Good article sir...thank u On May 12, 2016 8:33 PM, "HAREESHKUMAR K Agasanapura" <[email protected]> wrote:
> > http://googleweblight.com/?lite_url=http://www.ejnana.com/2016/05/blog-post_12.html%3Fm%3D1&lc=en-IN&s=1&m=534&host=www.google.co.in&ts=1463065227&sig=APY536zCHqAiyayUFeOhwe6wufTwP3Rm9A > > *ಇಜ್ಞಾನ ವಿಶೇಷ ಲೇಖನ: 'ವಸುಧೈವ ಕುಟುಂಬಕಮ್'* > > *ರೋಹಿತ್ ಚಕ್ರತೀರ್ಥ* > > > <https://googleweblight.com/?lite_url=https://3.bp.blogspot.com/-E8ciGELy7nI/VzQ0IldkGQI/AAAAAAAAepo/cYC9yiowpsQZ8c3jr3V_1EZgNdLS7seBACLcB/s1600/world-1081793_960_720.jpg&lc=en-IN&s=1&m=534&host=www.google.co.in&ts=1463065232&sig=APY536xzFvbpxOjtZH6SjaJ2dJnhB_l4Zg> > > ಕೆಲವು ವರ್ಷಗಳ ಹಿಂದೆ ರಾಮಕೃಷ್ಣ ಬೆಳ್ಳೂರು ಎಂಬವರು ಒಂದು ಚಿತ್ರಸರಣಿ ಮಾಡಿದ್ದರು. > ಮಹಾವಿಜ್ಞಾನಿ ಐನ್‌ಸ್ಟೈನ್‌ರನ್ನೂ ಕನ್ನಡದ ಸಾಹಿತ್ಯಮೇರು ಶಿವರಾಮ ಕಾರಂತರನ್ನೂ > ಅಕ್ಕಪಕ್ಕದಲ್ಲಿಟ್ಟು ನೋಡಿದರೆ ಅವರೇ ಇವರಾ ಎಂದು ಗೊಂದಲವಾಗುವಷ್ಟು ಅವರಿಬ್ಬರ ಚಹರೆಗಳೂ > ಹೋಲುವುದನ್ನು ತೋರಿಸಿ "ಎಷ್ಟೊಂದು ಸೇಮ್ ಇದ್ದಾರಲ್ವಾ?" ಎಂದು ಕೇಳಿದ್ದರು. ಗಡ್ಡ-ಮೀಸೆ > ಬಿಟ್ಟ ಕೆ.