Super article sir

Veerendra Thotagar
GHS Kadabagere
Harapanahalli Tq
Davanagere Dist
9986984995

On May 6, 2016 8:19 PM, "DORA CARMINE D'SILVA" <[email protected]>
wrote:

> Vry nice article sir...
> On May 6, 2016 7:37 AM, "HAREESHKUMAR K Agasanapura" <
> [email protected]> wrote:
>
>> http://m.prajavani.net/article/2016_05_05/406826
>>
>> *ಸ್ಟಾಕ್‌ಹೋಮ್ ಗೆ ಬೇಕಂತೆ ನೀರಿನ ಹೊಸ ಐಡಿಯಾ*
>>
>> 5 May, 2016
>>
>> ನಾಗೇಶ್ ಹೆಗಡೆ
>>
>>
>> <https://www.facebook.com/sharer/sharer.php?u=http%3A%2F%2Fgoo.gl%2FNPv1pP>
>> <https://twitter.com/intent/tweet?text=%E0%B2%B8%E0%B3%8D%E0%B2%9F%E0%B2%BE%E0%B2%95%E0%B3%8D%E2%80%8C%E0%B2%B9%E0%B3%8B%E0%B2%AE%E0%B3%8D+%E0%B2%97%E0%B3%86+%E0%B2%AC%E0%B3%87%E0%B2%95%E0%B2%82%E0%B2%A4%E0%B3%86+%E0%B2%A8%E0%B3%80%E0%B2%B0%E0%B2%BF%E0%B2%A8+%E0%B2%B9%E0%B3%8A%E0%B2%B8+%E0%B2%90%E0%B2%A1%E0%B2%BF%E0%B2%AF%E0%B2%BE+++http%3A%2F%2Fgoo.gl%2FNPv1pP>
>> <https://plus.google.com/share?url=http%3A%2F%2Fgoo.gl%2FNPv1pP>
>> <http://www.pinterest.com/pin/find/?url=http%3A%2F%2Fgoo.gl%2FNPv1pP>
>> <http://www.linkedin.com/shareArticle?mini=true&title=%E0%B2%B8%E0%B3%8D%E0%B2%9F%E0%B2%BE%E0%B2%95%E0%B3%8D%E2%80%8C%E0%B2%B9%E0%B3%8B%E0%B2%AE%E0%B3%8D+%E0%B2%97%E0%B3%86+%E0%B2%AC%E0%B3%87%E0%B2%95%E0%B2%82%E0%B2%A4%E0%B3%86+%E0%B2%A8%E0%B3%80%E0%B2%B0%E0%B2%BF%E0%B2%A8+%E0%B2%B9%E0%B3%8A%E0%B2%B8+%E0%B2%90%E0%B2%A1%E0%B2%BF%E0%B2%AF%E0%B2%BE+++&url=http%3A%2F%2Fgoo.gl%2FNPv1pP>
>>
>> ‘ಅಜ್ಜ-ಅಜ್ಜೀನ್ನ ನೋಡೋಕೆ ಅಂತ ಇಂಡಿಯಾಕ್ಕೆ ಹೋಗಿದ್ದೆ. ಅಲ್ಲಿನ ನೀರಿನ ಸಮಸ್ಯೆ ನೋಡಿ
>> ತುಂಬಾ ಬೇಜಾರಾಯ್ತು. ನೀರಿನ ಶುದ್ಧೀಕರಣದ ಬಗ್ಗೆ ಏನಾದರೂ ಹೊಸ ಸಂಶೋಧನೆ ಮಾಡಬೇಕು ಅಂತ
>> ಆಗಲೇ ನಿರ್ಧಾರ ಮಾಡಿದೆ...’
>>
>> -ಕಳೆದ ವರ್ಷ, 2015ರ ‘ಸ್ಟಾಕ್‌ಹೋಮ್ ಜೂನಿಯರ್ ವಾಟರ್ ಪ್ರೈಝ್’ ಎಂಬ ಪ್ರತಿಷ್ಠಿತ
>> ಪ್ರಶಸ್ತಿಯನ್ನು ಪಡೆದ ಅಮೆರಿಕದ ಹದಿ ಹುಡುಗ ಪೆರ್ರಿ ಅಳಗಪ್ಪನ್ ಹೇಳಿದ ಮಾತು ಇದು.
