But all effort went in vain Let his soul rest in peace On Thursday 11 February 2016, HAREESHKUMAR K Agasanapura < [email protected]> wrote:
> http://m.prajavani.net/article/2016_02_11/386369 > > *ಸಿಯಾಚಿನ್ ಹಿಮದಲ್ಲಿ ಹೂತ ಪ್ರಶ್ನೆಗಳು* > > 11 Feb, 2016 > > ನಾಗೇಶ್ ಹೆಗಡೆ > > > <https://www.facebook.com/sharer/sharer.php?u=http%3A%2F%2Fwww.prajavani.net%2Farticle%2F2016_02_11%2F386369> > <https://twitter.com/intent/tweet?text=%E0%B2%B8%E0%B2%BF%E0%B2%AF%E0%B2%BE%E0%B2%9A%E0%B2%BF%E0%B2%A8%E0%B3%8D+%E0%B2%B9%E0%B2%BF%E0%B2%AE%E0%B2%A6%E0%B2%B2%E0%B3%8D%E0%B2%B2%E0%B2%BF+%E0%B2%B9%E0%B3%82%E0%B2%A4+%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86%E0%B2%97%E0%B2%B3%E0%B3%81+http%3A%2F%2Fwww.prajavani.net%2Farticle%2F2016_02_11%2F386369> > <https://plus.google.com/share?url=http%3A%2F%2Fwww.prajavani.net%2Farticle%2F2016_02_11%2F386369> > <http://www.pinterest.com/pin/find/?url=http%3A%2F%2Fwww.prajavani.net%2Farticle%2F2016_02_11%2F386369> > <http://www.linkedin.com/shareArticle?mini=true&title=%E0%B2%B8%E0%B2%BF%E0%B2%AF%E0%B2%BE%E0%B2%9A%E0%B2%BF%E0%B2%A8%E0%B3%8D+%E0%B2%B9%E0%B2%BF%E0%B2%AE%E0%B2%A6%E0%B2%B2%E0%B3%8D%E0%B2%B2%E0%B2%BF+%E0%B2%B9%E0%B3%82%E0%B2%A4+%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86%E0%B2%97%E0%B2%B3%E0%B3%81+&url=http%3A%2F%2Fwww.prajavani.net%2Farticle%2F2016_02_11%2F386369> > > ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪದ ಘಟನೆ ಅದು. ಆಚೀಚೆ ಮಿಸುಕಾಡಲು ಅವಕಾಶವೇ ಇಲ್ಲದಂತೆ > ಬೆನ್ನ ಮೇಲೆ ಹತ್ತು ಮೀಟರ್ ದಪ್ಪದ ಹಿಮರಾಶಿ ಬಿದ್ದಿದ್ದರೂ ಲ್ಯಾನ್ಸ್ ನಾಯಕ್ ಹನುಮಂತಪ್ಪ > ಕೊಪ್ಪದ ಅವರು ಘನಘೋರ ಚಳಿಯಲ್ಲಿ ಐದು ದಿನಗಳ ಕಾಲ ಉಸಿರು ಉಳಿಸಿಕೊಂಡು ಬದುಕಿರುವುದು > ಅಸಾಮಾನ್ಯ ಸಂತಸದ ಘಟನೆ. ಅವರನ್ನು ಮೇಲೆತ್ತಲು ಶ್ರಮಿಸಿದವರಿಗೆಲ್ಲ ಅಭಿನಂದನೆಗಳು. ಆದರೆ > ಅವರ ದೇಹದಡಿ ಹೂತಿದ್ದ ಅನೇಕ ಪ್ರಶ್ನೆಗಳನ್ನೂ ನಾವು ಮೇಲೆತ್ತಿ ನೋಡಬೇಕಿದೆ. > > ಹಿಮ ಪರ್ವತಗಳೆಂದರೆ ಹೆಜ್ಜೆಹೆಜ್ಜೆಗೂ ಅಪಾಯದ ಸರಮಾಲೆಗಳೇ ಇರುತ್ತವೆ. ಹೊಸದಾಗಿ ಹಿಮ > ಸುರಿದಿದ್ದರೆ ಹೆಜ್ಜೆ ಇಟ್ಟಲ್ಲೆಲ್ಲ ಮೊಣಕಾಲಿನವರೆಗೆ ಕುಸಿಯುತ್ತಿರುತ್ತದೆ. ಪರ್ವತ > ಪ್ರದೇಶದಲ್ಲಿ ಆಮ್ಲಜನಕವೂ ಕಡಿಮೆ ಇರುವುದರಿಂದ ಚಲನೆಯೇ ದುಸ್ತರದ, ಆಯಾಸದ ಕೆಲಸ. > ಕೆಲವೊಮ್ಮೆ ಕಾಲ ಕೆಳಗೆ ಪ್ರಪಾತವಿದ್ದರೂ ಅದರ ಮೇಲೆ ಹಿಮದ ಚಿಕ್ಕ ಬಂಡೆ ಇದ್ದರೆ ಅಪ್ಪಟ > ಖೆಡ್ಡಾ ಆಗಿರುತ್ತದೆ. > > ಜೊತೆಗಾರನೊಬ್ಬ ಕಣ್ಣೆದುರೇ ಅದೃಶ್ಯನಾಗಬಹುದು. ಇನ್ನು ಹೊಸ ಹಿಮ ಸುರಿದಿಲ್ಲವೆಂದರೆ ಇನ್ನೂ > ಅಪಾಯ. ಹಳೇ ಹಿಮ ತನ್ನ ತೂಕದಿಂದಾಗಿ ತಾನೇ ಗಟ್ಟಿ ಬಂಡೆಯಾಗಿ ಜಾರುಬಂಡಿ ಆಗಿರುತ್ತದೆ. > ಮುಳ್ಳಿನ ಅಟ್ಟೆಯಿರುವ ಪಾದರಕ್ಷೆ ಹಾಗೂ ಚೂಪಾದ ಊರುಗೋಲು ಹಿಡಿದೇ ಅಂಥ ಸ್ಥಳದಲ್ಲಿ > ಚಲಿಸಬೇಕು. > > ಪರ್ವತ ಕಣಿವೆಗಳಲ್ಲಿ ಚಲಿಸುವಾಗ ಅಕ್ಕಪಕ್ಕದ ಕಡಿದಾದ ಬೆಟ್ಟಗಳಿಂದ ಹಿಮ ಕುಸಿತ > ಸಂಭವಿಸಬಹುದು. ಅಕ್ಕಿಹಿಟ್ಟಿನಂತೆ ಅನೇಕ ದಿನಗಳಿಂದ ಸುರಿಯುತ್ತಿದ್ದ ಹಿಮ ಅಲ್ಲಲ್ಲಿ > ಬಂಡೆಗಳ ಮೇಲೆ, ದಿಬ್ಬದ ಮೇಲೆ ರಾಶಿಗಟ್ಟಿ ಕೂತಿರುತ್ತದೆ. ತನ್ನದೇ ತೂಕದಿಂದಾಗಿ ಯಾವ > ಕ್ಷಣದಲ್ಲಾದರೂ ಕುಸಿಯಬಹುದು. > > ಅದೆಷ್ಟು ಸೂಕ್ಷ್ಮ ಸಮತೋಲ ಅಲ್ಲಿರುತ್ತದೆ ಎಂದರೆ, ಒಂದು ಚಪ್ಪಾಳೆ ಸದ್ದು, ಒಂದು ಕೆಮ್ಮಿನ > ಸದ್ದು ಕೂಡ ಅದನ್ನು ಕೆಡವಬಹುದು. ಹಾಗೆ ಸಣ್ಣದೊಂದು ದಿಬ್ಬ ಕುಸಿದರೂ ಅದು ತನ್ನ ಕೆಳಗಿನ > ಅನೇಕ ಚಿಕ್ಕದೊಡ್ಡ ದಿಬ್ಬಗಳನ್ನು, ಹಿಮಬಂಡೆಗಳನ್ನು ಬೀಳಿಸುತ್ತ ಕ್ಷಣಕ್ಷಣಕ್ಕೂ ದೊಡ್ಡದಾಗಿ > ಬೆಳೆಯುತ್ತ ಮಹಾಕುಸಿತದ ಸರಮಾಲೆಯನ್ನೇ ಸೃಷ್ಟಿಸುತ್ತದೆ. > > ಇದು ಗೊತ್ತಿಲ್ಲದ ಸಂಗತಿಯೇನಲ್ಲ. ಯುರೋಪಿನ ಆಲ್‌ಪ್ಸ್ ಪರ್ವತ ಮಾಲೆ, ಅಮೆರಿಕದ ರಾಕಿ > ಪರ್ವತ ಮಾಲೆ, ಕೆನಡಾದ ಆಚಿನ ಅಲಾಸ್ಕಾ, ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್ ಹೀಗೆ ಹಿಮದ ರಾಶಿ > ಇದ್ದಲ್ಲೆಲ್ಲ ಅದರೊಂದಿಗೆ ಮನುಷ್ಯರು ಮುಖಾಮುಖಿ ಆಗುತ್ತ, ಹಿಮದೊಂದಿಗೆ ಏಗುವ ವಿದ್ಯೆಯನ್ನು > ಕಲಿಯುತ್ತಲೇ ಬಂದಿದ್ದಾರೆ. ಅಂಥ ದುರ್ಗಮ ಪ್ರದೇಶಗಳಲ್ಲಿ ಚಲಿಸುವಾಗ ಮುನ್ನೆಚ್ಚರಿಕೆಗೆಂದು > ನಾನಾ ಬಗೆಯ ಸಾಧನ ಸಲಕರಣೆಗಳು ರೂಪುಗೊಂಡಿವೆ. ಎಚ್ಚರಿಕೆಯ ಕಟ್ಟುನಿಟ್ಟಿನ ನಿಯಮಗಳನ್ನು > ಅಲ್ಲಿ ಚಲಿಸುವವರಿಗೆ ಮೊದಲೇ ಬಾಯಿಪಾಠ ಮಾಡಿಸಲಾಗುತ್ತದೆ. > > ಇಂಥ ಹಿಮ ಪರಿಸರಕ್ಕೆಂದೇ ವಿಶೇಷ ಬಗೆಯ, ಸಾಕಷ್ಟು ಕರಾರುವಾಕ್ಕಾದ ಹವಾಮಾನ ಮುನ್ಸೂಚನೆ > ವ್ಯವಸ್ಥೆ ರೂಪುಗೊಂಡಿದೆ. ಸುಧಾರಿತ ದೇಶಗಳಲ್ಲಿ ಹಿಮಪಾತದ ಮುನ್ಸೂಚನೆ ಸಿಗುತ್ತಲೇ > ಪ್ರವಾಸಿಗಳು ಸ್ಕೀಯಿಂಗ್ ತಾಣಗಳತ್ತ ಹೊರಡುತ್ತಾರೆ. ಪ್ರವಾಸಿಗಳು ಪದೇ ಪದೇ ಭೇಟಿ ಕೊಡುವ > ಸ್ಕೀಯಿಂಗ್ ತಾಣಗಳ ಸುತ್ತ ಎತ್ತರದ ದಿಬ್ಬಗಳಲ್ಲಿ ಹಿಮಶೇಖರಣೆ ಆಗುತ್ತಿದ್ದರೆ, ಅವು > ದೊಡ್ಡದಾಗಿ ಬೆಳೆಯದ ಹಾಗೆ ಅಲ್ಲೆಲ್ಲ ಆಗಾಗ ಡೈನಮೈಟ್ ಸಿಡಿಸಿ, ಚಿಕ್ಕಪುಟ್ಟ ಕೃತಕ > ಹಿಮಕುಸಿತ ಮಾಡಿಸುತ್ತಾರೆ. > > ಅಥವಾ ಅಲ್ಲಲ್ಲಿ ಗುಡ್ಡದ ಓರೆಗಳಲ್ಲಿ ಲೋಹದ ಕಂಬಗಳನ್ನು ನೆಟ್ಟು ಹಿಮಕುಸಿತವನ್ನು ತಡೆದು > ನಿಲ್ಲಿಸುತ್ತಾರೆ. ಆಗಾಗ ಹಿಮವನ್ನು ತೆರವು ಮಾಡುತ್ತಾರೆ. ಹಿಮಭರಿತ ಕಣಿವೆಗಳಲ್ಲಿ ಮಿಲಿಟರಿ > ತುಕಡಿಗಳು ಟೆಂಟ್ ಹೂಡುವ ಮುನ್ನ ಸಾಧ್ಯವಿದ್ದಲ್ಲೆಲ್ಲ ಹೆಲಿಕಾಪ್ಟರ್ ಓಡಾಡಿಸುತ್ತಾರೆ. > ಕೃತಕ ಗಾಳಿ ಬೀಸುವಂತೆ ಮಾಡಿ ಮತ್ತು ಕೆಲವೊಮ್ಮೆ ಡೈನಮೈಟ್ ಸಿಡಿಸಿ ಹಿಮದ ಸಡಿಲ ರಾಶಿಗಳನ್ನು > ಕೆಡವುತ್ತಾರೆ. > > ಹಿಮಹಾಸಿನಲ್ಲಿ ಚಾರಣ ಮಾಡುವ ಎಲ್ಲರೂ ಕಡ್ಡಾಯವಾಗಿ ಉದ್ದುದ್ದ ಬಣ್ಣದ ಹಗ್ಗಗಳನ್ನು > ಟೊಂಕಕ್ಕೆ ಸಿಕ್ಕಿಸಿಕೊಳ್ಳಲೇಬೇಕು. ಎಲ್ಲರ ಕಿಸೆಯಲ್ಲೂ ಮೊಬೈಲ್‌ನಂಥ ‘ಬೀಕನ್’ ಇರಲೇಬೇಕು. > ಈ ಸಾಧನ ನೂರಿನ್ನೂರು ಮೀಟರ್ ದೂರದವರೆಗೆ ತಾನೆಲ್ಲಿದ್ದೇನೆ ಎಂಬ ಸಿಗ್ನಲ್ > ಕೊಡುತ್ತಿರುತ್ತದೆ. ಬೇರೆಯವರ ಸಿಗ್ನಲ್‌ಗಳನ್ನೂ ಅದು ಸ್ವೀಕರಿಸುತ್ತಿರುತ್ತದೆ. ಅಕಸ್ಮಾತ್ > ಆಳಕ್ಕೆ ಯಾರಾದರೂ ಕುಸಿದರೆ ಎಲ್ಲಿ ಅಗೆಯಬೇಕು ಎಂಬುದು ಇತರರಿಗೆ ಗೊತ್ತಾಗಲು ಈ ಹಗ್ಗ ಮತ್ತು > ಬೀಕನ್‌ಗಳು ನೆರವಾಗುತ್ತವೆ. > > ತೀರ ಅಪಾಯಕಾರಿ ತಾಣದಲ್ಲಿ ಹೆಜ್ಜೆ ಹಾಕುವವರು ತಮ್ಮ ಎದೆಗೆ ಅವಾಲಂಗ್ ಎಂಬ ಸಾಧನವನ್ನು > ಕಟ್ಟಿಕೊಳ್ಳುತ್ತಾರೆ. ಅಕಸ್ಮಾತ್ ಕಾಲ್ಕೆಳಗಿನ ಹಿಮ ಕುಸಿದು ಹೂತು ಹೋದರೆ ತಕ್ಷಣ ಉಸಿರು > ಕಟ್ಟದ ಹಾಗೆ ಇದು ಕೆಲವು ಹೊತ್ತ ಪ್ರಾಣವಾಯುವನ್ನು ಕೊಡುತ್ತಿರುತ್ತದೆ. ಅದಕ್ಕಿಂತ > ಸುಧಾರಿತ, ಬೆನ್ನಿನ ಚೀಲಕ್ಕೆ ಜೋಡಿಸಬಲ್ಲ ಏರ್‌ಬ್ಯಾಗ್‌ಗಳೂ ಬಂದಿವೆ. > > ದುಬಾರಿ ಕಾರುಗಳ ಸ್ಟೀರಿಂಗ್ ಚಕ್ರದ ಮಧ್ಯೆ ಇರುವಂಥ ಈ ಬ್ಯಾಗ್ ತನ್ನ ಮೇಲೆ ಒತ್ತಡ > ಬಿದ್ದಾಗ ತಂತಾನೆ ಸಿಡಿದು ಒಂದು ಜೋಡಿ ಪುಗ್ಗಿಗಳು ಊದಿಕೊಳ್ಳುತ್ತವೆ. ಶ್ವಾಸಕೋಶಗಳ ಹಾಗೆ > ಕಾಣುವ ಪ್ರಖರ ಬಣ್ಣದ ಈ ಚೀಲಗಳು ಉಬ್ಬಿನಿಂತು ಹಿಮದ ಒತ್ತಡವನ್ನು ತಡೆಯುತ್ತವೆ. ಹಿಮದ > ಹೊರಕ್ಕೆ ಮೈಚಾಚಿ ತಮ್ಮ ಇರುವನ್ನು ತೋರಿಸುತ್ತವೆ. ಹಿಮ ತೀರಾ ದಪ್ಪ ಇದ್ದರೆ ನೂರಿನ್ನೂರು > ಮೀಟರ್ ದೂರದವರೆಗೆ ಸಂಕೇತವನ್ನು ಕಳಿಸುತ್ತದೆ. > > ಈಗಂತೂ ತಾನೆಲ್ಲಿದ್ದೇನೆ ಎಂದು ತೋರಿಸುವ ಜಿಪಿಎಸ್ ವ್ಯವಸ್ಥೆ ಬಹುತೇಕ ಎಲ್ಲ ಸ್ಮಾರ್ಟ್ > ಫೋನ್‌ಗಳಲ್ಲೂ ಇದೆ. ಇದರ ಅನೇಕ ಸುಧಾರಿತ ಮಾದರಿಗಳನ್ನು ಮಿಲಿಟರಿಗಾಗಿಯೇ ರೂಪಿಸಲಾಗಿದೆ. > ಹಿಮಚಾರಣಕ್ಕೆ ಹೊರಡುವ ಮುನ್ನ ಮೂಲ ಶಿಬಿರಕ್ಕೆ ತುರ್ತು ಸಂದೇಶವನ್ನು ರವಾನಿಸುವ ವ್ಯವಸ್ಥೆ > ಇದೆ. > ಇಷ್ಟೆಲ್ಲ ಇದ್ದರೂ ಸಿಯಾಚಿನ್ ಹಿಮಹಾಸಿನಲ್ಲಿ ಸಿಲುಕಿದವರಲ್ಲಿ ಒಂಬತ್ತು ಯೋಧರು ಹೇಗೆ ಜೀವ > ಕಳೆದುಕೊಂಡರು? ಈಚಿನ ಯಾವುದೇ ಆಧುನಿಕ ತಾಂತ್ರಿಕ ಸಾಧನಗಳು ಈ ನತದೃಷ್ಟರಿಗೆ ಲಭ್ಯ > ಇರಲಿಲ್ಲವೇನೊ. ಮೊದಲನೆಯದಾಗಿ, ಈ ಯಾರೂ ಗಡಿವೀಕ್ಷಣಾ ಚಾರಣಕ್ಕೆ ಹೊರಟಿರಲಿಲ್ಲ. ಬದಲಿಗೆ > ಗಟ್ಟಿ ದಾರದಿಂದ ಹೆಣೆಯಲಾಗಿದ್ದ ವಿಶೇಷ ‘ಆರ್ಕ್‌ಟಿಕ್ ಟೆಂಟ್’ನಲ್ಲಿ ಇದ್ದರು. > > ಟೆಂಟ್ ಮೇಲೆಯೇ ಹಿಮ ಕುಸಿದಿದೆ ಎಂದರೆ, ಶಿಬಿರವನ್ನು ಹೂಡುವ ಮುನ್ನ ಸುರಕ್ಷಿತ ತಾಣದ > ಆಯ್ಕೆ ಮಾಡಿಕೊಂಡಿರಲಿಲ್ಲ ಎಂದೇ ಹೇಳಬೇಕಾಗುತ್ತದೆ. ಸಾಮಾನ್ಯವಾಗಿ ಇಂಥ ಅಪಾಯಕರ ತಾಣದಲ್ಲಿ > ಟೆಂಟ್ ಹೂಡುವ ಮೊದಲು ಹೆಲಿಕಾಪ್ಟರ್ ಮೂಲಕ ಸರ್ವೇಕ್ಷಣೆ ಮಾಡಬೇಕಿತ್ತು. ಹಿಮಕುಸಿತ ಸಂಭವ > ಇಲ್ಲದ ತಾಣವನ್ನು ಗುರುತಿಸಿ ಅಲ್ಲೇ ಟೆಂಟ್ ಹೂಡಬೇಕೆಂದು ಈ ತುಕಡಿಗೆ ನಿರ್ದೇಶನ > ನೀಡಬೇಕಿತ್ತು. > > ಟೆಂಟ್ ಅಲ್ಲಿದೆ ಎಂದಮೇಲೆ, ಅದರ ಮೇಲೆ ಬೆಂಗಾವಲು ಪಡೆಯವರ ನಿಗಾ ಸದಾ ಇರಬೇಕಿತ್ತು. ಅಪಾಯ > ಸಂಭವಿಸಿದ್ದು ಗೊತ್ತಾದರೂ ಆ ತಾಣ ಎಲ್ಲಿದೆ ಎಂದು ನಿಖರವಾಗಿ ಇವರಿಗೆ ಗೊತ್ತಾದಂತಿಲ್ಲ. > ಧಾವಿಸಿ ಹೋದ ಬಚಾವು ತಂಡ ಅಲ್ಲಿ ರಡಾರ್ ಸಲಕರಣೆಗಳನ್ನು ಹೂಡಿದೆ. > > ರಡಾರ್ ಎಂದರೆ, ಸ್ವಿಚ್ ಒತ್ತಿದಾಗ ಅದರ ತರಂಗಗಳು ಇಪ್ಪತ್ತು ಮೀಟರ್ ಆಳದವರೆಗೆ ಮಣ್ಣು, > ಕಾಂಕ್ರೀಟ್ ಅಥವಾ ಹಿಮದ ರಾಶಿಯ ನಡುವೆ ತೂರಿ ಹೋಗಿ, ಅಲ್ಲಿ ಏನೇ ಲೋಹದ ವಸ್ತು, ಅಥವಾ > ಬಿಸಿವಸ್ತು ಇದ್ದರೂ ಪ್ರತಿಫಲಿಸಿ ಅದರ ಚಿತ್ರಣವನ್ನು ಕೊಡುತ್ತವೆ. ಹಾಗೆ ಪ್ರತಿಫಲಿಸಬಲ್ಲ > ವಸ್ತು ಏನೂ ಕಾಣದಿದ್ದರೆ ಹತ್ತಾರು ಮಾರು ಆಚೆ ಹೊತ್ತೊಯ್ದು ಮತ್ತೆ ಸ್ವಿಚಾನ್ ಮಾಡಬೇಕು. > > ಬಚಾವು