ಎಸ್. ಅಶ್ವಥ್‌ರನ್ನು ಗೆಲಿಲಿಯೋ ಪಕ್ಕದಲ್ಲಿ ಕೂರಿಸಿದರೂ ಇದೇ ಗೊಂದಲ. ಕರ್ನಾಟಕದ > ರಾಜ್ಯಪಾಲರಾಗಿದ್ದ ಖುರ್ಷಿದ್ ಆಲಂ ಖಾನ್ ಮತ್ತು ಚಿತ್ರನಟ ಬ್ರಹ್ಮಾವರ ಸದಾಶಿವ ರಾವ್ ನೋಡಲು > ಒಂದೇ ರೀತಿ ಇದ್ದರು. ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿದ್ದ ಸುಬ್ಬಾ ರಾವ್‌ರನ್ನು ನಮ್ಮ > "ಥಟ್ ಅಂತ ಹೇಳಿ" ಖ್ಯಾತಿಯ ಡಾ. ನಾ. ಸೋಮೇಶ್ವರ ಪಕ್ಕದಲ್ಲಿ ನಿಲ್ಲಿಸಿದರೆ > ನಿಜವ್ಯಕ್ತಿಯೊಬ್ಬರು ತನ್ನ ಮೇಣದ ಪ್ರತಿಮೆಯೊಂದಿಗೆ ನಿಂತಿದ್ದಾರೋ ಎಂದು ಭಾಸವಾಗುತ್ತದೆ. > ನಿತಿನ್ ಮುಖೇಶ್ ಎಂಬ ಹಾಡುಗಾರನನ್ನು ಟಿ.ಎಂ. ಕೃಷ್ಣ ಎಂಬ ಕರ್ನಾಟಕ ಸಂಗೀತಗಾರರ ಪಕ್ಕದಲ್ಲಿ > ಕೂರಿಸಿದರೆ ಇವರೇನು ಅವಳಿ-ಜವಳೀನಾ ಅಂತ ಕೇಳುವಷ್ಟು ಅವರಿಬ್ಬರೂ ಸೇಮ್‌ಸೇಮ್. ನಮ್ಮ ನಡುವಿನ > ಹೆಮ್ಮೆಯ ವಿಜ್ಞಾನಿ ರೊದ್ದಂ ನರಸಿಂಹ ತಮ್ಮ ಎಂದಿನ ಕೋಟು ಪ್ಯಾಂಟಿನ ಪೋಷಾಕು ತೆಗೆದು ಪಟ್ಟೆ > ಪೀತಾಂಬರ ಉಟ್ಟುಕೊಂಡರೆ ಯಾರಾದರೂ "ವಿದ್ಯಾಭೂಷಣರೇ, ಒಂದು ಹಾಡು ಹಾಡಿ" ಅಂತ ಪೀಡಿಸಿಯಾರು! > ಹಾಗೇನೇ ಭಯೋತ್ಪಾದಕರ ಜೊತೆಗಿನ ಸಮರದಲ್ಲಿ ಮಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್‌ರಿಗೂ > ತಮಿಳು ನಟ ವಿಕ್ರಂಗೂ ಅದೇನು ಹೋಲಿಕೆ ಅಂತೀರಿ! ಕ್ರಾಂತಿಕಾರಿ ಕ್ಯೂಬಾ ನಾಯಕ ಚೆಗೆವಾರನ > ಮೇಲೆ ಸಿನೆಮಾ ತೆಗೆಯುವುದಾದರೆ ಅದಕ್ಕೆ ಕನ್ನಡ ಚಿತ್ರನಟ ಮುರಳಿಯಷ್ಟು ಪರ್‌ಫೆಕ್ಟ್ ಆಗಿ > ಹೋಲುವ ಮುಖ ಬೇರೆ ಇಲ್ಲ. ಹಾಗೇನೇ ಆಂಧ್ರದ ರಾಜಕಾರಣಿ ಜಗನ್‌ಮೋಹನ ರೆಡ್ಡಿ ಮತ್ತು > ಲೀಲಾವತಿಯವರ ಮಗ, ಕನ್ನಡ ನಟ ವಿನೋದ್ ನಿಮ್ಮನ್ನು