>>
>> ಕುತೂಹಲದ ಸಂಗತಿ ಏನೆಂದರೆ, ಇದೇ ಅರ್ಥದ ಮಾತನ್ನು ಒಂದು ವರ್ಷ ಮುಂಚೆ, 2014ರಲ್ಲಿ
>> ದೀಪಿಕಾ ಕುರುಪ್ ಎಂಬ ಅಮೆರಿಕದ ಹದಿಹುಡುಗಿಯೂ ಹೇಳಿದ್ದಳು. ಅವಳಿಗೂ ಚೆನ್ನೈಯಲ್ಲಿ ಅಜ್ಜನ
>> ಮನೆಯ ಆಸುಪಾಸಿನ ಕೊಳಕು ನೀರಿನ ಪರಿಸರವೇ ಹೊಸ ಸಂಶೋಧನೆಗೆ ಪ್ರೇರಣೆ ನೀಡಿತು.
>>
>> ನೀರಿನ ಶುದ್ಧೀಕರಣಕ್ಕೆ ಅವಳು ರೂಪಿಸಿದ ಸಾಧನಕ್ಕೆ ಆ ವರ್ಷ ಅಮೆರಿಕದ ‘ಸ್ಟಾಕ್‌ಹೋಮ್
>> ಜೂನಿಯರ್ ವಾಟರ್ ಪ್ರೈಝ್’ ಲಭಿಸಿತ್ತು. ಅಂದಹಾಗೆ, ದೊಡ್ಡವರಿಗೆ ನೀಡುವ ಸ್ಟಾಕ್‌ಹೋಮ್
>> ವಾಟರ್ ಪ್ರೈಝ್ (ಅದಕ್ಕೆ ‘ನೀರಿನ ನೊಬೆಲ್’ ಎಂತಲೇ ಕರೆಯುತ್ತಾರೆ) ಕೂಡ ಭಾರತದ ರಾಜೇಂದ್ರ
>> ಸಿಂಗ್ ಅವರಿಗೆ ಕಳೆದ ವರ್ಷ ಲಭಿಸಿದೆ.
>>
>> ರಾಜೇಂದ್ರ ಅವರೇನೂ ಅಜ್ಜ-ಅಜ್ಜಿಯ ಮನೆಗೆ ಹೋಗಿರಲಿಲ್ಲ. ಆದರೆ ನೀರು ಅವರನ್ನು ಹೇಗೆ
>> ತನ್ನತ್ತ ಸೆಳೆದುಕೊಂಡಿತು ಎಂಬುದು ಕುತೂಹಲಕಾರಿ ಕತೆಯೇ ಆಗಿದೆ. ಈ ವಾರ ಈ ಮೂವರ ಸುತ್ತ
>> ತುಸು ಗಿರಕಿ ಹೊಡೆಯೋಣ.
>>
>> ನೀರನ್ನು ನಾವು ಜೀವಜಲ ಎನ್ನುತ್ತೇವಾದರೂ, ಅದು ಅಶುದ್ಧವಾಗಿದ್ದರೆ ನಮ್ಮ ಬದುಕಿಗೆ ನಂಬರ್
>> 1 ಖಳನಾಯಕ ಆಗುತ್ತದೆ. ನೀರಿನಿಂದ ಹಬ್ಬುವ ರೋಗರುಜಿನಗಳೇ ಹಿಂದೆಲ್ಲ ಜಗತ್ತಿನ
>> ಜನಸಂಖ್ಯೆಯನ್ನು ನಿಯಂತ್ರಣದಲ್ಲಿ ಇಟ್ಟಿರುತ್ತಿದ್ದವು.
>>
>> ಕಳೆದ ನೂರು ವರ್ಷಗಳಲ್ಲಿ ವೈದ್ಯಕೀಯ ಕ್ರಾಂತಿಯಿಂದಾಗಿಯೇ ಮನುಷ್ಯನ ಜೀವಿತಾವಧಿ
>> ಹೆಚ್ಚಿತೆಂದು ಹೇಳುತ್ತಾರಾದರೂ ಅಸಲೀ ವಿಷಯ ಏನೆಂದರೆ ನಲ್ಲಿಯ ಮೂಲಕ ಶುದ್ಧ ನೀರಿನ ಪೂರೈಕೆ
>> ವ್ಯವಸ್ಥೆ ಜಾರಿಗೆ ಬಂದಿದ್ದೇ ಕೋಟ್ಯಂತರ ಮಕ್ಕಳ ಜೀವ ಉಳಿಸಿದೆ.
>>
>> ಅವರೆಲ್ಲ ದೊಡ್ಡವರಾಗಿ ವಂಶೋದ್ಧಾರಕರಾಗಲು ನೀರೇ ನೆರವಿಗೆ ಬಂದಿದೆ. ಆದರೆ ಈಗಲೂ
>> ಹಿಂದುಳಿದ ಪ್ರಜೆಗಳಿಗೆ ಶುದ್ಧ ನೀರು ಸಿಗುತ್ತಿಲ್ಲ. ಕೊಳಕು ನೀರನ್ನು ಶುದ್ಧ ಮಾಡಬೇಕೆಂದರೆ
>> ಕೋಟಿಗಟ್ಟಲೆ ಬಂಡವಾಳ ಬೇಕು; ವಿದ್ಯುತ್ ವ್ಯವಸ್ಥೆ ಬೇಕು. ಆಡಳಿತ ಯಂತ್ರವೂ ಸುವ್ಯವಸ್ಥಿತ
>> ಇರಬೇಕು. ಎಲ್ಲಕ್ಕಿಂತ ಮುಖ್ಯ ಏನೆಂದರೆ ಶುದ್ಧ ಮಾಡಲೆಂದು ಒಂದಷ್ಟು ನೀರು ಇರಬೇಕು.
