Thank u sir...
On Mar 24, 2016 6:32 AM, "HAREESHKUMAR K Agasanapura" <harihusk...@gmail.com>
wrote:

> http://m.prajavani.net/article/2016_03_24/396640
>
> *ಗುಜರಿ ಸೇರಿದ ಜಲಚಕ್ರಕ್ಕೆ ರಿಪೇರಿ ಸಾಧ್ಯ*
>
> 24 Mar, 2016
>
> ನಾಗೇಶ್ ಹೆಗಡೆ
>
> <https://www.facebook.com/sharer/sharer.php?u=http%3A%2F%2Fgoo.gl%2FmXb4vM>
> <https://twitter.com/intent/tweet?text=%E0%B2%97%E0%B3%81%E0%B2%9C%E0%B2%B0%E0%B2%BF+%E0%B2%B8%E0%B3%87%E0%B2%B0%E0%B2%BF%E0%B2%A6++%E0%B2%9C%E0%B2%B2%E0%B2%9A%E0%B2%95%E0%B3%8D%E0%B2%B0%E0%B2%95%E0%B3%8D%E0%B2%95%E0%B3%86+%E0%B2%B0%E0%B2%BF%E0%B2%AA%E0%B3%87%E0%B2%B0%E0%B2%BF+%E0%B2%B8%E0%B2%BE%E0%B2%A7%E0%B3%8D%E0%B2%AF+http%3A%2F%2Fgoo.gl%2FmXb4vM>
> <https://plus.google.com/share?url=http%3A%2F%2Fgoo.gl%2FmXb4vM>
> <http://www.pinterest.com/pin/find/?url=http%3A%2F%2Fgoo.gl%2FmXb4vM>
> <http://www.linkedin.com/shareArticle?mini=true&title=%E0%B2%97%E0%B3%81%E0%B2%9C%E0%B2%B0%E0%B2%BF+%E0%B2%B8%E0%B3%87%E0%B2%B0%E0%B2%BF%E0%B2%A6++%E0%B2%9C%E0%B2%B2%E0%B2%9A%E0%B2%95%E0%B3%8D%E0%B2%B0%E0%B2%95%E0%B3%8D%E0%B2%95%E0%B3%86+%E0%B2%B0%E0%B2%BF%E0%B2%AA%E0%B3%87%E0%B2%B0%E0%B2%BF+%E0%B2%B8%E0%B2%BE%E0%B2%A7%E0%B3%8D%E0%B2%AF+&url=http%3A%2F%2Fgoo.gl%2FmXb4vM>
>
> ಹೆಸರಾಂತ ನಿಸರ್ಗ ವಿಜ್ಞಾನಿ ಡೇವಿಡ್ ಅಟೆನ್‌ಬರೊ ನಮಗೊಂದು ಕೌತುಕದ ವಿಡಿಯೊ ದೃಶ್ಯವನ್ನು
> ತೋರಿಸುತ್ತಾರೆ: ನೀರಿನ ಪುಟ್ಟ ಮಡುವೊಂದು ಆಫ್ರಿಕದ ಉರಿ ಬಿಸಿಲಲ್ಲಿ ಒಣಗುತ್ತಿದೆ. ನೂರಾರು
> ಮರಿಗಪ್ಪೆಗಳು ಮುಷ್ಟಿನೀರಲ್ಲಿ ವಿಲವಿಲ ಪರದಾಡುತ್ತಿವೆ.
>
> ಇನ್ನೊಂದರ್ಧ ಗಂಟೆಯಲ್ಲಿ ಅವೆಲ್ಲ ಸತ್ತೇ ಹೋಗಬಹುದು. ಪಕ್ಕದಲ್ಲೇ ಒಂದೊಂದೂವರೆ ಮೀಟರ್
> ಆಚೆಗೆ ಇನ್ನೊಂದು ಕೊಳದಲ್ಲಿ ನೀರಿದೆ.
>
> ಪೊದೆಯಲ್ಲಿದ್ದ ಬೊಗಸೆಗಾತ್ರದ ಕಪ್ಪೆಯೊಂದು (ಬುಲ್ ಫ್ರಾಗ್) ಅತ್ತ ಇತ್ತ ನೋಡುತ್ತ, ಏನೋ
> ನಿರ್ಧಾರಕ್ಕೆ ಬಂದಂತೆ ನೀರಿದ್ದ ಹೊಂಡಕ್ಕೆ ಜಿಗಿಯುತ್ತದೆ. ಹಿಮ್ಮೊಗ ಈಜುತ್ತ, ತೆವಳುತ್ತ
> ಕೊಳದ ಅಂಚಿಗೆ ಬಂದು ಹಿಂಗಾಲುಗಳಿಂದ ಹಳ್ಳ ತೋಡಲು ತೊಡಗುತ್ತದೆ.
