ಒಂದು ಚತುರ್ಭುಜದ ಕರ್ಣಗಳು ಸಮಾನುಪಾತದಲ್ಲಿ ವಿಭಾಗಿಸಿದರೆ,ಅದು ತ್ರಾಪಿಜ್ಯವಾಗಿರುತ್ತದೆ
ಎಂದು ಸಾಧಿಸಿ
On Apr 1, 2016 7:50 PM, "HR Hanumanth Hanumanth" <hr.hanuma...@gmail.com>
wrote:

> Superb sir
> It's 100%  true
> Excellent hats off uuuuuuuuuuuu sir
> On Apr 1, 2016 10:29 AM, "veeresh.arakeri" <veeresh.arak...@gmail.com>
> wrote:
>
>> ಶಿಕ್ಷಕನ ರೆಸ್ಯೂಮೆ
>>
>>
>> ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಒಂದು ವಿಚಿತ್ರ ಯೋಚನೆ. ಒಂದು ವೇಳೆ ನಾನೇನಾದರೂ
>> ನನ್ನ ಕೆಲಸವನ್ನು ಕಳೆದುಕೊಂಡರೆ ಬೇರೆ ಎಲ್ಲೆಲ್ಲಿ, ಯಾವ ಯಾವ ಕ್ಷೇತ್ರದಲ್ಲಿ ಕೆಲಸ
>> ಮಾಡಬಲ್ಲೆ? ಏನೇನು ಮಾಡಬಲ್ಲೆನೋ ಗೊತ್ತಿಲ್ಲ, ಆದರೆ ಎಲ್ಲ ಕ್ಷೇತ್ರದವರೂ ನನ್ನನ್ನು ಕರೆದು
>> ಕೆಲಸ ಕೊಡುವ ಅರ್ಹತೆಯನ್ನಂತೂ ಹೊಂದಿರುತ್ತೇನೆ! ಯಾಕೆಂದರೆ ನಾನು ಶಿಕ್ಷಕನಲ್ಲವೇ? ಅದರಲ್ಲೂ
>> ಖಾಸಗಿ ಶಾಲೆಯಲ್ಲಿರುವವನಲ್ಲವೇ?
>>
>> ಇಲ್ಲಿದೆ - ಶಿಕ್ಷಕನ ರೆಸ್ಯೂಮೆಯಲ್ಲಿರಬೇಕಾದ ಎಕ್ಸ್ಪೀರಿಯನ್ಸ್ ಸಮ್ಮರಿ.
>>
>> [ ಒಂದು ಡಿಸ್ಕ್ಲೇಯ್ಮರ್ರು: ಇಲ್ಲಿ ನಾನು ಎಲ್ಲೆಲ್ಲಿ ಶಿಕ್ಷಕ, ಮೇಷ್ಟ್ರು ಮುಂತಾದ
>> ಪದಗಳನ್ನು ಬಳಸಿದ್ದೇನೋ ಅಲ್ಲೆಲ್ಲವೂ ಶಿಕ್ಷಕಿ, ಅಥವಾ ಟೀಚರ್ ಎಂಬ ಪದವನ್ನೂ
>> ಬಳಸಿಕೊಳ್ಳಬಹುದು. ಲಿಂಗಭೇದವಿಲ್ಲ.]
>>
>> ತರಗತಿಯಲ್ಲಿ ಕಳ್ಳರನ್ನು, ಸುಳ್ಳರನ್ನು ಮೇಷ್ಟರಿಗಿಂತ ಸುಲಭವಾಗಿ ಯಾರು ತಾನೆ ಕಂಡು
>> ಹಿಡಿಯಲು ಸಾಧ್ಯ! ನಮಗೆ ಯಾವ ಮಂಪರು ಪರೀಕ್ಷೆಯ ಹಂಗೂ ಬೇಕಿಲ್ಲ ಪತ್ತೆ ಮಾಡಲು, ಸಿಕ್ಕಿ
>> ಬಿದ್ದ ಕಳ್ಳನನ್ನು ದೈಹಿಕವಾಗಿ ದಂಡಿಸದೆಯೇ ಪರಿವರ್ತನೆಯ ಪ್ರಾಮಾಣಿಕ ಪ್ರಯತ್ನ ಮಾಡಲು.