>>
>> ಅಮೆರಿಕದಲ್ಲಿ ಜನಿಸಿದ ಮಲೆಯಾಳಿ ಹುಡುಗಿ ದೀಪಿಕಾ ಕುರುಪ್ 2012ರಲ್ಲಿ ರಜೆ ಕಳೆಯಲು
>> ಬಂದಾಗ ಇಲ್ಲಿನ ಕೊಳೆಗೇರಿಗಳ ನೀರಿನ ಅಧ್ವಾನವನ್ನು ನೋಡಿ ಹೌಹಾರಿದ್ದಳು. ಮರಳಿ
>> ನ್ಯೂಹ್ಯಾಂಪ್‌ಶೈರ್‌ಗೆ ಹೋಗಿ ತನ್ನ ಹೈಸ್ಕೂಲ್‌ನ ಸಂಶೋಧನಾ ಪ್ರಾಜೆಕ್ಟ್‌ಗೆ ನೀರಿನ
>> ಶುದ್ಧೀಕರಣವನ್ನೇ ಆಯ್ದುಕೊಂಡಳು.
>>
>> ಬಿಸಿಲಿನ ಶಕ್ತಿಯಿಂದಲೇ ನೀರಲ್ಲಿರುವ ಸೂಕ್ಷ್ಮ ಏಕಾಣು ಜೀವಿಗಳನ್ನೂ ಕೊಳಕು
>> ದ್ರವ್ಯಗಳನ್ನೂ ಧ್ವಂಸ ಮಾಡಬಲ್ಲ ಫಿಲ್ಟರನ್ನು ರೂಪಿಸಿದಳು. ಬಹುರಾಷ್ಟ್ರೀಯ ಕಂಪನಿಗಳ
>> ವಿಶ್ವಮಾನ್ಯ ಫಿಲ್ಟರ್‌ಗಳಿಗಿಂತ ಇದು ಹೆಚ್ಚಿನ ದಕ್ಷತೆಯ ಹಾಗೂ ಅಗ್ಗದ ಸಾಧನ; ಅಷ್ಟೇ ಅಲ್ಲ,
>> ಯಾವುದೇ ಬಗೆಯ ಕೆಮಿಕಲ್ ವಸ್ತುಗಳನ್ನು ನೀರಿಗೆ ಸೇರಿಸಬೇಕಾದ ಅಗತ್ಯ ಇಲ್ಲ.
>>
>> ಅಮೆರಿಕದಲ್ಲಿ ಪಿಯುಸಿ ಸ್ತರದ ವಿದ್ಯಾರ್ಥಿಗಳಿಗಾಗಿ ನಡೆಸುವ ರಾಷ್ಟ್ರಮಟ್ಟದ ‘ಯಂಗ್
>> ಸೈಂಟಿಸ್ಟ್’ ಸ್ಪರ್ಧೆಯ 25 ಸಾವಿರ ಡಾಲರ್‌ಗಳ ಮೊದಲ ಸ್ಥಾನವನ್ನು ದೀಪಿಕಾ ಪಡೆದಳು.
>>
>> ಸ್ಟಾಕ್‌ಹೋಮ್ ಜೂನಿಯರ್ ಜಲ ಪ್ರಶಸ್ತಿಗಾಗಿ ರಾಷ್ಟ್ರಮಟ್ಟದಲ್ಲಿ ಮೀಸಲಿರುವ 10 ಸಾವಿರ
>> ಡಾಲರ್ ಬಹುಮಾನ ಪಡೆದಳು. ನಂತರದ ಎರಡು ವರ್ಷಗಳಲ್ಲಿ ಇದೇ ಫಿಲ್ಟರನ್ನು ಇನ್ನಷ್ಟು ಸುಧಾರಿಸಿ
>> ಶ್ವೇತಭವನದ ಸನ್ಮಾನ, ನ್ಯಾಷನಲ್ ಜಿಯಾಗ್ರಫಿಕ್‌ನ ‘ಗೂಗಲ್ ಸೈನ್ಸ್ ಫೇರ್’ ಪ್ರಶಸ್ತಿ
>> ಪಡೆದದ್ದೂ ಅಲ್ಲದೆ, ಫೋರ್ಬ್ಸ್‌ನ ‘30ರೊಳಗಿನ 30’ ಅಗ್ರಮಾನ್ಯ ಸಂಶೋಧಕರ ಪಟ್ಟಿಯಲ್ಲೂ
>> ಸೇರ್ಪಡೆಯಾದಳು.