>
> ಕೆಸರನ್ನು ಅತ್ತ ಇತ್ತ ತಳ್ಳುತ್ತ ಪುಟ್ಟದೊಂದು ಕಾಲುವೆಯನ್ನು ನಿರ್ಮಿಸುತ್ತ ಅದೆಷ್ಟೊ
> ಹೊತ್ತಿನ ನಂತರ ಒಣ ಹೊಂಡದತ್ತ ನೀರನ್ನು ಹರಿಸುತ್ತದೆ. ನೀರಿಗಾಗಿ ಪರದಾಡಿ ದಣಿದಿದ್ದ
> ಮರಿಗಪ್ಪೆಗಳು ಮತ್ತೆ ಗೆಲುವಾಗುತ್ತವೆ. ತನ್ನ ಮರಿಗಳನ್ನು ಉಳಿಸಲೆಂದು ಅಪ್ಪಕಪ್ಪೆ ನಡೆಸುವ
> ಸಾಹಸ ಅದು.
>
> ರಾಯಚೂರಿನ ಉಷ್ಣಸ್ಥಾವರವನ್ನು ತಂಪು ಮಾಡಬೇಕಿದ್ದ ನೀರು ತಮಗೇ ಬೇಕೆಂದು ಆಂಧ್ರದ ರೈತರು
> ಮೊನ್ನೆ ನೀರಿನ ಕಟ್ಟೆಯನ್ನು ಒಡೆಯುತ್ತಿರುವ ಚಿತ್ರವನ್ನು ನೋಡಿದಾಗ ಅಥವಾ ಪಂಜಾಬಿನ
> ಸಾಲುಸಾಲು ಬುಲ್‌ಡೋಜರ್‌ಗಳು ಹರಿಯಾಣಾದತ್ತ ಹೋಗುತ್ತಿದ್ದ ನೀರಾವರಿ ಕಾಲುವೆಯನ್ನು
> ಮುಚ್ಚಲೆಂದು ಗಿಡಮರಗಳನ್ನು, ಮಣ್ಣುಕಲ್ಲುಗಳನ್ನು ತರಿದು ತುಂಬುತ್ತಿದ್ದಾಗ ನಮಗೆ
> ಮನುಷ್ಯಲೋಕದ ಹೊಸಹೊಸ ಮಗ್ಗುಲುಗಳು ಕಣ್ಣಿಗೆ ಕಟ್ಟುತ್ತವೆ.
>
> ಮಹಾರಾಷ್ಟ್ರದ ನಾಂದೇಡದ ಹಳ್ಳಿಯೊಂದಕ್ಕೆ ಎಲ್ಲೋ ಐದಾರು ದಿನಗಳಿಗೊಮ್ಮೆ ಟ್ಯಾಂಕರ್
> ಬರುತ್ತದೆ. ಆ ಊರಿಗೆ ಬೇರೆ ಜಲಮೂಲವೇ ಇಲ್ಲ. ಟ್ಯಾಂಕರ್ ಬಂದೀತೆಂಬ ನಿರೀಕ್ಷೆಯಿಂದ ಊರ
> ಹೊರವಲಯದಲ್ಲಿ ಕಾದಿದ್ದ ಹತ್ತಾರು ಯುವಕರು ಅದು ಬರುತ್ತಲೇ ಜಗ್ಗಿ ಮೇಲೆ ಹತ್ತಿ ಕುಳಿತೊ,
> ನಿಂತೊ, ಜೋತಾಡುತ್ತಲೊ ಹಳ್ಳಿಯ ಮಧ್ಯೆ ಬರುತ್ತಾರೆ.
>
> ಅಲ್ಲಿರುವ ಹೆಂಗಸರು, ಮಕ್ಕಳು ಮನೆಮನೆಯಿಂದ ಹಸುರು, ನೀಲಿ ಬಣ್ಣದ ಉದ್ದುದ್ದ ಪೈಪುಗಳನ್ನು
> ಮಿಂಚಿನ ವೇಗದಲ್ಲಿ ಎಳೆದು ತರುತ್ತಾರೆ. ಈ ಮೊದಲೇ ಟ್ಯಾಂಕರಿನ ಮೇಲೇರಿ ಕೂತಿರುವ ಯುವಕರು
> ಅದರ ನೆತ್ತಿಯ ಮೇಲಿನ ಮುಚ್ಚಳ ತೆಗೆದು ಪೈಪೋಟಿಯಲ್ಲಿ ಬಣ್ಣದ ಪೈಪುಗಳ ಒಂದು ತುದಿಯನ್ನು
> ನೀರಿನಲ್ಲಿ ಅದ್ದುತ್ತಾರೆ.