>> ಹಾಗಾಗಿ ಪೋಲೀಸ್ ಇಲಾಖೆಯು ಮೇಷ್ಟರಿಗಾಗಿ ಒಂದು ಸೀಟು ಕಾಯ್ದಿರಿಸಬೇಕು. ಅಲ್ಲದೆ
>> ಪರೀಕ್ಷೆಗಳಲ್ಲಿ ಮೇಲ್ವಿಚಾರಣೆ ಮಾಡುವುದೆಂದರೆ ಪೋಲೀಸ್ ಕೆಲಸವಲ್ಲದೆ ಮತ್ತಿನ್ನೇನು.  ಬರೀ
>> ಕ್ರೈಮ್ ಪೋಲೀಸಿನವರು ಮಾತ್ರವಲ್ಲ, ಟ್ರಾಫಿಕ್ ಇಲಾಖೆಯವರೂ ಸಹ ಮೀಸಲಾತಿಯಿಡಬೇಕು. ಏಕೆಂದರೆ,
>> ನಿತ್ಯವೂ ಶಾಲೆಯಲ್ಲಿ ಮೇಷ್ಟರುಗಳು ಟ್ರಾಫಿಕ್ ನಿರ್ವಹಣೆ ಮಾಡುತ್ತಲೇ ಇರುತ್ತಾರೆ.
>> ವಿದ್ಯಾರ್ಥಿಗಳು ಸಾಲಾಗಿ ನಡೆದುಕೊಂಡು ಪ್ರಾರ್ಥನೆಯ ಮಂದಿರದಿಂದ ತರಗತಿಗಳಿಗೆ ಹೋಗುವ ಹೊಣೆ,
>> ಅಥವಾ ತರಗತಿಗಳಿಂದ ಮೈದಾನಕ್ಕೆ ಹೋಗುವಾಗ ಶಿಸ್ತಿನಿಂದ ಒಬ್ಬರ ಹಿಂದೊಬ್ಬರು ಸಾಲನ್ನು
>> ಮುರಿಯದೇ ಹೋಗುವ ಹೊಣೆಯು ಮೇಷ್ಟರದಲ್ಲದೆ ಇನ್ಯಾರದ್ದು! ಯಾರಾದರೂ ಸಾಲಿನ ನಿಯಮವನ್ನು
>> ಮುರಿದರೆ ತಕ್ಷಣವೇ ಅವರನ್ನು ಬದಿಗೆ ಸರಿಸಿ, ಐಡಿ ಕಾರ್ಡನ್ನು ಪರಿಶೀಲಿಸಿ, ನೂರೆಂಟು
>> ಪ್ರಶ್ನೆ ಕೇಳಿ, ನಂತರ ಸಾಲಿನ ಕೊನೆಯಲ್ಲಿ ನಡೆದು ಹೋಗುವ ಶಿಕ್ಷೆ ವಿಧಿಸುವ ಮೇಷ್ಟ್ರು
>> ಟ್ರಾಫಿಕ್ ಪೋಲೀಸ್ ಆಗಲು ಅರ್ಹರಷ್ಟೆ?