>>
>> ಪೆರ್ರಿ ಅಳಗಪ್ಪನ್ ಕತೆ ಇದಕ್ಕಿಂತ ತುಸು ಭಿನ್ನವಾದುದು. ಅಮೆರಿಕದ ಟೆಕ್ಸಾಸ್‌ನಲ್ಲಿ
>> ಓದುತ್ತಿರುವ ಈ ಹುಡುಗ ಕೂಡ ಅಜ್ಜನ ಮನೆಗೆ ಬಂದಾಗ ನಗರದಂಚಿನ ಕೊಳಕು ಪರಿಸರವನ್ನು ನೋಡಿದ್ದ.
>> ಕೊಳೆಗೇರಿಗಳಲ್ಲಿ ನೀರಿನ ಗುಣಮಟ್ಟ ಅವನನ್ನು ಕಂಗೆಡಿಸಿತ್ತು. ಅಲ್ಲೆಲ್ಲ ಗುಜರಿ
>> ವಸ್ತುಗಳಿಂದ ಇಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಬೇರ್ಪಡಿಸುವ ಕೆಲಸ ನಡೆಯುತ್ತಿತ್ತು.
>>
>> ನಮ್ಮದಷ್ಟೇ ಅಲ್ಲ, ಜಗತ್ತಿನ ನಾನಾ ದೇಶಗಳಲ್ಲಿ ಕೆಟ್ಟು ಕೆರ ಹಿಡಿದ ಟಿವಿ, ಕಂಪ್ಯೂಟರ್,
>> ಮೊಬೈಲ್‌ಗಳೆಲ್ಲ ನಜ್ಜುಗುಜ್ಜಾಗಿ ಹಡಗು ಏರಿ ಚೀನಾಕ್ಕೆ ಇಲ್ಲವೆ ಭಾರತಕ್ಕೆ ಬರುತ್ತವೆ.
>> ಇಲ್ಲಿನ ಚಿಂದಿ ಕಾರ್ಮಿಕರು ಅವುಗಳನ್ನು ಬೇರ್ಪಡಿಸುವಾಗ ವಿಷಕಾರಿ ಲೋಹದ ಸಂಯುಕ್ತಗಳು ಆಸಿಡ್
>> ವಾಶ್‌ನಲ್ಲಿ ಬೇರ್ಪಟ್ಟು, ಕೊಳಕು ಚರಂಡಿಗಳ ಮೂಲಕ ಕೆರೆಗೋ ಹಳ್ಳಕ್ಕೋ ಸೇರುತ್ತವೆ.
>>
>> ಕ್ರಮೇಣ ಜಲಚರಗಳಿಗೆ, ಪ್ರಾಣಿಪಕ್ಷಿಗಳಿಗೆ, ಕೊನೆಗೆ ಮೇವಿನ ಮೂಲಕ ಜಾನುವಾರುಗಳ ಹೊಟ್ಟೆಗೆ
>> ಸೇರುತ್ತವೆ ಮತ್ತು ಕೊಳವೆ ಬಾವಿಗಳ ಮೂಲಕ ಅಥವಾ ನೇರವಾಗಿ ಮನುಷ್ಯರ ಶರೀರದಲ್ಲೂ
>> ಸಂಗ್ರಹವಾಗುತ್ತವೆ. ಕುಡಿಯುವ ನೀರು ಅದೆಷ್ಟೋ ಬಾರಿ ಸ್ಫಟಿಕ ಶುದ್ಧವಾಗಿ ಕಂಡರೂ ಅದರಲ್ಲಿ
>> ಏಕಾಣು ಜೀವಿಗಳ ಲವಲೇಶವೂ ಇಲ್ಲದಿದ್ದರೂ ಆ ನೀರು ವಿಷಮಯ ಆಗಿರಬಹುದು. ಅದರಲ್ಲಿ ಕಣ್ಣಿಗೆ
>> ಕಾಣದ ಭಾರಲೋಹಗಳ ಸಂಯುಕ್ತಗಳು ಲೀನವಾಗಿರಬಹುದು.
>>
>> ಅಂಥ ನೀರಲ್ಲಿ ಸೇರ್ಪಡೆಯಾಗಿರುವ ಕ್ರೋಮಿಯಂ, ಕ್ಯಾಡ್ಮಿಯಂ, ವೆನಾಡಿಯಂ, ಪಾದರಸ ಮುಂತಾದ
>> ವಿಷಕಾರಿ ಭಾರಲೋಹಗಳನ್ನು ಹೀರಿ ತೆಗೆಯುವುದು ಹೇಗೆಂಬ ಬಗ್ಗೆ 17 ವರ್ಷದ ಪೆರ್ರಿ ಅಮೆರಿಕದ
>> ಟೆಕ್ಸಾಸ್‌ನಲ್ಲಿ ಅಧ್ಯಯನ ನಡೆಸಿದ. ಬಳಕೆಯಲ್ಲಿದ್ದ ಎಲ್ಲ ವಿಧಾನಗಳೂ ತೀರ ದುಬಾರಿ, ತೀರ
>> ಕ್ಲಿಷ್ಟವಾಗಿದ್ದವು. ವಿಶ್ವಾಸಾರ್ಹತೆ ಇರಲೇ ಇಲ್ಲ.
>>
>> ಅಮೆರಿಕಕ್ಕೆ ಮರಳಿದ ಮೇಲೆ, ಈ ಯುವಕ ಗ್ರಾಫೀನ್ ನ್ಯಾನೊ ಕೊಳವೆಗಳ ಒಂದು ಸೋಸು ಪರದೆಯನ್ನು
>> ತಯಾರಿಸಿದ. ಅದರ ಮೂಲಕ ಇಂಥ ಕೊಳೆನೀರನ್ನು ಹಾಯಿಸಿ ನೋಡಿದ. ಕೆಲವು ವಿಫಲ ಪ್ರಯತ್ನಗಳ ನಂತರ
>> ನೂರಕ್ಕೆ ನೂರರಷ್ಟು ಚೊಕ್ಕಟವಾಗಿ ನೀರನ್ನು ಸೋಸಬಲ್ಲ ಅಲ್ಪವೆಚ್ಚದ ಸೋಸು ಪರದೆ
>> ಸಿದ್ಧವಾಯಿತು. ಅಮೆರಿಕದ ಇತರೆಲ್ಲ ಯುವ ಸಂಶೋಧಕರಿಗಿಂತ ಈತನ ಸಾಧನೆಗೇ ಪ್ರಶಸ್ತಿ ಲಭಿಸಿತು.
>>
>> ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ 15 ಸಾವಿರ ಡಾಲರ್‌ಗಳ ‘ಸ್ಟಾಕ್‌ಹೋಮ್
>> ಜೂನಿಯರ್’ ಜಲ ಪ್ರಶಸ್ತಿ ಪೆರ್ರಿಯ ಮುಡಿಗೇರಿತು. ಬಯಸಿದ್ದರೆ ಆತ ತನ್ನ ಸಾಧನಕ್ಕೆ ಪೇಟೆಂಟ್
>> ಪಡೆದು ಡಾಲರ್ ಕೋಟ್ಯಧೀಶನಾಗಲು ಸಾಧ್ಯವಿತ್ತು. ಆದರೆ ಪೆರ್ರಿ ಅದನ್ನು ಬಯಸಲಿಲ್ಲ. ಲೋಕ
>> ಕಲ್ಯಾಣಕ್ಕೆಂದು ತನ್ನ ಸೋಸು ಪರದೆಯ ತಾಂತ್ರಿಕ ವಿವರಗಳನ್ನು ಮುಕ್ತವಾಗಿ ಬಿಡುಗಡೆ ಮಾಡಿ ಸೈ
>> ಎನ್ನಿಸಿಕೊಂಡ.
>>
>> ಕೊಳೆನೀರು, ಕೊಳೆಗೇರಿ, ಜಲದಾರಿದ್ರ್ಯಗಳ ಬಗ್ಗೆ ಏನೂ ಗೊತ್ತಿಲ್ಲದ ಅಮೆರಿಕದ ಮಧ್ಯಮ
>> ವರ್ಗದ ಮಕ್ಕಳಿಗೆ ಭಾರತದ ಕೊಳೆಗೇರಿಗಳು ಹೊಸ ಸಂಶೋಧನೆಯ ಅವಕಾಶಗಳನ್ನು ತೆರೆದು ತೋರಿಸಿದವು.
>> ಆದರೆ ಭಾರತದಲ್ಲೇ ಹುಟ್ಟಿ ಬೆಳೆದ ರಾಜೇಂದ್ರ ಸಿಂಗ್‌ಗೆ ಹೊಸತಲ್ಲದ, ತೀರ ಹಳೇ ಸಂಪ್ರದಾಯಗಳ
>> ಬಗೆಗೆ ಆಸಕ್ತಿ ಇತ್ತು.