ಸಖತ್ ಗೊಂದಲದಲ್ಲಿ ಮುಳುಗಿಸಿಬಿಡುತ್ತಾರೆ > ಒಂದು ಕ್ಷಣ. > > ಜಗತ್ತಿನಲ್ಲಿ ನಮ್ಮನ್ನು ಹೋಲುವ ಕನಿಷ್ಠ ಆರು ಜನ ಇರುತ್ತಾರೆಂಬ ನಂಬಿಕೆ ಇದೆ. ನಮ್ಮ > ಚಹರೆ, ವರ್ತನೆಗಳನ್ನು ಹೋಲುವ ವ್ಯಕ್ತಿಗಳು ಗುರುತು-ಪರಿಚಯವಿಲ್ಲದ ಜಾಗದಲ್ಲಿ ನಮಗೆದುರಾದಾಗ > ಈ ಮಾತನ್ನು ನೆನಪಿಸಿಕೊಳ್ಳಬೇಕು. ಯಾಕೆಂದರೆ ಇಂಥದೊಂದು ತರ್ಕಕ್ಕೆ ಮೀರಿದ ಮಾತಿನ ಬಲವನ್ನು > ಬಿಟ್ಟರೆ ಮತ್ಯಾವ ರೀತಿಯಲ್ಲೂ ಈ ಹೋಲಿಕೆಯನ್ನು ಸಮರ್ಥಿಸಿಕೊಳ್ಳುವ ದಾರಿಯಿಲ್ಲ. ಇದೇನೋ > ಬಾಹ್ಯ ಚಹರೆಯ ಹೋಲಿಕೆಯ ಮಾತಾಯಿತು. ಬರಾಕ್ ಒಬಾಮನಿಗೂ ನರೇಂದ್ರ ಮೋದಿಗೂ ಏನಾದರೂ ಸಂಬಂಧ > ಇದೆಯಾ? ಅವರಿಬ್ಬರೂ ಒಂದೇ ಕುಟುಂಬದ ಸದಸ್ಯರಾಗಿರುವ ಸಾಧ್ಯತೆ ಇದೆಯಾ? ಎಂದು ಕೇಳಿದರೆ ಏನು > ಹೇಳುತ್ತೀರಿ? ವಾಟ್ ರಬ್ಬಿಷ್! ಮೋದಿ ಎಲ್ಲಿ ಒಬಾಮಾ ಎಲ್ಲಿ! ಮುಖಗಳೂ ಹೋಲುವುದಿಲ್ಲ; > ಎತ್ನಿಸಿಟಿಯೂ ಹೋಲುವುದಿಲ್ಲ. ಇನ್ನು ಅವರಿಬ್ಬರೂ ಒಂದೇ ಕುಟುಂಬದಿಂದ ಬರೋದಕ್ಕೆ ಅದ್ಯಾವ > ಸೀಮೆ ಸಿದ್ಧಾಂತದ ಮೂಲಕ ಸಾಧ್ಯ ಎಂದು ಪ್ರಶ್ನೆ ಮಾಡುತ್ತೀರಿ ತಾನೆ? ಆದರೆ ಕೊಂಚ > ಯೋಚಿಸಿನೋಡಿ. ಈ ಜಗತ್ತಿನಲ್ಲಿ ಈಗ ನಡೆದಾಡುತ್ತಿರುವ ವ್ಯಕ್ತಿಗೆ ಇರುವ ತಂದೆತಾಯಿಗಳು > ಇಬ್ಬರು, ಅಜ್ಜ ಅಜ್ಜಿಯರು ನಾಲ್ಕು ಜನ, ಮುತ್ತಜ್ಜ-ಮುತ್ತಜ್ಜಿಯರು ಒಟ್ಟು ಎಂಟು ಮಂದಿ. > ಹೀಗೆ ಪ್ರತಿ ಜನರೇಷನ್ನಿಗೂ ಸಂಖ್ಯೆ ದುಪ್ಪಟ್ಟಾಗುತ್ತಾ ಹೋಗುವುದರಿಂದ ೬೪ > ಜನರೇಶನ್ನುಗಳಲ್ಲಿ ಬಂದುಹೋದ ಒಟ್ಟು ಜನರ ಸಂಖ್ಯೆ ಒಂದು ಕ್ವಿಂಟಿಲಿಯನ್ ಅನ್ನು