ಹೀಗೊಂದು ಯೋಚನೆ..
ಗಣಿತಕ್ಕೊಂದು ಒಗಟು--''ಪರಮ ಸತ್ಯದ ಒಗಟುಗಳು''...!!
ಸ್ನೇಹಿತರೆ,
ಗಣಿತವೆಂಬುದು ನಮಗೇನು ಅಚ್ಚುಮೆಚ್ಚು...ಮಕ್ಕಳಿಗೆ?!!..ಇಷ್ಟವೇ.ಆದರೆ, ಅರ್ಥವಾಗಿ
ತಾವೇ ಸ್ವಂತ ಬಿಡಿಸುವಂತಾದಾಗ ಮಾತ್ರ.ಇಲ್ಲವಾದಲ್ಲಿ ಗಣಿತ ಕಬ್ಬಿಣದ ಕಡಲೆ,ಬಿಡಿಸಲಾಗದ
ಒಗಟು.!!ಇದಕ್ಕೆಲ್ಲ ಗಣಿತದ ಮೂಲಕಲ್ಪನೆಗಳ ಕುರಿತಾದ ಅಸ್ಪಷ್ಟ ಮಾಹಿತಿಗಳು ಎಂಬುದನ್ನು
ಪ್ರತ್ಯೇಕವಾಗಿ ಹೇಳಬೇಕೆಂದೇನು ಇಲ್ಲ.ಹಾಗಾಗಿ ಗಣಿತದ ಮೂಲ ಕಲ್ಪನೆಗಳು, ಕ್ರಿಯೆಗಳು,ಮತ್ತು
ಗಣಿತ ವಿಷಯಗಳ ಕುರಿತ ಕೆಲವು ಒಗಟುಗಳನ್ನು ಬರೆಯುವ ಚಿಕ್ಕ ಪ್ರಯತ್ನಕ್ಕೆ ಕೈ ಹಾಕಿದ್ದೇನೆ
.ನಿಮ್ಮ ತರಗತಿಗಳ ನಡುವೆ,ವಿರಾಮದ ಅವಧಿಗಳಲ್ಲಿ ಅಥವಾ ಚಿಕ್ಕ ತರಗತಿಗಳಲ್ಲಿ(8th)
ಉಪಯೋಗವಾದೀತು...
ಇದು ಒಂದು ಹೊಸ ಪ್ರಯತ್ನವಷ್ಟೆ.ಮೂಲಭೂತ ಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ
ಸರಿಪಡಿಸುವಲ್ಲಿ ತಾವಿದ್ದೀರೆಂಬ ಧೈರ್ಯ ಇದ್ದೇ ಇದೆ
ನಿಮ್ಮವ,
ಪರಮೇಶ್ವರ ಹೆಗಡೆ.
''ಪರಮ ಸತ್ಯದ ಒಗಟುಗಳು''
ಒಗಟು1:
''ಎಲ್ಲರನೂ ಬಾಗಿಪನು
ತಾನಾರಿಗೂ ತಲೆ ಬಾಗನು..
ವರ್ಗ,ಘನ,ಚತುರ್ಥ..
...ನೀವೆಷ್ಟೇ ಏರಿಸಿದರೂ 'ಘಾತ'
ಜಗ್ಗನಿವ ಭಂಡ...!
ಕೇಳಿದರೆ ಪ್ರಥ್ವಿಯೇ
ತಾನೆಂಬ ಪ್ರಚಂಡ..!!
ಹೇಳುವೆಯಾ ನೀ ಜಾಣ
ಸುಳ್ಳಲ್ಲ ಗಣಿತವಿದು-ಪರಮ ಸತ್ಯ..!!
ಕವಿಹೃದಯಿ,
ಪರಮೇಶ್ವರ ಹೆಗಡೆ
--
1. If a teacher wants to join STF, visit
http://karnatakaeducation.org.in/KOER/en/index.php/Become_a_STF_groups_member
2. For STF training, visit KOER -
http://karnatakaeducation.org.in/KOER/en/index.php
4. For Ubuntu 14.04 installation, visit
http://karnatakaeducation.org.in/KOER/en/index.php/Kalpavriksha
4. For doubts on Ubuntu, public software, visit
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Why_public_software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
---
You received this message because you are subscribed to the Google Groups
"Maths & Science STF" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.