>>
>> ರಾಜಸ್ತಾನದಲ್ಲಿ ಮೂಲೆಗುಂಪಾಗುತ್ತಿದ್ದ ಪುರಾತನ ಜಲಖಜಾನೆಗಳ ಜಾಡು ಹಿಡಿದು ಅವರು
>> 1985ರಲ್ಲಿ ಹಳ್ಳಿಗಳನ್ನು ಅಲೆಯತೊಡಗಿದ್ದರು. ಹಿಂದೊಂದು ಕಾಲದಲ್ಲಿ ಧಾನ್ಯದ ಮಾರುಕಟ್ಟೆ
>> ಎನಿಸಿದ್ದ ಅಲ್ವಾರ್ ಪಟ್ಟಣದ ಸುತ್ತಮುತ್ತ ಬರ ಆಕ್ರಮಿಸಿತ್ತು.
>>
>> ಕೆರೆಕಟ್ಟೆಗಳೆಲ್ಲ ಬರಿದಾಗಿ, ಗಿಡಮರಗಳೆಲ್ಲ ಕಣ್ಮರೆಯಾಗಿ, ಹಳ್ಳಿಗಳೆಲ್ಲ ಬಿಕೋ
>> ಎನ್ನುತ್ತಿದ್ದವು. ಏಕೆಂದರೆ ಪುರಾತನ ಕಾಲದ ಸಾಂಪ್ರದಾಯಿಕ ‘ಜೋಹಡ್’ ಎಂಬ ನೀರುಕಟ್ಟೆಗಳೆಲ್ಲ
>> ಬರೀ ಒಣದೂಳಿನ ಗುಂಡಿಗಳಾಗಿದ್ದವು.
>>
>> ಯುವಕರೆಲ್ಲ ಊರುಬಿಟ್ಟು ಪಟ್ಟಣ ಸೇರಿದ್ದರು. ಅನುಕೂಲಸ್ಥ ಕೆಲವರು ಕೊಳವೆ ಬಾವಿಗಳಿಂದ
>> ಹಗಲೂ ರಾತ್ರಿ ನೀರೆತ್ತಿ ಅಂತರ್ಜಲವನ್ನೂ ಬರಿದು ಮಾಡಿದ್ದರು. ಇಡೀ ಅಲ್ವಾರ್ ಜಿಲ್ಲೆಯನ್ನೇ
>> ಕಪ್ಪು ಜಿಲ್ಲೆ ಎಂದು ಸರ್ಕಾರ ಘೋಷಿಸಿತ್ತು.
>>
>> ಭಣಗುಡುವ ಊರಿಂದ ಊರಿಗೆ ಅಲೆದಾಡುತ್ತ ರಾಜೇಂದ್ರ ಸಿಂಗ್ ಅಲ್ಲಲ್ಲಿ ಇದ್ದಬದ್ದ ಕೆಲವು
>> ಯುವಕರನ್ನು ಸೇರಿಸಿ ‘ತರುಣ ಭಾರತ ಸಂಘ’ವನ್ನು ಕಟ್ಟಿ ಅಲ್ಲಿನ ನೀರ್ಕಟ್ಟೆಗಳಿಗೆ ಮರುಜೀವ
>> ಕೊಡುವ ಕೆಲಸವನ್ನು ಪ್ರಾರಂಭಿಸಿದರು.
>>
>> ಹನಿಹನಿ ಮಳೆನೀರೂ ಆಯಾ ಊರಿನ ಕಟ್ಟೆಗಳಲ್ಲೇ ಸಂಗ್ರಹವಾಗುವಂತೆ ಶ್ರಮದಾನ ಮಾಡಿದರು. ಮೊದಲ
>> ಮೂರು ನಾಲ್ಕು ವರ್ಷಗಳ ಎದೆಗುಂದಿಸುವ ಸಾಹಸದ ನಂತರ ಕೆರೆಕಟ್ಟೆಗಳು ತುಂಬಿದವು. ಭೂಮಿ
>> ಜೀವಂತವಾಯಿತು. ವರ್ಷವಿಡೀ ಹಣ್ಣು, ತರಕಾರಿ, ದವಸ ಧಾನ್ಯಗಳನ್ನು ಬೆಳೆಯುವ ಅವಕಾಶ
>> ಸಿಕ್ಕಿದ್ದರಿಂದ ವಲಸೆ ಹೋಗಿದ್ದವರು ಊರಿಗೆ ಮರಳಿ ಬಂದರು.