>>
>> ಮೈದಾನಕ್ಕೆ ಸಾಲಾಗಿ ಹೋಗುವ ಮಕ್ಕಳನ್ನು ಕಳುಹಿಸುವ ಟ್ರಾಫಿಕ್ ಪೋಲೀಸ್ ಮೇಷ್ಟರುಗಳು ಕೆಲ
>> ಕ್ಷಣಗಳ ನಂತರವೇ ವೈದ್ಯರಾಗಿ ಬದಲಾಗುವುದೂ ಉಂಟು. ನಡೆದು ಹೋಗುವ ಮಕ್ಕಳು ಇದ್ದಕ್ಕಿದ್ದ
>> ಹಾಗೆ ಒಬ್ಬರನ್ನೊಬ್ಬರು ತಳ್ಳಿಕೊಂಡು ಬೀಳುವುದು ಸಹಜ. ಬಿದ್ದು ಮೈ ಕೈ ಗಾಯ ಮಾಡಿಕೊಂಡು ರಂಪ
>> ರಾದ್ಧಾಂತ ಮಾಡುವುದಂತೂ ಶಾಲೆಯಲ್ಲಿ ಸಾಮಾನ್ಯ ದೃಶ್ಯ. ಈ ಮಕ್ಕಳಿಗೆ ಚಿಕಿತ್ಸೆ ಕೊಡುವ
>> ಮೇಷ್ಟ್ರು ಬಿಳಿ ಕೋಟು ಧರಿಸಿರುವುದಿಲ್ಲ ಅಷ್ಟೆ. ಕೇವಲ general physician ಅಷ್ಟೇ ಅಲ್ಲ,
>> ಮಕ್ಕಳ ಮನಸ್ಸಿನ ಆಳವನ್ನು ಹೊಕ್ಕು, ಅವರ ವಯಕ್ತಿಕ ಬದುಕಿನ ಸಂಕಷ್ಟಗಳನ್ನು ಗುಣಪಡಿಸಲು
>> ಪ್ರಯತ್ನ ಪಡಲು ಬೇಕಾದ ಎಲ್ಲ ರೀತಿಯ counseling ಮಾಡುವ ಮನಃಶಾಸ್ತ್ರಜ್ಞನೂ ಆಗಿರುತ್ತಾನೆ
>> (ಆಗಿರಬೇಕು). ತಾನು ಯಾವ ಬಟ್ಟೆ ಧರಿಸಿದರೆ ಮಕ್ಕಳಿಗೆ ಇಷ್ಟವಾಗುತ್ತೆ, ಹೇಗೆ ಮಾತನಾಡಿದರೆ
>> ಮಕ್ಕಳು ಸಂತೋಷ ಪಡುತ್ತಾರೆ ಎಂಬ ಸೂಕ್ಷ್ಮಗಳನ್ನೆಲ್ಲ ಅರಿತುಕೊಂಡಿರುವವನು
>> ಮನಃಶಾಸ್ತ್ರಜ್ಞನಲ್ಲದೆ ಇನ್ನೇನು! ಮಕ್ಕಳಿಗಿಂತ ಹೆಚ್ಚಾಗಿ ಪೋಷಕರಿಗೆ counseling ಮಾಡುವ
>> ಮೇಷ್ಟ್ರು ಯಾವ ಸಿಗ್ಮಂಡ್ ಫ್ರಾಯ್ಡಿಗೂ ಕಡಿಮೆಯಿಲ್ಲ.
>>
>> ಖಾಸಗಿ ಶಾಲೆಯೆಂದು ಆಗಲೇ ಹೇಳಿದೆನಷ್ಟೆ? ಆಗಿಂದಾಗ್ಗೆ, ವಿಜ್ಞಾನ, ಸಮಾಜ ಶಾಸ್ತ್ರ,
>> ಗಣಿತ, ಕಂಪ್ಯೂಟರು, ಕಲೆ, ಇತ್ಯಾದಿ ಪ್ರದರ್ಶನಗಳು ನಡೆಯುತ್ತಲೇ ಇರುತ್ತೆ. ಪ್ರದರ್ಶನಗಳಿಗೆ
>> ತಕ್ಕ ಹಾಗೆ ಬೇಕಾದ ಮಾಡೆಲ್‍ಗಳನ್ನು ತಯಾರಿಸುವುದೂ ಮೇಷ್ಟ್ರುಗಳೇ. ಆರ್ಕಿಟೆಕ್ಟು,
>> ಕಂಟ್ರಾಕ್ಟರ್ರು, ಕೆಲಸಗಾರ – ಮೂರೂ ಕೆಲಸವನ್ನು ಒಬ್ಬನೇ ನಿರ್ವಹಿಸುತ್ತಾನೆ. ಜೊತೆಗೆ
>> ಬೇಕಾದ ಕಲಾವಿನ್ಯಾಸವನ್ನೂ ಮಾಡುತ್ತಾನೆ.  ಪ್ರದರ್ಶನಕ್ಕೆ ಅಗತ್ಯವಿರುವ ಯೋಜನೆ, ನಿರ್ವಹಣೆ,
>> ಎಲ್ಲವನ್ನೂ ಮಾಡಬಲ್ಲನು.
