ್ತು ೧೨ ಶೆಡ್ಯೂಲ್ಸ್ ಗಳು ಪ್ರತಿಯೋರ್ವ ಭಾರತೀಯನ ಸ್ವಾತಂತ್ರ್ಯದ ರಕ್ಷಣೆಗೆ
>> ಕಟಿ ಬದ್ಧವಾದವುಗಳು. ಬ್ರಿಟನ್ನಿನ "ಸಂಸತ್ ಸ್ವರೂಪದ ಸರಕಾರ", ಅಮೇರಿಕಾದ "ಸರ್ವೋಚ್ಛ
>> ನ್ಯಾಯಾಂಗ  ವ್ಯವಸ್ಥೆ", ಕೆನೆಡಾದ "ಕೇಂದ್ರೀಕೃತ ಫೆಡೆರಲ್ ರಾಜ್ಯ ಸ್ವರೂಪದ ಸರಕಾರ",
>> ಐರ್ಲೆಂಡಿನ "ನಿರ್ದೇಶಾತ್ಮಕ ತತ್ವಗಳು (directive principles of state policy),
>> ಆಸ್ಟ್ರೇಲಿಯಾದ "ಸಮಕಾಲೀನ ಮತ್ತು ಪರಸ್ಪರ ಸಹಕಾರದ ಆಡಳಿತ ಹಂಚಿಕೆ", ಜಪಾನಿನ "ನ್ಯಾಯ ಬದ್ಧ
>> ಪೋಲೀಸ್ ವ್ಯವಸ್ಥೆ" ಮುಂತಾದ ಅಂಶಗಳು ಭಾರತದ ಸಂವಿಧಾನದ ವಿಶ್ವರೂಪದ ಅಂಗವಾಗಿವೆ. ಹೀಗೆ
>> ಬೇರೆ ಬೇರೆ ಸಂವಿಧಾನಗಳ ಒಳ್ಳೆಯ ಅಂಶಗಳೆಲ್ಲವನ್ನೂ ತನ್ನಲ್ಲಿ ಅಡಕ ಮಾಡಿಕೊಂಡಿರುವ ಈ
>> ಸಂಗ್ರಹವು ಎಲ್ಲಾ ಮಾನವೀಯ ನಾಗರೀಕ ನೀತಿ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಎಂದಿಗೂ
>> ಹಿಂದೇಟು ಹಾಕಿಲ್ಲ.
>> ಸಂವಿಧಾನದೊಂದಿಗೇ ಭಾರತೀಯರಿಗೆ ಉಡುಗೊರೆಯಾಗಿ ದೊರೆತದ್ದು ತಮ್ಮ ಹಕ್ಕು ಮತ್ತು
>> ಕರ್ತವ್ಯಗಳು. ಇಂದಿಗೂ ಪ್ರತಿ ಭಾರತೀಯನ ಹೃದಯ ಮತ್ತು ಮನಸ್ಸಿನಲ್ಲಿ ತನ್ನ ದೇಶ ಮತ್ತು ತನ್ನ
>> ಜನಗಳ ಬಗ್ಗೆ ಮಮಕಾರ ಉಳಿದಿದ್ದರೆ ಅದು ಕೇವಲ ಮೇಲಿನ ಮೂರು ಅಂಶಗಳಿಂದಲೇ ಎನ್ನಬಹುದು. ಭಾರತ
>> ಸಂವಿಧಾನ ದೇಶದ ಆಡಳಿತವನ್ನು ಕೇಂದ್ರೀಕೃತ ರಾಜ್ಯ ಸರಕಾರವೆಂಬ ವ್ಯವಸ್ಥೆಯನ್ನು ಕೊಡುಗೆಯಾಗಿ
>> ಸುಲಲಿತ ಆಡಳಿತವನ್ನು ಗುರಿಯಾಗಿರಿಸಿ ಅಳವಡಿಸಿದೆ. ( federal in structure with
>> certain unitary features ). ಅದಕ್ಕಾಗಿಯೇ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ
>> ಎಂದು ಮೂರು ವಿಭಾಗಗಳು ಸಂವಿದಾನವೆಂಬ ಆಟೋ ರಿಕ್ಷಾದ ಮೂರು ಚಕ್ರಗಳಿವೆ.  ಅಲ್ಲದೆ
>> ಶಾಸಕಾಂಗದಲ್ಲಿಯೂ ಕೇಂದ್ರದಲ್ಲಿ ರಾಜ್ಯಸಭೆ (Council of States ) ಮತ್ತು ಲೋಕಸಭೆ(House
>> of the People )ಯೆಂಬ ಮನೆಗಳೂ, ಪ್ರಧಾನ ಮಂತ್ರಿಯು ಲೋಕಸಭೆ, ಸರಕಾರದ ಮುಖ್ಯಸ್ಥರಾಗಿಯೂ
>> ಪ್ರತಿ ರಾಜ್ಯದಲ್ಲಿ ವಿಧಾನ ಸಭೆ (Legislative Assembly), ಕೆಲವು ರಾಜ್ಯಗಳು ವಿಧಾನ
>> ಪರಿಷತ್ (State Legislative Council), ರಾಜ್ಯ ಸರಕಾರದ ಮುಖ್ಯಸ್ಥರಾಗಿ ಮುಖ್ಯಮಂತ್ರಿಯು
>> ತನ್ನ ಮಂತ್ರಿಮಂಡಲದ ಸಹಕಾರದಿಂದ ಆಡಳಿತ ನಡೆಸತಕ್ಕುದು. ರಾಷ್ಟ್ರಪತಿಯು ಕೇಂದ್ರ ಕಾರ್ಯಾಂಗದ
>> ಮುಖ್ಯಸ್ಥನಷ್ಟೇ ಅಲ್ಲದೆ ಭಾರತ ಗಣರಾಜ್ಯದ ಸೇನಾ ದಂಡನಾಯಕನಾಗಿರುತ್ತಾನೆ, ಅದೇ ರೀತಿ
>> ರಾಜ್ಯಪಾಲ ರಾಜ್ಯದ ಆಗು ಹೋಗುಗಳ ವೀಕ್ಷಕ, ನಿಯಂತ್ರಕನಾಗಿರುತ್ತಾನೆ.
>>
>> ಸತ್ಯಮೇವ ಜಯತೆಯೆಂಬ ಧ್ಯೇಯ ವಾಕ್ಯ, ಕೇಸರಿ (ಧೈರ್ಯ ಮತ್ತು ತ್ಯಾಗದ ಪ್ರತೀಕ) ಬಿಳಿ
>> (ಸತ್ಯ ಮತ್ತು ಶಾಂತಿಯ ಪ್ರತೀಕ) ಹಸಿರು(ನಂಬಿಕೆ ಮತ್ತು ಸಂಮೃದ್ಧಿಯ ಪ್ರತೀಕ)  ಬಣ್ಣಗಳಿಂದ
>> ರಾರಾಜಿಸುವ ತ್ರಿವರ್ಣ ಧ್ವಜ ದೇಶದ ಪ್ರಗತಿಯ ಅಶೋಕ ಚಕ್ರವನ್ನು ಒಳಗೊಂಡಿದೆ. ಆದರೆ ಇಂದು ಆ
>> ತ್ರಿವರ್ಣವೂ ತನ್ನ ನಿಜದ ಅರ್ಥಗಳನ್ನು ಕಳೆದುಕೊಂಡು ರಾಜಕೀಯ ಪಕ್ಷಗಳ ಧರ್ಮಾಧಾರಿತ
>> ಅರ್ಥಗಳನ್ನು ಪಡೆದುಕೊಂಡು, ಕೇಸರೀಕರಣ- ಬೆಳಗುವಿಕೆ- ಹಸಿರೀಕರಣ ಎಂಬಲ್ಲಾ ಪದಗಳು ದೇಶದ
>> ಐಕ್ಯತೆ, ಸಾಮರಸ್ಯಗಳಿಗೆ ತೊಡಕಾಗಿವೆ. ಜಾತ್ಯಾತೀತತೆಯಂಥಾ ಅರ್ಥ ವಿಹೀನ ಪದಗಳು,
>> ಪ್ರಾದೇಶಿಕತೆಯ ಕೂಗುಗಳು, ಪ್ರತ್ಯೇಕತೆಯ ಹಟಗಳು, ನದಿ ನೀರಿಗಾಗಿ, ಭಾಷಾವಾರು
>> ಪ್ರಾಂತ್ಯರಚನೆಯಂಥ ಅಂತರ್ರಾಜ್ಯ ವಿವಾದಗಳು, ಗ್ರಾಮೀಣಾಭಿವೃದ್ಧಿಯ ಸುಳ್ಳು ನಾಟಕಗಳು,
>> ದಿನನಿತ್ಯ ಏರುತ್ತಿರುವ ಹಣದುಬ್ಬರ, ತೈಲ ಅನಿಲ ಬೆಲೆಗಳು, ದೇಶದ ಅವಿಭಾಜ್ಯ ಅಂಗವೇ ಆಗಿರುವ
>> ಭೃಷ್ಟಾಚಾರ, ದೇಶದ ಆಡಳಿತ ಸಂಸ್ಥೆಗಳ ದುರ್ಬಳಕೆ ಇತ್ಯಾದಿಗಳು ದೇಶ ಎದುರಿಸುತ್ತಿರುವ
>> ಸಮಸ್ಯೆಗಳ ಸೈನ್ಯದ ಸೇನಾನಿಗಳು. ಇವಾವುದರ ಅರಿವೇ ಇಲ್ಲದಂತಹ ದುರಾಡಳಿತ, ಸಮಯ ಸಾಧನೆ, ಜನರ
>> ಕಣ್ಣೊರೆಸುವ ನಾಟಕಗಳಲ್ಲಿ ವ್ಯಸ್ಥರಾಗಿರುವ ಜನಪ್ರತಿನಿಧಿಗಳು, ಅವರ ಹಿಡಿತದಲ್ಲಿ