>>
>> ದೂರದ ಊರುಗಳ ಜನರೂ ರಾಜೇಂದ್ರ ಸಿಂಗರ ತರುಣ ಭಾರತ ತಂಡದ ನೆರವು ಕೋರತೊಡಗಿದರು. ಸುಮಾರು
>> 60 ವರ್ಷಗಳಿಂದ ಚಲನೆಯನ್ನೇ ಮರೆತಿದ್ದ ಅರ್ವಾರಿ ನದಿ ಕ್ರಮೇಣ ಏಪ್ರಿಲ್‌ವರೆಗೆ
>> ಹರಿಯುವುದನ್ನು ಕಲಿಯಿತು. ಮುಂದಿನ ಕೆಲ ವರ್ಷಗಳಲ್ಲಿ ಜೂನ್‌ವರೆಗೂ ಹರಿಯುತ್ತ ಹೊಸ
>> ಮಳೆಗಾಲದಲ್ಲಿ ಮತ್ತೆ ಮೈತುಂಬಿ ದಾಖಲೆ ಬರೆಯಿತು. ಅರ್ವಾರಿ ನದಿಗೆ ಅಂತರರಾಷ್ಟ್ರೀಯ ನದಿ
>> ಪ್ರಶಸ್ತಿ ಲಭಿಸಿತು.
>>
>> ಜೋಹಡ್ ಎಂಬ ನೀರ್ಕಟ್ಟೆಗಳ ಮೂಲಕ ನಡೆದು ಹೋದ ಈ ಜಾದೂವನ್ನು ನೋಡಲೆಂದು ರಾಷ್ಟ್ರಪತಿ
>> ಕೆ.ಆರ್.ನಾರಾಯಣನ್ ಖುದ್ದಾಗಿ ಬಂದರು. ‘ಓಡುವ ನೀರನ್ನು ನಡೆಯುವಂತೆ ಮಾಡಿ; ನಡೆಯುವ ಧಾರೆ
>> ಅಲ್ಲೇ ನಿಲ್ಲುವಂತೆ ಮಾಡಿ; ನಿಂತ ನೀರು ಅಲ್ಲೇ ಇಂಗುವಂತೆ ಮಾಡಿ’ ಎಂಬ ಮಾತು ಎಲ್ಲ
>> ಹಳ್ಳಿಕೊಳ್ಳಗಳಲ್ಲಿ ಪ್ರತಿಧ್ವನಿಸಿದವು.
>>
>> 1998ರ ಹೊತ್ತಿಗೆ ರಾಜಸ್ತಾನದ 850 ಗ್ರಾಮಗಳಲ್ಲಿ 4500 ನೀರ್ಕಟ್ಟೆಗಳು ಸಿದ್ಧವಾದವು.
>> ಅರ್ವಾರಿ ನದಿಯ ಮಾದರಿಯಲ್ಲಿ ರೂಪಾರೆಲ್, ಭಾಗಣಿ ನದಿ, ಸಾರ್ಸಾ ನದಿ, ಜಹಜ್ವಾಲಿ ನದಿಗಳೂ
>> ಮತ್ತೆ ಜೀವ ತಳೆದವು. ರಾಜೇಂದ್ರ ಸಿಂಗರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿತು.
>>
>> ಅಂದು ನರೇಗಾ, ಮನ್ರೇಗಾ ಯಾವುದೂ ಇರಲಿಲ್ಲ. ‘ಕೂಲಿಗಾಗಿ ಕಾಳು’ ಕೂಡ ಸಿಗುತ್ತಿರಲಿಲ್ಲ.
>> ಊರೂರಲ್ಲಿ ಜೆಸಿಬಿಗಳು, ಬುಲ್ಡೋಜರ್‌ಗಳು ಇರಲಿಲ್ಲ. ಜನರು ತಾವಾಗಿ ಬಂದು ಕೈಯಾರೆ ಬಗ್ಗಿ
>> ಎದ್ದು ತಂತಮ್ಮ ಊರಿನ ಕೆರೆಗಳ ಹೂಳೆತ್ತುತ್ತಿದ್ದರು. ಒಂದು ಊರಿನ ಯಶಸ್ಸೇ ಇನ್ನೊಂದು ಊರಿಗೆ
>> ಪ್ರೇರಕವಾಗುತ್ತಿತ್ತು. ಜನರನ್ನು ಹುರಿದುಂಬಿಸಬಲ್ಲ, ನಿಸ್ವಾರ್ಥ ನಾಯಕನ ಪ್ರೇರಣೆ ಇತ್ತು.