>>
>> ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಂತೂ ನಿರೂಪಣೆ, ಪ್ರಾರ್ಥನೆಯ ಹಾಡು, ನಾಟಕ, ನೃತ್ಯ, ಯೋಗ,
>> ಇವೆಲ್ಲವೂ ನಿರ್ವಹಿಸುವುದರಿಂದ ಕಲಾವಿದನ ಎಲ್ಲ ಲಕ್ಷಣಗಳೂ ಮೇಷ್ಟರಲ್ಲಿ ಇರದೇ ಇರಲು
>> ಸಾಧ್ಯವೇ ಇಲ್ಲ. ಕಲಾವಿದ ಮಾತ್ರವಲ್ಲ, ಇಂಥ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕಗಳ ಸೆಟ್ಟಿಂಗು,
>> ಲೈಟು ಸೆಟ್ಟಿಂಗು, ಫೋಟೋ ತೆಗೆಯುವುದು, ವೇದಿಕೆಯ ವಿನ್ಯಾಸ ಮುಂತಾದವುಗಳಲ್ಲಿಯೂ ಮೇಷ್ಟರದು
>> ಎತ್ತಿದ ಕೈ. ಸಿನಿಮಾದವರು ಕೆಲಸ ಕೊಡುವುದೊಂದು ಬಾಕಿ.
>>
>> ಶಾಲೆಯ ಬಸ್ಸಿನಲ್ಲಿ ಆಗಾಗ್ಗೆ ಪ್ರಯಾಣ ಮಾಡಬೇಕಾಗುತ್ತಿರುತ್ತೆ. ಡ್ರೈವಿಂಗ್ ಕೆಲಸವೊಂದು
>> ಇರುವುದಿಲ್ಲ. ಆದರೆ ಕಂಡಕ್ಟರ್ ಕೆಲಸ ಗ್ಯಾರೆಂಟಿ. ಯಾರು ಯಾರು ಎಲ್ಲೆಲ್ಲಿ ಹತ್ತುತ್ತಾರೆ,
>> ಎಲ್ಲೆಲ್ಲಿ ಇಳಿದುಕೊಳ್ಳುತ್ತಾರೆಂಬ ಅರಿವು ಮೇಷ್ಟರುಗಳಿಗಿರಬೇಕಲ್ಲವೇ? ಕ್ರೀಡೆಗಳಲ್ಲಂತೂ –
>> ಇಂಥದ್ದು ಇಲ್ಲವೆಂದಿಲ್ಲ. ಲಗೋರಿಯಿಂದ ಹಿಡಿದು ಫುಟ್‍ಬಾಲ್‍ವರೆಗೆ, ತಾವೇ ರಚಿಸುವ ಆಟಗಳಿಂದ
>> ಹಿಡಿದು ಕಂಪ್ಯೂಟರ್ ಗೇಮ್‍ಗಳವರೆಗೆ ಎಲ್ಲವೂ ಗೊತ್ತು. ಅದಲ್ಲದೆ ಮಾರ್ಚ್‍ಪಾಸ್ಟು,
>> ಡ್ರಿಲ್ಲು, ಬ್ಯಾಂಡು ಇವೆಲ್ಲವೂ ಮಿಲಿಟರಿಯ ತರಬೇತಿಗಳು. ಆಯಾ ಇಲಾಖೆಯವರು ಈ ಪ್ಯಾರಾದ ಕಡೆ
>> ಗಮನಹರಿಸತಕ್ಕದ್ದು.
