Very good thought sir keep it up
On 07-Mar-2016 7:46 pm, "ramesha kn" <rameshakn...@gmail.com> wrote:

> Thnk u
> On Mar 6, 2016 9:20 PM, "HAREESHKUMAR K Agasanapura" <
> harihusk...@gmail.com> wrote:
>
>> http://kanaja.in/archives/127928
>>
>> *ವಿಜ್ಞಾನ ದಿನ ಮತ್ತು ವೈಜ್ಞಾನಿಕ ಮನೋವೃತ್ತಿ*
>>
>> ಪ್ರತಿ ವರ್ಷ ಫೆಬ್ರುವರಿ 28ರಂದು ನಾವು ಭಾರತೀಯರು ‘ವಿಜ್ಞಾನ ದಿನ’ವನ್ನು
>> ಆಚರಿಸುತ್ತೇವೆ. ಏಕೆಂದರೆ ಫೆಬ್ರುವರಿ 28 ಅನ್ನೋದು ‘ರಾಮನ್ ಎಫೆಕ್ಟ್’ ಪ್ರಕಟವಾದ ದಿನ.
>> ಬೆಳಕಿನ ಪ್ರತಿಫಲನದ ಕುರಿತು ಬೆಂಗಳೂರಿನ ಪ್ರೊ. ಸಿ.ವಿ. ರಾಮನ್ ನಡೆಸಿದ ಆ ಸಂಶೋಧನೆಗೆ
>> ‘ರಾಮನ್ ಎಫೆಕ್ಟ್’ ಎಂತಲೇ ಜಾಗತಿಕ ಖ್ಯಾತಿ ಬಂದಿದೆ ಅಷ್ಟೇ ಅಲ್ಲ, ಅವರಿಗೆ ಹಾಗೂ ನಮ್ಮ
>> ದೇಶಕ್ಕೆ ವಿಜ್ಞಾನದ ಮೊದಲ ನೊಬೆಲ್ ಪ್ರಶಸ್ತಿಯನ್ನೂ ಅದು ತಂದು ಕೊಟ್ಟಿದೆ. ಅದರ ನೆನಪಿಗಾಗಿ
>> ಫೆಬ್ರುವರಿ 28ನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನಾಗಿ ಆಚರಿಸಲಾಗುತ್ತಿದೆ.
>> ವೈಜ್ಞಾನಿಕ ಮನೋಭಾವ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿರಬೇಕು ಎಂಬ ಅಂಶವನ್ನು ನಾವು
>> ಭಾರತೀಯರು ನಮ್ಮ ಸಂವಿಧಾನದಲ್ಲೇ ಅಳವಡಿಸಿಕೊಂಡಿದ್ದೇವೆ. ಅದನ್ನು ಮತ್ತೆ ಮತ್ತೆ
>> ನೆನಪಿಸಿಕೊಳ್ಳಬೇಕಾದ ದಿನ ಫೆಬ್ರುವರಿ 28. ನೆನಪಿಡಬೇಕಾದ ಸಂಗತಿ ಏನೆಂದರೆ, ಫೆಬ್ರುವರಿ 28
>> (1928) ಸರ್ ಸಿ.ವಿ. ರಾಮನ್ನರ ಹುಟ್ಟುಹಬ್ಬ ಅಲ್ಲ, ಆದರೆ ಅವರ ಆ ಮಹತ್ವದ ಸಂಶೋಧನೆ
>> ಪ್ರಕಟವಾದ ದಿನ. ಅದು ಪ್ರಕಟವಾಗಿ ಎರಡು ವರ್ಷಗಳ ನಂತರ, 1930ರಲ್ಲಿ ಸರ್ ರಾಮನ್ ಅವರಿಗೆ
>> ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಯಿತು. ಹಾಗಾಗಿ ಫೆಬ್ರುವರಿ 28 ರಾಮನ್ನರನ್ನು ಮತ್ತು
>> ವಿಜ್ಞಾನವನ್ನು ಗೌರವಿಸಬೇಕಾದ ದಿನ.
>> ವಿಜ್ಞಾನವನ್ನು ನಾವು ಯಾಕೆ ಗೌರವಿಸಬೇಕು ಅಂದರೆ, ಅದು ನಮ್ಮನ್ನು ನಾಗರಿಕರನ್ನಾಗಿ
>> ಮಾಡಿದೆ. ನಮ್ಮಲ್ಲಿ ‘ವೈಜ್ಞಾನಿಕ ಶೋಧ ಬುದ್ಧಿ’ ಇಲ್ಲದೇ ಇದ್ದಿದ್ದರೆ ನಾವೂ ಇತರ ಪ್ರಾಣಿಗಳ
>> ಹಾಗೆ ಗುಹೆಯಲ್ಲೊ ಮರದ ಪೊಟರೆಯಲ್ಲೊ, ಬಂಡೆಗಳ ಸಂದುಗಳಲ್ಲೊ ಚಳಿಗೆ ಮಳೆಗೆ,
>> ರೋಗರುಜಿನೆಗಳಿಗೆ ತುತ್ತಾಗುತ್ತ ಹೇಗೋ ಬದುಕುತ್ತಿದ್ದೆವು.
>> ಆಧುನಿಕ ವಿಜ್ಞಾನ ನಮಗೆ ಹೇಗೆಲ್ಲ ಸಹಾಯ ಮಾಡಿದೆ ಅನ್ನೋದನ್ನು ನೋಡಬೇಕಾದರೆ ನಾವು ಹಿಂದಿನ
>> ಕಾಲದ ರಾಜ ಮಹಾರಾಜರ ಬದುಕನ್ನು ಹೋಲಿಸಿ ನೋಡಬೇಕು. ಎಷ್ಟೇ ಬಲಾಢ್ಯ ರಾಜನಾಗಿದ್ದರೂ ಅವನಿಗೆ
>> ಹಲ್ಲು ನೋವು ಬಂದರೆ ವಾರಗಟ್ಟಲೆ, ತಿಂಗಳುಗಟ್ಟಲೆ ತೀರ ದುರ್ಬಲನಾಗುತ್ತಿದ್ದ. ಕುದುರೆ ಅಥವಾ
>> ರಥದ ಮೇಲೆ ಹೆಚ್ಚೆಂದರೆ ದಿನಕ್ಕೆ 15-20 ಮೈಲು ಸವಾರಿ ಮಾಡಬಹುದಿತ್ತು. ಬೆನ್ನು ನೋವು
>> ಬಂದರೆ ಅಲ್ಲೇ ವಾರಗಟ್ಟಲೆ ತಿಂಗಳುಗಟ್ಟಲೆ ನೋವಿನಿಂದ ನರಳಬೇಕಿತ್ತು. 50-60 ವರ್ಷಕ್ಕೆ
>> ವೃದ್ಧಾಪ್ಯ ಬಂತೆಂದರೆ ಹಲ್ಲುಗಳು ಉದುರಿ, ಕಣ್ಣೆಲ್ಲ ಮಂಜಾಗಿ, ಮೊಣಕಾಲು ನೋವು, ಕಿವುಡುತನ
>> ಏನೆಲ್ಲ ಬರುತ್ತಿತ್ತು. ಸಿಡುಬು, ಪ್ಲೇಗಿನಂಥ ಮಹಾಮಾರಿ ಬಂದರಂತೂ ಎಂಥ ಮಹಾಸೈನ್ಯವನ್ನೂ
>> ಹೊಸೆದು ಹಾಕುತ್ತಿತ್ತು.
>> ಇಂದಿನ ಕಾಲದ ತೀರ ಸಾಮಾನ್ಯ ಜನರೂ ಹಿಂದಿನ ಕಾಲದ ಮಹಾರಾಜರಿಗಿಂತ ಸುಖಿಗಳಾಗಿದ್ದೇವೆ.
>> ಏನೆಲ್ಲ ರೋಗ ರುಜಿನಗಳನ್ನು ನಾವು ಜೈಸಿದ್ದೇವೆ. ಎಷ್ಟೆಲ್ಲ ಬಗೆಯ ಹಾವು, ಹುಲಿ, ಚೇಳು,
>> ಹುಚ್ಚುನಾಯಿ, ಬೆಂಕಿ, ಬರಗಾಲ, ಚಳಿ, ಎಲ್ಲವನ್ನೂ ಜೈಸಿದ್ದೇವೆ. ಹಸಿವೆಯನ್ನು ದೂರ
>> ಅಟ್ಟಿದ್ದೇವೆ. ಅದೆಲ್ಲ ವಿಜ್ಞಾನ- ತಂತ್ರಜ್ಞಾನದಿಂದ ಸಾಧ್ಯವಾಗಿದೆ. ಇಡೀ ಜಗತ್ತನ್ನು ನಾವು
>> ಕೂತಲ್ಲೇ ಸಂಪರ್ಕಿಸುತ್ತೇವೆ; ಬೇಕೆಂದರೆ ಒಂದು ದಿನದಲ್ಲೇ ಸುತ್ತಿ ಬರುತ್ತೇವೆ.
>> ಹಾಗೆ ನೋಡಿದರೆ ನಾವು ತೀರ ದುರ್ಬಲ ಜೀವಿಗಳು. ತೀರ ಪರಾವಲಂಬಿಗಳು. ಒಂದು ಹುಲ್ಲು
>> ಗರಿಕೆಯನ್ನೇ ನೋಡಿ: ಅದಕ್ಕೆ ತುಸು ಬಿಸಿಲು, ತುಸು ನೀರು, ತುಸು ಮಣ್ಣು ಇದ್ದರೆ ಸಾಕು ತನ್ನ
>> ಆಹಾರವನ್ನು ತಾನೇ ತಯಾರಿಸಿಕೊಳ್ಳುತ್ತದೆ. ನಮಗೆ ಅದು ಸಾಧ್ಯವಿಲ್ಲ. ಬೀದಿನಾಯಿಗೆ
>> ಹೊಟ್ಟೆಶೂಲೆ ಬಂದರೆ ಅದು ಎಂಥದ್ದೊ ಸಸ್ಯವನ್ನು ತಿಂದು ವಾಂತಿ ಮಾಡಿಕೊಂಡು ಸರಿಯಾಗುತ್ತದೆ.
>> ಗಾಯವಾದರೆ ಅದು ತನ್ನದೇ ಜೊಲ್ಲಿನಿಂದಲೋ ಅಥವಾ ಬೂದಿಗುಡ್ಡೆಯ ದೂಳಿನಿಂದಲೋ ತನ್ನ ಗಾಯವನ್ನು
>> ತಾನೇ ವಾಸಿ ಮಾಡಿಕೊಳ್ಳುತ್ತದೆ. ನಮಗೆ ಅದು ಸಾಧ್ಯವಿಲ್ಲ. ಇರುವೆ ಗೆದ್ದಲುಗಳಿಗೆ ಮಳೆ ಬರುವ
>> ಸೂಚನೆ ಮೊದಲೇ ಗೊತ್ತಾಗುತ್ತದೆ. ವನ್ಯಪ್ರಾಣಿಗಳಿಗೆ ಭೂಕಂಪನದ ಮುನ್ಸೂಚನೆ ಮೊದಲೇ
>> ಗೊತ್ತಾಗುತ್ತದೆ. ತಿಮಿಂಗಲುಗಳಿಗೆ ಸುನಾಮಿಯ ಸೂಚನೆ ಗೊತ್ತಾಗುತ್ತದೆ. ಪಾತರಗಿತ್ತಿಗಳಿಗೆ
>> ಸುಂಟರಗಾಳಿಯ ಮುನ್ಸೂಚನೆ ಸಿಗುತ್ತದೆ. ಮರದ ಮೇಲೆ ಗೂಡು ಕಟ್ಟಿಕೊಂಡ ಪಕ್ಷಿಗೆ ಹಾವು
>> ಬರುತ್ತಿದೆ ಎಂಬುದು ನಡುರಾತ್ರಿಯಲ್ಲೂ ವಾಸನೆಯ ಮೂಲಕವೇ ಗೊತ್ತಾಗುತ್ತದೆ.
>> ನಮಗೆ ಅಂಥ ಯಾವ ಸೂಚನೆಗಳೂ ಸಿಗುವುದಿಲ್ಲ; ನಮ್ಮ ಸಂವೇದನೆಗಳೆಲ್ಲ ಮೊಂಡಾಗಿವೆ.
>> ಸವೆದುಹೋಗಿವೆ. ಆದರೆ ನಮ್ಮ ಬುದ್ಧಿಶಕ್ತಿ ಚುರುಕಾಗಿದೆ. ಹಿಂದಿನ ಕಾಲದಲ್ಲಿ ರಾವಣಾಸುರ
>> ಅಷ್ಟ ದಿಕ್ಪಾಲಕರನ್ನು ತನ್ನ ಊಳಿಗದಲ್ಲಿ ಇಟ್ಟುಕೊಂಡಿದ್ದ ಎಂಬ ಕತೆಯನ್ನು ಕೇಳಿದ್ದೇವೆ.
>> ನಾವು ಇಂದು ಅಷ್ಟ ದಿಕ್‍ಪಾಲಕರನ್ನು, ಪಂಚ ಮಹಾಭೂತಗಳನ್ನು ನಮಗೆ ಬೇಕೆಂದಂತೆ
>> ದುಡಿಸಿಕೊಳ್ಳುತ್ತೇವೆ. ಬೆಂಕಿಯನ್ನು ನಮಗಿಷ್ಟ ಬಂದ ಹಾಗೆ ಪಳಗಿಸುತ್ತೇವೆ. ಬೆಂಕಿಯ
>> ಉಗ್ರಜ್ವಾಲೆಯಲ್ಲಿ ಮರಳನ್ನೂ ಕರಗಿಸಿ ಅದರಿಂದ ಗಾಜನ್ನು ಸೃಷ್ಟಿ ಮಾಡಿ ಅದರಿಂದ
>> ಸೂಕ್ಷ್ಮದರ್ಶಕ, ದೂರದರ್ಶಕಗಳನ್ನು ತಯಾರಿಸಿ ಅವುಗಳ ಮೂಲಕ ಜಗತ್ತನ್ನು ನೋಡುತ್ತೇವೆ,
>> ನಿಯಂತ್ರಿಸುತ್ತೇವೆ. ಗಾಳಿಯನ್ನು ನಮಗೆ ಬೇಕೆಂದಾಗ ಸೃಷ್ಟಿಸಿ ಬೇಕಾದ ದಿಕ್ಕಿಗೆ ತಿರುಗಿಸಿ
>> ವಿಮಾನಗಳನ್ನು ಓಡಿಸುತ್ತೇವೆ. ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತೇವೆ, ಯಂತ್ರಗಳನ್ನು
>> ನಡೆಸುತ್ತೇವೆ. ನಮ್ಮ ಬದುಕಿಗೆ ಅಪಾಯ ತರಬಹುದಾದ ಎಲ್ಲ ಅನಿಷ್ಟಗಳನ್ನೂ ದೂರ ಮಾಡುತ್ತೇವೆ.
>> ನಮ್ಮ ಎಲ್ಲ ದೈಹಿಕ ದೌರ್ಬಲ್ಯಗಳನ್ನೂ ಮೆಟ್ಟಿ ನಾವು ಅತ್ಯಂತ ಪ್ರಬಲ ಜೀವಿಯಾಗಿದ್ದೇವೆ.
>> ಅವೆಲ್ಲ ವಿಜ್ಞಾನದ ಮೂಲಕ ನಮಗೆ ಲಭಿಸಿದ ವರದಾನವಾಗಿದೆ.
>> ಆದರೂ ನಮಗೆ ವಿಜ್ಞಾನವೆಂದರೆ ತೀರ ಅರ್ಥವಾಗದ ವಿದ್ಯೆ, ತೀರ ಕ್ಲಿಷ್ಟ ವಿಷಯ ಎಂಬ ಭಾವನೆ
>> ಇದೆ. ಅದು ನಮಗೆ ಸಂಬಂಧಿಸಿದ್ದೇ ಅಲ್ಲ ಎಂಬಂತೆ ಅದರಿಂದ ಆದಷ್ಟೂ ದೂರ ಇರಲು
>> ಯತ್ನಿಸುತ್ತೇವೆ. ಮಕ್ಕಳ ಪಾಠಗಳಲ್ಲಿ ವಿಜ್ಞಾನದ ವಿಷಯ ಬಂದಾಗ ಹೇಗೋ ಚಡಪಡಿಸುತ್ತ, ಅವರು
>> ಕೇಳುವ ಪ್ರಶ್ನೆಗಳಿಗೆ ಏನೋ ತೋಚಿದ ಉತ್ತರ ಹೇಳಿ ಜಾರಿಕೊಳ್ಳುತ್ತೇವೆ.