>
> ರಸ್ತೆಯ ಮೇಲೆ ನಿಂತವರು ಪೈಪಿನ ಇನ್ನೊಂದು ತುದಿಗೆ ಬಾಯಿ ಹಚ್ಚಿ ನೀರನ್ನು
> ಸೆಳೆಯುತ್ತಿರುತ್ತಾರೆ. ನೂರಕ್ಕೂ ಹೆಚ್ಚು ಪೈಪ್‌ಗಳು ಸುತ್ತಲಿನ 200-300 ಕೊಡ, ಬಕೆಟ್,
> ತಪ್ಪಲೆ, ಪಿಪಾಯಿಗಳಿಗೆ ನೀರು ಸುರಿಯುತ್ತವೆ. ಟ್ಯಾಂಕರ್ ಬರೀ ನಾಲ್ಕು ನಿಮಿಷಗಳಲ್ಲಿ
> ಬರಿದಾಗುತ್ತದೆ.
>
> ನೀರಿಗಾಗಿ ಸರ್ಕಸ್, ನೀರಿಗಾಗಿ ನಾಟಕ, ನೀರಿಗಾಗಿ ಕೋರ್ಟುಕಟ್ಟೆ, ನೀರಿಗಾಗಿ ರಾಜಕೀಯ,
> ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡುವ ದಿನಗಳಿವು. ವರ್ಷ ಕಳೆದಂತೆಲ್ಲ ಇಂಥ ದಿನಗಳು
> ಹೆಚ್ಚುತ್ತಲೇ ಹೋಗುತ್ತವೆ. ಏಕೆಂದರೆ ನಾವೆಲ್ಲ ಹೆದರಿ ಹೈರಾಣಾಗುವಂಥ ಚಿತ್ರಣಗಳನ್ನು ಪವನ
> ವಿಜ್ಞಾನಿಗಳು ಕೊಡುತ್ತಿದ್ದಾರೆ.
>
> ಉತ್ತರ ಗೋಲಾರ್ಧದ ಈ ವರ್ಷದ ಚಳಿಗಾಲದ ತಾಪಮಾನ ಹಿಂದಿನ ದಾಖಲೆಗಳನ್ನೆಲ್ಲ ಅಳಿಸಿ
> ಹಾಕಿಸುವಷ್ಟು ಮೇಲೇರಿತ್ತು. ಕಳೆದ ಫೆಬ್ರುವರಿಯಲ್ಲಿ ಭೂಮಿಯ ಸರಾಸರಿ ಉಷ್ಣತೆ ಎಷ್ಟು
> ಮೇಲೇರಿತ್ತು ಎಂದರೆ, ಆ ಏರಿಕೆಗೆ ಸಮನಾದ ಹಳೇ ದಾಖಲೆ ಏನಾದರೂ ಇದೆಯೇ ಎಂದು ಪರೀಕ್ಷಿಸಲು
> ವಿಜ್ಞಾನಿಗಳು ಭೂಮಿಯ 65 ಲಕ್ಷಗಳ ಹಿಂದಿನ ಚರಿತ್ರೆಗಳನ್ನು ತಿರುವಿ ಹಾಕಿ ಕೈ ತಿರುವಿದರು.
>
> ಈಚಿನ ಪ್ಯಾರಿಸ್ ಶೃಂಗಸಭೆಯಲ್ಲಿ ‘ಭೂತಾಪ 2ಡಿಗ್ರಿ ಸೆಲ್ಸಿಯಸ್ ಏರದಂತೆ ತಡೆಯುತ್ತೇವೆ’
> ಎಂದು ಎಲ್ಲ 196 ದೇಶಗಳ ಮುಖಂಡರು ಸಹಿ ಹಾಕಿದ್ದು ಅದರ ಶಾಯಿ ಒಣಗುವ ಮೊದಲೇ  1.95 ಡಿಗ್ರಿ
> ಹೆಚ್ಚಳ ಕಂಡು ಬಂದಿದೆ. ಈ ಪರಿಯ ತಾಪ ವಿಕೋಪಕ್ಕೆ ಎಲ್‌ನೈನೊ ವಿದ್ಯಮಾನವೇ ಕಾರಣವಾಗಿದ್ದು ಈ
> ಏರಿಕೆ ತಾತ್ಕಾಲಿಕವೆಂದು ಕೆಲವು ತಜ್ಞರು ಹೇಳುತ್ತಿದ್ದಾರೆ ನಿಜ.