>>
>> ಅಂಥ ನಾಯಕತ್ವವನ್ನು ರಾಜಸ್ತಾನದ ಜನರಿಗೆ ಕೊಟ್ಟಿದ್ದಕ್ಕೆ ರಾಜೇಂದ್ರ ಸಿಂಗರಿಗೆ ಒಂದೂವರೆ
>> ಲಕ್ಷ ಡಾಲರ್ ಮೌಲ್ಯದ ಸ್ಟಾಕ್‌ಹೋಮ್ ಜಲ ಸನ್ಮಾನ ಕೂಡ ಸಿಕ್ಕಿತು. ‘ನೀರಿನ ಸಮಸ್ಯೆಯನ್ನು
>> ಕೇವಲ ವಿಜ್ಞಾನ ತಂತ್ರಜ್ಞಾನದಿಂದಷ್ಟೇ ಪರಿಹರಿಸಲು ಸಾಧ್ಯವಿಲ್ಲ... ನೀರಿನ ಸುಸ್ಥಿರ
>> ನಿರ್ವಹಣೆ ಕುರಿತಂತೆ ರಾಜೇಂದ್ರ ಸಿಂಗ್ ಅವರ ಸಾಧನೆಗಳು ಎಲ್ಲರಿಗೂ ಮಾದರಿಯಾಗಬೇಕು’ ಎಂದು
>> ಪ್ರಶಸ್ತಿ ಪತ್ರದಲ್ಲಿ ಶ್ಲಾಘನೆ ಬಂತು.
>>
>> ನೊಬೆಲ್ ಪ್ರಶಸ್ತಿಗಳ ಉಗಮಸ್ಥಾನವೆನಿಸಿದ ಸ್ವೀಡಿಶ್ ನಗರ ಸ್ಟಾಕ್‌ಹೋಮ್‌ನಲ್ಲಿ ಜಾಗತಿಕ
>> ಮಾನ್ಯತೆ ಪಡೆದ Stockholm International Water Institute (SIWI) ಸಂಸ್ಥೆ ಕೂಡ ಇದೆ.
>> ನೀರಿಗೆ ಸಂಬಂಧಿಸಿದ ಎಲ್ಲ ಬಗೆಯ ಸಮಸ್ಯೆಗಳ ಪರಿಹಾರಕ್ಕೆ ಮುಡಿಪಾಗಿರುವ ಈ ಸಂಸ್ಥೆ ಪ್ರತಿ
>> ವರ್ಷ ಆಗಸ್ಟ್ 28ರಿಂದ ಒಂದು ವಾರದ ಕಾಲ ವಿಶ್ವ ಜಲಸಪ್ತಾಹ’ವನ್ನು ಆಚರಿಸುತ್ತದೆ.
>>
>> ಈ ವರ್ಷ ಹೊಸದಾಗಿ ಒಂದು ‘ಐಡಿಯಾ ಮಾರುಕಟ್ಟೆ’ಯನ್ನು ಆರಂಭಿಸಲಿದೆ. ನೀರು ಮತ್ತು ಸುಸ್ಥಿರ
>> ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾರಿಗೆ ಏನೇ ಹೊಸ ಐಡಿಯಾ ಹೊಳೆದರೂ ಇದೇ ಮೇ 20ರೊಳಗಾಗಿ ತಮ್ಮ
>> ಪ್ರಸ್ತಾವನೆಯನ್ನು siwi.org ಜಾಲತಾಣದಲ್ಲಿ ಸೇರ್ಪಡೆ ಮಾಡಲು ಅವಕಾಶವಿದೆ.
>>
>> ನೀರಿನ ಮಿತವ್ಯಯ, ಶುದ್ಧೀಕರಣ, ಮರುಬಳಕೆ, ಕೆರೆಗಳ ಮರುಸೃಷ್ಟಿ ಹೀಗೆ ನಾನಾ ಬಗೆಯಲ್ಲಿ
>> ಜಲಕ್ಕೆ ಜೀವ ತುಂಬುವ ಹೊಸದೇನಾದರೂ ಯೋಚನೆ ಬಂದಿದ್ದರೆ, ಐಡಿಯಾ ಮಾರುಕಟ್ಟೆಯಲ್ಲಿ ಅದಕ್ಕೆ
>> ಮಾನ್ಯತೆ ಸಿಕ್ಕರೂ ಸಿಗಬಹುದು.
>>
>> ಸಿಕ್ಕರೆ ಅದನ್ನು ಜಾರಿಗೆ ತರಲು ಧನಸಹಾಯ, ತಂತ್ರಜ್ಞಾನದ ನೆರವು ಸಿಗುವಂತೆ ಈ ಸಂಸ್ಥೆ
>> ಸಹಾಯ ಮಾಡುತ್ತದೆ. ಕನ್ನಡಿಗರೂ ಒಂದು ಕೈ ನೋಡಬಹುದು. ಚಿಂತೆಯ ಕಾರ್ಮೋಡದ ಮಧ್ಯೆ ಹೊಸದೊಂದು
>> ಮಿಂಚಿಗಾಗಿ ನಾವೆಲ್ಲ ಕಾಯುತ್ತಿದ್ದೇವೆ. ನೆಲವೂ ಕಾದಿದೆ.
>>
>> Hareeshkumar K
>> AM(PCM)
>> GHS HUSKURU
>> MALAVALLI TQ
>> MANDYA DT 571475
>> mobile no 9880328224
>> email [email protected]
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to