ಮೀರುತ್ತದೆ. > ಅಷ್ಟೆಂದರೆ ಎಷ್ಟು? ಒಂದರ ಮುಂದೆ ಹದಿನೆಂಟು ಸೊನ್ನೆಗಳಾಗುವಷ್ಟು ಬೃಹತ್ ಸಂಖ್ಯೆ! > ಭೂಮಿಯಲ್ಲಿ ಕಳೆದ ಹಲವು ಸಹಸ್ರಾರು ವರ್ಷಗಳಿಂದ ಹುಟ್ಟಿ ನಡೆದಾಡಿ ಮಡಿದ ಒಟ್ಟು ಮಾನವರ > ಸಂಖ್ಯೆಗಿಂತಲೂ ಇದು ದೊಡ್ಡದು. ಹಾಗಾದರೆ ೬೪ ವಂಶಾವಳಿಗಳನ್ನು ದಾಟಿ ಹಿಂದೆ ಹೋದರೆ ಸಿಗುವ > ರೋಮನ್ ಚಕ್ರಾಧಿಪತ್ಯದ ಸಮಯದಲ್ಲಿ ನಮ್ಮೆಲ್ಲರ ಪ್ರಪಿತಾಮಹರೂ ಒಂದೇ ಕುಟುಂಬಕ್ಕೆ > ಸೇರಿರಬೇಕಲ್ಲ? ಹೌದು ಎನ್ನುತ್ತದೆ ಗಣಿತ. ಕ್ರಿಸ್ತಪೂರ್ವ ೩೦೦ರಲ್ಲಿ ಬದುಕಿದ್ದ ಕನಿಷ್ಠ > ಒಬ್ಬ ವ್ಯಕ್ತಿ, ಈಗ ಜಗತ್ತಿನಲ್ಲಿರುವ ಎಲ್ಲ ೭೦೦ ಕೋಟಿ ಜನರಿಗೂ ಸಂಬಂಧಿಕನಾಗಿದ್ದ > ಎನ್ನುತ್ತದದು! ಅಷ್ಟೆಲ್ಲ ಬೇಡ, ನೀವು ಒಂದುವೇಳೆ ನಿಮ್ಮದೇ ದೇಶದ ನಿಮ್ಮದೇ ಜನಾಂಗದಲ್ಲಿ > ಒಬ್ಬರನ್ನು ಮದುವೆಯಾಗಿದ್ದರೆ, ಇಬ್ಬರ ವಂಶಾವಳಿಯಲ್ಲೂ ಹತ್ತು ಹೆಜ್ಜೆ ಹಿಂದೆ ಹೋದರೆ > ಅಲ್ಲೆಲ್ಲೋ ಇಬ್ಬರ ಕುಟುಂಬಗಳಲ್ಲೂ ಬಂದುಹೋದ ಸಾಮಾನ್ಯ ಸಂಬಂಧಿ ಸಿಕ್ಕೇ ಸಿಗುತ್ತಾನೆ ಎಂಬ > ಸಿದ್ಧಾಂತವೇ ಇದೆ! ಇಷ್ಟೆಲ್ಲ ಗಣಿತ ತರದೆ ನೇರವಾಗಿ ಹೇಳುವುದಾದರೆ, ವಿಷಯ ಇಷ್ಟೆ: > ಜಗತ್ತಿನಲ್ಲಿ ಕುಲ, ಗೋತ್ರ ಎಲ್ಲವೂ ಭಿನ್ನವಾಗಿರುವ ಇಬ್ಬರು ವ್ಯಕ್ತಿಗಳಿರಲು ಸಾಧ್ಯವಿಲ್ಲ. > ಯಾವುದೋ ಎರಡು ಮೂಲೆಗಳಿಂದ ಇಬ್ಬರನ್ನು ಆಯ್ದು ತೆಗೆದರೂ, ಅವರಿಬ್ಬರೂ ಸಂಬಂಧಿಗಳೇ > ಆಗಿರುತ್ತಾರೆ! ಹಸಿರೆಲೆಗೂ ಮಣ್ಣಂಟಿಸಿಕೊಂಡ ಬೇರಿಗೂ ರೂಪದಲ್ಲಿ ವ್ಯತ್ಯಾಸವಿದ್ದೀತೇನೋ, > ಆದರೆ ಎರಡಕ್ಕೂ ಸಂಬಂಧವಿದೆಯಲ್ಲ, ಹಾಗೇನೇ ಇದೂ. ಹಾಗಾಗಿ ಒಬಾಮಾನಿಗೂ ಮೋದಿಗೂ ಸಂಬಂಧವಿದೆ! > ಬ್ರಿಟನ್ ರಾಣಿ ಎಲಿಜಬೆತ್‌ಳೂ ನಮ್ಮ ಬೀದಿಯಲ್ಲಿ ಸೊಪ್ಪು ನಿಂಬೇಕಾಯಿ ಮಾರುವ ಸುಬ್ಬಮ್ಮನೂ > ಸಂಬಂಧಿಗಳೇ ಹೌದು! ಇದನ್ನೇ ವಿಜ್ಞಾನಿ ಬಿಲ್ ಬ್ರೈಸನ್ ಸೂಕ್ಷ್ಮವಾಗಿ ಹೀಗೆ ಹೇಳುತ್ತಾನೆ: ಈ > ಜಗತ್ತಿನಲ್ಲಿ ಬಹಳಷ್ಟು ಇನ್‌ಸೆಸ್ಟ್ (ಅಂದರೆ ರಕ್ತಸಂಬಂಧಿಗಳೊಳಗೆ ಲೈಂಗಿಕ ಸಂಪರ್ಕ) > ನಡೆದಿದೆ. ಸ್ವಲ್ಪವಲ್ಲ, ದೊಡ್ಡ ಪ್ರಮಾಣದಲ್ಲೇ ನಡೆದಿದೆ, ನಡೆಯುತ್ತಿದೆ. ಯಾಕೆಂದರೆ > ನಾವೆಲ್ಲ ಒಂದಿಲ್ಲೊಂದು ರೀತಿಯಲ್ಲಿ ರಕ್ತಸಂಬಂಧಿಗಳೇ ಆಗಿದ್ದೇವೆ. > > ಹಿಂದೆ ಜೆಂಗಿಸ್ ಖಾನ್ ಎಂಬ ಮಂಗೋಲಿಯನ್ ರಾಜನಿದ್ದ ಕತೆ ಓದಿರಬಹುದು ನೀವು. ಈತ > ಮಂಗೋಲಿಯದಿಂದ ಹೊರಟು ಏಷ್ಯಾದ ಬಹುತೇಕ ಭಾಗಗಳನ್ನೆಲ್ಲ ಆಕ್ರಮಣ ಮಾಡಿ ಗೆದ್ದ ಭೂಭಾಗದಲ್ಲಿ > ವ್ಯಾಪಕವಾದ ಅತ್ಯಾಚಾರ ನಡೆಸಿದನಂತೆ. ಅದೆಷ್ಟು ಸಾವಿರ ಹೆಂಗಸರ ಬಸಿರಿಗೆ ಕಾರಣನಾದನೋ > ಲೆಕ್ಕವಿಲ್ಲ. ಹಾಗಾಗಿ, ಜಗತ್ತಿನಲ್ಲಿ ಹುಟ್ಟಿದ ಮೂರನೇ ಎರಡರಷ್ಟು ಮಕ್ಕಳ ವಂಶಾವಳಿಯಲ್ಲಿ > ಹಿಂದೆ-ಹಿಂದಕ್ಕೆ ಹೋದರೆ ಎಲ್ಲೋ ಒಂದು ಕಡೆ ಆ ಮಗು ಜೆಂಗಿಸ್ ಖಾನನಿಗೆ > ರಕ್ತಸಂಬಂಧಿಯಾಗಿರುವುದು ಸಾಧ್ಯ - ಎಂಬ ಮಾತಿದೆ. ಇದನ್ನೇ ಬೇರೆ ರೀತಿಯಲ್ಲಿ, ನಮ್ಮ > ದೇಹದೊಳಗೆ ಜೆಂಗಿಸ್ ಖಾನನ ರಕ್ತದ ಒಂದು ತೊಟ್ಟು ಇದೆ ಎಂದು ಹೇಳುತ್ತಾರೆ. ಇನ್ನು ನಾವು > ಬರೆದಿಡುವ ವಂಶಾವಳಿಯ ಚರಿತ್ರೆಯಾದರೂ ನಿಜವೇ? ಅಲ್ಲಿ ಬೂಟಿನ ಲೇಸ್‌ನಂತೆ ಅದೆಷ್ಟು > ಸಂಬಂಧಗಳು ಚಕ್ಕಳಮಕ್ಕಳ ಹೋಗಿವೆಯೋ ಯಾರು