>
> ಆದರೆ ಎಲ್‌ನೈನೊ ಪರಿಣಾಮದಿಂದಾಗಿ ಭೂಮಧ್ಯರೇಖೆಗುಂಟ ಅರಣ್ಯ ಮತ್ತು ಕೃಷಿ ಭೂಮಿ ಒಣಗಿ
> ನಿಂತಿವೆ. ಇಂಡೊನೇಷ್ಯನಿಂದ ಹಿಡಿದು ಥಾಯ್ಲೆಂಡ್‌ವರೆಗೆ ಅನೇಕ ದೇಶಗಳಲ್ಲಿ ವ್ಯಾಪಕ
> ಕಾಳ್ಗಿಚ್ಚು ಹಬ್ಬಿದೆ. ವಾತಾವರಣಕ್ಕೆ ಇಂಗಾಲದ ಹೆಚ್ಚಿನ ಹೊರೆ ಸೇರ್ಪಡೆಯಾಗುತ್ತ, ತಾಪಮಾನ
> ಜ್ವಾಲೆಗೆ ತುಪ್ಪ ಸುರಿದಂತಾಗುತ್ತಿದೆ.
>
> ಉಷ್ಣತೆ ಹೆಚ್ಚಿದಂತೆಲ್ಲ ನೀರಿನ ಬಳಕೆ ಹೆಚ್ಚುತ್ತದೆ. ನೀರಿನ ಬಳಕೆ ಹೆಚ್ಚಿದಂತೆಲ್ಲ
> ಆವಿಯಾಗುವ ಪ್ರಮಾಣವೂ ಹೆಚ್ಚುವುದರಿಂದ ಅದು ವಾತಾವರಣದ ಕಾವನ್ನು ಹೆಚ್ಚಿಸುತ್ತ ಹೋಗುತ್ತದೆ.
> ನೀರಿನ ಅತಿ ಬಳಕೆ ಎಲ್ಲಿ, ಹೇಗೆ ಆಗುತ್ತಿದೆ ಎಂಬುದನ್ನು ಯಾರೇನೂ ಹೊಸದಾಗಿ
> ವಿವರಿಸಬೇಕಾಗಿಲ್ಲ. ನೂರು ವರ್ಷಗಳ ಹಿಂದೆ ಪ್ರಪಂಚದ ಜನಸಂಖ್ಯೆ 120 ಕೋಟಿ ಇದ್ದುದು
> 250ಕ್ಕೆ, 400ಕ್ಕೆ, 520ಕ್ಕೆ ಏರಿ ಈಗ 720 ಕೋಟಿ ದಾಟಿದೆ.
>
> ಈ ಎಲ್ಲ ದೇಹಗಳೂ ಓಡಾಡುವ ನೀರಿನ ಮೂಟೆಗಳೇ ತಾನೆ? ಈ ಜನಕೋಟಿಗೆ ಬೇಕಿದ್ದ ಹಸು, ಹೋರಿ,
> ಹಂದಿ, ಕುರಿ, ಮೇಕೆಗಳ ಸಂಖ್ಯೆಗಳೂ ಏರುತ್ತ ಹೋಗಿದ್ದು ಅವೂ ನೀರಿನ ಮೂಟೆಗಳೇ ತಾನೆ?
> ಅದಕ್ಕಿಂತ ಮುಖ್ಯ ವಿಷಯ ಏನೆಂದರೆ ನಾವು ಬಳಸುವ ಎಲ್ಲ ವಸ್ತುಗಳೂ- ಬಟ್ಟೆ, ಕಾಗದ, ಪಾತ್ರೆ,
> ಪ್ಲಾಸ್ಟಿಕ್, ಪಾದರಕ್ಷೆ, ಬಲ್ಬ್, ಛತ್ರಿ, ಸಿಮ್‌ಕಾರ್ಡ್, ಸ್ಕೂಲ್‌ಬ್ಯಾಗ್, ಪೇಯ,
> ಪೇಸ್ಟು, ಗೋಡೆಬಣ್ಣ ಇವೆಲ್ಲವೂ ತಯಾರಿಕೆಯ ಹಂತದಲ್ಲೇ ಸಾಕಷ್ಟು ನೀರು ಕುಡಿದಿರುತ್ತವೆ.
>
> ಅಷ್ಟೇ ಅಲ್ಲ, ನಾವು ನಿರ್ಮಿಸಿಕೊಂಡ ಮಹಡಿ ಮನೆ, ರಸ್ತೆ, ಶಾಲೆ, ರೈಲು, ಕ್ರೀಡಾಂಗಣ,
> ಆಸ್ಪತ್ರೆ, ಕಾರ್ಖಾನೆ ಇವೆಲ್ಲವೂ ಅಪಾರ ಪ್ರಮಾಣದಲ್ಲಿ ನೀರು ಕುಡಿದಿವೆ. ಅವಕ್ಕೆ ಬಳಕೆಯಾದ
> ನೀರು ಮಲಿನವಾಗಿ, ಬಳಕೆಗೆ ಸಿಗದಂತೆ ಆವಿಯಾಗಿ ಹೋಗಿ ಉಷ್ಣತೆಯನ್ನು ಹೆಚ್ಚಿಸುತ್ತದೆ.