ಪಡೆಯವರು ಈ ರಡಾರನ್ನು ಅತ್ತ ಇತ್ತ ಓಡಾಡಿಸಿ ಎರಡು ಮೂರು ದಿನಗಳ ನಂತರ ಟೆಂಟ್ ಇದ್ದ > ತಾಣವನ್ನು ಗುರುತಿಸಿದ್ದಾರೆ. ತಾನು ಇಲ್ಲಿದ್ದೇನೆ ಎಂಬ ಸಿಗ್ನಲ್‌ಗಳನ್ನು ಸದಾ > ಹೊಮ್ಮಿಸಬೇಕಿದ್ದ ಯಾವ ಸಲಕರಣೆಯೂ ಟೆಂಟ್‌ನಲ್ಲಿ ಇರಲಿಲ್ಲವೆ? > > ಟೆಂಟ್‌ನಲ್ಲಿದ್ದ ಯಾರ ಬಳಿಯೂ ಮೊಬೈಲ್‌ನಂಥ ಬೀಕನ್ ಇರಲಿಲ್ಲವೆ? ಅಪಾಯ ತಟ್ಟಿದ ತಕ್ಷಣ ಅದು > ತಾನಿಲ್ಲಿ ಇದ್ದೇನೆಂದು ಚೀರಬೇಕಿತ್ತು. ಅದು ಇರಲಿಲ್ಲ ಎಂದುಕೊಳ್ಳೋಣ. ಅಥವಾ ಇತ್ತು, ಆದರೆ > ಎರಡು ದಿನಗಳ ಕಾಲ ಸಿಗ್ನಲ್ ಹೊಮ್ಮಿಸಿ ಬ್ಯಾಟರಿ ಡೆಡ್ ಆಯಿತು ಎಂದುಕೊಳ್ಳಿ (ಹಾಗೆ ಡೆಡ್ > ಆಗದಂಥ ದುಬಾರಿ ಸಾಧನಗಳೂ ಇವೆ, ಆ ಪ್ರಶ್ನೆ ಬೇರೆ.) ಅಕಸ್ಮಾತ್ ಬೀಕನ್ ದುಬಾರಿ ಎಂದಿದ್ದರೆ > ತೀರ ಸುಲಭವಾದ ಬೇರೊಂದು ಟ್ರಾನ್ಸ್‌ಪಾಂಡರ್ ಸಾಧನ ಇದೆ. ಅದನ್ನು ಸ್ಟಿಕರ್ ಥರಾ ಬಳಸಬಹುದು. > > ಅಪಾಯದ ತಾಣಕ್ಕೆ ಹೊರಡುವ ಮುನ್ನ ಯೋಧರು ಬೂಟು, ಹೆಲ್ಮೆಟ್ ಅಥವಾ ಭುಜಗವಚದ ಮೇಲೆ ಅಂಥ > ಟ್ರಾನ್ಸ್‌ಪಾಂಡರ್‌ಗಳನ್ನು ಅಂಟಿಸಿಕೊಳ್ಳಲು ಸಾಧ್ಯವಿದೆ. ಅದಕ್ಕೆ ರೆಕ್ಕೊ ರಿಫ್ಲೆಕ್ಟರ್ > ಎನ್ನುತ್ತಾರೆ. ಸಹಾಯಕ್ಕೆ ಬರುವವರು ಭಾರವಾದ ರಡಾರ್‌ಗಳನ್ನು ಹೊತ್ತು ತರಬೇಕಿಲ್ಲ. > ಟಾರ್ಚ್‌ನಂಥ ಸರಳ ರೆಕ್ಕೊ ಸಾಧನವನ್ನು ಕೈಯಲ್ಲಿ ಹಿಡಿದಿದ್ದರೆ ಅಲ್ಲಿಂದ ಸಿಗ್ನಲ್ > ಹೊಮ್ಮುತ್ತದೆ. ಯೋಧರ ಭುಜದ ಮೇಲಿನ ಸ್ಟಿಕರ್‌ನಿಂದ (ರೆಕ್ಕೊ ರಿಫ್ಲೆಕ್ಟರ್‌ನಿಂದ) > ಪ್ರತಿಧ್ವನಿ ಬರುತ್ತದೆ. ಹಳೇ ಕಾಲದ ರಡಾರ್‌ಗಳಿಗಿಂತ ಇದು ಸುಲಭದ ವಿಧಾನ. ಅದೂ ಇವರಲ್ಲಿ > ಇರಲಿಲ್ಲವೇನೊ. > > ಇನ್ನು, ಅಪಘಾತಕ್ಕೆ ಸಿಲುಕಿದವರನ್ನು ಮೇಲೆತ್ತುವಾಗ ಕೆಲವು ಆದ್ಯತೆಗಳಿರುತ್ತವೆ. ಉಸಿರಾಟ > ಇದ್ದವರನ್ನು ಮೊದಲು ಗುರುತಿಸಿ ಎತ್ತಬೇಕು, ಮೃತರಿಗೆ ಕೊನೆಯ ಆದ್ಯತೆ ಕೊಡಬೇಕು. ನಮ್ಮ > ಬಚಾವು ತಂಡದವರು ಹನುಮಂತಪ್ಪನವರನ್ನು ಕೊನೆಯಲ್ಲಿ ಎತ್ತಿದಂತಿದೆ. > > ಹೂತು ಹೋಗಿದ್ದ ಒಬ್ಬೊಬ್ಬ ವ್ಯಕ್ತಿಯನ್ನೂ ಪತ್ತೆ ಹಚ್ಚಿ, ಇಲೆಕ್ಟ್ರಿಕ್ ಗರಗಸವನ್ನು > ಬಳಸಿ, ಹಿಮದ ಹೋಳುಗಳನ್ನು ಕತ್ತರಿಸಿ ಬಾವಿಯನ್ನು ಕೊರೆದು ಅದಕ್ಕೆ ಶ್ವಾನಗಳನ್ನು ಇಳಿಸಿ > ಏನೇನೊ ಸಾಹಸ ಮೆರೆದಿದ್ದಾರೆ, ಶಾಭಾಸ್. ಆದರೆ ಶ್ವಾನಗಳೆಲ್ಲ ಪಾಪ, ಓಬೀರಾಯನ ಕಾಲದ ಸಾಧನಗಳು. > > ಹದಿನೈದು ವರ್ಷಗಳ ಹಿಂದೆ ಅಲ್‌ಕೈದಾ ಉಗ್ರರು ನ್ಯೂಯಾರ್ಕಿನ 110 ಅಂತಸ್ತುಗಳ ವಿಶ್ವ > ವ್ಯಾಪಾರ ಕೇಂದ್ರದ ಜೋಡಿ ಕಟ್ಟಡಗಳನ್ನು ಬೀಳಿಸಿದಾಗ ಅವು ಬಳಕೆಯಲ್ಲಿದ್ದವು. ಈಗ > ತಂತ್ರಜ್ಞಾನ ಸಾಕಷ್ಟು ಸುಧಾರಿಸಿದೆ. ಇಪ್ಪತ್ತು ಮೀಟರ್ ಆಳದಲ್ಲಿ ಯಾರಾದರೂ ಕ್ಷೀಣವಾಗಿ > ಉಸಿರಾಡುತ್ತಿದ್ದರೆ ಅಂಥವರನ್ನು ಪತ್ತೆ ಹಚ್ಚಬಲ್ಲ ಸಾಧನಗಳು ಬಂದಿವೆ. ಅಂಥ ಪ್ರೋಬ್‌ಗಳನ್ನು > ಬಳಸಿದ್ದಿದ್ದರೆ ಎರಡು ದಿನಗಳ ಮೊದಲೇ ಹನುಮಂತಪ್ಪ ಮೇಲೆ ಬರಲು ಸಾಧ್ಯವಿತ್ತು. > > ಮಿಲಿಟರಿ ಬಿಡಿ, ಹಿಮಪ್ರದೇಶದಲ್ಲಿ ಸಾಗುವಾಗ ಸಾಮಾನ್ಯ ಸ್ಕೀಯಿಂಗ್ ಪ್ರವಾಸಿಗರೂ ಬೀಕನ್, > ಪ್ರೋಬ್ ಮತ್ತು ರೆಕ್ಕೊ ರಿಫ್ಲೆಕ್ಟರ್ ಸಾಧನಗಳನ್ನು ತಮ್ಮೊಂದಿಗೆ ಒಯ್ಯಲೇಬೇಕು ಎಂದು > ಫ್ರೆಂಚ್ ಸರ್ಕಾರ ಈಗಲ್ಲ, 2010ರಲ್ಲೇ ಶಿಫಾರಸು ಮಾಡಿದೆ. ನಮ್ಮ ಯೋಧರಿಗೆ ಅಂಥ ಯಾವ > ಅತ್ಯಾಧುನಿಕ ಸುರಕ್ಷಾ ಸಾಧನಗಳನ್ನು ನೀಡಿರಲಿಲ್ಲವೆ? > > ಅದೇನೂ ಅಚ್ಚರಿಯ ಸಂಗತಿಯಲ್ಲ. ಕೆಳಹಂತದ ಯೋಧರ ಸುರಕ್ಷೆಗೆ ನಾವು ಆದ್ಯತೆ ಕೊಡುವುದೇ > ಕಡಿಮೆ. ನಕ್ಸಲರ ಗುಂಡಿಗೆ, ಉಗ್ರರ ದಾಳಿಗೆ ಎಷ್ಟೊಂದು ಸೈನಿಕರು ಬಲಿಯಾಗುತ್ತಾರೆ. > ಯೋಧರಿಗಿಂತ ಉಗ್ರರ ಬಳಿಯೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸಂಪರ್ಕ ಸಾಧನಗಳು ಇರುತ್ತವೆ. > > ಅರಣ್ಯ ರಕ್ಷಕರು ಬರೀ ದೊಣ್ಣೆ ಹಿಡಿದು ಬಂದೂಕುಧಾರಿ ಬೇಟೆಗಾರರನ್ನು ಎದುರಿಸಬೇಕು. ಸಮೂಹ > ಸನ್ನಿಗೆ ಸಿಲುಕಿದ ಜನರನ್ನು ನಮ್ಮ ಪೊಲೀಸರು ಕೋಲು ಹಿಡಿದು ಎದುರಿಸಬೇಕು; ಇಲ್ಲವೆ ಠುಸ್ > ಎನ್ನದ ಅಶ್ರುವಾಯು ಬಾಂಬ್‌ಗಳನ್ನು ಎಸೆಯಬೇಕು. > > ಎತ್ತರದ ಸ್ತರದಲ್ಲಿ ನಮ್ಮ ಮಿಲಿಟರಿಯಲ್ಲಿ ಅತ್ಯಾಧುನಿಕ ಸಿಡಿತಲೆ ಕ್ಷಿಪಣಿಗಳಿವೆ. ಪರಮಾಣು > ಬಾಂಬ್‌ಗಳಿವೆ; ಬಾಂಬರ್‌ಗಳ ಮೇಲೆ ಸವಾರಿ ಮಾಡುವ ರಡಾರ್‌ಗಳಿವೆ; ನ್ಯೂಕ್ಲಿಯರ್ > ಜಲಾಂತರ್ಗಾಮಿ ನೌಕೆಗಳಿವೆ. ಕಾಲಾಳುಗಳಿಗೆ ಏನಿದೆ? ಇದು ಹೇಗೆಂದರೆ, ಪ್ರಾಥಮಿಕ ಶಾಲೆಗಳು > ಎಕ್ಕುಟ್ಟಿದ ಸ್ಥಿತಿಯಲ್ಲಿದ್ದರೂ ಪರವಾಗಿಲ್ಲ, ಎತ್ತರದಲ್ಲಿ ಭವ್ಯ ವಿಶ್ವವಿದ್ಯಾಲಯ, > ಐಐಎಮ್, ಥಳುಕಿನ ಐಐಟಿ ಬೇಕು ಎಂದಂತೆ. > > ಉತ್ತಮ ಯೋಗಪಟು ಆಗಿದ್ದ ಹನುಮಂತಪ್ಪ ತಮ್ಮ ಉಸಿರಿನ ಬಲದಿಂದಲೇ ಬದುಕಿ ಬಂದರು ಎಂದು > ಹೇಳಲಾಗುತ್ತದೆ. ಇಡೀ ದೇಶ ಉಸಿರು ಬಿಗಿ ಹಿಡಿದು ಅವರ ಚೇತರಿಕೆಯನ್ನು ಹಾರೈಸುತ್ತಿದೆ. ಅವರು > ಮೊದಲಿನಂತಾಗಬೇಕು. ಹಿಮಕುಸಿತದಿಂದ ಎದ್ದು ಬಂದ ಕತೆಯನ್ನು ಹೇಳುವಂತಾಗಬೇಕು. > > Comments (Click here to E > > Hareeshkumar K > AM(PCM) > GHS HUSKURU > MALAVALLI TQ > MANDYA DT 571475 > mobile no 9880328224 > email [email protected] > <javascript:_e(%7B%7D,'cvml','[email protected]');> > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected] > <javascript:_e(%7B%7D,'cvml','mathssciencestf%[email protected]');> > . > To post to this group, send email to [email protected] > <javascript:_e(%7B%7D,'cvml','[email protected]');>. > Visit this group at https://groups.google.com/group/mathssciencestf. > For more options, visit https://groups.google.com/d/optout. > -- Bindhya B P A M GPUC Nellihudikeri Somwarpet taluk Kodagu district 9900126990 -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
