very interesting and real facts about teacher 2016-04-03 4:05 GMT+05:30 Lokesk K N <[email protected]>:
> Very nice > > > On Friday, April 1, 2016, Sonnet <[email protected]> wrote: > > That's why teacher is called a NATION BUILDER > > > > On 1 Apr 2016 10:29, "veeresh.arakeri" <[email protected]> > wrote: > >> > >> ಶಿಕ್ಷಕನ ರೆಸ್ಯೂಮೆ > >> > >> > >> ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಒಂದು ವಿಚಿತ್ರ ಯೋಚನೆ. ಒಂದು ವೇಳೆ ನಾನೇನಾದರೂ > ನನ್ನ ಕೆಲಸವನ್ನು ಕಳೆದುಕೊಂಡರೆ ಬೇರೆ ಎಲ್ಲೆಲ್ಲಿ, ಯಾವ ಯಾವ ಕ್ಷೇತ್ರದಲ್ಲಿ ಕೆಲಸ > ಮಾಡಬಲ್ಲೆ? ಏನೇನು ಮಾಡಬಲ್ಲೆನೋ ಗೊತ್ತಿಲ್ಲ, ಆದರೆ ಎಲ್ಲ ಕ್ಷೇತ್ರದವರೂ ನನ್ನನ್ನು ಕರೆದು > ಕೆಲಸ ಕೊಡುವ ಅರ್ಹತೆಯನ್ನಂತೂ ಹೊಂದಿರುತ್ತೇನೆ! ಯಾಕೆಂದರೆ ನಾನು ಶಿಕ್ಷಕನಲ್ಲವೇ? ಅದರಲ್ಲೂ > ಖಾಸಗಿ ಶಾಲೆಯಲ್ಲಿರುವವನಲ್ಲವೇ? > >> > >> ಇಲ್ಲಿದೆ - ಶಿಕ್ಷಕನ ರೆಸ್ಯೂಮೆಯಲ್ಲಿರಬೇಕಾದ ಎಕ್ಸ್ಪೀರಿಯನ್ಸ್ ಸಮ್ಮರಿ. > >> > >> [ ಒಂದು ಡಿಸ್ಕ್ಲೇಯ್ಮರ್ರು: ಇಲ್ಲಿ ನಾನು ಎಲ್ಲೆಲ್ಲಿ ಶಿಕ್ಷಕ, ಮೇಷ್ಟ್ರು ಮುಂತಾದ > ಪದಗಳನ್ನು ಬಳಸಿದ್ದೇನೋ ಅಲ್ಲೆಲ್ಲವೂ ಶಿಕ್ಷಕಿ, ಅಥವಾ ಟೀಚರ್ ಎಂಬ ಪದವನ್ನೂ > ಬಳಸಿಕೊಳ್ಳಬಹುದು. ಲಿಂಗಭೇದವಿಲ್ಲ.] > >> > >> ತರಗತಿಯಲ್ಲಿ ಕಳ್ಳರನ್ನು, ಸುಳ್ಳರನ್ನು ಮೇಷ್ಟರಿಗಿಂತ ಸುಲಭವಾಗಿ ಯಾರು ತಾನೆ ಕಂಡು > ಹಿಡಿಯಲು ಸಾಧ್ಯ! ನಮಗೆ ಯಾವ ಮಂಪರು ಪರೀಕ್ಷೆಯ ಹಂಗೂ ಬೇಕಿಲ್ಲ ಪತ್ತೆ ಮಾಡಲು, ಸಿಕ್ಕಿ > ಬಿದ್ದ ಕಳ್ಳನನ್ನು ದೈಹಿಕವಾಗಿ ದಂಡಿಸದೆಯೇ ಪರಿವರ್ತನೆಯ ಪ್ರಾಮಾಣಿಕ ಪ್ರಯತ್ನ ಮಾಡಲು. > ಹಾಗಾಗಿ ಪೋಲೀಸ್ ಇಲಾಖೆಯು ಮೇಷ್ಟರಿಗಾಗಿ ಒಂದು ಸೀಟು ಕಾಯ್ದಿರಿಸಬೇಕು. ಅಲ್ಲದೆ > ಪರೀಕ್ಷೆಗಳಲ್ಲಿ ಮೇಲ್ವಿಚಾರಣೆ ಮಾಡುವುದೆಂದರೆ ಪೋಲೀಸ್ ಕೆಲಸವಲ್ಲದೆ ಮತ್ತಿನ್ನೇನು. ಬರೀ > ಕ್ರೈಮ್ ಪೋಲೀಸಿನವರು ಮಾತ್ರವಲ್ಲ, ಟ್ರಾಫಿಕ್ ಇಲಾಖೆಯವರೂ ಸಹ ಮೀಸಲಾತಿಯಿಡಬೇಕು. ಏಕೆಂದರೆ, > ನಿತ್ಯವೂ ಶಾಲೆಯಲ್ಲಿ ಮೇಷ್ಟರುಗಳು ಟ್ರಾಫಿಕ್ ನಿರ್ವಹಣೆ ಮಾಡುತ್ತಲೇ ಇರುತ್ತಾರೆ. > ವಿದ್ಯಾರ್ಥಿಗಳು ಸಾಲಾಗಿ ನಡೆದುಕೊಂಡು ಪ್ರಾರ್ಥನೆಯ ಮಂದಿರದಿಂದ ತರಗತಿಗಳಿಗೆ ಹೋಗುವ ಹೊಣೆ, > ಅಥವಾ ತರಗತಿಗಳಿಂದ ಮೈದಾನಕ್ಕೆ ಹೋಗುವಾಗ ಶಿಸ್ತಿನಿಂದ ಒಬ್ಬರ ಹಿಂದೊಬ್ಬರು ಸಾಲನ್ನು > ಮುರಿಯದೇ ಹೋಗುವ ಹೊಣೆಯು ಮೇಷ್ಟರದಲ್ಲದೆ ಇನ್ಯಾರದ್ದು! ಯಾರಾದರೂ ಸಾಲಿನ ನಿಯಮವನ್ನು > ಮುರಿದರೆ ತಕ್ಷಣವೇ ಅವರನ್ನು ಬದಿಗೆ ಸರಿಸಿ, ಐಡಿ ಕಾರ್ಡನ್ನು ಪರಿಶೀಲಿಸಿ, ನೂರೆಂಟು > ಪ್ರಶ್ನೆ ಕೇಳಿ, ನಂತರ ಸಾಲಿನ ಕೊನೆಯಲ್ಲಿ ನಡೆದು ಹೋಗುವ ಶಿಕ್ಷೆ ವಿಧಿಸುವ ಮೇಷ್ಟ್ರು > ಟ್ರಾಫಿಕ್ ಪೋಲೀಸ್ ಆಗಲು ಅರ್ಹರಷ್ಟೆ? > >> > >> ಮೈದಾನಕ್ಕೆ ಸಾಲಾಗಿ ಹೋಗುವ ಮಕ್ಕಳನ್ನು ಕಳುಹಿಸುವ ಟ್ರಾಫಿಕ್ ಪೋಲೀಸ್ ಮೇಷ್ಟರುಗಳು > ಕೆಲ ಕ್ಷಣಗಳ ನಂತರವೇ ವೈದ್ಯರಾಗಿ ಬದಲಾಗುವುದೂ ಉಂಟು. ನಡೆದು ಹೋಗುವ ಮಕ್ಕಳು ಇದ್ದಕ್ಕಿದ್ದ > ಹಾಗೆ ಒಬ್ಬರನ್ನೊಬ್ಬರು ತಳ್ಳಿಕೊಂಡು ಬೀಳುವುದು ಸಹಜ. ಬಿದ್ದು ಮೈ ಕೈ ಗಾಯ ಮಾಡಿಕೊಂಡು ರಂಪ > ರಾದ್ಧಾಂತ ಮಾಡುವುದಂತೂ ಶಾಲೆಯಲ್ಲಿ ಸಾಮಾನ್ಯ ದೃಶ್ಯ. ಈ ಮಕ್ಕಳಿಗೆ ಚಿಕಿತ್ಸೆ ಕೊಡುವ > ಮೇಷ್ಟ್ರು ಬಿಳಿ ಕೋಟು ಧರಿಸಿರುವುದಿಲ್ಲ ಅಷ್ಟೆ. ಕೇವಲ general physician ಅಷ್ಟೇ ಅಲ್ಲ, > ಮಕ್ಕಳ ಮನಸ್ಸಿನ ಆಳವನ್ನು ಹೊಕ್ಕು, ಅವರ ವಯಕ್ತಿಕ ಬದುಕಿನ ಸಂಕಷ್ಟಗಳನ್ನು ಗುಣಪಡಿಸಲು > ಪ್ರಯತ್ನ ಪಡಲು ಬೇಕಾದ ಎಲ್ಲ ರೀತಿಯ counseling