>
> ಒಂದು ಕಿಲೊ ಸಕ್ಕರೆ, ಒಂದು ಲೀಟರ್ ಹಾಲು, ಒಂದು ಕಿಲೊ ಮಾಂಸ ಎಷ್ಟೆಷ್ಟು ನೀರು
> ಕುಡಿದಿರುತ್ತದೆ ಎಂಬುದನ್ನು ಲೆಕ್ಕ ಹಾಕಿ, ನಮ್ಮನಮ್ಮ ‘ನೀರಹೆಜ್ಜೆ’ (ವಾಟರ್
> ಫುಟ್‌ಪ್ರಿಂಟ್) ದಿನದಿನಕ್ಕೆ ಎಷ್ಟೆಷ್ಟು ದೊಡ್ಡದಾಗುತ್ತಿದೆ ಎಂಬ ಕೋಷ್ಟಕಗಳು
> ಸಿದ್ಧವಾಗಿವೆ. ಅದೇ ರೀತಿ ಒಂದು ಕಿಲೊ ಕರೆನ್ಸಿ ನೋಟು ಎಷ್ಟು  ಟಿಎಮ್‌ಸಿ ನೀರನ್ನು ಬಳಸಿ
> ಚೆಲ್ಲುತ್ತದೆ ಎಂದು ಯಾರೂ ಹೇಳಿಲ್ಲ ಏಕೊ.
>
> ಏಕೆಂದರೆ ನಾವು ಅಭಿವೃದ್ಧಿಯ ಹೊಸ ಹೊಸ ಮೆಟ್ಟಿಲನ್ನು ಏರುತ್ತ ಹೋದಷ್ಟೂ ಜಲಾಶಯಗಳ ಮಟ್ಟ
> ಹಾಗೂ ಅಂತರ್ಜಲದ ಮಟ್ಟ ಕೆಳಕೆಳಕ್ಕೆ ಇಳಿಯುತ್ತ ಹೋಗುತ್ತದೆ. ಹಾಗೆಯೇ ಜಲಾಶಯಗಳ ಹೂಳಿನ
> ಮಟ್ಟ, ಶ್ರೀಮಂತರ ನೀರಿನ ಬಳಕೆಯ ಮಟ್ಟ ಹಾಗೂ ಅಂಚಿನಲ್ಲಿರುವವರ ಕಷ್ಟ ಎಲ್ಲವೂ ಹೆಚ್ಚುತ್ತ
> ಹೋಗುತ್ತದೆ.
>
> ಈಗ ತುಸು ವಿಜ್ಞಾನಕ್ಕೆ ಬರೋಣ. ಏನೆಲ್ಲವನ್ನೂ ಸೃಷ್ಟಿಸಬಲ್ಲ ವಿಜ್ಞಾನಿಗಳು ನೀರನ್ನು
> ಸೃಷ್ಟಿಸಲಾರರೆ? ಅದು ತೀರಾ ಸುಲಭ! ಜಲಜನಕದ ಎರಡು ಕಣಗಳಿಗೆ ಆಮ್ಲಜನಕದ ಒಂದು ಕಣವನ್ನು
> ಸೇರಿಸಿ ಕಡ್ಡಿ ಗೀರಿದರೆ ಸಾಕು. ಭುಗ್ಗೆಂದು ಜ್ವಾಲೆ ಎದ್ದು, ಕ್ಷಣಾರ್ಧದಲ್ಲಿ
> ನೀರಾಗುತ್ತದೆ. ಜಲಜನಕವಂತೂ ಸ್ಫೋಟಕ ಅನಿಲ, ಆಮ್ಲಜನಕ ಅಗ್ನಿಮಿತ್ರ ಅನಿಲ. ಅವೆರಡೂ ಸೇರಿ
> ಉರಿದಾಗ ಉಳಿಯುವ ಶೇಷವೇ ನೀರು.
>
> ಹಾಗಿದ್ದರೆ ದೊಡ್ಡ ದೊಡ್ಡ ಶಾಖೋತ್ಪನ್ನ ಸ್ಥಾವರಗಳಲ್ಲಿ ಕೊಳಕು ಕಲ್ಲಿದ್ದಲ ಬದಲು
> ಜಲಜನಕವನ್ನೇ ಇಂಧನವನ್ನಾಗಿ ಉರಿಸಿ ವಿದ್ಯುತ್ತನ್ನೂ ನೀರನ್ನೂ ಪಡೆಯಬಹುದಲ್ಲ?