>> ವಿಜ್ಞಾನ ಬೆಳೆದಿದ್ದೇ ಪ್ರಶ್ನೆಗಳನ್ನು ಕೇಳುವುದರಿಂದ. ಹಾಗೂ ಪ್ರಶ್ನೆಗಳಿಗೆ ಸರಿಯಾದ
>> ಉತ್ತರ ಹುಡುಕುವುದರಿಂದ.
>> ದೋಸೆಯಲ್ಲಿ ಏಕೆ ತೂತುಗಳಾಗುತ್ತವೆ? ಹುಳಿ ಬಂದ ಮೊಸರಿನಿಂದ ಏಕೆ ಗುಳ್ಳೆಗಳು ಹೊರಕ್ಕೆ
>> ಬರುತ್ತವೆ? ನಂದಿನಿ ಮೊಸರಿನ ಪ್ಯಾಕೆಟ್ಟು ಯಾಕೆ ಕೆಲವೊಮ್ಮೆ ಉಬ್ಬಿಕೊಳ್ಳುತ್ತದೆ? ಈ
>> ಪ್ರಶ್ನೆಗಳು ತಲೆಯಲ್ಲಿ ಹೊಕ್ಕರೆ, ಅದಕ್ಕೆ ಉತ್ತರ ಸಿಗುವವರೆಗೆ ಆ ಪ್ರಶ್ನೆ ನಮ್ಮನ್ನು
>> ಕಾಡುತ್ತಿದ್ದರೆ, ಅದರಿಂದ ವಿಜ್ಞಾನ ಹೊಮ್ಮುತ್ತದೆ.
>> ಇಂಥ ಸರಳ ಪ್ರಶ್ನೆಗಳ ಹಿಂದೆ ಬಹುದೊಡ್ಡ ವೈಜ್ಞಾನಿಕ ಸತ್ಯಗಳು ಅಡಗಿರುತ್ತವೆ. ಹಿಂದೆ
>> ಆಗಿಹೋದ ಮಹಾನ್ ವಿಜ್ಞಾನಿಗಳೆಲ್ಲ ಛಲ ಬಿಡದೆ ಇಂಥ ಸರಳ ಪ್ರಶ್ನೆಗಳ ಬೆನ್ನಟ್ಟಿ ಪ್ರಕೃತಿಯ
>> ಮಹಾನ್ ಸತ್ಯಗಳನ್ನು ಪತ್ತೆ ಹಚ್ಚಿದ್ದಾರೆ. ನಮ್ಮ ಸರ್ ಸಿವಿ ರಾಮನ್ ಅವರು ತಮಗೆ ತಾವೇ
>> ಕೇಳಿಕೊಂಡ ಸರಳ ಪ್ರಶ್ನೆ ಏನಿತ್ತು ಗೊತ್ತೆ? ‘ಆಕಾಶ ಏಕೆ ನೀಲಿ?’ ನೀಲಿ ಇದೆ ಅನ್ನೋದು
>> ಎಲ್ಲರಿಗೂ ಗೊತ್ತಿತ್ತು. ಆದರೆ ಅದು ಯಾಕೆ ನೀಲಿ ಇದೆ ಎಂದು ಯಾರೂ ಪ್ರಶ್ನಿಸುವ ಗೋಜಿಗೆ
>> ಹೋಗಿರಲಿಲ್ಲ. ಕೆಲವರ ತಲೆಯಲ್ಲಿ ಆ ಪ್ರಶ್ನೆ ಹುಟ್ಟಿತ್ತೇನೊ. ಆದರೆ ಛಲಕ್ಕೆ ಬಿದ್ದಂತೆ
>> ಅದಕ್ಕೆ ಉತ್ತರ ಹುಡುಕಲು ಯತ್ನಿಸಲಿಲ್ಲ. ನಿಸರ್ಗದ ಬಹಳಷ್ಟು ಕ್ರಿಯೆಗಳೆಲ್ಲ ನಮ್ಮಲ್ಲಿ
>> ಪ್ರಶ್ನೆಗಳನ್ನೇ ಸೃಷ್ಟಿಸುವುದಿಲ್ಲ. ತೆಂಗಿನ ಮರದಿಂದ ಕಾಯಿ ಕೆಳಕ್ಕೆ ಬಿದ್ದರೆ ‘ಯಾಕೆ
>> ಬಿತ್ತು?’ ಅಂತ ನಾವು ಎಂದೂ ತಲೆ ಕೆಡಿಸಿಕೊಳ್ಳುವುದಿಲ್ಲ. ಐಸಾಕ್ ನ್ಯೂಟನ್ ಅಂಥ ಒಂದು
>> ಪ್ರಶ್ನೆಯನ್ನು ತನಗೆ ತಾನೇ ಕೇಳಿಕೊಂಡು ಅದಕ್ಕೆ ಉತ್ತರ ಹುಡುಕುತ್ತ ಹೋಗಿದ್ದರಿಂದಲೇ
>> ಶ್ರೇಷ್ಠ ವಿಜ್ಞಾನಿ ಅನ್ನಿಸಿಕೊಂಡ.