>>
>> ಪ್ರವಾಸವನ್ನು ಆಯೋಜಿಸುವುದು ಸುಲಭದ ಕೆಲಸವೇನಲ್ಲ. ಎಲ್ಲಿಗೆ ಯಾವ ಕಾಲದಲ್ಲಿ ಹೋಗಬೇಕು,
>> ಯಾವ ಕಾಲದಲ್ಲಿ ಹೋಗಬಾರದು ಎಂಬ ಭೌಗೋಳಿಕ ಅರಿವಿರಬೇಕು. ಊಟ ತಿಂಡಿಗಳನ್ನು ಹೇಗೆ
>> ಪೂರೈಸಬೇಕೆಂಬ ಅಡುಗೆ ಕಂಟ್ರಾಕ್ಟರನ ತಿಳಿವಳಿಕೆಯಿರಬೇಕು. ಎಲ್ಲೆಲ್ಲಿ ಹೋಗುತ್ತೇವೋ ಆ
>> ಜಾಗಗಳ, ಅಲ್ಲಿ ಭೇಟಿಯಾಗುವ ಜನರ ಹಿಸ್ಟರಿ, ಜಿಯಾಲಜಿ, ಸೈಕಾಲಜಿ, ಬಯಾಲಜಿ, ಅಡುಗೋಲಜ್ಜಿ
>> ಕತೆಗಳೆಲ್ಲವೂ ಗೊತ್ತಿರಬೇಕು. ಗೊತ್ತಿರದಿದ್ದರೆ ಹೊಸ ಕತೆ ಕಟ್ಟುವ ಸಾಮರ್ಥ್ಯವಿರಬೇಕು.
>> ರಾತ್ರಿ ಎಲ್ಲಿ ಉಳಿದುಕೊಂಡರೆ ಕ್ಷೇಮವೆಂಬುದು ಗೊತ್ತಿರಬೇಕು, ಅದಕ್ಕಾಗಿ ವ್ಯವಸ್ಥೆ
>> ಮಾಡಬೇಕು. ಇವೆಲ್ಲವನ್ನೂ ಶಿಕ್ಷಕನು ಸಲೀಸಾಗಿ ಮಾಡಿಯಾನು.
>>
>> ಹಣಕಾಸು ವಿಚಾರದಲ್ಲೂ ಏನು ಕಡಿಮೆಯಿಲ್ಲ. ಸಂಪಾದನೆಯಲ್ಲಿ ಕಡಿಮೆಯಿರಬಹುದು, ಆದರೆ
>> ಲಕ್ಷಗಟ್ಟಲೆ ಹಣದ ಎಣಿಕೆ, ಲೆಕ್ಕಾಚಾರ ಮುಂತಾದ ಗುಮಾಸ್ತೆ ಕೆಲಸವು ಶಾಲೆಯ ಆರಂಭದ ವೇಳೆ
>> ನಡೆಯುವ ಅಡ್ಮಿಷನ್ ಪ್ರಕ್ರಿಯೆಯಲ್ಲಿ ಮೇಷ್ಟರುಗಳಲ್ಲದೆ ಇನ್ಯಾರು ಮಾಡುತ್ತಾರೆ? ಎಷ್ಟು
>> ಹಣಕ್ಕೆ ರಸೀತಿ ಕೊಡಬೇಕು, ಎಷ್ಟಕ್ಕೆ ಕೊಡಬಾರದು; ರಾಮನ ಲೆಕ್ಕ ಯಾವುದು, ಕೃಷ್ಣನದು
>> ಯಾವುದು; ಸಮವಸ್ತ್ರ, ಶೂ, ಪುಸ್ತಕ ಮುಂತಾದವುಗಳನ್ನು ಮಾರುವುದು ಹೇಗೆ; ಹಾಗೆ ಮಾರಿದರಲ್ಲಿ
>> ಒಂದು ಪೈಸೆಯೂ ತನ್ನದಲ್ಲವೆಂಬಂತೆ ಲೆಕ್ಕವೊಪ್ಪಿಸಿ ತೆಪ್ಪಗಿರುವುದು ಹೇಗೆ – ಎಂಬುದು
>> ಗೊತ್ತಿರುತ್ತೆ.