> ತಾಂತ್ರಿಕವಾಗಿ ಅದು ತೀರ ಸಲೀಸು ಕೆಲಸವೇನೊ ಹೌದು. ಆದರೆ ಜಲಜನಕವನ್ನು ಎಲ್ಲಿಂದ
> ತರುತ್ತೀರಿ? ನೆಲದಾಳದಲ್ಲಿ ತಾನಾಗಿ ಅದು ಸೃಷ್ಟಿಯಾಗುವುದಿಲ್ಲ.
>
> ನಮಗೆ ಬೇಕಿದ್ದರೆ ತಿಪ್ಪೆಗುಂಡಿಗಳಿಂದ ಹೊಮ್ಮುವ ಮೀಥೇನ್ ಅನಿಲದಿಂದ ಅದನ್ನು ದುಬಾರಿ
> ವೆಚ್ಚದಲ್ಲಿ ಪ್ರತ್ಯೇಕಿಸಿ ಬಳಸಬೇಕು. ನೆಲದಲ್ಲಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಅದು
> ಸೃಷ್ಟಿಯಾದರೂ ಅತ್ಯಂತ ಹಗುರ ಅನಿಲವಾದ್ದರಿಂದ ಸೀದಾ ಬಾಹ್ಯಾಕಾಶಕ್ಕೆ ಹೊರಟೇ ಹೋಗುತ್ತದೆ.
> ಜಲಜನಕದ ಉತ್ಪಾದನೆ ತುಂಬ ದುಬಾರಿ; ಸಮುದ್ರದ ನೀರಿನಿಂದ ಉಪ್ಪಿನಂಶವನ್ನು ತೆಗೆಯುವುದೂ
> ಅಷ್ಟೇ ದುಬಾರಿ. ಹಾಗಿದ್ದರೆ ನೀರಿನ ಸಮಸ್ಯೆಗೆ ಪರಿಹಾರವೇ ಇಲ್ಲವೆ?
>
> ಜಾಗತಿಕ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವವರಿಗೆ ಕೊಡಲಾಗುವ ‘ಬ್ಲೂ ಪ್ಲಾನೆಟ್’ ಪ್ರಶಸ್ತಿ
> ವಿಜೇತ ಪರಿಸರ ತಜ್ಞ ಗುಸ್ತಾವ್ ಸ್ಪೆಥ್ ಹೇಳುವ ಈ ಮಾತುಗಳನ್ನು ಕೇಳೋಣ: ‘ಜೀವಿವೈವಿಧ್ಯ
> ನಾಶ, ಪರಿಸರ ನಾಶ ಮತ್ತು ತಾಪಮಾನ ಏರಿಕೆ ಈ ಮೂರೇ ಜಗತ್ತಿನ ಅತಿ ದೊಡ್ಡ ಸಮಸ್ಯೆ ಎಂದು ನಾನು
> ಭಾವಿಸಿದ್ದೆ. ಇನ್ನು 30 ವರ್ಷಗಳಲ್ಲಿ ವಿಜ್ಞಾನ ಈ ಮೂರೂ ಸಮಸ್ಯೆಗಳನ್ನು ಬಗೆಹರಿಸಿಯೇ
> ತೀರುತ್ತದೆ ಎಂದು ಅಂದುಕೊಂಡಿದ್ದೆ. ಆದರೆ ಈ ಮೂರರಲ್ಲಿ ಯಾವುದೂ ನಿಜವಾದ ಸಮಸ್ಯೆ ಅಲ್ಲವೇ
> ಅಲ್ಲವೆಂದು ಈಗ ಗೊತ್ತಾಗುತ್ತಿದೆ.
>
> ನಮ್ಮೆಲ್ಲರ ದುರಾಸೆ, ಅತಿಸ್ವಾರ್ಥ ಮತ್ತು ನಿರಾಸಕ್ತಿಯೇ ಜಗತ್ತಿನ ಸಂಕಟಕ್ಕೆ ಕಾರಣಗಳೆಂದು
> ಇದೀಗ ಗೊತ್ತಾಗುತ್ತಿದೆ. ಮನುಷ್ಯನಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ಪರಿವರ್ತನೆಯಾದರೆ
> ಮಾತ್ರ ಇದನ್ನು ಪರಿಹರಿಸಬಹುದೇನೊ. ಅದು ಹೇಗೆಂದು ನಮಗಂತೂ ಗೊತ್ತಿಲ್ಲ.’