>> ಪುಟ್ಟ ಮಕ್ಕಳು ಅಂಥ ನೂರಾರು ಪ್ರಶ್ನೆಗಳನ್ನು ಕೇಳುತ್ತಿರುತ್ತವೆ. ಉತ್ತರ ನಮಗೂ
>> ಸ್ಪಷ್ಟವಾಗಿ ಗೊತ್ತಿರುವುದಿಲ್ಲ ಅಥವಾ ಉತ್ತರಿಸುವ ತಾಳ್ಮೆಯೇ ನಮಗೆ ಇರುವುದಿಲ್ಲ. ಈಗಿನ
>> ದಿನಗಳಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳು ಸುಲಭವಾಗಿ ಸಿಗುತ್ತವೆ. ಈಗಂತೂ ನಿಮ್ಮ
>> ಸ್ಮಾರ್ಟ್ ಫೋನ್‍ನಲ್ಲೇ ಒಂದೆರಡು ನಿಮಿಷಗಳಲ್ಲಿ ಉತ್ತರಗಳನ್ನು ಪತ್ತೆ ಹಚ್ಚಬಹುದು. ತುಸು
>> ತಾಳ್ಮೆ ವಹಿಸಿ ಉತ್ತರ ಹುಡುಕಿ ಮಕ್ಕಳ ಕುತೂಹಲ ತಣಿಸಲು ಯತ್ನಿಸಿದರೆ ಮಗುವಿನ ಶೋಧಬುದ್ಧಿಗೆ
>> ಸಾಣೆ ಹಿಡಿದಂತಾಗುತ್ತದೆ; ಮಿದುಳು ಚುರುಕಾಗುತ್ತದೆ. ತರ್ಕಶಕ್ತಿ ಹೆಚ್ಚುತ್ತದೆ.
>> ಅಂಗಿ ತೊಟ್ಟ ನಂತರ ನಾವು ಬಟನ್ ಹಾಕುತ್ತೇವೆ. ಅಂದರೆ ವೃತ್ತಾಕಾರದ ಬಟನ್ನನ್ನು ಒಂದು
>> ಸೀಳುರಂಧ್ರದ ಮೂಲಕ ಅಡ್ಡಡ್ಡ ತೂರಿ ನಂತರ ಅದನ್ನು ಬಟನ್ನಿನ ಮುಖ ತಿರುಗಿಸುತ್ತೇವೆ. ಅಂಗಿ,
>> ಚಡ್ಡಿ, ಬ್ಲೌಸ್, ಬ್ಯಾಗ್ ಮುಂತಾದವುಗಳ ಎರಡು ಭಾಗವನ್ನು ಜೋಡಿಸುವ ಅತ್ಯಂತ ಸರಳ ವಿಧಾನ
>> ಅದು. ಆದರೆ ಅದರ ಹಿಂದಿನ ಚಮತ್ಕಾರವನ್ನು ನಾವು ಗಮನಿಸಿದ್ದೇವೆಯೆ? ಮನುಷ್ಯ ಬಟ್ಟೆ ತೊಡಲು
>> ಆರಂಭಿಸಿ ಐದು ಸಾವಿರ ವರ್ಷಗಳಾದರೂ ಅಂಥ ಉಪಾಯ ಯಾರಿಗೂ ಹೊಳೆದಿರಲಿಲ್ಲ. ನಮ್ಮ ದೇಶದಲ್ಲಂತೂ
>> 1930ರವರೆಗೂ ಅಂಗಿಗೆ ಅಂಥ ಬಟನ್ ಇರಲೇ ಇಲ್ಲ. ಬಹುಶಃ ಅದೇ ಕಾರಣಕ್ಕೆ ಇರಬೇಕು, ಮಹಿಳೆಯರಿಗೆ
>> ರವಿಕೆಯೇ ಇರಲಿಲ್ಲ. ಯುರೋಪಿನ ಜನರು ನಮ್ಮಲ್ಲಿಗೆ ಬಂದ ನಂತರವೇ ನಮಗೆ ಬಟನ್ ಪರಿಚಯ ಆದದ್ದು.
>> ಸಣ್ಣ ಸಣ್ಣ ಸಂಶೋಧನೆಗಳು ಇಡೀ ಮಾನವಕುಲದ ಬದುಕನ್ನೇ ಬದಲಾಯಿಸುತ್ತವೆ ನೋಡಿ.
>> ಹೊಲಿಗೆ ಯಂತ್ರ ಅಸ್ತಿತ್ವಕ್ಕೆ ಬರಲು ಬಹುಮುಖ್ಯ ಕಾರಣ ಏನು ಗೊತ್ತೆ? ಸೂಜಿಯ ಚೂಪು
>> ತುದಿಯಲ್ಲೇ ರಂಧ್ರ ಮಾಡಬೇಕು ಎಂಬ ಆಲೋಚನೆ ಈಲಿಯಾಸ್ ಹೋವ್ ಎಂಬಾತನಿಗೆ ಹೊಳೆಯಿತು.
>> ಅದುವರೆಗೆ ಎಷ್ಟೆಲ್ಲ ಬಗೆಯ ಯಂತ್ರಗಳನ್ನು ತಯಾರಿಸಿ ಎಲ್ಲರೂ ವಿಫಲ ಆಗಿದ್ದರು. ಸೂಜಿಯ ಒಂದು
>> ಕಣ್ಣಿನ ಮೂಲಕ ಜಗತ್ತೇ ಬದಲಾಯಿತು.
>> ವೆಲ್‍ಕ್ರೋ ಝಿಪ್ ಅಂದರೆ ನಮಗೆಲ್ಲ ಗೊತ್ತೇ ಇದೆ. ಚೀಲದ ಬಾಯಿಯನ್ನು, ಬೂಟಿನ ಬೆಲ್ಟನ್ನು,
>> ಪಾಕೀಟನ್ನು ಪರ್ ಎಂದು ಎಳೆದು ಬಿಚ್ಚುವ ಅಥವಾ ಬಂದ್ ಮಾಡುವ ಸರಳ ಸಾಧನ. ಅದು 1970ರವರೆಗೆ
>> ಯಾರಿಗೂ ಗೊತ್ತೇ ಇರಲಿಲ್ಲ.
