ಮಿತ್ರರೇ,
ಈ ಆಲೋಚನೆ ಒಳ್ಳೆಯದು. ನೀವು ಹೇಳಿದ ಹಾಗೆ ಈ ಸಮಾವೇಶ ವನ್ನು 3 ದಿನ ಮಾಡಿದರೆ ಒಳ್ಳೆಯದು. ಈ 
ಸಮಾವೇದ ದಿನವನ್ನು ಅಕ್ಟೋಬರ್ ತಿಂಗಳಲ್ಲಿ ಮಾಡಿದರೆ ನಮ್ಮ ರಜೆಗಳಿಗೂ ಹಾಗೂ ಶಾಲಾ ಪಾಠಗಳಿಗೂ 
ಏನೂ ತೊಂದರೆಯಾಗುವುದಿಲ್ಲ. ಹಾಗೇಯೇ 3ದಿನ ಯಾಕೆಂದರೆ ಇಡೀ ರಾಜ್ಯದಿಂದ ಬರುವಂತಹ ಶಿಕ್ಷಕರು 
ಸರ್ ಗಳಿರಬಹುದು ಅಥವಾ ಮೇಡಮ್ ನವರಿರಬಹುದು ಸರಿಯಾದ ಸಮಯಕ್ಕೆ ಬರಲಿಕ್ಕೆ ಆಗಬೇಕಲ್ಲ. ಹಾಗೆ 
ಬಂದು ಹಾಗೆ ಹೋದರೆ ನಾವು ಏನನ್ನೂ ಕಲಿತಂತೆ ಆಗುವುದಿಲ್ಲ. ಹಾಗಾಗಿ 3ದಿನ ಇದ್ರೆ 
ಸರಿಯಾಗುತ್ತೆ ಅಂತ ನನ್ನ ಅಭಿಪ್ರಾಯ.  ಈ ಸಮಾವೇಶವನ್ನು  ಹಾಸನ ಜಿಲ್ಲೆ ಬೇಲೂರು ತಾಲ್ಲೂಕು 
ಪುಷ್ಪಗಿರಿ ಮಹಾಸಂಸ್ಥಾನ ದಲ್ಲಿ ಈ ಸಮಾವೇಶ ಮಾಡಿದರೆ ಚೆನ್ನಾಗಿರುತ್ತೆ ಗಿರೀಶ್ ಸರ್.
ಇದು ನನ್ನ ಸಲಹೆ ಮಾತ್ರ.

ಜಿ.ವೆಂಕಟೇಶ
ಸ.ಶಿ.
ಸಪ್ರೌಶಾ(ಬಾಲಕಿಯರ)
ಸಿರುಗುಪ್ಪ.
ಬಳ್ಳಾರಿ(ಜಿಲ್ಲೆ)

On Wednesday, 27 April 2016 08:43:37 UTC+5:30, gireeshasushma2012 wrote:
>
> ಮಿತ್ರರೇ,
>
> ಹಾಸನದ ಆಸಕ್ತ ಗಣಿತ ಶಿಕ್ಷಕರು ರಾಜ್ಯದ ಎಲ್ಲಾ  ಗಣಿತ ಬೋಧಕರ ಬಾಂಧವರೊಂದಿಗೊಡಗೂಡಿ 
> ಅನಂತದೆಡೆಗೆ ಗಣಿತ ಪತ್ರಿಕೆ ಹೊರತರುತ್ತಿರುವುದು ತಮಗೆಲ್ಲಾ ತಿಳಿದಿದೆ. 
> ಈಗ ಆ ತಂಡವು ಒಂದು ರಾಜ್ಯಮಟ್ಟದ ಗಣಿತ ಸಮಾವೇಶ ಮಾಡಲು ಉತ್ಸುಕವಾಗಿದೆ. ಆ ಸಮಾವೇಶಕ್ಕೆ 
> ತಾವು ಬರಲೇಬೇಕಾಗಲಿದೆ. ಆ ಸಮಾವೇಶದ ರೂಪುರೇಷೆಗಳನ್ನು ಎಲ್ಲರೊಂದಿಗೆ ಚರ್ಚಿಸಿಯೇ ನಿರ್ಧಾರ 
> ಕೈಗೊಳ್ಳುವ ಆಲೋಚನೆ ಆಯೋಜಕರಿಗಿದೆ. ಇಡೀ ಸಮಾವೇಶವನ್ನು ಸಂಪೂರ್ಣ ಗಣಿತಮಯವಾಗಿಸಲು ಹಾಗು 
> ಗಣಿತದ ವಿಶಿಷ್ಟ ಸವಿಯನ್ನು ಎಲ್ಲರಿಗೂ ಸವಿಯಲು ನೀಡಿ ತನ್ಮೂಲಕ ಅದರ ಬೋಧಕರಿಗೆ ಗಣಿತದ 
> ಎಲ್ಲಾ ಮಜಲುಗಳನ್ನು ಪರಿಚಯಿಸಲು ಅನುಕೂಲವಾಗುವಂತೆ ಆ ಸಮಾವೇಶ ಆಯೋಜನೆ ಗೊಳ್ಳಬೇಕಿದೆ. ಈ 
> ನಿಟ್ಟಿನಲ್ಲಿ ತಾವು ಈ ಸಮಾವೇಶ ಎಷ್ಟು ದಿನ ಇರಲಿ, ಹೇಗಿರಲಿ, ಅದರಲ್ಲಿ ಏನೇನೆಲ್ಲಾ ಇರಲಿ, 
> ಎಂಬುದರ ಬಗ್ಗೆ ಈ ಗ್ರೂಪ್ನಲ್ಲಿ ಚರ್ಚಿಸಿ, ಅಭಿಪ್ರಾಯ ಹಂಚಿಕೊಳ್ಳಿ. ಸಲಹೆ ನೀಡಿ.
>
> ಹೌದು. ......
> ಕರ್ನಾಟಕ  ರಾಜ್ಯ ಗಣಿತ ಪರಿಷತ್ತು  
>
> ಹಾಗಂತ ಎಲ್ಲೂ ಇಲ್ಲವಲ್ಲ ಅಂತ  ನೀವು ಅನ್ನಬಹುದು.....
> ಹಾಗೊಂದು ಇರುವಂತೆ ಮಾಡೋದು ಅಂತ.....
>
> ರಾಜ್ಯ ಗಣಿತ ಸಮ್ಮೇಳನ ಇನ್ನೂ ನಮ್ಮಗಳ ಕನಸಿನ ಕೂಸು. ಮೊದಲಿಗೆ ನಮ್ಮ ಶ್ರೀನಿವಾಸ್ 
> ಶೆಟ್ಟರು  ಇದರ ಬಗ್ಗೆ ಪ್ರಸ್ತಾಪಿಸಿದರು.ಮೊನ್ನೆ ಮೊನ್ನೆ ಅನಂತದೆಡೆಗೆ ಪತ್ರಿಕಾ ಮಿತ್ರರು 
> ಒಂದು ಸುತ್ತಿನ ಚರ್ಚೆ ನಡೆಸಿದ್ದೇವೆ.ನಿಮ್ಮ  ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ನಂತರ 
> ಅದರ ರೂಪುರೇಷೆ ಮತ್ತಷ್ಟು ಬಲಪಡಿಸುವಾಸೆ....
> ಈಗಿನ ನಮ್ಮ  ಯೋಜನೆಗಳು. ..
> 1) ಸೆಪ್ಟೆಂಬರ್ or ಅಕ್ಟೋಬರ್ ತಿಂಗಳಲ್ಲಿ ಸಮ್ಮೇಳನ ನಡೆಸುವ ಬಗ್ಗೆ 
> 2) ಎಲ್ಲಾ ಗಣಿತ ಪುಸ್ತಕಗಳನ್ನು ಅಲ್ಲಿ ಲಭ್ಯವಾಗಿಸುವುದು
> 3) ಓರಿಗಾಮಿ ,ಮಾದರಿಗಳ ಲಭ್ಯತೆ ಬಗ್ಗೆ ಯೋಚನೆ 
> 4)ತುಂಬಾ ಪ್ರತಿಭಾವಂತ ಗಣಿತಜ್ಞರನ್ನು ಆಹ್ವಾನಿಸುವುದು
> 5) ಸರಳೀಕೃತ ಬೋಧನೆ ಎಡೆಗೆ ಆಲೋಚನೆ. ....New approach to teaching
> 6)ಸಮ್ಮೇಳನ ಒಂದು ದಿನ ಸಾಕೇ 
> ಎರಡು ದಿನ ಬೇಕೇ.
> 7)ಸಮ್ಮೇಳನ ನಡೆಸಲು ಸಂಪನ್ಮೂಲಗಳ ಕ್ರೋಢೀಕರಣ ಹೇಗೆ 
> 8) ಇನ್ನು ಹತ್ತು ಹಲವು ಸಾಧ್ಯತೆಗಳ ಬಗ್ಗೆ ವಿಸ್ತ್ರುತ ಚರ್ಚೆ ಅಗತ್ಯ. ....
> Please.....go on .....
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to