ಬಲ್ಲರು? ವಂಶವೃಕ್ಷದ ಶ್ರೋತ್ರಿಗಳಂತೆ > ಸತ್ಯದರ್ಶನವಾಗುವುದು ಕೆಲವರಿಗೆ ಮಾತ್ರ. ಉಳಿದವರೆಲ್ಲರೂ ನಮ್ಮ ವಂಶಾವಳಿಯ ಕತೆ ಹೀಗೆ ಎಂದು > ನೂರೆಂಟು ಸುಳ್ಳುಗಳನ್ನೇ ಸತ್ಯವೆಂದು ನಂಬಿ ತಮ್ಮ ಜೀವನ ಮುಗಿಸಿಬಿಡುತ್ತಾರೆ. ಹೆರಿಗೆ > ಆಸ್ಪತ್ರೆಗಳಲ್ಲಿ ಅದಲುಬದಲಾಗುವ ಮಕ್ಕಳಿಗೇನು ಕಡಿಮೆಯೇ? ಒಂದು ಪ್ರಸಿದ್ಧ ಕತೆ > ಉಲ್ಲೇಖಿಸಬೇಕೆಂದರೆ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಹುಟ್ಟಿದಾಗ ದಾದಿ ಆತನನ್ನು ಇನ್ನಾವುದೋ > ತಾಯಿಯ ಪಕ್ಕದಲ್ಲಿ ಮಲಗಿಸಿ, ಮತ್ಯಾವುದೋ ಮಗುವನ್ನು ಗಾವಸ್ಕರ್‌ನ ತಾಯಿಯ ಪಕ್ಕದಲ್ಲಿಟ್ಟು > ಹೋಗಿಬಿಟ್ಟಿದ್ದಳಂತೆ! ಕೊನೆಗೆ, ನವಜಾತ ಗಾವಸ್ಕರನ ದೇಹದಲ್ಲಿದ್ದ ಮಚ್ಚೆಯೊಂದನ್ನು ನೋಡಿದ್ದ > ಮಾವ, ಈ ತಪ್ಪನ್ನು ಪತ್ತೆಹಚ್ಚಿ ಸುನೀಲನನ್ನು ಗಾವಸ್ಕರ್ ಕುಟುಂಬಕ್ಕೆ ಮರಳಿತಂದರಂತೆ! > ಹೀಗೆಲ್ಲ ಎಡವಟ್ಟುಗಳಾಗಿ ಅಬ್ದುಲ್ಲನ ಮನೆಯಲ್ಲಿ ಬೆಳೆದ ನಾರಾಯಣರೆಷ್ಟು! ಅವಧಾನಿಗಳ > ಮನೆಯಲ್ಲಿ ಬೆಳೆದ ಅಂಥೋಣಿಗಳೆಷ್ಟು! > > ಅವನ್ನೆಲ್ಲ ಬಿಟ್‌ಹಾಕಿ. ನೀವೇ ನಿಜವಾಗಿಯೂ ನೀವೋ ಎಂಬ ಪ್ರಶ್ನೆಯನ್ನು ನೀವಾಗಿ ನಿಮ್ಮನ್ನೇ > ಕೇಳಿಕೊಳ್ಳಿ! ಥಿಸಿಯಸ್ಸನ ಹಡಗು ಎಂಬ ಮಾತನ್ನು ನೀವು ಕೇಳಿರಬಹುದು. ಥಿಸಿಯಸ್ ಎಂಬಾತ ಒಂದು > ಹಡಗನ್ನು ನಿರ್ಮಿಸಿ ಸಮುದ್ರಯಾನ ಹೊರಟನಂತೆ. ಕೆಲವು ವರ್ಷಗಳ ನಂತರ ಅದರಲ್ಲಿ ಯಾವುದೋ ಭಾಗ > ಕೆಟ್ಟು, ಅದನ್ನು ತೆಗೆದು ಹೊಸಭಾಗ ಜೋಡಿಸಬೇಕಾಗಿ ಬಂತು. ಹೀಗೆ ಒಂದಷ್ಟು ವರ್ಷಗಳು > ಕಳೆವಷ್ಟರಲ್ಲಿ ಹಡಗಿನ ಪ್ರತಿಯೊಂದು ಭಾಗವನ್ನೂ - ನಟ್ಟು ಬೋಲ್ಟುಗಳ ಸಹಿತ - > ಬದಲಾಯಿಸಬೇಕಾಗಿ ಬಂತು. ಇಷ್ಟಾಗಿ ಹೊಚ್ಚಹೊಸದಾದ ಮೇಲೂ ಅದು ಥಿಸಿಯಸ್ಸನ ಹಡಗು ಎಂದೇ > ಕರೆಸಿಕೊಳ್ಳುತ್ತದೆಯೇ ಎಂಬೊಂದು ಫಿಲಸಾಫಿಕಲ್ ಪ್ರಶ್ನೆ ಇದೆ. ಮನುಷ್ಯನ ದೇಹ ಕೂಡ ನೂರಕ್ಕೆ > ನೂರರಷ್ಟು ಥಿಸಿಯಸ್ಸನ ಹಡಗು ಎಂದರೆ ನಿಮಗೆ ಅಚ್ಚರಿಯಾಗಬಹುದು. ಪ್ರತಿದಿನ, ಪ್ರತಿಕ್ಷಣ > ಒಂದಲ್ಲ ಎರಡಲ್ಲ ಹಲವು ನೂರು ಕೋಟಿಗಳ ಸಂಖ್ಯೆಯಲ್ಲಿ ಪರಮಾಣುಗಳು ಮಾನವ ದೇಹವನ್ನು ತೊರೆದು > ಹೊಸದಕ್ಕೆ ಜಾಗ ಮಾಡಿಕೊಡುತ್ತಿವೆ. ನಂಬಿದರೆ ನಂಬಿ, ಕೇವಲ ಐದು ವರ್ಷಗಳಲ್ಲಿ ಮನುಷ್ಯನ > ದೇಹದಲ್ಲಿ ಪ್ರತಿಯೊಂದು ಪರಮಾಣುವೂ ಬದಲಾಗಿ ಹೊಸದು ಬಂದು ಕೂತಿರುತ್ತದೆ. ಇನ್ನೊಂದು > ರೀತಿಯಲ್ಲಿ ಹೇಳಬೇಕೆಂದರೆ, ನಿಮ್ಮ ದೇಹದಲ್ಲಿರುವ ಪರಮಾಣುಗಳ ಆಧಾರದ ಮೇಲೆ ನಿಮ್ಮ ವಯಸ್ಸು > ಹೇಳುವುದಾದರೆ ಅದು ಐದು ವರ್ಷಕ್ಕಿಂತಲೂ ಕಡಿಮೆ! ನಿಮ್ಮ ದೇಹ ಥಿಸಿಯಸ್ಸನ ಹಡಗು ಎಂದಾದರೆ > ಅದರೊಳಗಿರುವ ಪ್ರತಿಯೊಂದು ಹಲಗೆ, ಹಾಯಿ, ಮೊಳೆ ಕೂಡ ಐದು ವರ್ಷಗಳಿಗಿಂತ ಈಚಿನವು. ಅದಕ್ಕಿಂತ > ಹಿಂದೆ ನಿಮ್ಮ ದೇಹದಲ್ಲಿದ್ದ ಒಂದೇ ಒಂದು ಪರಮಾಣುವೂ ಈಗ ಅಲ್ಲಿಲ್ಲ. > > ಮನುಷ್ಯನ ದೇಹದಲ್ಲಿ ಅದೆಷ್ಟು ಪರಮಾಣುಗಳಿವೆ ಎಂಬ ಲೆಕ್ಕಕ್ಕಿಳಿದರೆ ಸುಸ್ತು ಹೊಡೆದು > ಹೋಗುತ್ತೀರಿ. ಉದಾಹರಣೆಗೆ ನೂರು ಕೋಟಿ ಸೋಡಿಯಂ ಪರಮಾಣುಗಳನ್ನು ತೆಗೆದುಕೊಂಡಿರೆನ್ನಿ. ಅದರ > ತೂಕ ೦.