>> ಜಾರ್ಜ್ ಡಿ ಮೆಸ್ಟ್ರಲ್ ಎಂಬ ಇಲೆಕ್ಟ್ರಾನಿಕ್ ಎಂಜಿನಿಯರ್ ಅಲ್ಲೆಲ್ಲೋ ಸ್ವಿಸ್ ಪರ್ವತ
>> ಏರುತ್ತಿದ್ದಾಗ ಅವನ ಬಟ್ಟೆಗೆ ಹಾಗೂ ಅವನೊಂದಿಗಿದ್ದ ನಾಯಿಯ ಮೈಗೆಲ್ಲ ಮುಳ್ಳುಮುಳ್ಳಿನ
>> ಬೀಜಗಳು ಅಂಟಿಕೊಂಡಿದ್ದವು. ಅದು ಹೇಗೆ ಅಂಟಿದೆ ಎಂದು ಸೂಕ್ಷ್ಮವಾಗಿ ನೋಡುತ್ತಿದ್ದಾಗ ಉತ್ತರ
>> ಹೊಳೆಯಿತು: ಬೀಜದ ಮೇಲಿರುವ ಕೊಕ್ಕೆಯಂಥ ಮುಳ್ಳುಗಳು ಈತನ ಬಟ್ಟೆಯ ನವಿರು ದಾರಕ್ಕೆ
>> ಸಿಲುಕಿಕೊಳ್ಳುತ್ತಿದ್ದವು. ಈತ ಮನೆಗೆ ಬಂದವನೇ ತಾನೂ ಮಿದು ಪ್ಲಾಸ್ಟಿಕ್‍ನಿಂದ ಅಂಥದ್ದೇ
>> ಕೊಕ್ಕೆಗಳನ್ನು ತಯಾರಿಸಿದ. ಬಟ್ಟೆಯ ನೇಯ್ಗೆಗೆ ಅದು ಸಿಲುಕಿಕೊಳ್ಳುವುದನ್ನು ನೋಡಿದ.
>> ಅಂಥದ್ದೇ ನೇಯ್ಗೆ ಇರುವ ಪ್ಲಾಸ್ಟಿಕ್ ಮತ್ತು ಕೊಕ್ಕೆಗಳನ್ನು ತಯಾರಿಸಿದ. ಇಪ್ಪತ್ತು ವರ್ಷಗಳ
>> ಸತತ ಪರಿಶ್ರಮದಿಂದ ರೂಪಿಸಿದ ಝಿಪ್ ಸಾಧನ ಇಂದು ಎಲ್ಲೆಡೆ ಬಳಕೆಯಾಗುತ್ತಿದೆ.
>> ಪ್ರಶ್ನೆ ಕೇಳುವುದರಿಂದಲೂ ವಿಜ್ಞಾನ ಬೆಳೆಯುತ್ತದೆ. ನಿಸರ್ಗದಲ್ಲಿ ವೈಚಿತ್ರ್ಯಗಳನ್ನು
>> ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅದನ್ನೇ ಅನುಕರಿಸುವುದರಿಂದಲೂ ವಿಜ್ಞಾನ ತಂತ್ರಜ್ಞಾನ
>> ವಿಕಾಸವಾಗುತ್ತದೆ. ಹಸುಗಳಿಗೆ ಸಿಡುಬು ಬಂದರೂ ಅದು ಯಾಕೆ ಹಸುಗಳ ಪ್ರಾಣ ತೆಗೆಯುತ್ತಿಲ್ಲ
>> ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಎಡ್ವರ್ಡ್ ಜೆನ್ನರ್ ಎಂಬಾತ ಸಿಡುಬಿನ ಲಸಿಕೆಯನ್ನು
>> ಕಂಡು ಹಿಡಿದ. ಅಕ್ಷರಶಃ ಕೋಟಿಗಟ್ಟಲೆ ಜನರ ಪ್ರಾಣ ಉಳಿಸಿದ. ಅದೇ ರೀತಿ ಅಲೆಕ್ಸಾಂಡರ್
>> ಫ್ಲೆಮಿಂಗ್ ಎಂಬಾತ ‘ಪೆನಿಸಿಲಿನ್’ ಎಂಬ ಆಂಟಿ ಬಯಾಟಿಕ್ (ಜೀವಿರೋಧಕ ಅಥವಾ ಪ್ರತಿಜೈವಿಕ)
>> ಔಷಧವನ್ನು ಆಕಸ್ಮಿಕವಾಗಿ ಪತ್ತೆ ಮಾಡಿದ್ದಕ್ಕೂ ಇಂಥದ್ದೇ ರೋಚಕ ಕತೆಯಿದೆ. ಕಣ್ಣಿಗೆ
>> ಕಂಡದ್ದನ್ನು ಮತ್ತಷ್ಟು ಸೂಕ್ಷ್ಮವಾಗಿ ನೋಡುವ ಕಾಳಜಿ, ಕುತೂಹಲ ಇದ್ದರೆ ಅದೇ ವೈಜ್ಞಾನಿಕ
>> ಅನ್ವೇಷಣೆ ಎನ್ನಿಸಿಕೊಳ್ಳುತ್ತದೆ.
