thank u sir 2016-05-08 9:57 GMT+05:30 Jayanthi J <[email protected]>:
> Thank u sir 4 the information > On 8 May 2016 7:31 am, "HAREESHKUMAR K Agasanapura" <[email protected]> > wrote: > >> http://m.prajavani.net/article/2016_05_04/406562 >> >> *ಖಗೋಳ ವಿಸ್ಮಯ: ಅಪೂರ್ವ ‘ಬುದ್ಧ ಸಂಕ್ರಮಣ’* >> >> 4 May, 2016 >> >> ಪ್ರೊ. ಎಸ್.ಎ. ಮೋಹನ್ ಕೃಷ್ಣ >> >> >> <https://www.facebook.com/sharer/sharer.php?u=http%3A%2F%2Fgoo.gl%2FN2etZn> >> <https://twitter.com/intent/tweet?text=%E0%B2%96%E0%B2%97%E0%B3%8B%E0%B2%B3+%E0%B2%B5%E0%B2%BF%E0%B2%B8%E0%B3%8D%E0%B2%AE%E0%B2%AF%3A+%E0%B2%85%E0%B2%AA%E0%B3%82%E0%B2%B0%E0%B3%8D%E0%B2%B5+%E2%80%98%E0%B2%AC%E0%B3%81%E0%B2%A6%E0%B3%8D%E0%B2%A7+%E0%B2%B8%E0%B2%82%E0%B2%95%E0%B3%8D%E0%B2%B0%E0%B2%AE%E0%B2%A3%E2%80%99+http%3A%2F%2Fgoo.gl%2FN2etZn> >> <https://plus.google.com/share?url=http%3A%2F%2Fgoo.gl%2FN2etZn> >> <http://www.pinterest.com/pin/find/?url=http%3A%2F%2Fgoo.gl%2FN2etZn> >> <http://www.linkedin.com/shareArticle?mini=true&title=%E0%B2%96%E0%B2%97%E0%B3%8B%E0%B2%B3+%E0%B2%B5%E0%B2%BF%E0%B2%B8%E0%B3%8D%E0%B2%AE%E0%B2%AF%3A+%E0%B2%85%E0%B2%AA%E0%B3%82%E0%B2%B0%E0%B3%8D%E0%B2%B5+%E2%80%98%E0%B2%AC%E0%B3%81%E0%B2%A6%E0%B3%8D%E0%B2%A7+%E0%B2%B8%E0%B2%82%E0%B2%95%E0%B3%8D%E0%B2%B0%E0%B2%AE%E0%B2%A3%E2%80%99+&url=http%3A%2F%2Fgoo.gl%2FN2etZn> >> >> ಖಗೋಳ ವಿಜ್ಞಾನವು (astronomy) ಅತ್ಯಂತ ಕುತೂಹಲಕರ ಹಾಗೂ ಕೌತುಕಮಯ ವಿಷಯ. >> ಅನಾದಿಕಾಲದಿಂದಲೂ ಮಾನವ ಆಕಾಶಕಾಯಗಳ ಬಗ್ಗೆ ಸಂಶೋಧನೆ ಮಾಡುತ್ತಲೇ ಬಂದಿದ್ದಾನೆ. ಇವನ >> ತಾಳ್ಮೆ, ಸಹನೆ ಹಾಗೂ ಪ್ರಯತ್ನಕ್ಕೆ ಒಳ್ಳೆಯ ಫಲವೂ ಸಿಕ್ಕಿದೆ. ಖಗೋಳ ವಿಜ್ಞಾನಿಗಳಾದ >> ಮವರಾಹಾ ಮಿಹಿರ, ಆರ್ಯಭಟ, ಬ್ರಹ್ಮಗುಪ್ತ, ನಿಕೊಲಾಸ್ ಕೋಪರ್‌ನಿಕಸ್, ಯೊಹಾನೆಸ್ >> ಕೆಪ್ಲರ್ ಗೆಲಿಲಿಯೊ ಗೆಲಿಲಿ, ಸರ್ ಐಸಾಕ್ ನ್ಯೂಟನ್, ಎಡ್ಮಂಡ್ ಹ್ಯಾಲಿ, ಟೈಕೋ >> ಬ್ರಾಹೆ ಮತ್ತಿತರರು ಮಾಡಿರುವ ಸಾಧನೆಗಳು ನಿಜಕ್ಕೂ ಶ್ಲಾಘನೀಯ. >> >> ಇವರೆಲ್ಲರ ಪರಿಶ್ರಮದಿಂದಾಗಿ ಪ್ರತಿಯೊಂದು ಆಕಾಶಕಾಯಗಳ ಬಗ್ಗೆ ಅನೇಕ ಮಾಹಿತಿಗಳು ಬಹಳ >> ಸುಲಭವಾಗಿ ದೊರಕುತ್ತದೆ. ಬಹುತೇಕರಿಗೆ ಆಕಾಶಕಾಯಗಳಾದ ನಕ್ಷತ್ರ, ಗ್ರಹ, ಉಲ್ಕೆ, ಧೂಮಕೇತು, >> ಕ್ಷುದ್ರಗ್ರಹಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಬಹಳ ಆಸೆ ಇರುತ್ತದೆ. ಇದಲ್ಲದೆ, ಪ್ರಮುಖ >> ಖಗೋಳ ಘಟನೆಗಳಾದ ಗ್ರಹಣ, ಸಂಕ್ರಮಣ ಹಾಗೂ ಗ್ರಹಗಳ ಸಂಯೋಜನೆ ಅತ್ಯಂತ ವಿಸ್ಮಯಕಾರಿಯಾದ >> ವಿದ್ಯಮಾನ. >> >> ಈ ರೀತಿಯ ಅದ್ಭುತಗಳಲ್ಲಿ, ಮೇ 9ರಂದು ವಿಶಿಷ್ಟ ಖಗೋಳ ಘಟನೆಯೊಂದು ಸಂಭವಿಸಲಿದೆ. ಸಂಜೆಯ >> ವೇಳೆಯಲ್ಲಿ ‘ಬುಧ’ ಗ್ರಹವು ಸೂರ್ಯನ ಮುಂದೆ ಹಾದು ಹೋಗಲಿದೆ. ಈ ಒಂದು ಅಪೂರ್ವ ಘಟನೆಯ >> ಹೆಸರು ‘ಬುಧ ಸಂಕ್ರಮಣ’ (transit of Mercury). ಇದು ಈ ವರ್ಷದ ಅತ್ಯಂತ, ರೋಮಾಂಚಕಾರಿ >> ಘಟನೆಯೆಂದರೆ ತಪ್ಪಾಗಲಾರದು. ಬುಧ ಗ್ರಹವು ಸೂರ್ಯನ ಮುಂದೆ ಹಾದು ಹೋಗುವ ದೃಶ್ಯ ನಿಜಕ್ಕೂ >> ಕುತೂಹಲಕಾರಿ! >> >> 2004 ಹಾಗೂ 2012 ರಲ್ಲಿ ಸಂಭವಿಸಿದ ‘ಶಕ್ರ ಸಂಕ್ರಮಣ’ (transit of Venus) ಎಲ್ಲರಿಗೂ >> ಜ್ಞಾಪಕವಿರಲೇಬೇಕು. ಶುಕ್ರ ಗ್ರಹವು ಸೂರ್ಯನ ಮುಂದೆ ಹಾದು ಹೋಗಿ, ಒಂದು ಕಪ್ಪು ಚುಕ್ಕೆಯಂತೆ >> ಕಂಡದ್ದು ಅವಿಸ್ಮರಣೀಯ. ಇದೇ ರೀತಿ ಮೇ 9 ರಂದು ಬುಧ ಗ್ರಹವು ಕಪ್ಪು ಚುಕ್ಕಿಯಂತೆ ಕಾಣಲಿದೆ. >> >> ಸೌರಮಂಡಲದಲನ ಗ್ರಹಗಳ ಹೆಸರುಗಳು ಗೊತ್ತಿದ್ದರೂ, ಲಕ್ಷಾಂತರ ಗ್ರಹ ಹಾಗೂ ಉಪಗ್ರಹಗಳಿರುವ >> ವಿಚಾರ ಅನೇಕರಿಗೆ ಗೊತ್ತಿಲ್ಲ. ಸೂರ್ಯನಿಗೆ ಬಹಳ ಸಮೀಪದಲ್ಲಿರುವ ಗ್ರಹವೆಂದರೆ ‘ಬುಧ’. >> ಸೂರ್ಯನ ಆಪ್ತಮಿತ್ರನೆಂದರೂ ತಪ್ಪಾಗಲಾರದು. ಇದರ ರಚನೆ ವಿಶಿಷ್ಟ ಮತ್ತು ನಿಗೂಢವಾಗಿಯೂ >> ಇದೆ. ಇದರ ಚಲನ–ವಲನ ಸ್ಪಷ್ಟವಾಗಿದ್ದರೂ, ಇದು ಬರಿ ಕಣ್ಣಿಗೆ ಕಾಣುವುದು ಬಹಳ ಕಷ್ಟ. >> >> ಕಂದು ಬಣ್ಣಹೊಂದಿದ್ದು, ಭೂಮಿಗೆ ಹೋಲಿಸಿದರೆ ಇದರ ಗಾತ್ರ ಚಿಕ್ಕದು. ‘ಮೆಸೆಂಜರ್’ >> ಉಪಗ್ರಹವು ಇದರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದೆ. ಇದರ ರಚನೆ, ಚಲನವಲನ, >> ಆವರ್ತನಾ ಹಾಗೂ ಪರಿಭ್ರಮಣೆಯ ಅವಧಿ, ಕಕ್ಷಾವೇಗ, ಉಷ್ಣಾಂಶ, ಬಣ್ಣ, ಕೋನ ಹಾಗೂ ಗಾತ್ರಗಳ >> ಬಗ್ಗೆ ಖಚಿತ ಮಾಹಿತಿ ದೊರಕಿದೆ. >> >> ವಿಶ್ವದ ಹುಟ್ಟು ನಿಗೂಢವಾಗಿರುವಾಗ, ಇನ್ನು ಗ್ರಹಗಳು, ಧೂಮಕೇತುಗಳ ಉಗಮ ಊಹಿಸಲೂ >> ಸಾಧ್ಯವಿಲ್ಲ. ಗ್ರಹಗಳ ಬಗ್ಗೆ ತೀವ್ರವಾದ ಸಂಶೋಧನೆ ಹಾಗೂ ಅನ್ವೇಷಣೆ ಪ್ರಾರಂಭವಾಗಿ >> ಸಾವಿರಾರು ವರ್ಷಗಳೇ ಕಳೆದಿವೆ. ಆದರೆ ನಿರ್ದಿಷ್ಟವಾದ ಮಾಹಿತಿಗಳು ದೊರಕಲು >> ಪ್ರಾರಂಭವಾಗಿದ್ದು ವರಾಹಾ ಮಿಹಿರ ಹಾಗೂ ಆರ್ಯಭಟರ ಕಾಲದಲ್ಲಿ. >> >> ಗಣಿತ ಲೆಕ್ಕಾಚಾರದ ಪ್ರಕಾರ ಗ್ರಹಗಳ ಪಥ, ಚಲನ–ವಲನ, ಕಕ್ಷೆ ಹಾಗೂ ಇನ್ನಿತರ >> ವಿವರಗಳನ್ನು ಇವರು ನೀಡಿದ್ದಾರೆ. ಸರ್ ಐಸ್ಯಾಕ್ ನ್ಯೂಟನ್, ಗೆಲಿಲಿಯೊ ಗೆಲಿಲಿ, >> ಯೊಹಾನೆಸ್ ಕೆಪ್ಲರ್, ಟೈಕೊ ಬ್ರಾಹೆ ಇವರುಗಳು ಸಹ ಅನೇಕ ಗಣನೀಯ ಸಾಧನೆಗಳನ್ನು >> ಮಾಡಿದ್ದಾರೆ. ಇವರುಗಳಲ್ಲದೇ, ಹಲವಾರು ಖಗೋಳ ವಿಜ್ಞಾನಿಗಳು ಗ್ರಹಗಳ ಬಗ್ಗೆ, ಧೂಮಕೇತು, >> ಗ್ರಹಣ, ಸಂಕ್ರಮಣಗಳ ವಿಚಾರವಾಗಿ ಸಂಶೋಧನೆ ನಡೆಸಿದ್ದಾರೆ. >> >> *ಸಂಕ್ರಮಣ:ಇತಿಹಾಸ* >> ‘ಸಂಕ್ರಮಣ’ ಎಂದರೆ ಅನೇಕರಿಗೆ ಗೊಂದಲ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಪ್ರಮುಖ ಗ್ರಹಗಳಾದ >> ಬುಧ ಹಾಗೂ ಶುಕ್ರ, ಸೂರ್ಯನ ಮುಂದೆ ಹಾದು ಹೋಗುವುದು ವಾಡಿಕೆ. ಸಂಕ್ರಮಣ ಹಾಗೂ >> ಗ್ರಹಣಗಳಲ್ಲಿ ವ್ಯತ್ಯಾಸ ಇದೆ. ಸಂಕ್ರಮಣವು ಗ್ರಹಣಕ್ಕಿಂತಲೂ ಕುತೂಹಲಕಾರಿ. ಸೂರ್ಯನ ಮುಂದೆ >> ಗ್ರಹಗಳಾದ ‘ಬುಧ’ ಹಾಗೂ‘ಶುಕ್ರ’ ಹಾದು ಹೋದರೆ, ಈ ಪ್ರಕ್ರಿಯೆಯೇ ‘ಸಂಕ್ರಮಣ.’ >> >> ಖಗೋಳ ವಿಜ್ಞಾನಿಗಳು ಸಂಕ್ರಮಣಗಳ ಬಗ್ಗೆ ಸುಧೀರ್ಘ ಆಲೋಚನೆ ಮಾಡಲು ಪ್ರಾರಂಭಿಸಿದ್ದು 1631 >> ರಲ್ಲಿ. ನವೆಂಬರ್ 7, 1631 ರಂದು ಖಗೋಳ ತಜ್ಞ ಪಿಯರಿ ಗೆಸೆಂಡಿ (1592–1655) ಮೊಟ್ಟಮೊದಲ >> ಬಾರಿಗೆ ಬುಧ ಸಂಕ್ರಮಣದ ಬಗ್ಗೆ ಅನ್ವೇಷಣೆ ಮಾಡಿದ. 1639 ರಲ್ಲಿ ಜೆರಿಮಿಯಾ ಹೊರೊಕ್‌್ಸ >> ಶುಕ್ರ ಸಂಕ್ರಮಣವನ್ನು ಮೊಟ್ಟಮೊದಲಿಗೆ ವೀಕ್ಷಿಸಿದ. ಇವರುಗಳ ಜೊತೆಗೆ ಎಡ್ಮಂಡ್ ಹ್ಯಾಲಿ >> ಹಾಗೂ ಯೊಹಾನೆಸ್ ಕೆಪ್ಲರ್ ಕೈ ಜೋಡಿಸಿದರು. ಅಂದಿನಿಂದ ಇಂದಿನವರೆಗೂ, ಬುಧ ಮತ್ತು ಶುಕ್ರ >> ಸಂಕ್ರಮಣಗಳ ಬಗ್ಗೆ ವೀಕ್ಷಣೆ ನಡೆಯುತ್ತಲೇ ಬಂದಿದೆ. >> >> ಖಗೋಳ ಶಾಸ್ತ್ರಜ್ಞರ ಪ್ರಕಾರ ‘ಬುಧ ಸಂಕ್ರಮಣ’ವು 7, 13 ಹಾಗೂ 33 ವರ್ಷಗಳಿಗೊಮ್ಮೆ ಮತ್ತು >> ಶುಕ್ರ ಸಂಕ್ರಮಣವು 8 ಹಾಗೂ 121 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. >> >> ಒಂದು ಶತಮಾನದಲ್ಲಿ ಬುಧ ಸಂಕ್ರಮಣವು 13 ರಿಂದ 14 ಸಲ ಸಂಭವಿಸುತ್ತದೆ. ಬುಧ ಸಂಕ್ರಮಣವು >> ಕಳೆದ ಬಾರಿ 2006 ರಲ್ಲಿ ಸಂಭವಿಸಿತ್ತು. >> >> *ಬುಧ ಸಂಕ್ರಮಣ* >> ಬುಧ ಗ್ರಹವು ಸೂರ್ಯನಿಗಿರುವ ಅತ್ಯಂತ ಸಮೀಪ ಗ್ರಹ. ಇದರ ವ್ಯಾಸ 4,848 ಕಿ.ಮೀ. ಹಾಗೂ >> ಸೂರ್ಯನಿಂದ ಇದರ ಅಂತರ 80 ದಶಲಕ್ಷ ಕಿ.ಮೀ. ಮೇ 9 ರಂದು ಹಲವಾರು ದೇಶಗಳಲ್ಲಿ ಈ ಅದ್ಭುತ >> ಖಗೋಳ ಘಟನೆ ಸಂಭವಿಸಲಿದೆ. ಸಂಪೂರ್ಣ ಸಂಕ್ರಮಣವು ಅಮೆರಿಕ, ಆಫ್ರಿಕಾ, ಗ್ರೀನ್ ಲ್ಯಾಂಡ್, >> ಫೆಸಿಪಿಕ್ ಮತ್ತು ಅಟ್ಲಾಂಟಿಕ್ ಮಹಾಸಾಗರಗಳ ಸಮೀಪ ಗೋಚರಿಸಲಿದೆ. >> >> ಆದರೆ ಭಾರತದ ಎಲ್ಲಾ ಭಾಗಗಳಲ್ಲಿ ಸಂಕ್ರಮಣದ ಪ್ರಾರಂಭಿಕ ಹಂತವು ಮಾತ್ರ ಗೋಚರಿಸುತ್ತದೆ. >> ಅಂತ್ಯದ ಭಾಗ ಗೋಚರಿಸಲು ಅಸಾಧ್ಯ ಏಕೆಂದರೆ, ಬೇರೆ ದೇಶಗಳಲ್ಲಿ ಘಟನೆ ಸಂಭವಿಸುತ್ತಿರುವಾಗಲೇ >> ಭಾರತದಲ್ಲಿ ಸೂರ್ಯಾಸ್ತವಾಗಿರುತ್ತದೆ. >> >> ಮೇ 9 ರಂದು ಭಾರತದ ಎಲ್ಲಾ ಭಾಗಗಳಲ್ಲಿ ಬುಧ ಸಂಕ್ರಮಣದ ಪ್ರಾರಂಭಿಕ ಘಟ್ಟವನ್ನು ಮಾತ್ರ >> ವೀಕ್ಷಿಸಬಹುದು. ಬುಧ ಸಂಕ್ರಮಣವು ಅಂದು ಸಂಜೆ 4 ಗಂಟೆ 42 ನಿಮಿಷಕ್ಕೆ ಸೂರ್ಯನ ಮುಂದೆ >> ಕಪ್ಪು ಚುಕ್ಕೆಯಂತೆ ಗೋಚರಿಸುತ್ತದೆ. ಆದರೆ, ಮಧ್ಯದ ಹಾಗೂ ಕೊನೆಯ ಭಾಗಗಳು