>
> ಯಾರಿಗಾದರೂ ಗೊತ್ತಿದ್ದರೆ ತಿಳಿಸಬಹುದು. ದಾಖಲೆಯ ಮಟ್ಟಿಗೆ ಹೇಳುವುದಾದರೆ  ಈಗ
> ರಾಷ್ಟ್ರದಾದ್ಯಂತ ನಡೆದ ‘ಸಾಂಸ್ಕೃತಿಕ ಹೋಳಿ’ ಹಬ್ಬವೇ ಅತ್ಯಂತ ಹೆಚ್ಚು ಪ್ರಮಾಣದ ನೀರನ್ನು
> ಮಲಿನ ಮಾಡಿ ಬಿಸಾಕಿದೆ. ಬೆಂಗಳೂರಿನ ಪೂರ್ಣಪ್ರಮತಿ ಶಾಲೆಯಲ್ಲಿ ಮಾತ್ರ ಪ್ರಾಯೋಗಿಕವಾಗಿ
> ಪಾಲಕರು, ಮಕ್ಕಳೆಲ್ಲ ಸೇರಿ ‘ಒಣ ಹೋಳಿಹಬ್ಬ’ವನ್ನು ಆಚರಿಸಿದರು. ನೀರಿನ ಮಿತಬಳಕೆ,
> ಕೆಮಿಕಲ್‌ರಹಿತ ಬಣ್ಣಗಳ ಬಳಕೆಯ ಮಹತ್ವವನ್ನು ನಾಳಿನ ಪೀಳಿಗೆಗೆ ಹಬ್ಬಗಳ ಮೂಲಕವೇ
> ತಿಳಿಸಬೇಕೆಂಬ ಅಂಥ ತುಡಿತಗಳು ಬೇರೆಲ್ಲಾದರೂ ಕಂಡರೆ ತಿಳಿಸಬಹುದು.
>
> ಮೊನ್ನೆ ಮಾರ್ಚ್ 22ರಂದು ಬೆಂಗಳೂರಿನ ಎರಡು ಮೂರು ಕಡೆ (ಮಾತ್ರ) ‘ವಿಶ್ವ ಜಲ ದಿನ’ವನ್ನು
> ಆಚರಿಸಲಾಯಿತು. ಅಂದರೆ ಮಾಮೂಲಿನಂತೆ ಭಾಷಣ, ವಿಚಾರ ಸಂಕಿರಣಗಳು ನಡೆದವು. ಇತರ ದೊಡ್ಡ
> ನಗರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕು ಮಟ್ಟದಲ್ಲಿ ಅದೂ ಆಗಿರಲಿಲ್ಲವೇನೊ.
> ಶಿಕ್ಷಣ ಇಲಾಖೆಗೆ ಅವೆಲ್ಲ ಲೆಕ್ಕಕ್ಕೇ ಬಂದಿರಲಿಕ್ಕಿಲ್ಲ.
>
> ಜಲದಿನ ಒಂದೇ ಅಲ್ಲ, ಮಾರ್ಚ್ 21ರಂದು ಅರಣ್ಯ ದಿನ, 22ರಂದು ಜಲದಿನ, 23ರಂದು (ನಿನ್ನೆ)
> ಪವನ ವಿಜ್ಞಾನ ದಿನ ಹೀಗೆ ಮೂರು ಮಹತ್ವದ ದಿನಗಳು ಸಾಲಾಗಿ ಪ್ರತಿವರ್ಷ ಬರುತ್ತವೆ. ಈ
> ಮೂರಕ್ಕೂ ಪರಸ್ಪರ ನೇರ ತಳಕು ಇರುವುದಿಂದ ವಿಶ್ವಸಂಸ್ಥೆ ಇವನ್ನು ಸಾಲಾಗಿ ಇಟ್ಟಿದೆ.
>
> ನೀರಿನ ಅಭಾವದ ಬಿಸಿ ನೇರವಾಗಿ ತಟ್ಟತೊಡಗಿದ್ದರಿಂದ ಸರಿ, ಅದೊಂದಕ್ಕಾದರೂ ಈ ವರ್ಷ ಕೆಲವರು
> ಗಮನ ಹರಿಸಿದ್ದು ಒಳ್ಳೆಯದೇ ಆಯಿತು. ಆದರೆ ಒಬ್ಬ ಅರಣ್ಯ ಸಚಿವರು, ಒಂದೂವರೆ ಗಂಟೆಯ ಒಂದು
> ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಸಾಕೆ? ಸರ್ಕಾರದ ಎಲ್ಲ ಸಚಿವರಿಗೂ ಎಲ್ಲ ಇಲಾಖೆಗೂ
> ನೀರಿನೊಂದಿಗೆ ಸಂಬಂಧ ಇದ್ದೇ ಇದೆ.
>
> ಕೃಷಿ, ಪಶುಸಂಗೋಪನೆ, ರೇಷ್ಮೆ, ನೀರಾವರಿ, ಗಣಿ, ಇಂಧನ, ಉದ್ಯಮ, ಪ್ರವಾಸೋದ್ಯಮ, ಶಿಕ್ಷಣ
> ಹೀಗೆ ಅಷ್ಟೊಂದು ಇಲಾಖೆಗಳಿಗೆ ನೀರಿನ ಅಭಾವದ ಅಥವಾ ಮಾಲಿನ್ಯದ ಬಿಸಿ ತಟ್ಟುತ್ತಿರುವಾಗ,
> ವಿಧಾನ ಸಭೆಯ ಅಧಿವೇಶನದಲ್ಲಿ ಒಂದಿಡೀ ದಿನವನ್ನು ಅದರ ಸಂಬಂಧ ಚರ್ಚೆಗೆ ಮೀಸಲಿಡಬಾರದೆ?