>> ಅಂಥ ವೈಜ್ಞಾನಿಕ ಮನೋವೃತ್ತಿಯನ್ನು ನಾವೆಲ್ಲ ಬೆಳೆಸಿಕೊಳ್ಳಬೇಕು ಎಂಬುದನ್ನು
>> ಪ್ರಚುರಗೊಳಿಸಲೆಂದೇ ಫೆಬ್ರುವರಿ 28ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನು ಹಬ್ಬದಂತೆ
>> ಆಚರಿಸಲಾಗುತ್ತದೆ. ಶಾಲೆಗಳಲ್ಲಿ, ವೈಜ್ಞಾನಿಕ ಸಂಘ ಸಂಸ್ಥೆಗಳಲ್ಲಿ ಹಾಗೂ
>> ಲ್ಯಾಬೊರೇಟರಿಗಳಲ್ಲಿ ಅದ್ದೂರಿಯಾಗಿ ಆಚರಿಸುತ್ತಾರೆ. ತಜ್ಞರು ಭಾಷಣ ಮಾಡುತ್ತಾರೆ;
>> ಮಕ್ಕಳಿಗೆ ಪ್ರಯೋಗಶಾಲೆಗಳನ್ನು ತೋರಿಸುತ್ತಾರೆ. ದೂರದರ್ಶಕದ ಮೂಲಕ ಗ್ರಹ ತಾರೆಗಳ ವೀಕ್ಷಣೆ
>> ಮಾಡಿಸುತ್ತಾರೆ.
>> ಅವೆಲ್ಲ ಸರಿ. ಆದರೆ ಜನಸಾಮಾನ್ಯರು ಮಾತ್ರ ಈ ವಿಜ್ಞಾನ ಹಬ್ಬದಿಂದ ದೂರವೇ ಉಳಿಯುತ್ತಾರೆ.
>> ಹಾಗೆ ನೋಡಿದರೆ, ಶಾಲೆ ಕಾಲೇಜು, ಪ್ರಯೋಗಶಾಲೆಗಳಿಗಿಂತ ಇಂದು ವೈಜ್ಞಾನಿಕ ಮನೋಭಾವವನ್ನು
>> ಸಾಮಾನ್ಯ ಜನರಲ್ಲಿ ಬಿತ್ತಬೇಕಾದ ಅಗತ್ಯವಿದೆ. ಏಕೆಂದರೆ ನಾನಾ ಬಗೆಯ ಅವೈಜ್ಞಾನಿಕ
>> ಮೂಢನಂಬಿಕೆಗಳಿಗೆ ಕಟ್ಟುಬಿದ್ದು ಜನರು ಜೀವನದಲ್ಲಿ ಏನೆಲ್ಲ ಕಷ್ಟನಷ್ಟ
>> ಅನುಭವಿಸುತ್ತಿರುತ್ತಾರೆ. ಈಗಲೂ ನಿಧಿ ಶೋಧಕ್ಕೆಂದು ನರಬಲಿ ಕೊಡುವ ಮೂಢರ ಬಗ್ಗೆ ನಮ್ಮ
>> ದೇಶದಲ್ಲಿ ಆಗಾಗ ವರದಿಗಳು ಬರುತ್ತಲೇ ಇರುತ್ತವೆ. ರಸ್ತೆಬದಿಯಲ್ಲಿ ಗಿಣಿಶಾಸ್ತ್ರ ಹೇಳುವ,
>> ನೋವಿನ ತೈಲ ಮಾರುವ ಢೋಂಗಿಗಳು ಕಂಡುಬರುತ್ತಾರೆ. ರೋಗರುಜಿನೆ ಬಂದಾಗ ಇಲ್ಲವೆ ಹಾವು-ಚೇಳು
>> ಕಚ್ಚಿದಾಗ ಡಾಕ್ಟರಿಗೆ ತೋರಿಸುವ ಬದಲು ಬಾಬಾಗಳನ್ನೊ, ಮಂತ್ರವಾದಿಗಳನ್ನೊ, ತೀರ್ಥ ಪ್ರಸಾದ,
>> ಹರಕೆಗಳನ್ನೊ ನಂಬಿ ಮೋಸ ಹೋಗುತ್ತಿರುತ್ತಾರೆ. ವಿಜ್ಞಾನದ ದೃಷ್ಟಿಯಿಂದ ಸತ್ಯದೂರವಾದ ಬೂದಿ,
>> ತಾಯತ, ಹರಳು, ಉಂಗುರ, ತೈಲ, ರುದ್ರಾಕ್ಷಿ, ವಾಸ್ತು, ರಾಹು, ಕೇತು ಮುಂತಾದ ನಾನಾ ಬಗೆಯ
>> ಮಂಕುಬೂದಿಗಳಿಗೆ ಮುಗ್ಧರು ಬಲಿಪಶುವಾಗುತ್ತಾರೆ.
>> ಅಂಥವರಲ್ಲಿ ವೈಚಾರಿಕ ಹಾಗೂ ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ
>> ‘ರಾಷ್ಟ್ರೀಯ ವಿಜ್ಞಾನ ದಿನ’ದ ಆದ್ಯತೆ ಬದಲಾಗಬೇಕು. ನಾವೆಲ್ಲರೂ ಏನು ವಿಜ್ಞಾನಿಗಳೇ
>> ಆಗಬೇಕೆಂದಿಲ್ಲ. ಯಾವುದು ವೈಜ್ಞಾನಿಕ ಯಾವುದು ಅವೈಜ್ಞಾನಿಕ ಆಚರಣೆ ಎಂಬುದನ್ನು
>> ಪ್ರತ್ಯೇಕಿಸಿ ನೋಡುವ ಸಾಮಥ್ರ್ಯ ಬಂದರೆ ಅದೇ ಸಾಕು. ಈ 21ನೇ ಶತಮಾನದಲ್ಲೂ 18ನೇ ಶತಮಾನದ
>> ಮೂಢನಂಬಿಕೆಗಳಿಗೆ, ರೂಢ ನಂಬಿಕೆಗಳಿಗೆ ಜೋತು ಬಿದ್ದ ಕೋಟ್ಯಂತರ ಜನರು ನಮ್ಮಲ್ಲಿದ್ದಾರೆ.
>> ಅಂಥವರನ್ನು ವಿಚಾರವಂತರನ್ನಾಗಿಸುವ ಕೆಲಸಕ್ಕೆ ಈ ‘ಹಬ್ಬ’ದ ದಿನವೇ ಚಾಲನೆ ಸಿಗುವಂತಾಗಬೇಕು.