ಮಾಡುವ ಮನಃಶಾಸ್ತ್ರಜ್ಞನೂ ಆಗಿರುತ್ತಾನೆ > (ಆಗಿರಬೇಕು). ತಾನು ಯಾವ ಬಟ್ಟೆ ಧರಿಸಿದರೆ ಮಕ್ಕಳಿಗೆ ಇಷ್ಟವಾಗುತ್ತೆ, ಹೇಗೆ ಮಾತನಾಡಿದರೆ > ಮಕ್ಕಳು ಸಂತೋಷ ಪಡುತ್ತಾರೆ ಎಂಬ ಸೂಕ್ಷ್ಮಗಳನ್ನೆಲ್ಲ ಅರಿತುಕೊಂಡಿರುವವನು > ಮನಃಶಾಸ್ತ್ರಜ್ಞನಲ್ಲದೆ ಇನ್ನೇನು! ಮಕ್ಕಳಿಗಿಂತ ಹೆಚ್ಚಾಗಿ ಪೋಷಕರಿಗೆ counseling ಮಾಡುವ > ಮೇಷ್ಟ್ರು ಯಾವ ಸಿಗ್ಮಂಡ್ ಫ್ರಾಯ್ಡಿಗೂ ಕಡಿಮೆಯಿಲ್ಲ. > >> > >> ಖಾಸಗಿ ಶಾಲೆಯೆಂದು ಆಗಲೇ ಹೇಳಿದೆನಷ್ಟೆ? ಆಗಿಂದಾಗ್ಗೆ, ವಿಜ್ಞಾನ, ಸಮಾಜ ಶಾಸ್ತ್ರ, > ಗಣಿತ, ಕಂಪ್ಯೂಟರು, ಕಲೆ, ಇತ್ಯಾದಿ ಪ್ರದರ್ಶನಗಳು ನಡೆಯುತ್ತಲೇ ಇರುತ್ತೆ. ಪ್ರದರ್ಶನಗಳಿಗೆ > ತಕ್ಕ ಹಾಗೆ ಬೇಕಾದ ಮಾಡೆಲ್‍ಗಳನ್ನು ತಯಾರಿಸುವುದೂ ಮೇಷ್ಟ್ರುಗಳೇ. ಆರ್ಕಿಟೆಕ್ಟು, > ಕಂಟ್ರಾಕ್ಟರ್ರು, ಕೆಲಸಗಾರ – ಮೂರೂ ಕೆಲಸವನ್ನು ಒಬ್ಬನೇ ನಿರ್ವಹಿಸುತ್ತಾನೆ. ಜೊತೆಗೆ > ಬೇಕಾದ ಕಲಾವಿನ್ಯಾಸವನ್ನೂ ಮಾಡುತ್ತಾನೆ. ಪ್ರದರ್ಶನಕ್ಕೆ ಅಗತ್ಯವಿರುವ ಯೋಜನೆ, ನಿರ್ವಹಣೆ, > ಎಲ್ಲವನ್ನೂ ಮಾಡಬಲ್ಲನು. > >> > >> ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಂತೂ ನಿರೂಪಣೆ, ಪ್ರಾರ್ಥನೆಯ ಹಾಡು, ನಾಟಕ, ನೃತ್ಯ, > ಯೋಗ, ಇವೆಲ್ಲವೂ ನಿರ್ವಹಿಸುವುದರಿಂದ ಕಲಾವಿದನ ಎಲ್ಲ ಲಕ್ಷಣಗಳೂ ಮೇಷ್ಟರಲ್ಲಿ ಇರದೇ ಇರಲು > ಸಾಧ್ಯವೇ ಇಲ್ಲ. ಕಲಾವಿದ ಮಾತ್ರವಲ್ಲ, ಇಂಥ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕಗಳ ಸೆಟ್ಟಿಂಗು, > ಲೈಟು ಸೆಟ್ಟಿಂಗು, ಫೋಟೋ ತೆಗೆಯುವುದು, ವೇದಿಕೆಯ ವಿನ್ಯಾಸ ಮುಂತಾದವುಗಳಲ್ಲಿಯೂ ಮೇಷ್ಟರದು > ಎತ್ತಿದ ಕೈ. ಸಿನಿಮಾದವರು ಕೆಲಸ ಕೊಡುವುದೊಂದು ಬಾಕಿ. > >> > >> ಶಾಲೆಯ ಬಸ್ಸಿನಲ್ಲಿ ಆಗಾಗ್ಗೆ ಪ್ರಯಾಣ ಮಾಡಬೇಕಾಗುತ್ತಿರುತ್ತೆ. ಡ್ರೈವಿಂಗ್ > ಕೆಲಸವೊಂದು ಇರುವುದಿಲ್ಲ. ಆದರೆ ಕಂಡಕ್ಟರ್ ಕೆಲಸ ಗ್ಯಾರೆಂಟಿ. ಯಾರು ಯಾರು ಎಲ್ಲೆಲ್ಲಿ > ಹತ್ತುತ್ತಾರೆ, ಎಲ್ಲೆಲ್ಲಿ ಇಳಿದುಕೊಳ್ಳುತ್ತಾರೆಂಬ ಅರಿವು ಮೇಷ್ಟರುಗಳಿಗಿರಬೇಕಲ್ಲವೇ? > ಕ್ರೀಡೆಗಳಲ್ಲಂತೂ – ಇಂಥದ್ದು ಇಲ್ಲವೆಂದಿಲ್ಲ. ಲಗೋರಿಯಿಂದ ಹಿಡಿದು ಫುಟ್‍ಬಾಲ್‍ವರೆಗೆ, > ತಾವೇ ರಚಿಸುವ ಆಟಗಳಿಂದ ಹಿಡಿದು ಕಂಪ್ಯೂಟರ್ ಗೇಮ್‍ಗಳವರೆಗೆ ಎಲ್ಲವೂ ಗೊತ್ತು. ಅದಲ್ಲದೆ > ಮಾರ್ಚ್‍ಪಾಸ್ಟು, ಡ್ರಿಲ್ಲು, ಬ್ಯಾಂಡು ಇವೆಲ್ಲವೂ ಮಿಲಿಟರಿಯ ತರಬೇತಿಗಳು. ಆಯಾ ಇಲಾಖೆಯವರು > ಈ ಪ್ಯಾರಾದ ಕಡೆ ಗಮನಹರಿಸತಕ್ಕದ್ದು. > >> > >> ಪ್ರವಾಸವನ್ನು ಆಯೋಜಿಸುವುದು ಸುಲಭದ ಕೆಲಸವೇನಲ್ಲ. ಎಲ್ಲಿಗೆ ಯಾವ ಕಾಲದಲ್ಲಿ ಹೋಗಬೇಕು, > ಯಾವ ಕಾಲದಲ್ಲಿ ಹೋಗಬಾರದು ಎಂಬ ಭೌಗೋಳಿಕ ಅರಿವಿರಬೇಕು. ಊಟ ತಿಂಡಿಗಳನ್ನು ಹೇಗೆ > ಪೂರೈಸಬೇಕೆಂಬ ಅಡುಗೆ ಕಂಟ್ರಾಕ್ಟರನ ತಿಳಿವಳಿಕೆಯಿರಬೇಕು. ಎಲ್ಲೆಲ್ಲಿ ಹೋಗುತ್ತೇವೋ ಆ > ಜಾಗಗಳ, ಅಲ್ಲಿ ಭೇಟಿಯಾಗುವ ಜನರ ಹಿಸ್ಟರಿ, ಜಿಯಾಲಜಿ, ಸೈಕಾಲಜಿ, ಬಯಾಲಜಿ, ಅಡುಗೋಲಜ್ಜಿ > ಕತೆಗಳೆಲ್ಲವೂ ಗೊತ್ತಿರಬೇಕು. ಗೊತ್ತಿರದಿದ್ದರೆ ಹೊಸ ಕತೆ ಕಟ್ಟುವ ಸಾಮರ್ಥ್ಯವಿರಬೇಕು. > ರಾತ್ರಿ ಎಲ್ಲಿ ಉಳಿದುಕೊಂಡರೆ ಕ್ಷೇಮವೆಂಬುದು ಗೊತ್ತಿರಬೇಕು, ಅದಕ್ಕಾಗಿ ವ್ಯವಸ್ಥೆ > ಮಾಡಬೇಕು. ಇವೆಲ್ಲವನ್ನೂ ಶಿಕ್ಷಕನು ಸಲೀಸಾಗಿ ಮಾಡಿಯಾನು. > >> > >> ಹಣಕಾಸು ವಿಚಾರದಲ್ಲೂ ಏನು ಕಡಿಮೆಯಿಲ್ಲ. ಸಂಪಾದನೆಯಲ್ಲಿ ಕಡಿಮೆಯಿರಬಹುದು, ಆದರೆ > ಲಕ್ಷಗಟ್ಟಲೆ ಹಣದ ಎಣಿಕೆ, ಲೆಕ್ಕಾಚಾರ ಮುಂತಾದ ಗುಮಾಸ್ತೆ ಕೆಲಸವು ಶಾಲೆಯ ಆರಂಭದ ವೇಳೆ > ನಡೆಯುವ ಅಡ್ಮಿಷನ್ ಪ್ರಕ್ರಿಯೆಯಲ್ಲಿ ಮೇಷ್ಟರುಗಳಲ್ಲದೆ ಇನ್ಯಾರು ಮಾಡುತ್ತಾರೆ? ಎಷ್ಟು > ಹಣಕ್ಕೆ ರಸೀತಿ ಕೊಡಬೇಕು, ಎಷ್ಟಕ್ಕೆ ಕೊಡಬಾರದು; ರಾಮನ ಲೆಕ್ಕ ಯಾವುದು, ಕೃಷ್ಣನದು > ಯಾವುದು; ಸಮವಸ್ತ್ರ, ಶೂ, ಪುಸ್ತಕ ಮುಂತಾದವುಗಳನ್ನು ಮಾರುವುದು ಹೇಗೆ; ಹಾಗೆ ಮಾರಿದರಲ್ಲಿ > ಒಂದು ಪೈಸೆಯೂ ತನ್ನದಲ್ಲವೆಂಬಂತೆ ಲೆಕ್ಕವೊಪ್ಪಿಸಿ ತೆಪ್ಪಗಿರುವುದು ಹೇಗೆ – ಎಂಬುದು > ಗೊತ್ತಿರುತ್ತೆ. > >> > >> ತಮ್ಮ ತಮ್ಮ ತರಗತಿಗಳನ್ನು ಚೊಕ್ಕವಾಗಿಟ್ಟುಕೊಳ್ಳುವ ಸಲುವಾಗಿ ಆಯಾಗಳಿಂದ ಕೆಲವು ಸಲ > ಕೆಲಸ ಮಾಡಿಸಿಕೊಂಡರೆ, ಮತ್ತೆ ಕೆಲವು ಸಲ ತಾವೇ ಮಾಡಿಕೊಳ್ಳಬೇಕಾಗುತ್ತೆ. ಸಣ್ಣ ಪುಟ್ಟ > ಎಲೆಕ್ಟ್ರಿಕಲ್ ರಿಪೇರಿ, ಮರಗೆಲಸದ ರಿಪೇರಿ, ಒಂದೇ ಬದಿಯಲ್ಲಿ ಬೀಗವಿರುವುದರಿಂದ ಆಗಾಗ್ಗೆ > ಮಕ್ಕಳು ಬಾಗಿಲು ಹಾಕಿಕೊಂಡು ಒಳಗೆ ಸಿಕ್ಕಿಕೊಂಡಾಗ ಬೀಗ ಮುರಿಯುವ ಅಥವಾ ಬೀಗ ರಿಪೇರಿ > ಮಾಡುವ, ಬೆಂಕಿ ಸಂಭವಿಸಿದರೆ ಅಗ್ನಿಶಾಮಕವನ್ನು ಬಳಸಿ ಬೆಂಕಿಯನ್ನು ನಂದಿಸುವ – ಇಂಥ ಎಲ್ಲ > ಕೆಲಸವೂ ತಾನಾಗಿಯೇ ಬರುತ್ತೆ ಶಿಕ್ಷಕನಾದವನಿಗೆ. > >> > >> ಶಾಲೆಯ ಪತ್ರಿಕೆಯನ್ನು ಹೇಗೆ ಮರೆಯುವುದು? ಪತ್ರಿಕೆಯೆಂದರೆ ಅದರಲ್ಲಿ ಲೇಖನಗಳನ್ನು > ಬರೆಯಬೇಕು, ಬರೆಸಬೇಕು, ಮಕ್ಕಳು ಬರೆದು ತಂದುಕೊಟ್ಟಿದ್ದನ್ನು ಸಂಪಾದಿಸಬೇಕು, > ಪತ್ರಿಕೆಗೊಂದು ಮುಖಪುಟ ವಿನ್ಯಾಸ ಮಾಡಬೇಕು, ಒಳಗೆ ಪುಟಗಳ ವಿನ್ಯಾಸವನ್ನೂ ಮಾಡಬೇಕು. > ಪತ್ರಿಕೋದ್ಯಮದಲ್ಲಿ ಈ ಪ್ರತಿಯೊಂದಕ್ಕೂ ಬೇರೆ ಬೇರೆಯವರಿರುತ್ತಾರೆಂದು ನಾನು ಕೇಳಿ ಬಲ್ಲೆ. > ಇಲ್ಲಿ ಮೇಷ್ಟ್ರೇ ಎಲ್ಲ! > >> > >> ರಾವಣನ ದಶಶಿರವದೇಂ? ನರನು ಶತಶಿರನು! > >> ಸಾವಿರಾಸ್ಯಗಳನೊಂದರೊಳಣಗಿಸಿಹನು! > >> ಹಾವಾಗಿ, ಹುಲಿಯಾಗಿ, ಕಪ್ಪೆ-ಹುಲ್ಲೆಯುಮಾಗಿ > >> ಭೂವ್ಯೋಮಕತಿಶಯನು! - ಮಂಕುತಿಮ್ಮ. > >> > >> ಇದನ್ನು ಡಿ.ವಿ.ಜಿ.