>
> ಸದನದಲ್ಲಿ ದಿನಾ ನೀರಿನ ವಾಗ್ವಾದ ನಡೆಯುತ್ತಲೇ ಇರುತ್ತದೆ, ಈ ಬಾರಿ ಮುಂಗಡಪತ್ರದಲ್ಲೂ
> ನೀರಿನ ಉಳಿತಾಯಕ್ಕೆ ಸಾಕಷ್ಟು  ಒತ್ತು ಕೊಡಲಾಗಿದೆ; ಅದಕ್ಕೆ ‘ಪ್ರತ್ಯೇಕ ಚರ್ಚೆ ಯಾಕೆ?’
> ಎಂದು ಶಾಂತಿನಗರದ ಶಾಸಕ ಹ್ಯಾರಿಸ್ ಕೇಳುತ್ತಾರೆ. ಅದು ಹಾಗಲ್ಲ. ಪ್ರತಿಯೊಂದು ಇಲಾಖೆಯೂ
> ನೀರಿನ ಮಿತವ್ಯಯಕ್ಕೆ, ಸಂರಕ್ಷಣೆಗೆ, ಶುದ್ಧಿಗೆ ತಾನೇನೇನು ಕ್ರಮ ಕೈಗೊಳ್ಳುತ್ತೇನೆ ಎಂಬುದರ
> ಬಗ್ಗೆ ಪ್ರತ್ಯೇಕ (ಶ್ವೇತಪತ್ರ ಅಲ್ಲದಿದ್ದರೆ) ಶಪಥಪತ್ರವನ್ನು ಹೊರಡಿಸಬೇಕು.
>
> ಡಿಸೆಂಬರಿನ ಪ್ಯಾರಿಸ್ ಸಮ್ಮೇಳನಕ್ಕೆ ತುಸು ಮುಂಚೆ ಎಲ್ಲ ದೇಶಗಳಿಗೂ ವಿಶ್ವಸಂಸ್ಥೆ
> ಅಂಥದ್ದೊಂದು ಸವಾಲು ಹಾಕಿತ್ತು: ‘ನೀವು ಯಾವ ಯಾವ ರೀತಿಯಲ್ಲಿ ಇಂಗಾಲದ ಪ್ರಮಾಣವನ್ನು
> ತಗ್ಗಿಸಲಿದ್ದೀರಿ ಎಂದು ತಿಳಿಸುವ ಶಪಥಪತ್ರದೊಂದಿಗೆ ಶೃಂಗಸಭೆಗೆ ಬನ್ನಿ’ ಎಂದು ಹೇಳಿತ್ತು.
>
> ಭಾರತದ ಪತ್ರವನ್ನು ಎಲ್ಲರೂ ಶ್ಲಾಘಿಸಿದ್ದರು. ಅದೇರೀತಿ ಕರ್ನಾಟಕದ ಮುಖ್ಯಮಂತ್ರಿಯವರು
> ನೀರಿನ ಕುರಿತು ಅಂಥದ್ದೇ ಪ್ರಶ್ನೆಯನ್ನು ಎಲ್ಲ ಇಲಾಖೆಗಳಿಗೆ ಕಳಿಸಿ, ಉತ್ತರ ತರಿಸಿ ವಿಶೇಷ
> ಜಲ ಮುಂಗಡಪತ್ರವನ್ನು ಚರ್ಚಿಸಿದರೆ ಅದು ರಾಷ್ಟ್ರಕ್ಕೇ ಒಂದು ಮಾದರಿಯಾಗಬಹುದು.
>
> ಶಾಂತಸಾಗರದ ಮಾರ್ಷಲ್ ದ್ವೀಪ ರಾಷ್ಟ್ರದಲ್ಲಿ ನೀರಿಗಾಗಿಯೇ ತುರ್ತುಸ್ಥಿತಿಯನ್ನು
> ಘೋಷಿಸಲಾಗಿದೆ. ಇಲ್ಲೂ ಅಂಥ ಸ್ಥಿತಿ ಬರುವವರೆಗೆ ನಾವು ಕಾಯಬೇಕೆ?
>
> Hareeshkumar K
> AM(PCM)
> GHS HUSKURU
> MALAVALLI TQ
> MANDYA DT 571475
> mobile no 9880328224
> email harihusk...@gmail.com
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to