>>
>> ತಮ್ಮ ತಮ್ಮ ತರಗತಿಗಳನ್ನು ಚೊಕ್ಕವಾಗಿಟ್ಟುಕೊಳ್ಳುವ ಸಲುವಾಗಿ ಆಯಾಗಳಿಂದ ಕೆಲವು ಸಲ ಕೆಲಸ
>> ಮಾಡಿಸಿಕೊಂಡರೆ, ಮತ್ತೆ ಕೆಲವು ಸಲ ತಾವೇ ಮಾಡಿಕೊಳ್ಳಬೇಕಾಗುತ್ತೆ. ಸಣ್ಣ ಪುಟ್ಟ
>> ಎಲೆಕ್ಟ್ರಿಕಲ್ ರಿಪೇರಿ, ಮರಗೆಲಸದ ರಿಪೇರಿ, ಒಂದೇ ಬದಿಯಲ್ಲಿ ಬೀಗವಿರುವುದರಿಂದ ಆಗಾಗ್ಗೆ
>> ಮಕ್ಕಳು ಬಾಗಿಲು ಹಾಕಿಕೊಂಡು ಒಳಗೆ ಸಿಕ್ಕಿಕೊಂಡಾಗ ಬೀಗ ಮುರಿಯುವ ಅಥವಾ ಬೀಗ ರಿಪೇರಿ
>> ಮಾಡುವ, ಬೆಂಕಿ ಸಂಭವಿಸಿದರೆ ಅಗ್ನಿಶಾಮಕವನ್ನು ಬಳಸಿ ಬೆಂಕಿಯನ್ನು ನಂದಿಸುವ – ಇಂಥ ಎಲ್ಲ
>> ಕೆಲಸವೂ ತಾನಾಗಿಯೇ ಬರುತ್ತೆ ಶಿಕ್ಷಕನಾದವನಿಗೆ.
>>
>> ಶಾಲೆಯ ಪತ್ರಿಕೆಯನ್ನು ಹೇಗೆ ಮರೆಯುವುದು? ಪತ್ರಿಕೆಯೆಂದರೆ ಅದರಲ್ಲಿ ಲೇಖನಗಳನ್ನು
>> ಬರೆಯಬೇಕು, ಬರೆಸಬೇಕು, ಮಕ್ಕಳು ಬರೆದು ತಂದುಕೊಟ್ಟಿದ್ದನ್ನು ಸಂಪಾದಿಸಬೇಕು,
>> ಪತ್ರಿಕೆಗೊಂದು ಮುಖಪುಟ ವಿನ್ಯಾಸ ಮಾಡಬೇಕು, ಒಳಗೆ ಪುಟಗಳ ವಿನ್ಯಾಸವನ್ನೂ ಮಾಡಬೇಕು.
>> ಪತ್ರಿಕೋದ್ಯಮದಲ್ಲಿ ಈ ಪ್ರತಿಯೊಂದಕ್ಕೂ ಬೇರೆ ಬೇರೆಯವರಿರುತ್ತಾರೆಂದು ನಾನು ಕೇಳಿ ಬಲ್ಲೆ.
>> ಇಲ್ಲಿ ಮೇಷ್ಟ್ರೇ ಎಲ್ಲ!
>>
>> ರಾವಣನ ದಶಶಿರವದೇಂ? ನರನು ಶತಶಿರನು!
>> ಸಾವಿರಾಸ್ಯಗಳನೊಂದರೊಳಣಗಿಸಿಹನು!
>> ಹಾವಾಗಿ, ಹುಲಿಯಾಗಿ, ಕಪ್ಪೆ-ಹುಲ್ಲೆಯುಮಾಗಿ
>> ಭೂವ್ಯೋಮಕತಿಶಯನು! - ಮಂಕುತಿಮ್ಮ.
>>
>> ಇದನ್ನು ಡಿ.ವಿ.ಜಿ.ಯವರು ಶಿಕ್ಷಕರಿಗೆಂದೇ ಬರೆದರೇನೋ ಎನ್ನಿಸುತ್ತೆ. ನರ ಎಂಬ ಪದವನ್ನು
>> ಬಳಸಿಬಿಟ್ಟಿದ್ದಾರೆ. ಛಂದಸ್ಸಿಗೆ ಹೊಂದಿಕೊಳ್ಳುವಂತಿದ್ದರೆ ಶಿಕ್ಷಕ ಎಂದೇ
>> ಬರೆಯುತ್ತಿದ್ದರೇನೋ.