>> ನರಳುತ್ತಿರುವ ನ್ಯಾಯಾಂಗ, ಕಾರ್ಯಾಂಗ , ಸಿ.ಬಿ.ಐ., ಲೋಕಾಯುಕ್ತದಂಥ ವಿಚಾರಣಾ ಸಂಸ್ಥೆಗಳು
>> ಮತ್ತು ಪೋಲೀಸ್ ವ್ಯವಸ್ಥೆ, ಇವೆಲ್ಲವೂ ೬೭ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿಯೂ ಇನ್ನೂ
>> ಅಭಿವೃದ್ಧಿಶೀಲ ರಾಷ್ಟ್ರವಾಗಿರುವ ಭಾರತಕ್ಕೆ ಹಿಡಿದ ಕೈಗನ್ನಡಿಗಳು. ಏನೇ ಆಗಲಿ ನಾವು
>> ನಿಜವಾದ ಸತ್ಪ್ರಜೆಗಳು, ಎಚ್ಚೆತ್ತು ಕೊಳ್ಳುತ್ತಿರುವ ಭಾರತೀಯರು. ಗಣರಾಜ್ಯೋತ್ಸವದ ಈ
>> ಸಂದರ್ಭದಲ್ಲಿ ತಮ್ಮ ತ್ಯಾಗ ಬಲಿದಾನಗಳಿಂದ ದೇಶವನ್ನು ಕಾಪಾಡಿದ ಕಾಯುತ್ತಿರುವ ಭೂಸೇನೆ,
>> ವಾಯು ಸೇನೆ ಹಾಗೂ ನೌಕಾ ಸೇನೆಯ ಎಲ್ಲಾ ಸೈನಿಕರಿಗೂ, ದೇಶವನ್ನು ಅಭಿವೃದ್ದಿಯ ಪಥದೆಡೆಗೆ
>> ಕೊಂಡುಯ್ಯುತ್ತಿರುವ ಎಲ್ಲಾ ವಿಜ್ಞಾನಿ, ತಂತ್ರಜ್ಞರಿಗೂ, ದೇಶದ ಸವೆಯುತ್ತಿರುವ ಬೆನ್ನೆಲುಬು
>> ರೈತವರ್ಗಕ್ಕೂ ಸದಾ ಋಣಿಯಾಗಿರುತ್ತಾ, ನಮಿಸುತ್ತಾ, ನೆನೆಯುತ್ತಾ, ದೇಶದ ಸರ್ವಾಂಗೀಣ
>> ಅಭಿವೃದ್ಧಿಯನ್ನು ಆಶಿಸುತ್ತಾ ಉಪಸಂಹಾರಕ್ಕೆ ಮುನ್ನ,
>>
>> ಕೊನೆಯಲ್ಲಿ ಗಣರಾಜ್ಯವೆಂದರೆ
>> ಸರಕಾರದ ಅಧಿಕಾರ ಜನರ ಹಿಡಿತದಲ್ಲಿರಬೇಕು ( The power of government is held by
>> the people).
>> ಜನರು ಸೂಕ್ತ ಪ್ರತಿನಿಧಿಗಳಿಗೆ ತಮ್ಮ ಪರವಾಗಿ ದೇಶದ ಒಳಿತಿಗೆ ಆಡಳಿತ ನಡೆಸುವ ಪರಮಾಧಿಕಾರ
>> ನೀಡಿರುತ್ತಾರೆ ( The people give power to leaders they elect to represent
>> them and serve their interests).
>> ಚುನಾಯಿತ ಜನಪ್ರತಿನಿಧಿಗಳು ದೇಶದ ಸರ್ವ ಜನರ ಹಿತಕ್ಕಾಗಿ ತಮ್ಮ ವೈಯಕ್ತಿಕ
>> ಹಿತಾಸಕ್ತಿಗಳನ್ನು ಬದಿಗಿರಿಸಿ ಬದ್ಧರಾಗಿರಬೇಕು (The representatives are
>> responsible for helping all the people in the country, not just a few
>> people).
>>
>> Regards
>>
>> ERANNA V
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to