ವೀಕ್ಷಿಸಲು >> ಅಸಾಧ್ಯ. ಸಂಜೆ ಸುಮಾರು ಒಂದು ಮುಕ್ಕಾಲು ಗಂಟೆ ವೀಕ್ಷಿಸಬಹುದು. ಸಂಜೆ 6:40 ಸಂಜೆ >> ಹೊತ್ತಿಗೆ ಸೂರ್ಯಾಸ್ತವಾಗುತ್ತದೆ. ಸಂಕ್ರಮಣವು ಸಂಭ್ರಮಿಸುತ್ತಿದ್ದಾಗ ಸೂರ್ಯನ ಪ್ರಖರತೆ >> ಮತ್ತು ತೀರ್ವತೆ ಸಹಜವಾಗಿರುತ್ತದೆ. >> >> *ವೀಕ್ಷಿಸುವ ಪರಿ* >> ಬುಧ ಸಂಕ್ರಮಣವನ್ನು ವೀಕ್ಷಿಸುವ ಪರಿ ಹೇಗೆ? ವೀಕ್ಷಿಸಿದರೆ ಗಂಡಾಂತರ ಕಾದಿದೆಯೆ >> ಎಂದೆಲ್ಲಾ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಸಂಕ್ರಮಣವನ್ನು ನೇರವಾಗಿ ವೀಕ್ಷಿಸಿದರೆ ಬುಧ >> ಗ್ರಹವು ಗೋಚರಿಸುವುದಿಲ್ಲ ಹಾಗೂ ಅಕ್ಷಿಪಲ್ಲಟಕ್ಕೆ ಸ್ವಲ್ಪ ಊನ ಉಂಟಾಗಬಹುದು. >> >> ಸೌರ ಕನ್ನಡಕ ಇಲ್ಲವೆ ಸೋಲಾರ್ ಫಿಲ್ಟರ್ (solar filter) ಬಳಸಿ ದೂರದರ್ಶಕದ ಮೂಲಕ >> ವೀಕ್ಷಿಸುವುದೇ ಲೇಸು. ಸೂರ್ಯ ಮತ್ತು ಬುಧ ಗ್ರಹವು ಅಂಟಿಕೊಂಡಿವೆ ಏನೊ ಎಂಬಂತೆ >> ಭಾಸವಾಗುತ್ತದೆ. ಸೌರ ಕನ್ನಡಕಗಳೂ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಈ ಘಟನೆ >> ವೀಕ್ಷಿಸಿದರೆ ಯಾವ ಗಂಡಾಂತರವೂ ಇಲ್ಲ. >> >> Hareeshkumar K >> AM(PCM) >> GHS HUSKURU >> MALAVALLI TQ >> MANDYA DT 571475 >> mobile no 9880328224 >> email [email protected] >> >> -- >> 1. If a teacher wants to join STF, visit >> http://karnatakaeducation.org.in/KOER/en/index.php/Become_a_STF_groups_member >> 2. For STF training, visit KOER - >> http://karnatakaeducation.org.in/KOER/en/index.php >> 4. For Ubuntu 14.04 installation, visit >> http://karnatakaeducation.org.in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequently_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- NAYANA KUMARI K NSB GOVT HIGH SCHOOL DERALAKATTE -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