೦೦೦೦೦೦೦೦೦೦೦೦೦೩೮ ಗ್ರಾಂಗಳು, ಅಷ್ಟೆ! ಹಾಗಾದರೆ ಸರಾಸರಿ ೬೦ ಕೆಜಿ ತೂಗುವ ಮನುಷ್ಯನ > ದೇಹದಲ್ಲಿರುವ ಪರಮಾಣುಗಳೆಷ್ಟು? ಇಡೀ ವಿಶ್ವದಲ್ಲಿರುವ ಒಟ್ಟು ನಕ್ಷತ್ರಗಳ ಸಂಖ್ಯೆ > (ಇನ್ನೂರು ಬಿಲಿಯನ್‌ಗೆ ಇನ್ನೂರು ಬಿಲಿಯನ್‌ನಿಂದ ಗುಣಿಸಿದರೆಷ್ಟೋ ಅಷ್ಟು!)ಗಿಂತಲೂ > ನರಪ್ರಾಣಿಯೊಳಗಿನ ಪರಮಾಣುಗಳ ಸಂಖ್ಯೆ ಹೆಚ್ಚು. ಹಾಗಿದ್ದರೂ ಐದು ವರ್ಷಗಳ ಅವಧಿಯಲ್ಲಿ > ಇವಿಷ್ಟೂ ಪರಮಾಣುಗಳು ಒಬ್ಬ ಮನುಷ್ಯನ ದೇಹವನ್ನು ತೊರೆದು ವಿಶ್ವಕ್ಕೆ ಸೇರುತ್ತವೆ; ಪ್ರಪಂಚದ > ಉಳಿದ ಪ್ರಾಣಿಪಕ್ಷಿಗಳ ದೇಹಗಳನ್ನು ಹೊಗುತ್ತವೆ. ದೃಗ್ಗೋಚರವಲ್ಲದ ಈ ಕೊಡು-ಕೊಳುವಿಕೆ > ನಿತ್ಯನಿರಂತರ. ಹಾಗಾಗಿ ಈ ಲೇಖನವನ್ನು ಓದುತ್ತಿರುವ ನಿಮ್ಮೊಳಗಿನ ಕನಿಷ್ಠ (ಮತ್ತು ತಲಾ) > ನೂರು ಕೋಟಿ ಪರಮಾಣುಗಳು ನನ್ನವು, ಷೇಕ್ಸ್‌ಪಿಯರನವು, ಹಿಟ್ಲರನವು, ವ್ಯಾಸ ಮಹರ್ಷಿಗಳವು, > ಗೌತಮ ಬುದ್ಧನವು. ಪ್ರಪಂಚದಲ್ಲಿ ಈಗ ಉಸಿರಾಡುತ್ತಿರುವ ಪ್ರತಿಯೊಬ್ಬನ ದೇಹದೊಳಗೂ ಪ್ರತಿ > ಇನ್ನೊಬ್ಬ ವ್ಯಕ್ತಿಯ ಕನಿಷ್ಠ ನೂರು ಕೋಟಿ ಪರಮಾಣುಗಳಿವೆ. ಇನ್ನು ನೂರಿನ್ನೂರು ವರ್ಷಗಳಲ್ಲಿ > ಮನುಷ್ಯ ತಾಂತ್ರಿಕವಾಗಿ ಮುಂದುವರಿದು ಸೌರವ್ಯೂಹದಾಚೆ ಇರುವ ಅನ್ಯಗ್ರಹವನ್ನು > ಸಂದರ್ಶಿಸಿದನೆನ್ನಿ. ಹಾಗೆ ಅಲ್ಲಿ ಕಾಲೂರುವ ಮೊದಲ ಮನುಷ್ಯನೊಳಗೂ ಈಗ ಇಲ್ಲಿರುವ ನಿಮ್ಮ > ಕನಿಷ್ಠ ನೂರು ಕೋಟಿ ಪರಮಾಣುಗಳು ಇರುತ್ತವೆ! ಒಟ್ಟಿನಲ್ಲಿ, ಈ ಜಗತ್ತೇ ಒಂದು ಮಹಾಕುಟುಂಬ. > ಮಹಾಮನೆ. ಈ ಅರಿವು ಬಂದ ದಿನವೇ ನಾವೂ ನೀವೂ ವಿಶ್ವಮಾನವರು. > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