ಯವರು ಶಿಕ್ಷಕರಿಗೆಂದೇ ಬರೆದರೇನೋ ಎನ್ನಿಸುತ್ತೆ. ನರ ಎಂಬ ಪದವನ್ನು > ಬಳಸಿಬಿಟ್ಟಿದ್ದಾರೆ. ಛಂದಸ್ಸಿಗೆ ಹೊಂದಿಕೊಳ್ಳುವಂತಿದ್ದರೆ ಶಿಕ್ಷಕ ಎಂದೇ > ಬರೆಯುತ್ತಿದ್ದರೇನೋ. > >> > >> ನನ್ನ ರೆಸ್ಯೂಮೆಗೆ ನನ್ನೀ ಶತಶಿರದ ಅರ್ಹತೆಯನ್ನು ಸೇರಿಸಿಕೊಳ್ಳಬೇಕೆಂಬ ಬಯಕೆಯು > ಹೆಚ್ಚು ಕಾಲ ಉಳಿಯುವಂಥದ್ದಲ್ಲ. ಮೇಲೆ ಹೇಳಿದ ಯಾವುದಾದರೂ ಇಲಾಖೆಯವರು ನನಗೆ ಕರೆದು ಕೆಲಸ > ಕೊಟ್ಟರೂ, ಅಲ್ಲಿ ನನಗೆ ತರಗತಿಯಲ್ಲಿ ಪಾಠ ಮಾಡುವ ಭಾಗ್ಯವಿರುವುದೇ? ಮಕ್ಕಳೊಡನೆ ಆಟವಾಡುವ > ಅವಕಾಶವಿರುವುದೇ? ಊಟದ ವಿರಾಮದ ವೇಳೆ ಬಿಗಿಯಾಗಿರುವ ಡಬ್ಬಿಯ ಮುಚ್ಚಳವನ್ನು ತೆಗೆದುಕೊಡುವ, > ಹಾಗೆ ತೆಗೆದುಕೊಟ್ಟು “ನಮ್ಮ ಮೇಷ್ಟ್ರು ಜಗತ್ತಿನ ಅತ್ಯಂತ ಶಕ್ತಿಶಾಲಿ” ಎಂಬ ಬಿರುದನ್ನು > ಪಡೆದುಕೊಳ್ಳಲಾಗುವುದೇ? ದಿನಕ್ಕೆ ಮೂರು ನಾಲ್ಕು ಜನರ ಹುಟ್ಟುಹಬ್ಬವನ್ನು ಆಚರಿಸಲು > ಸಾಧ್ಯವೇ? ಅಥವಾ ನನ್ನ ಹುಟ್ಟುಹಬ್ಬಕ್ಕೆ ಸಹಸ್ರಾರು ಪ್ರಾಮಾಣಿಕ, ಮನಃಪೂರ್ವಕ, ತಾವೇ ತಮ್ಮ > ಕೈಯ್ಯಾರೆ ಕಾಗದಗಳಿಂದ ಮಾಡಿದ ಗ್ರೀಟಿಂಗ್ ಕಾರ್ಡುಗಳನ್ನು ಸಂಪಾದಿಸಲು ಆದೀತೆ? ಯಾರು ಏನೇ > ಹೇಳಲಿ, ನಾನು (ಶಿಕ್ಷಕ) ಹೇಳುವುದೇ ಪರಮ ಸತ್ಯ ಎಂದು ಸಂಪೂರ್ಣ ನಂಬಿಕೆಯನ್ನು > ಪಡೆದುಕೊಳ್ಳಲು ಬೇರೆಲ್ಲಿ ಸಾಧ್ಯ? > >> > >> ಈ ಶತಶಿರದ ಅರ್ಹತೆಯೂ ಅನುಭವವೂ ಹೀಗೆ ಇನ್ನೂ ಬೆಳೆಯುತ್ತಿರಲಿ – ಬೇರೆ ಕಡೆ > ಹೋಗಲೆಂದಲ್ಲ. ಇನ್ನೂ ಉತ್ತಮ ಮೇಷ್ಟರಾಗಲು ಎಂದು ನನಗೆ ನನ್ನದೇ ಹಾರೈಕೆ. ಸ್ವಧರ್ಮದಲ್ಲಿ > ನಿಧನವೂ ಶ್ರೇಯಸ್ಸಂತೆ.. > >> > >> -- > >> 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > >> 2. For STF training, visit KOER - > http://karnatakaeducation.org.in/KOER/en/index.php > >> 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > >> 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > >> 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > >> --- > >> You received this message because you are subscribed to the Google > Groups "Maths & Science STF" group. > >> To unsubscribe from this group and stop receiving emails from it, send > an email to [email protected]. > >> To post to this group, send an email to > [email protected]. > >> Visit this group at https://groups.google.com/group/mathssciencestf. > >> For more options, visit https://groups.google.com/d/optout. > > > > -- > > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > > 2. For STF training, visit KOER - > http://karnatakaeducation.org.in/KOER/en/index.php > > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > > --- > > You received this message because you are subscribed to the Google > Groups "Maths & Science STF" group. > > To unsubscribe from this group and stop receiving emails from it, send > an email to [email protected]. > > To post to this group, send email to [email protected]. > > Visit this group at https://groups.google.com/group/mathssciencestf. > > For more options, visit https://groups.google.com/d/optout. > > > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