>>
>> ನನ್ನ ರೆಸ್ಯೂಮೆಗೆ ನನ್ನೀ ಶತಶಿರದ ಅರ್ಹತೆಯನ್ನು ಸೇರಿಸಿಕೊಳ್ಳಬೇಕೆಂಬ ಬಯಕೆಯು ಹೆಚ್ಚು
>> ಕಾಲ ಉಳಿಯುವಂಥದ್ದಲ್ಲ.  ಮೇಲೆ ಹೇಳಿದ ಯಾವುದಾದರೂ ಇಲಾಖೆಯವರು ನನಗೆ ಕರೆದು ಕೆಲಸ
>> ಕೊಟ್ಟರೂ, ಅಲ್ಲಿ ನನಗೆ ತರಗತಿಯಲ್ಲಿ ಪಾಠ ಮಾಡುವ ಭಾಗ್ಯವಿರುವುದೇ? ಮಕ್ಕಳೊಡನೆ ಆಟವಾಡುವ
>> ಅವಕಾಶವಿರುವುದೇ? ಊಟದ ವಿರಾಮದ ವೇಳೆ ಬಿಗಿಯಾಗಿರುವ ಡಬ್ಬಿಯ ಮುಚ್ಚಳವನ್ನು ತೆಗೆದುಕೊಡುವ,
>> ಹಾಗೆ ತೆಗೆದುಕೊಟ್ಟು “ನಮ್ಮ ಮೇಷ್ಟ್ರು ಜಗತ್ತಿನ ಅತ್ಯಂತ ಶಕ್ತಿಶಾಲಿ” ಎಂಬ ಬಿರುದನ್ನು
>> ಪಡೆದುಕೊಳ್ಳಲಾಗುವುದೇ? ದಿನಕ್ಕೆ ಮೂರು ನಾಲ್ಕು ಜನರ ಹುಟ್ಟುಹಬ್ಬವನ್ನು ಆಚರಿಸಲು
>> ಸಾಧ್ಯವೇ? ಅಥವಾ ನನ್ನ ಹುಟ್ಟುಹಬ್ಬಕ್ಕೆ ಸಹಸ್ರಾರು ಪ್ರಾಮಾಣಿಕ, ಮನಃಪೂರ್ವಕ, ತಾವೇ ತಮ್ಮ
>> ಕೈಯ್ಯಾರೆ ಕಾಗದಗಳಿಂದ ಮಾಡಿದ ಗ್ರೀಟಿಂಗ್ ಕಾರ್ಡುಗಳನ್ನು ಸಂಪಾದಿಸಲು ಆದೀತೆ? ಯಾರು ಏನೇ
>> ಹೇಳಲಿ, ನಾನು (ಶಿಕ್ಷಕ) ಹೇಳುವುದೇ ಪರಮ ಸತ್ಯ ಎಂದು ಸಂಪೂರ್ಣ ನಂಬಿಕೆಯನ್ನು
>> ಪಡೆದುಕೊಳ್ಳಲು ಬೇರೆಲ್ಲಿ ಸಾಧ್ಯ?
>>
>> ಈ ಶತಶಿರದ ಅರ್ಹತೆಯೂ ಅನುಭವವೂ ಹೀಗೆ ಇನ್ನೂ ಬೆಳೆಯುತ್ತಿರಲಿ – ಬೇರೆ ಕಡೆ ಹೋಗಲೆಂದಲ್ಲ.
>> ಇನ್ನೂ ಉತ್ತಮ ಮೇಷ್ಟರಾಗಲು ಎಂದು ನನಗೆ ನನ್ನದೇ ಹಾರೈಕೆ. ಸ್ವಧರ್ಮದಲ್ಲಿ ನಿಧನವೂ
>> ಶ್ರೇಯಸ್ಸಂತೆ..
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation,    visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send an email to mathssciencestf@googlegroups.com.
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to