>> ಇಲ್ಲಾಂದರೆ ವಾಸ್ತವ ಏನೆಂದು ಗೊತ್ತಲ್ಲ, ಎರಡನೆಯ ನೊಬೆಲ್‍ಗೇ ನಮ್ಮಲ್ಲಿ ತತ್ವಾರ ಇದೆ.
>> ಸರ್ ಸಿವಿ ರಾಮನ್ನರಿಗೆ ನಮ್ಮ ದೇಶದ ಮೊದಲ ವಿಜ್ಞಾನ ನೊಬೆಲ್ ಸಿಕ್ಕಿತು ನಿಜ. ಆದರೆ ಅವರ
>> ನಂತರ ಭಾರತದಲ್ಲಿ ಸಂಶೋಧನೆ ಮಾಡಿದ ಯಾವ ಭಾರತೀಯ ವಿಜ್ಞಾನಿಗೂ ಇನ್ನೊಂದು ನೊಬೆಲ್ ಇದುವರೆಗೆ
>> ಸಿಗಲಿಲ್ಲ
>>
>>
>> <http://www.blogger.com/blog_this.pyra?t&u=http%3A%2F%2Fkanaja.in%2Farchives%2F127928&n=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%A6%E0%B2%BF%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95+%E0%B2%AE%E0%B2%A8%E0%B3%8B%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF&pli=1>
>> <http://delicious.com/post?url=http%3A%2F%2Fkanaja.in%2Farchives%2F127928&title=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%A6%E0%B2%BF%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95+%E0%B2%AE%E0%B2%A8%E0%B3%8B%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF>
>> <http://digg.com/submit?url=http%3A%2F%2Fkanaja.in%2Farchives%2F127928&title=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%A6%E0%B2%BF%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95+%E0%B2%AE%E0%B2%A8%E0%B3%8B%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF&bodytext=%E0%B2%AA%E0%B3%8D%E0%B2%B0%E0%B2%A4%E0%B2%BF+%E0%B2%B5%E0%B2%B0%E0%B3%8D%E0%B2%B7+%E0%B2%AB%E0%B3%86%E0%B2%AC%E0%B3%8D%E0%B2%B0%E0%B3%81%E0%B2%B5%E0%B2%B0%E0%B2%BF+28%E0%B2%B0%E0%B2%82%E0%B2%A6%E0%B3%81+%E0%B2%A8%E0%B2%BE%E0%B2%B5%E0%B3%81+%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF%E0%B2%B0%E0%B3%81+%E2%80%98%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%A6%E0%B2%BF%E0%B2%A8%E2%80%99%E0%B2%B5%E0%B2%A8%E0%B3%8D%E0%B2%A8%E0%B3%81+%E0%B2%86%E0%B2%9A%E0%B2%B0%E0%B2%BF%E0%B2%B8%E0%B3%81%E0%B2%A4%E0%B3%8D%E0%B2%A4%E0%B3%87%E0%B2%B5%E0%B3%86.+%E0%B2%8F%E0%B2%95%E0%B3%86%E0%B2%82%E0%B2%A6%E0%B2%B0%E0%B3%86+%E0%B2%AB%E0%B3%86%E0%B2%AC%E0%B3%8D%E0%B2%B0%E0%B3%81%E0%B2%B5%E0%B2%B0%E0%B2%BF+28+%E0%B2%85%E0%B2%A8%E0%B3%8D%E0%B2%A8%E0%B3%8B%E0%B2%A6%E0%B3%81+%E2%80%98%E0%B2%B0%E0%B2%BE%E0%B2%AE%E0%B2%A8%E0%B3%8D+%E0%B2%8E%E0%B2%AB%E0%B3%86%E0%B2%95%E0%B3%8D%E0%B2%9F%E0%B3%8D%27+%E0%B2>
>> <http://www.facebook.com/sharer.php?u=http%3A%2F%2Fkanaja.in%2Farchives%2F127928&t=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%A6%E0%B2%BF%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95+%E0%B2%AE%E0%B2%A8%E0%B3%8B%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF>
>> <http://www.reddit.com/submit?url=http%3A%2F%2Fkanaja.in%2Farchives%2F127928&title=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%A6%E0%B2%BF%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95+%E0%B2%AE%E0%B2%A8%E0%B3%8B%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF>
>> <http://www.stumbleupon.com/submit?url=http%3A%2F%2Fkanaja.in%2Farchives%2F127928&title=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%A6%E0%B2%BF%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95+%E0%B2%AE%E0%B2%A8%E0%B3%8B%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF>
>> <http://twitter.com/home/?status=http%3A%2F%2Fkanaja.in%2Farchives%2F127928>
>> <?subject=%E0%B2%95%E0%B2%A3%E0%B2%9C%20:%20%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8%20%E0%B2%A6%E0%B2%BF%E0%B2%A8%20%E0%B2%AE%E0%B2%A4%E0%B3%8D%E0%B2%A4%E0%B3%81%20%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95%20%E0%B2%AE%E0%B2%A8%E0%B3%8B%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF&body=here%20is%20a%20link%20to%20a%20site%20I%20really%20like.%20%20%20https://kanaja.in/archives/127928>
>>
>> *ಲೇಖಕರು:* ನಾಗೇಶ ಹೆಗಡೆ
>> <http://kanaja.in/archives/author/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86>
>>
>> Hareeshkumar K
>> AM(PCM)
>> GHS HUSKURU
>> MALAVALLI TQ
>> MANDYA DT 571475
>> mobile no 9880328224
>> email harihusk...@gmail.com
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to